ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆಗಳನ್ನು ಬರೆಯದಂತೆ ತಾಕೀತುಮಾಡಿದ್ದಾರೆ

vaddagere nagarajaiahಡಾ. ವಡ್ಡಗೆರೆ ನಾಗರಾಜಯ್ಯ

ಒಡನಾಡಿಗಳೇ, ದಾವಣಗೆರೆಯ ಯುವ ಕವಿ ಉಚ್ಚಂಗಿಪ್ರಸಾದ್ ಮೇbook burningಲೆ ಹಿಂದೂ ಮತೀಯವಾದಿಗಳು ಮಾರಣಾಂತಿಕ ಹಲ್ಲೆ ನಡೆಸಿ, ಹಿಂದೂಧರ್ಮದ ವಿರುದ್ಧ ಕವಿತೆಗಳನ್ನು ಬರೆಯದಂತೆ ತಾಕೀತುಮಾಡಿದ್ದಾರೆ.

ಇಂತಹ ಸಂದರ್ಭದಲ್ಲಿ ಮಾರ್ಕ್ಸ್ ವಾದಿ ನಾಟಕಕಾರ, ಕವಿ , ಚಿಂತಕ ಬರ್ಟೋಲ್ಟ್ ಬ್ರೆಕ್ಟ್ ನ “The Burning Of The Books ” ಎಂಬ ರಾಜಕೀಯ ವಿಡಂಬನೆಯ ಕವಿತೆಯು ನೆನಪಾಗುತ್ತಿದೆ.

ಜರ್ಮನಿ ದೇಶದಲ್ಲಿ ಹಿಟ್ಲರ್ ನ ನಾಝಿ ಸರ್ಕಾರ ಅಧಿಕಾರಕ್ಕೆ ಬಂದಾಗ ಆರ್ಯಜನಾಂಗದ ಸರ್ವಾಧಿಕಾರಿಯಾದ ಅವನು ಯಹೂದಿಗಳ ದೊಡ್ಡ ನರಮೇಧವನ್ನೇ ನಡೆಸುತ್ತಾನೆ. ಯಹೂದಿಗಳನ್ನು concentration camps (ಯಾತನಾಮಯ ಶಿಬಿರಗಳು) ಮತ್ತು Gas chambers (ಅನಿಲ ಕೋಣೆಗಳು) ಇಲ್ಲಿ ಸೆರೆಯಾಳುಗಳನ್ನಾಗಿ ಬಂಧಿಸಿ ನಿರ್ದಯವಾಗಿ ಕೊಲ್ಲುತ್ತಾನೆ. Maryanne race is superior ಎಂದು ಜನಾಂಗೀಯ ಶ್ರೇಷ್ಠತೆಯ ವ್ಯಸನದಿಂದ German Jews (ಜರ್ಮನಿಯ ಯಹೂದಿಗಳು) ಹಿಟ್ಲರನಿಂದ ಹತರಾಗುತ್ತಾರೆ.

uchchangi attackಹಿಟ್ಲರನ ಆಸ್ಥಾನದಲ್ಲಿ ಮಾಹಿತಿ ಮತ್ತು ಪ್ರಚಾರ ಖಾತೆ ಸಚಿವನಾಗಿದ್ದ ಗೊಬೆಲ್ಸ್ ನು ಹಿಟ್ಲರನ ಆದೇಶದಂತೆ ಯಹೂದಿಗಳಲ್ಲಿಯೇ ಪ್ರಖ್ಯಾತವಾದ ಆಲ್ಬರ್ಟ್ ಐನ್‌ಸ್ಟೈನ್, ಥಾಮಸ್ ಮನ್ ಮುಂತಾದ ವಿಜ್ಞಾನಿಗಳ ಮತ್ತು ಲೇಖಕರ ಕೃತಿಗಳನ್ನು ಸುಟ್ಟು ಹಾಕಿಸುತ್ತಾನೆ.

ಯಹೂದಿ ಬರಹಗಾರರ ಅಪಾರ ಪ್ರಮಾಣದ ಪುಸ್ತಕ ರಾಶಿಯನ್ನು ಆರ್ಯ ಜನಾಂಗದ ವಿದ್ಯಾರ್ಥಿಗಳೇ ಸುಡುತ್ತಾರೆ. ಬರ್ಲಿನ್ ವಿಶ್ವವಿದ್ಯಾನಿಲಯ ಮತ್ತಿತರ ಶಾಲೆ ಕಾಲೇಜು ವಿಶ್ವವಿದ್ಯಾನಿಲಯಗಳ ಎದುರು ಇಡೀ ಜರ್ಮನಿಯಲ್ಲಿ ಪುಸ್ತಕಗಳನ್ನು ಸುಡಲಾಗುತ್ತದೆ.

ಆಗ ಬರ್ಟೋಲ್ಟ್ ಬ್ರೆಕ್ಟ್ ಈ ಕವಿತೆ ಬರೆದ. ಆ ಕವಿತೆಯಲ್ಲಿ ಪ್ರಭುತ್ವವನ್ನು ಹೀಗೆ ಆಗ್ರಹಿಸಿದ ” ನನ್ನ ಪುಸ್ತಕಗಳನ್ನೇಕೆ ಸುಡುತ್ತೀರಿ ನನ್ನನ್ನೇ ಸುಟ್ಟುಬಿಡಿ”. ಈಗ ಹಿಟ್ಲರ್ ಇಲ್ಲ. ಹಿಟ್ಲರ್ ಮಿದುಳಿನ ಮನುವಾದಿಗಳಿದ್ದಾರೆ. ಗೊಬೆಲ್ಸ್ ಇಲ್ಲ ಅಂತಹ ಮನಸ್ಸುಗಳಿವೆ. ಗೋವು ತಿಂದ ಕಾರಣಕ್ಕಾಗಿ ಮನುಷ್ಯನ ಜೀವವನ್ನೇ ತಿನ್ನುತ್ತಿದ್ದಾರೆ ಆರ್ಯರು. ಹಿಂದೂಧರ್ಮದ ಜೀವವಿರೋಧಿ ರಚನೆಗಳನ್ನು ಪ್ರಶ್ನಿಸುವ ಕೊರಳುಗಳನ್ನು ಕತ್ತರಿಸುತ್ತಿದ್ದಾರೆ.

ಈಗ ನಡೆದಿರುವ ಹಲ್ಲೆಯು ಕೇವಲ ಉಚ್ಚಂಗಿ ಪ್ರಸಾದ್ ಮೇಲಷ್ಟೇ ಅಲ್ಲ ಕನ್ನಡದ ವೈಚಾರಿಕ ಚಿಂತನಾಶಾಲೆಯ ಮನಸ್ಸುಗಳ ಮೇಲೆ ಎಂಬುದನ್ನು ಮನಗಾಣೋಣ

‍ಲೇಖಕರು admin

25 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading