
ಅವರು ವ್ಯಾಸ. ಕಾಸರಗೋಡಿನಲ್ಲಿದ್ದು, ತಮ್ಮೆಲ್ಲಾ ನೋವುಗಳಿಗೂ, ವಿಕ್ಷಿಪ್ತತೆಗೂ ಅಕ್ಷರದ ಆಕಾರ ಕೊಟ್ಟವರು. ಆ ಮೂಲಕ ಕನ್ನಡದ ಓದುಗ ಮನಸ್ಸನ್ನು ಗಾಢವಾಗಿ ತಟ್ಟಿದವರು.
ಇನ್ನೊಬ್ಬರಿದ್ದಾರೆ-ಹೊಸಪೇಟೆಯಲ್ಲಿ. ಅವರು ‘ಸೃಜನ್’ ಅಲಿಯಾಸ್ ಶ್ರೀಕಾಂತ್. ಜಿಂದಾಲ್ ನ ತೋರಣಗಲ್ ಘಟಕದಲ್ಲಿ ತೀರಾ ಮುಖ್ಯ ಹುದ್ದೆಯಲ್ಲಿದ್ದವರು. ನೂರೆಂಟು ಎಂಜಿನಿಯರಿಂಗ್ ನಕ್ಷೆಗಳ ಮಧ್ಯೆಯೇ ರೇಖೆಗಳಿಗೆ ಬಣ್ಣ ತುಂಬಿ ನೋಡುಗರ ಮನ ಗೆದ್ದವರು. ಕನ್ನಡದ ಬರಹಗಳಿಗೆ ದೃಶ್ಯದ ಆಯಾಮ ನೀಡಿದವರು. ಈಗ ಜಿಂದಾಲ್ ನ ರೇಖೆಗಳಿಗೆ ರಾಜಿನಾಮೆ ನೀಡಿ ಹೊಸಪೇಟೆಯಲ್ಲಿ ಓದುಗರ ಕಲ್ಪನಾ ಶಕ್ತಿಗೆ ಇಂಬು ಕೊಡುವ ಗೆರೆ ಎಳೆಯುತಿದ್ದಾರೆ.
ಇತ್ತೀಚಿಗೆ ವ್ಯಾಸರ ಕಥೆಗಳೂ ಸೃಜನ್ ಅವರ ರೇಖೆಗಳೂ ನಡೆದ ಜುಗಲ್ ಬಂದಿ ನೋಡಿ–

ಕಥೆಗಾರ ಎಂ ವ್ಯಾಸರೂ, ಸೃಜನ್ ಎಂಬ ಕಲಾವಿದರೂ
ನಿಮಗೆ ಇವೂ ಇಷ್ಟವಾಗಬಹುದು…




ಪ್ರಿಯ ಶ್ರೀಕಾಂತ್,
ಚಿತ್ರಗಳು ತುಂಬಾ ಚೆನ್ನಾಗಿವೆ. ಯಾವತ್ತಿನಂತೆ ನಿನ್ನ ಛಾಪು ಗೆರೆಗೆರೆಗಳಲ್ಲೂ ಕಾಣುತ್ತದೆ. ರೇಖಾಪ್ರೀತಿ ನಿರಂತರವಾಗಿರಲಿ.
ವ್ಯಾಸರೂ, ಸೃಜನ್ ಎರಡು ಎಲೆ ಮರೆಯ ಕಾಯಿಗಳು. ವ್ಯಾಸರು ಅಕ್ಷರದ ಮೂಲಕ ಕಾಡಿದರೆ, ಸೃಜನ್ ತಮ್ಮ ರೇಖೆಗಳ ಮೂಲಕ ನಮ್ಮನ್ನು ಕಾಡುತ್ತಾರೆ. ಜಿಂದಾಲ್ನಿಂದ ಹೊರ ಬಂದ ‘ಸೃಜನ ಹಕ್ಕಿ’ಗೆ ಒಳ್ಳೇದಾಗಲಿ. – ಶರಣ್ ಹಂಪಿ
ಶೃಜನ್ ತೀವ್ರವಾದ ಮತ್ತು ಘಾಢವಾದ ಭಾವಗಳನ್ನು ರೇಖೆಗಳ ಮುಲಕ ಮನಮುಟ್ಟುವಂತೆ ಚಿತ್ರಿಸಿದಿರಿ,ನಿಮ್ಮ ನಾಯಿ ಕಥೆ ಎಲ್ಲಿಗೆ ಬಂದೀತು ತಿಳಿಯಲಿಲ್ಲ.