ಯೂಸುಫ್ ಎಂ ಮುಂಡೋಳೆ,
ಪುತ್ತೂರು
ಸ್ವಿಟ್ಜರ್ಲೆಂಡ್ ಸರ್ಕಾರವು ತನ್ನ ಬ್ಯಾಂಕ್ಗಳಲ್ಲಿನ ಠೇವಣಿಗಳ ಬಗ್ಗೆ ದೀರ್ಘಕಾಲದವರೆಗೆ ಕಾಪಾಡಿಕೊಂಡು ಬಂದಿರುವ ಗೌಪ್ಯತೆಯನ್ನುಬಹಿರಂಗಪಡಿಸಲು ನಿರ್ಧರಿಸಿರುವ ಬೆನ್ನಲ್ಲೇ ಭಾರತ ಸರ್ಕಾರವು ಕಪ್ಪು ಹಣ ಕುರಿತಂತೆಸ್ವಿಸ್ ಬ್ಯಾಂಕ್ನಲ್ಲಿಖಾತೆ ಹೊಂದಿರುವ ಕೆಲವು ಮಂದಿಯ ಹೆಸರುಗಳನ್ನು ಸುಪ್ರೀಂಕೋಟರ್್ಗೆ ತಿಳಿಸಿದೆ.ಈ ಹಿನ್ನೆಲೆಯಲ್ಲಿ ಬಹುದಿನಗಳಿಂದ ನಡೆಯುತ್ತಿರುವ ಕಪ್ಪುಹಣದ ಕುರಿತ ಚರ್ಚೆಯು ಮತ್ತಷ್ಟು ಕಾವು ಪಡೆದುಕೊಂಡಿದೆ.
ಕಪ್ಪು ಹಣದ ಸ್ವರ್ಗಎಂದೇ ವಿಶ್ವದಾದ್ಯಂತಕುಖ್ಯಾತಿ ಪಡೆದಿರುವ ಸ್ವಿಟ್ಜರ್ಲೆಂಡ್ನ ಸ್ವಿಸ್ಬ್ಯಾಂಕ್ನಲ್ಲಿ ಅತಿ ಹೆಚ್ಚು ಕಪ್ಪುಹಣ ಹೊಂದಿದ ದೇಶಗಳ ಪೈಕಿ ಭಾರತವು 8ನೇ ಸ್ಥಾನದಲ್ಲಿದ್ದು ಸ್ವಿಸ್ ನ್ಯಾಷನಲ್ ಬ್ಯಾಂಕ್ ವರದಿ ಪ್ರಕಾರ 2012ರ ಅಂತ್ಯಕ್ಕೆ ಭಾರತೀಯ ಸಂಸ್ಥೆ, ಉದ್ಯಮಿಗಳಿಗೆ ಸೇರಿದ 18 ಸಾವಿರಕೋಟಿ ರೂ.ಗಳಷ್ಟು ಮೊತ್ತ ಸ್ವಿಸ್ಬ್ಯಾಂಕ್ಗಳಲ್ಲಿದೆ. ಇದರಲ್ಲಿ 9 ಸಾವಿರಕೋಟಿರೂ.ನೇರ ಭಾರತೀಯರೇ ಹೊಂದಿದ್ದಾರೆಎಂದು ಹೇಳಲಾಗಿದೆ.ಉಳಿದ ಮೊತ್ತ ಬೇನಾಮಿ ಅಥವಾ ವಿವಿಧ ಸಂಘ ಸಂಸ್ಥೆಗಳ, ಕಂಪನಿಗಳ ಹೆಸರಲ್ಲಿದೆಎಂದು ವರದಿಯಲ್ಲಿ ಹೇಳಲಾಗಿದೆ.
ಆದಾಯತೆರಿಗೆಇಲಾಖೆಯಅಂದಾಜಿನ ಪ್ರಕಾರ, ಕಳೆದ 18 ತಿಂಗಳಲ್ಲಿ ದೇಶದಆದಾಯದಿಂದ15 ಸಾವಿರಕೋಟಿರೂ.ಕೈತಪ್ಪಿ ಹೋಗಿದೆ.ಆದರೆಗ್ಲೋಬಲ್ ಫೈನಾನ್ಷಿಯಲ್ಇಂಟೆಗ್ರಿಟಿ ಹೆಸರಿನ ವಾಷಿಂಗ್ಟನ್ ಮೂಲದ ಸಂಘಟನೆಯೊಂದುಅಂದಾಜು ಮಾಡಿರುವ ಪ್ರಕಾರ 2002-06ರ ನಡುವೆದೇಶದಿಂದ ಪ್ರತಿ ವರ್ಷ 27.2 ಶತಕೋಟಿಡಾಲರ್ ಹಣಕಪ್ಪು ಹಣದರೂಪದಲ್ಲಿದೇಶದಿಂದ ಹೊರಕ್ಕೆ ಹರಿದು ಹೋಗಿದೆ.ಈ ಸಂಸ್ಥೆಯಅರ್ಥಶಾಸ್ತ್ರಜ್ಞದೇವ್ಕಾರ್ ಹೇಳುವ ಪ್ರಕಾರ 1948-2008ರ ನಡುವೆದೇಶದಿಂದ ಹರಿದು ಹೋದಕಪ್ಪುಹಣದ ಪ್ರಮಾಣ 462 ಶತಕೋಟಿಡಾಲರ್ (ಅಂದರೆ, ರೂ. 20 ಲಕ್ಷಕೋಟಿ!).ದೇಶದಲ್ಲಿಅಕ್ರಮವಾಗಿ ಸಂಪಾದಿಸಿದ ದುಡ್ಡಿನ ಶೇ 72ರಷ್ಟು ಭಾಗ ವಿದೇಶಕ್ಕೆ ಹೋಗುತ್ತದೆ.ಇನ್ನೊಂದುಅಂದಾಜಿನ ಪ್ರಕಾರಕಪ್ಪು ಹಣದ ಪ್ರಮಾಣ ರೂ.72 ಲಕ್ಷ ಕೋಟಿಗಳಷ್ಟು ಇದೆ.

2002-11ರ ವೇಳೆಯಲ್ಲಿ ಭಾರತದಿಂದ ಸುಮಾರು 343.04 ಮಿಲಿಯನ್ಅಮೆರಿಕನ್ಡಾಲರ್ (4 ಲಕ್ಷಕೋಟಿ) ಕಪ್ಪು ಹಣ ವಿದೇಶಕ್ಕೆರವಾನೆಯಾಗಿದೆಎಂದು ಸಂಶೋಧನಾ ಸಂಸ್ಥೆಯೊಂದು ಪತ್ತೆ ಮಾಡಿದೆ.ಒಟ್ಟಿನಲ್ಲಿ ಭಾರತದೇಶದ ಸಂಪತ್ತಿನಿಂದ 18 ಸಾವಿರಕೋಟಿಗಿಂತಲೂ ಹೆಚ್ಚು ವಿದೇಶಕ್ಕೆ ಹರಿದು ಹೋಗಿದೆ.ನಿಜಕ್ಕೂ ಈ ಲೆಕ್ಕಾಚಾರಗಳನ್ನು ನೋಡಿದರೆ, ನಮ್ಮದೇಶವು ಈಗಲೂ ಬಡತನದಿಂದಲೇಕೂಡಿರುವುದರಲ್ಲಿಆಶ್ಚರ್ಯವೆನಿಸುತ್ತಿಲ್ಲ. ನಮ್ಮದೇಶವನ್ನುಇಂತಹ ದುಸ್ಥಿತಿಗೆ ತಂದಜನಪ್ರತಿನಿಧಿಗಳು ಹಾಗೂ ಉದ್ಯಮಿಗಳ ಕರಾಳ ಮುಖ ಬಯಲಾಗುವ ಕಾಲ ಸನ್ನಿಹಿತವಾಗಿದೆ.ದೇಶದಜನತೆಯುಕೂಡ ಇದೀಗ ಪ್ರಬುದ್ಧರಾಗಿದ್ದುಎಲ್ಲವನ್ನು ಕುಲಂಕುಶವಾಗಿ ಗಮನಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಕೆಲವೊಂದುಕಪ್ಪುಹಣದಕುರಿತ ಕೆಲವೊಂದು ಮಾಹಿತಿಗಳನ್ನು ಇಲ್ಲಿಕೊಡಲಾಗಿದೆ.
ಕಪ್ಪು ಹಣಎಂದರೆ ಏನು?
ಕಪ್ಪು ಹಣ ಎಂದರೆ ತೆರಿಗೆ ವಂಚಿತ ಭೂಗತ ಹಣ.ಸಾಮಾಜಿಕ ವ್ಯವಸ್ಥೆಯಲ್ಲಿನ ಯಾವುದೇ ರೀತಿಯ ಸೂಕ್ತ ನೀತಿಗಳಿಗೆ ಒಳಪಡದೇ ಗಳಿಸಲಾದ ಹಣವನ್ನು ಕಪ್ಪುಹಣವೆಂದು ಗುರುತಿಸಲಾಗುತ್ತದೆ.ಯಾವುದೇ ವ್ಯಕ್ತಿಅಥವಾ ಸಂಸ್ಥೆ ತಾನಿರುವ ಸ್ಥಳೀಯ ಸರ್ಕಾರಿ ವ್ಯವಸ್ಥೆಯ ಕಾನೂನುಗಳಿಗೆ ವಂಚಿಸುತ್ತ ಯಾವುದೇ ರೀತಿಯ ತೆರಿಗೆ ಕಟ್ಟದೇ ಸಂಪಾದಿಸಿದ ಹಣಇದಾಗಿದೆ. ವ್ಯಕ್ತಿ ಅಥವಾ ಸಂಸ್ಥೆಯೊಂದು ಕಪ್ಪುಹಣ ಹೊಂದಿದ್ದರೆ ಅಂಥವರಿಗೆ ಮೇಲೆ ಕಾನೂನಾತ್ಮಕ ಶಿಕ್ಷೆ ವಿಧಿಸಬಹುದಾಗಿದೆ.ಜಗತ್ತಿನ ಅನೇಕ ಕಡೆ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ಇದೇ ಕಪ್ಪು ಹಣದ ಕೈವಾಡವಿರುವದನ್ನು ಕಾಣಬಹುದು. ಸ್ವಿಸ್ ಬ್ಯಾಂಕ್ಗಳಲ್ಲಿ ಅಂತಹ ಕೋಟಿಕೋಟಿ ಹಣ ಕೊಳೆಯುತ್ತಿದೆ.ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವವರಿಗೆಇದು ಬಹಳ ದೊಡ್ಡರಕ್ಷಣೆಯಾಗಿ ನಿಂತುಬಿಟ್ಟಿದೆ.
ವಿಶೇಷವೆಂದರೆಅತಿ ಹೆಚ್ಚು ಕಪ್ಪು ಹಣ ಹೊರಹೋಗುತ್ತಿರುವ ಖಂಡಗಳಲ್ಲಿ ಏಷ್ಯಾಖಂಡಕ್ಕೆ ಪ್ರಥಮ ಸ್ಥಾನ ಬಂದಿದೆ.ಏಷ್ಯಾಖಂಡದಲ್ಲಿ 15 ರಾಷ್ಟ್ರಗಳು ಈ ಪಟ್ಟಿಗೆ ಸೇರ್ಪಡೆಯಾಗಿವೆ. ಚೀನಾ, ಮಲೇಷಿಯಾ, ಭಾರತ, ಇಂಡೋನೇಷಿಯಾ, ಥೈಲ್ಯಾಂಡ್, ಪಿಲಿಪ್ಪೈನ್ಸ್ ಬಂದರೆ, ಆಫ್ರಿಕಾಖಂಡದಿಂದ ನೈಜೀರಿಯಾ ಮತ್ತುದಕ್ಷಿಣಆಫ್ರಿಕಾ, ಯೂರೋಪ್ಖಂಡದಿಂದರಷ್ಯಾ, ಬೆಲೋರಸ್, ಪೋಲ್ಯಾಂಡ್, ಸಬರ್ಿಯಾ, ಮೆಕ್ಸಿಕೋ ಮತ್ತು ಬ್ರೆಜಿಲ್ ರಾಷ್ಟ್ರಗಳು ಸ್ಥಾನ ಪಡೆದಿವೆ. ಕಳೆದ 10 ವರ್ಷಗಳ ಅವಧಿಯಲ್ಲಿಚೀನಾ 1.08 ಡಾಲರ್ಟ್ರಿಲಿಯನ್ ಹಣವನ್ನು ವಿದೇಶಕ್ಕೆ ಸಾಗಿಸಿದ್ದರೆ, ರಷ್ಯಾ 880 ಬಿಲಿಯನ್, ಮೆಕ್ಸಿಕೋ 461 ಬಿಲಿಯನ್, ಮಲೇಷಿಯಾ 370 ಬಿಲಿಯನ್ ಹಣವನ್ನು ವಿದೇಶಕ್ಕೆರಫ್ತು ಮಾಡಿವೆ.
ಏನಿದು ಸ್ವಿಸ್ ಬ್ಯಾಂಕ್?
ಸ್ವಿಜರ್ಲ್ಯಾಂಡ್ನ ಪ್ರಮುಖಆದಾಯದ ಮೂಲಗಳೇ ಬ್ಯಾಂಕುಗಳು.ಸ್ವಿಜರ್ಲ್ಯಾಂಡ್ನಲ್ಲಿರುವ ಎಲ್ಲ ಬ್ಯಾಂಕುಗಳು ‘ಸ್ವಿಸ್ ಫೈನಾನ್ಶಿಯಲ್ ಮಾಕರ್ೆಟ್ ಸೂಪರ್ವೈಸರಿಅಥಾರಿಟಿ'(ಎಫ್ಐಎನ್ಎಂಎ) ನಿಯಂತ್ರಣಕ್ಕೆ ಒಳಪಟ್ಟಿವೆ. ಈ ಬ್ಯಾಂಕುಗಳನ್ನು ಸ್ವಿಸ್ ಬ್ಯಾಂಕ್ಗಳೆಂದು ಕರೆಯಲಾಗುತ್ತದೆ.ಈ ಸ್ವಿಸ್ ಬ್ಯಾಂಕ್ಗಳು ಗ್ರಾಹಕರಖಾತೆಯಗೌಪ್ಯತೆ ಕಾಯ್ದುಕೊಳ್ಳುವಲ್ಲಿ ಹೆಸರುವಾಸಿಯಾಗಿವೆ. ಹಾಗಾಗಿಯೇ ಬಹುತೇಕದೇಶದಜನರ ಈ ಬ್ಯಾಂಕ್ಗಳಲ್ಲಿ ಹಣಇಡುತ್ತಾರೆ. ಮಧ್ಯಯುಗದಿಂದಲೂ ಸ್ವಿಸ್ ಬ್ಯಾಂಕುಗಳ ಗೌಪ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಹೆಸರುವಾಸಿಯಾಗಿವೆ. 2008 ಅಕ್ಟೋಬರ್ 11ರ ಪ್ರಕಾರ ಸ್ವಿಜರ್ಲ್ಯಾಂಡ್ನಲ್ಲಿ ಬ್ಯಾಂಕಿಂಗ್ನಿಂದಾಗುವ ಸರಾಸರಿ ಲಾಭದಅನುಪಾತ(ಲೀವರೇಜ್ರೇಷಿಯೋ) 29ಕ್ಕೆ 1ರಷ್ಟಿದೆ. ಸ್ವಿಜರ್ಲ್ಯಾಂಡ್ನಲ್ಲಿ ಯುಬಿಎಸ್. ಸೆಂಟ್ರಲ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳ ವಿದೇಶಿಯರ ಅಚ್ಚು ಮೆಚ್ಚಿನ ಬ್ಯಾಂಕುಗಳಾಗಿವೆ. ಮತ್ತೊಂದು ವಿಶೇಷತೆಏನೆಂದರೆ ಸ್ವಿಸ್ ಬ್ಯಾಂಕ್ಗಳು ತಮ್ಮಗ್ರಾಹಕರಖಾತೆ ಸೇರಿದಂತೆಯಾವುದೇರೀತಿಯ ಮಾಹಿತಿಯನ್ನು ಬಿಟ್ಟುಕೊಡುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇದು ತೆರಿಗೆಗಳ್ಳರ ಸ್ವರ್ಗ.ಅನಿವಾಸಿ ಸ್ವಿಸ್ ನಾಗರಿಕರ ಠೇವಣಿಗಳ ಮೇಲಿನ ಬಡ್ಡಿಯಆದಾಯಕ್ಕೆಯಾವುದೇತೆರಿಗೆಇಲ್ಲ. ಆಶ್ಚರ್ಯಎಂದರೆ, ಸ್ವಿಸ್ ಬ್ಯಾಂಕುಗಳಲ್ಲಿ ಖಾತೆದಾರರ ಹೆಸರುಗಳೇ ಇರುವುದಿಲ್ಲ. ಹೆಸರುಗಳ ಬದಲಾಗಿ ‘ಸಂಖ್ಯೆ'(ನಂಬರ್) ನೀಡಲಾಗುತ್ತದೆ.ಅಮೆರಿಕದಡಾಲರ್ನಂತೆ ಸ್ವಿಸ್ ಕರೆನ್ಸಿಕೂಡಾ ವಿದೇಶಿ ವಿನಿಮಯದಲ್ಲಿ ಸದೃಢವಾಗಿದೆ.ಅಲ್ಲದೆ ಈ ಬ್ಯಾಂಕುಗಳು ತಮ್ಮಅರ್ಹತೆಗೆಅನುಗುಣವಾಗಿಚಿನ್ನವನ್ನು ಹೊಂದಿರುತ್ತವೆ. ಒಂದು ವೇಳೆ, ಬ್ಯಾಂಕ್ಏನಾದರೂ ದಿವಾಳಿಯಾದರೆ, ಗ್ರಾಹಕ ಹಾಗೂ ಬ್ಯಾಂಕ್ ನಡುವಿನ ಒಪ್ಪಂದಂತೆಗ್ರಾಹಕನಿಗೆ ಹಣ ವಾಪಸ್ದೊರೆಯುತ್ತದೆ. ಹಾಗಾಗಿ ಠೇವಣಿಇಟ್ಟ ಹಣಕ್ಕೆ ಮೋಸ ಆಗುವ ಸಾಧ್ಯತೆತೀರಾಕಡಿಮೆಯಾಗಿರುತ್ತದೆ.
ಕಪ್ಪು ಹಣ ಭಾರತಕ್ಕೆ ಬಂದರೆ ಏನು ಮಾಡಬಹುದು?
ವಿದೇಶದಲ್ಲಿಕಪ್ಪುಹಣವನ್ನು ಹೊಂದಿರುವ ಭಾರತೀಯರ ಹೆಸರು ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಶೀಘ್ರವೇ ಕೋಟಿಕೋಟಿ ಬೆನಾಮಿ ಹಣಗಳು ದೇಶಕ್ಕೆ ಹರಿದು ಬರುವ ಲಕ್ಷಣಗಳು ಗೋಚರವಾಗುತ್ತಿದೆ.ಇದರ ಬೆನ್ನಲ್ಲೇಇಷ್ಟೆಲ್ಲದುಡ್ಡಿನಲ್ಲಿಏನೇನನ್ನು ಮಾಡಬಹುದು ಎಂಬ ಬಗ್ಗೆ ಎಲ್ಲೆಡೆಚಚರ್ೆಗಳೂಕೂಡಆರಂಭವಾಗಿದೆ.
ಸ್ವಿಸ್ ಬ್ಯಾಂಕಿನಲ್ಲಿಕೊಳೆಯುತ್ತಿರುವಭಾರತದ ರಾಜಕಾರಣಿಗಳ ಹಾಗೂ ಉದ್ಯಮಿಗಳ ಕೋಟಿಕೋಟಿಕಪ್ಪುಹಣವನ್ನುರಾಷ್ಟ್ರೀಯ ಸಂಪತ್ತೆಂದು ಘೋಷಿಸಿದರೆ ಭಾರತದೇಶವುತನ್ನೆಲ್ಲ ಸಾಲದಿಂದ ಮುಕ್ತವಾಗಿ, ಹಣದುಬ್ಬರ, ಬಡತನ, ಮುಂತಾದತನ್ನೆಲ್ಲ ಕಷ್ಟ ಕೋಟಲೆಗಳಿಂದ ಹೊರಬರಲು ಸಾಧ್ಯ. ವಿದೇಶಕ್ಕೆ ಸಾಗಾಣಿಕೆಯಾಗಿರುವಕಪ್ಪುಹಣ ಬಜೆಟ್ ನ ಒಟ್ಟು ಶೇ.25ರಷ್ಟು ಆಗಿದ್ದು, ಇದರಲ್ಲಿ ಶಿಕ್ಷಣ, ಸಾರಿಗೆ, ವಿದ್ಯುತ್, ನೀರಾವರಿ, ಕೈಗಾರಿಕೆ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧರೀತಿಯ ಸೌಕರ್ಯಗಳನ್ನು ಕಲ್ಪಿಸಬಹುದಾಗಿದೆ.ಈ ಹಣದಲ್ಲಿ 40 ಕೋಟಿಜನರಿಗೆತಲಾಒಂದುರೂ 1 ಲಕ್ಷದಂತೆ ವಿತರಿಸಬಹುದುಎಂದುಒಂದುಅಂದಾಜು ಹೇಳಿದರೆ, ವಿದೇಶಿ ಸಾಲಗಳನ್ನೆಲ್ಲ ತೀರಿಸಿ, ಸಾಮಾಜಿಕಕ್ಷೇತ್ರಕ್ಕೆ ಹಣ ತೊಡಗಿಸಿದ ಬಳಿಕವೂ ಹಣ ಮಿಕ್ಕಬಹುದುಎಂದುಇನ್ನೊಂದುಅಂದಾಜು ಹೇಳುತ್ತದೆ.
ಈಗಲಾದರೂಕಪ್ಪು ಹಣಕ್ಕೆಕಡಿವಾಣ ಬೀಳಬಹುದೇ?
ಭ್ರಷ್ಟ ವ್ಯವಸ್ಥೆಯೇಕಪ್ಪು ಹಣ ಸಂಗ್ರಹಕ್ಕೆ ಮುಖ್ಯಕಾರಣಎಂಬುದುಎಲ್ಲರಿಗೂಇದೀಗ ಮನವರಿಕೆಯಾಗಿದೆ.ರಾಜಕೀಯ ಪಕ್ಷಗಳಿಗೆ ಹಲವು ಉದ್ಯಮಗಳು ಹಣಕಾಸಿನ ನೆರವು ನೀಡಿರುತ್ತವೆ. ಹೀಗಾಗಿ ಸರ್ಕಾರದ ನೀತಿ ನಿರೂಪಣೆಯಲ್ಲಿಇಂತಹ ಉದ್ಯಮಗಳ ಪ್ರತಿನಿಧಿಗಳು ನೇರವಾಗಿ ಮತ್ತು ಪರೋಕ್ಷವಾಗಿ ಪ್ರಭಾವ ಬೀರಿರುತ್ತಾರೆ. ಉದ್ಯಮಗಳು ಮತ್ತು ರಾಜಕಾರಣಿಗಳ ನಡುವಿನ ಭ್ರಷ್ಟ ವ್ಯವಹಾರಗಳಿಗೆ ಯೋಜನೆಗಳನ್ನು ಜಾರಿಗೆತರುವ ಹೊಣೆ ಹೊತ್ತಿರುವ ಅಧಿಕಾರಿಗಳ ಸಹಕಾರವೇಇದಕ್ಕೆಕಾರಣ.ಅವರ ಸಹಕಾರಇಲ್ಲದಿದ್ದರೆ ಈ ಭ್ರಷ್ಟಾಚಾರ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಉದ್ಯಮಗಳ ಕೈಯಲ್ಲೇ ನಿಜವಾದಅಧಿಕಾರಇರುತ್ತದೆ, ಇವರನ್ನುಎದುರು ಹಾಕಿಕೊಂಡು ಬದುಕಲು ಅಧಿಕಾರಿಗಳಿಗೂ ಸಾಧ್ಯವಿಲ್ಲ.ಆದರೆಪ್ರಜಾಪ್ರಭುತ್ವದಇತರಎರಡುಆಧಾರ ಸ್ತಂಭಗಳಾದ ನ್ಯಾಯಾಂಗ ಮತ್ತು ಮಾಧ್ಯಮಗಳಿಂದಲಾದರೂ ಇಂತಹ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯಎಂಬುವುದನ್ನು ಈಗಾಗಲೇ ತೋರಿಸಿಕೊಟ್ಟಿದೆ. ಮುಂದೆಯೂಕೂಡ ನಮ್ಮ ಮಾಧ್ಯಮಗಳು ಕಪ್ಪು ಹಣದ ವಿಚಾರವನ್ನುರಾಜಕೀಯವಾಗಿ ತೆಗೆದುಕೊಳ್ಳದೆ ಎಲ್ಲಾರಾಜಕೀಯ ಪಕ್ಷ ಹಾಗೂ ಉದ್ಯಮಿಗಳ ಕರಾಳ ಮುಖವನ್ನು ಸಾರ್ವಜನಿಕರ ಮುಂದೆ ಬಯಲು ಮಾಡಿದೇಶದಜನತೆಯಲ್ಲಿಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ದೇಶದಜನತೆಜಾಗೃತರಾದಷ್ಟು ಭ್ರಷ್ಟಾಚಾರಕ್ಕೂಕಡಿವಾಣ ಹಾಕಬಹುದು. ದೇಶದಉದ್ಧಾರವನ್ನು ಮಾಡಬಹುದುಅಲ್ಲವೇ?






Good article and analysis.
We can do wonders with any extra money like this, as long there is transparency in using it.
out first priority should be to clear the outstanding loans and then focus on infrastructure.