ಡಿ.ಎಸ್.ರಾಮಸ್ವಾಮಿ
bemkikaddi.blogspot/com
ds.ramaswamy@gmail.com
ಮಾಧ್ಯಮ ಇಲ್ಲದಿದ್ದರೆ ಬರಿಯ ಗಾಸಿಪ್ಗಳಲ್ಲೇ ಸುದ್ದಿಗಳನ್ನು ಕೇಳಿ ಇನ್ನಷ್ಟು ಭಯ ಜಾಸ್ತಿಯಾಗುತಿತ್ತು. ಬ್ರೇಕಿಂಗ್ ನ್ಯೂಸ್ ನಮ್ಮೆದೆ ಗುಂಡಿಗೆಗಳ ಕೆಲಸ ಎಪರಾ ತೆಪರಾ ಮಾಡುತ್ತಿದೆಯಾದರೂ ಕನಿಷ್ಠ ಎಚ್ಚರಿಕೆಯ ಗಂಟೆ ಬಾರಿಸುವುದು ನಿಜ ತಾನೆ? ಮುಖ್ಯ ನಮ್ಮ ವ್ಯವಸ್ಥೆಯ ಅವ್ಯವಸ್ಥೆ.
ಒಬ್ಬ ಉಗ್ರವಾದಿ/ ನಕ್ಸಲೈಟ್ ಜನಮಾನಸವನ್ನು ಕಲಕುವಷ್ಟು ಬೆಳೆಯುವುದಕ್ಕೆ ಬಿಟ್ಟದ್ದು ಯಾರ ತಪ್ಪು? ಮಾಧ್ಯಮಗಳ ವರದಿಗಾರಿಕೆ ಇಲ್ಲದೇ ಇದ್ದರೆ ನಮಗೆ ಗತಿಯಾಗುತ್ತಿದ್ದುದು ಕಬ್ಬಿಣದ ಪರದೆಯೇ! ಹೌದು, ಕೆಲವೊಮ್ಮೆ ಇವರ ಅತಿರಂಜಿತ ಮತ್ತು ಅವಸರದ ವರದಿಗಳು ಗಾಬರಿ ಹುಟ್ಟಿಸಿ ಮತ್ತೇನನ್ನೋ ಮಾಡಿವೆ, ನಿಜ. ಕತ್ತರಿ ಇರುವುದು ಕತ್ತರಿಸಲಿಕ್ಕೆ ಆದರೆ ಏನನ್ನು ಅಂತ ಉಪಯೋಗಿಸುವವರು ನಿರ್ಧರಿಸಬೇಕು.
ಮತ್ತೊಂದು ವಿಷಯ; ವಿಶೇಷ ಇಲ್ಲದ್ದು ಸುದ್ದಿಯಾಗುಲ್ಲ. ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿ ಅಲ್ಲ; ಅದೇ ಮನುಷ್ಯ ನಾಯಿ ಕಚ್ಚಿದರೆ ಸುದ್ದಿ. ಏನು ಮಾಡೋಣ? ಪಾರ್ಲಿಮೆಂಟಿಗೆ ನುಗ್ಗಿದ್ದ ಟೆರರಿಸ್ಟ್ ಗಳಿಗೆ ಮುಂಬೈ ಯಾವ ಮಹಾ ಲೆಕ್ಕ? ಮೊದಲು ನಮ್ಮ ವ್ಯವಸ್ಥೆ ಸರಿಪಡಿಸಬೇಕು.ದೇಶಾಭಿಮಾನ ನಮ್ಮ ಅನುದಿನದ ಹಸಿವು, ನಿದ್ರೆ, ಮೈಥುನದಷ್ಟೇ ನಮ್ಮನ್ನು ಕಾಡಿದರೆ ಇದಕ್ಕೆಲ್ಲ ಒಂದು ಅಂತ್ಯ ಸಿಕ್ಕೀತು.ಅದಕ್ಕೆ ಮೊದಲು ತುಷ್ಟೀಕರಣ ರಾಜಕೀಯನೀತಿ ಇರುವ ಎಲ್ಲ ಪಕ್ಷಗಳನ್ನೂ ನಮ್ಮೆದೆಯಿಂದ ಉಚ್ಛಾಟಿಸಬೇಕು
minchulli
shamainternational@gmail.com
ವರದಿ ಮಾಡಬೇಕಾದ ಅನಿವಾರ್ಯತೆಯ ನಡುವೆಯೇ ಆತ ಅಲ್ಲಿನ ಪರಿಸ್ಥಿತಿ ತಂದೊಡ್ಡುವ ಆತಂಕ, ಉದ್ವೇಗಗಳ ಸವಾಲುಗಳನ್ನು ನಿಭಾಯಿಸ ಬೇಕಾಗಿದೆ. ಅಸುರಕ್ಷತೆ ಕಾಡುತ್ತಲೇ ಇರುವುದಲ್ಲದೆ ಸಾವು ತನ್ನ ಬೆನ್ನ ಹಿಂದೆಯೇ ಹೊಂಚು ಹಾಕಿ ಕುಳಿತಿದೆ ಎಂಬ ಸತ್ಯವನ್ನು ಕೂಡ ಆತ ಒಪ್ಪಿಕೊಂಡು ಕರ್ತವ್ಯಕ್ಕೆ ನ್ಯಾಯ ಒದಗಿಸ್ಬೇಕಿದೆ.
ಅದರ ಜತೆಗೇ ತಮ್ಮ ವರದಿಗೆ ಲಕ್ಷ್ಮಣರೇಖೆ ಎಳೆದು ಕೊಳ್ಳಬೇಕಾದ ಅಗತ್ಯವಿದೆ. ದೇಶದ ಆಂತರಿಕ ಭದ್ರತೆಯ ಕೆಲವು ಗೌಪ್ಯತೆಗಳನ್ನೂ ಅಲ್ಲದೆ ಹೋರಾಡಿ ಮಡಿಯುತ್ತಲೇ ಇರುವ ಜೀವಗಳ ಹಿಂದಿನ ಶ್ರಮವನ್ನೂ ಆತ ಗಮನದಲ್ಲಿಟ್ಟುಕೊಂಡೇ ಮಾತಾಡಬೇಕಿದೆ. ತಮ್ಮ ಜೀವವನ್ನು ಒತ್ತೆಯಿಟ್ಟು ಸುದ್ದಿ ನೀಡುವ ಕ್ಷಣದಲ್ಲಿ ಎಂಥ ಹಿರಿಯ ಪತ್ರಕರ್ತ ಕೂಡ ತಪ್ಪು ಮಾಡಬಹುದು. ಅದಾಗದಂತೆ ಅವರಿಗೆ ತರಬೇತಿಯ ಅವಶ್ಯಕತೆ ಇದೆ. ಇನ್ನು ಉಳಿದ ಮಾಧ್ಯಮಗಳ (ದೃಶ್ಯ/ಪತ್ರಿಕೆ) ಜತೆ ಪೈಪೋಟಿಗೆ ಬಿದ್ದು ಜಯಿಸುವ ಹುಮ್ಮಸ್ಸಿನಲ್ಲಿ ತಮ್ಮ ವಿವೇಚನೆ ಕಳೆದುಕೊಳ್ಳದೆ ದೇಶದ ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದಂತೆ ತಮಗೆ ತಿಳಿದ ಎಲ್ಲವನ್ನೂ ಬಯಲಾಗಿಸದೆ ಇರುವ ಆದ್ರೆ ಅವಶ್ಯಕ ಎನಿಸಿದ್ದನ್ನು ಬಿಡದೆ ಹೇಳುವ ಜಾಣ್ಮೆಯನ್ನು ಮಾಧ್ಯಮಗಳು ಬಹಳಷ್ಟು ಕಲಿಯಬೇಕಿದೆ.
ಇಂದಿನ ಆಧುನಿಕ ಭಯೋತ್ಪಾದನಾ ಜಗತ್ತಿನಲ್ಲಿ ನಮ್ಮನ್ನು ನಾವು ರಕ್ಷಿಸುವತ್ತ ತೃಣ ಮಾತ್ರ ಪ್ರಯತ್ನವಾದರೂ ಇದರಿಂದ ಆಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಅದಕ್ಕೇ ಹೇಳಿದ್ದು “ಮಾತೇ ಮುತ್ತು; ಮಾತೇ ಮೃತ್ಯು”
+++
VRCARPENTER
carpentervr.wordpress.com
vrcarpenter@gmail.com
ಮಾದ್ಯಮ ಮಿತ್ರರು ಜೀವದ ಹಂಗು ತೊರೆದು ಯೋಧರ ರೀತಿ ಹೋರಾಡಿದ್ದಾರೆ ಎಂಬುದನ್ನು ಮರೆಯಬರದು ಲೀಲಾ ಅವ್ರೆ. ಭಯೋತ್ಪಧಕರು ವಿಜಯಿಯಾಗಿದ್ದಾರೆ, ನಿಜ ಆದ್ರೆ ಅದಕ್ಕೆ ಕಾರಣ ನಮ್ಮ ಭದ್ರತಾ ವೈಪಲ್ಯವೇ ಹೊರತು ಅದು ಮಾಧ್ಯಮದವರ ತಪ್ಪಿನಿಂದಾಗಿಯೇ ಹೀಗೆಲ್ಲ ಆಯಿತು ಎಂದು ವಿಶ್ಲೇಷಣೆ ಮಾಡುವುದು ಸರಿಯಲ್ಲ.
ನೀವೇನೋ ಇಲ್ಲಿ ಬೆಂಗಳೂರಿನಲ್ಲಿ ಇಲ್ಲಿ ಇದ್ದುಬಿಡುತ್ತೀರ ಅಂದುಕೊಂಡರೆ ಅಲ್ಲಿ ಹೋಟೆಲ್ಗಳಲ್ಲಿ ಸಿಕ್ಕಿ ಹಾಕಿಕೊಂಡ ಕುಟುಂಬದವರ ಗತಿ ಏನು? ಎಂದು ಸ್ವಲ್ಪ ಯೋಚಿಸಿ ನೋಡಿ. ಅವರ ತಳಮಳಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.
+++
subrmani
etv.subbu@gmail.com
ಭಯೋತ್ಪಾದಕರ ಮಾನಸಿಕ ಸ್ಥೈರ್ಯ ಹೆಚ್ಚಿಸಿದ್ದು ಮಾಧ್ಯಮಗಳೇ.ಏಕೆಂದರೆ ಮುಖ್ಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹೀಗಿಗೆ ಎಂದು ಪ್ರಮುಖರು ಸತ್ತ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಲೇ ಇದ್ದವು.
ಹೊಟೇಲ್ ಗಳಲ್ಲಿ ಅಡಗಿ ಕುಳಿತ ಉಗ್ರರು ಟಿವಿಯಲ್ಲಿ ನೋಡಿ ಗೆಲುವಿನ ಕೇಕೆ ಹಾಕಿರಬಹುದು.
ಹಾಗಾಗಿ ಮಾಧ್ಯಮಗಳದ್ದು ಪರಕಾಯ ಪ್ರವೇಶ ಎಂದು ಖಂಡಿತಾ ಭಾವಿಸಬೇಕಾಗಿಲ್ಲ.
ಏಕೆಂದರೆ,ಟಿಆರ್ ಪಿ ಜಪ ನಡೆಯುತ್ತಿತ್ತು.ದಿಗ್ಭ್ರಾಂತರಾಗಿ ಟಿವಿ ವೀಕ್ಷಕರು ಇದಕ್ಕೆಲ್ಲಾ ಸಾಥ್ ನೀಡುತ್ತಿದ್ದರು.
+++
ನರೇಂದ್ರ
narendrapai.blogspot.com
narendrapai2003@gmail.com
ದಯವಿಟ್ಟು ನಳಿನ್ ಮೆಹ್ತಾ ಬರೆದಿರುವ India on Telivision ಎಂಬ ಪುಸ್ತಕ ಗಮನಿಸಿ. ಹಾರ್ಪರ್ ಕಾಲಿನ್ಸ್ ಹೊರತಂದಿರುವ ಈ ಕೃತಿಯ ಬಗ್ಗೆ ಈ ಬಾರಿಯ Frontline ಪತ್ರಿಕೆಯಲ್ಲಿ ವಿವರವಾದ ಚರ್ಚೆ ಇದೆ. ಟೀವಿ ಮಾಧ್ಯಮ ಹೇಗೆ ನಮ್ಮ ಜನರ ಯೋಚನಾಧಾಟಿಯನ್ನೇ ತಿದ್ದಿ ಬಿಟ್ಟಿದೆ ಎನ್ನುವುದನ್ನು ಈ ಪುಸ್ತಕ ಅಚ್ಚುಕಟ್ಟಾಗಿ ವಿವರಿಸಿದೆಯಂತೆ. ಮಾಧ್ಯಮ ನಮ್ಮ ಮೆದುಳನ್ನು ಆಕ್ರಮಿಸದಂತೆ ಎಚ್ಚರವಹಿಸಲು ಇಂಥ ಚರ್ಚೆ, ಪುಸ್ತಕ ಅತ್ಯಾವಶ್ಯಕ






0 Comments