ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕಣಜ’ಕ್ಕೆ ಬನ್ನಿ

ಪ್ರಿಯ ಬ್ಲಾಗಿಗರೆ,

ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.

ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

 

ತಮ್ಮ ವಿಶ್ವಾಸಿ

ಬೇಳೂರು ಸುದರ್ಶನ

ಸಲಹಾ ಸಮನ್ವಯಕಾರ, ಕಣಜ ಯೋಜನೆ

(ಕರ್ನಾಟಕ ಜ್ಞಾನ ಆಯೋಗದ ಯೋಜನೆ)

ಈ ಮೈಲ್: projectmanager@kanaja.net

http://www.kanaja.in

ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು

ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ

ಬೆಂಗಳೂರು – 560100

ದೂರವಾಣಿ: ೯೭೪೧೯೭೬೭೮೯

 

‍ಲೇಖಕರು G

6 June, 2011

4 Comments

  1. chandra.ka@gmail.com

    ಕನ್ನ್ನಡ ವಿಕಿಪೀಡಿಯಾವನ್ನೇ ಬೆಳೆಸಿದರೆ ಇದಕ್ಕಿಂತಾ ಉತ್ತಮವೇನೋ ಎನ್ನಿಸುತ್ತದೆ.

  2. ರಾಘವೇಂದ್ರ ಜೋಶಿ

    “ಕಣಜ” ಮಾಡಬೇಕಾದ ಕೆಲಸಗಳು ಬಹಳಷ್ಟು ಇವೆ.
    ಉದಾ: “ಕಣಜ”ದಲ್ಲಿರದ ಪ್ರತಿ ಹೊಸ ವಿಷಯವನ್ನು ಬಲ್ಲವರು,ಪರಿಣಿತರು ತಾವೇ ತಾವಾಗಿ ನೇರವಾಗಿ
    upload ಮಾಡಬಹುದಾದ ಸೌಲಭ್ಯವನ್ನು ಕಲ್ಪಿಸಬಹದಾಗಿತ್ತು.ಮೇಲಾಗಿ Spam ಮೇಲ್ ಗಳನ್ನು
    ಹೊಡೆದುಹಾಕುವ ಸಾಕಷ್ಟು ವಿಧಾನಗಳು ಬಂದಿವೆ.ಎಲ್ಲ ಬರಹಗಳನ್ನು ಒಬ್ಬರಿಗೇ ಕಳಿಸುವದು ಅರ್ಥವಿಲ್ಲದ್ದು.
    ಯಾಕೆಂದರೆ ಒಂದೇ ದಿನ ಸಾವಿರಾರು ವಿಷಯಗಳ ಕುರಿತಂತೆ ಬರಹಗಳನ್ನು
    projectmanager@kanaja.in ಎಂಬ ವಿಳಾಸಕ್ಕೆ ಕಳಿಸಿದರೆ ಅವೆಲ್ಲವನ್ನೂ ಓದಿ,ಪರಾಮರ್ಶಿಸಿ ಅವುಗಳನ್ನು ಆಯಾ ವಿಭಾಗಳಲ್ಲಿ
    ಪ್ರಕಟಿಸುವಷ್ಟು man power,time “ಕಣಜ”ಕ್ಕೆ ಇದೆಯೇ?
    ಕನ್ನಡ ವಿಕಿಪೀಡಿಯದಂತೆ ನೀವ್ಯಾಕೆ “ಕಣಜ”ವನ್ನು ಸರಳಗೊಳಿಸಬಾರದು?

    ರಾಘವೇಂದ್ರ ಜೋಶಿ

    • ಬೇಳೂರು ಸುದರ್ಶನ

      ಪ್ರಿಯರೇ
      ನಿಮ್ಮ ಸಲಹೆಯು ಗಮನಾರ್ಹ.ಆದರೆ ಸಾರ್ವಜನಿಕರು ಕಣಜ ಜಾಲತಾಣದಲ್ಲೇ ನೇರವಾಗಿ ಲೇಖನಗಳನ್ನು ಕಳಿಸಿಕೊಡುವುದಕ್ಕೆ (projectmanager@kanaja.in ಮಿಂಚೆಂಚೆಯನ್ನು ಬಳಸದೆಯೇ) ವ್ಯವಸ್ಥೆ ಇದೆ. ದಯವಿಟ್ಟು ಇಲ್ಲಿಗೆ ಬನ್ನಿ: (http://kanaja.in/?page_id=922). ಹೀಗೆ ಕಳಿಸಿದ ಲೇಖನಗಳು ಮತ್ತು ಸಂಬಂಧಿತ ಛಾಯಾಚಿತ್ರಗಳನ್ನು ಸಂಪಾದಕೀಯ ಮಂಡಳಿಗೆ ಕಳಿಸಿ, ಸಂಪಾದಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
      ಕಣಜ ಜಾಲತಾಣಕ್ಕೆ ಬಂದರೆ ಗೂಗಲ್ ಈ ಮೈಲ್ ನ ಹಾಗೆಯೇ (ಇಂಡಿಕ್ ಐ ಎಂ ಇ)ಕನ್ನಡದಲ್ಲೇ ಲೇಖನಗಳನ್ನು ಸುಲಲಿತವಾಗಿ ಬರೆದು ಕಳಿಸಬಹುದು. ಬರೆಯುವಾಗ ಅಲ್ಲೇ ಇರುವ ವಿವಿಧ ನಿಘಂಟುಗಳ ನೆರವನ್ನೂ ಪಡೆದುಕೊಳ್ಳಬಹುದು. ವ್ಯಾಕರಣದ ಸಹಾಯ ಬೇಕಾದರೆ, ಬಹು ಪ್ರಸಿದ್ಧ ‘ಕನ್ನಡ ವ್ಯಾಕರಣ ದರ್ಪಣ’ವನ್ನೂ ಅಲ್ಲೇ ಓದಿಕೊಂಡು ಮುಂದುವರೆಯಬಹುದು. ನೀವು ಯೋಚಿಸಿದಂಥದ್ದೇ ಲೇಖನ ಈ ಮೊದಲು `ಕಣಜ’ದಲ್ಲಿ ಪ್ರಕಟವಾಗಿದೆಯೇ ಎಂದು ಅಲ್ಲೇ ಹುಡುಕಿಕೊಳ್ಳುವುದೂ ಸಾಧ್ಯ. ದೃಷ್ಟಿ ಸವಾಲಿನವರು `ಕಣಜ’ದಲ್ಲಿ ಕೊಟ್ಟಿರುವ ತಂತ್ರಾಂಶವನ್ನು ಅಳವಡಿಸಿಕೊಂಡು ಕಣಜದಲ್ಲಿರುವ ಲೇಖನಗಳನ್ನು (ಮತ್ತು ಅವರವರ ಗಣಕದಲ್ಲಿರುವ ಯಾವುದೇ ಯೂನಿಕೋಡ್ ಪಠ್ಯವನ್ನು)ಬೇಕಾದ ವೇಗದಲ್ಲಿ ಧ್ವನಿಯ ಮೂಲಕ ಕೇಳಿಸಿಕೊಳ್ಳಬಹುದು.

      ನಿಮ್ಮ ಬೆಂಬಲಕ್ಕೆ ವಂದನೆಗಳು.
      ವಿಶ್ವಾಸವಿರಲಿ.
      ಬೇಳೂರು ಸುದರ್ಶನ
      ಸಲಹಾ ಸಮನ್ವಯಕಾರ, ‘ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶ

  3. Siddappa G

    ಕನ್ನಡದಲ್ಲಿ ವಿವಿಧ ವಿಷಯ ಷವಿಲಿಪೀಡಿಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading