ಛಾಯಚಿತ್ರಗಳು ಇತಿಹಾಸವನ್ನು ಹೇಳುತ್ತವೆ
ಕಲಾ ಮಂಡಲ, ಧಾರವಾಡ
ಬೆಳಕಿನ ಹಬ್ಬವನ್ನು ಆಧರಿಸಿದ ವಿಷಯಕ್ಕೆ ಸಂಭದಿಸಿದಂತೆ ಅವಳಿನಗರದಲ್ಲಿ ವಾಸಿಸುತ್ತಿರುವ ಜನತೆಗೆ ಛಾಯಾಚಿತ್ರ ಸ್ಪರ್ಧೆಯನ್ನು ಎರ್ಪಡಿಸಿತ್ತು. ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಲಾಮಂಡಳ ಆರ್ಟಗ್ಯಾಲರಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಹರ್ಷವರ್ಧನ ಶೀಲವಂತ ಮಾತನಾಡುತ್ತಾ ಛಾಯಾಚಿತ್ರಗಳು ಆಯಾ ಕಾಲಘಟ್ಟದ ಜನಜೀವನದ ಸಾಂಸ್ಕೃತಿಕ ಬದುಕನ್ನು ಮತ್ತು ರಾಜಕೀಯ ಘಟನಾವಳಿಗಳನ್ನು ದೃಶ್ಯ ರೂಪದಲ್ಲಿ ದಾಖಲಿಸುತ್ತಾ ಹೋಗುತ್ತವೆ ಅಲ್ಲದೆ ಅವು ಮುಂದಿನ ಪೀಳಿಗೆಯ ಜನಾಂಗಕ್ಕೆ ಇತಿಹಾಸವನ್ನು ಸಾರುತ್ತವೆ ಎಂದು ಹೇಳಿದರು. ಇಂದಿನ ಪತ್ರಿಕಾ ರಂಗವು ಛಾಯಾಚಿತ್ರಗಳನ್ನು ಅತ್ಯಂತ ಪ್ರಭಾವವಾಗಿ ಬಳೆಸಿ ಕೊಳ್ಳುತ್ತವೆ ಛಾಯಾಚಿತ್ರಗಳು ಕಲಾತ್ಮಕವಾಗಿ ಮೂಡಿಬಂದಿದ್ದರೆ ಪ್ರಭಾವ ಹೆಚ್ಚನ ಪರಿಣಾಮ ಬೀರುತ್ತವೆ ಎಂದು ನುಡಿದರು. ಸಭೆಯ ಅಧ್ಯಕ್ಷತೆಯನ್ನು ಆರ್ಯ ಆಚಾರ್ಯ ವಹಿಸಿ ಮಾತನಾಡುತ್ತಾ ಛಾಯಾಚಿತ್ರದ ತಂತ್ರಜ್ಞಾನ ಶತಮಾನಗಳ ಹಿಂದೆ ಅವಿಷ್ಕಾರಗೊಂಡು ಅದರ ಸದುಪಯೋಗವನ್ನು ಕಲಾವಿದರು ಬಳೆಸಿಕೊಂಡರು. ಕ್ಯಾಮರಾವನ್ನು ಬಳಸಿಕೊಂಡು ಕಲಾವಿದರು ದೃಶ್ಯಬಾಷೆಗೆ ಹೊಸತನವನ್ನು ತಂದುಕೊಟ್ಟರು ಎಂದು ನುಡಿದರು. ಕಲಾಮಂಡಳ ಸಂಸ್ಥೆಯು ಅವಳಿನಗರದ ಜನತೆಗೆ ದೃಶ್ಯಕಲೆ ವಿವಿಧ ಕಾರ್ಯಕೃಮಗಳನ್ನು ಆಯೋಜಿಸುತ್ತಾ ಬರುತ್ತಿದೆ ಈ ಹಿನ್ನಲೆಯಲ್ಲಿ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿತ್ತು ಎಂದು ನುಡಿದರು.

ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಅತ್ಯುತ್ತಮ ಛಾಯಾಗ್ರಹಣ ಮಾಡಿದ ಅನಿಲ ಕಿತ್ತೂರ ಹಾಗೂ ಉದಯ ಕುಮಾರ ಇವರಿಗೆ ಬಹುಮಾನವನ್ನು ನಗದು ರೂಪದಲ್ಲಿ ನೀಡಿ ಪುರಸ್ಕರಿಲಾಯಿತು. ಅಲ್ಲದೆ ಶ್ರೀರಕ್ಷಾ ಜೋಶಿ,ಮಿಹೀರ ರಿತ್ತಿ ಹಾಗೂ ಮಹಾಬಳೇಶ್ವರ ಬೀಳಗಿ ಅವರಿಗೆ ಉತ್ತಮ ಛಾಯಾಗ್ರಾಹಕರೆಂದು ಪುರಸ್ಕಿರಿಲಾಯಿತು. ಆರಂಭದಲ್ಲಿ ಕಲಾಮಂಡಳ ಕಾರ್ಯದರ್ಶಿ ಮಧು ದೇಸಾಯಿ ಅವರು ಸ್ವಾತಿಸಿದರು ಕಾರ್ಯಕ್ರಮದ ನಿರೂಪನೆಯನ್ನು ಅಶೋಕ ಸಾತಪ್ಪನವರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶ್ಯಾಮ ಕಾಮತ.ಗಾಯತ್ರಿ ದೇಸಾಯಿ, ಸುರೆಂದ್ರ ಶಿಕ್ರೆ, ಗೋಪಾಲ ಕಮಲಾಪುರ, ಅರವಿಂದ ಕುಲಕರ್ಣಿ, ಡಾ ಸಂಜಿವ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.








0 Comments