ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಲಾಚೆಯ ಹನಿಯ ಕವನ

-ಬಿ ಎ ವಿವೇಕ ರೈ
7art-00002_big-leaf-rain-drop
ನಾನೀಗ ಕಡಲಾಚೆ
ಪನಿಯಲ್ಲಿ ಪನಿಯಾಗಲು
ಆಗಲು ಆಗಲು ಆಗಲು
ಹೊರಟಿದ್ದೇನೆ.
ಕಟ್ಟಿದ ಮನೆಗಳೆಷ್ಟೋ
ಬಿಟ್ಟ ಮನೆಗಳೆಷ್ಟೋ
ಮರೆತುಹೋಗಿದೆ ಲೆಕ್ಕ
ಲೆಕ್ಕಾಚಾರದ ಬದುಕು ಮುಗಿದುಹೋಗಿದೆ
ಕೊನೆಮುಟ್ಟಲು ಅಲ್ಲ
ಮನ ಮುಟ್ಟಲು
ಎಲ್ಲಿಯೂ ನಿಲ್ಲದೆ ದಾಟುತ್ತಿದ್ದೇನೆ
ಬರ್ಲಿನ್ ಗೋಡೆ ತೂರಿ ಕಳೆಯಿತು ಇಪ್ಪತ್ತು ವರ್ಷ
ನಿಮ್ಮ ಚೇತನ ನಮ್ಮನಗಲಿ ಹದಿನೈದು
ಆದರೆ ನಮ್ಮವರಿನ್ನೂ ಕಟ್ಟುತ್ತಿದ್ದಾರೆ
ಹಿಮಾಲಯದ ಗೋಡೆಗಳನ್ನು
ಮಂದರಪರ್ವತದ ಮನೆಗಳನ್ನು
ಅವರಿಗೆ ಹೇಳಲಾಗುವುದಿಲ್ಲ ‘ಆಗು ಆಗು ಆಗು ‘
ಈಗ ಹೇಳಬೇಕಾದದ್ದು ಒದ್ದು
‘ಹೋಗು ಹೋಗು ಹೋಗು ‘

‍ಲೇಖಕರು avadhi

11 November, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading