ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಸು ಕಂಗಳ ಹುಡುಗ

ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಈ ಹುಡುಗ ತಾನೇ ಬಣ್ಣಿಸಿಕೊಳ್ಳುವಂತೆ ‘ಕನಸು ಕಂಗಳ ಹುಡುಗ’. ನೆಲ-ಮುಗಿಲು ಮುಟ್ಟುವ ಹಂಬಲದಿಂದ ‘ಹೆಜ್ಜೆ ‘ ಇಡಲು ಆರಂಭಿಸಿದ್ದಾರೆ. ಇವರ ಬ್ಲಾಗ್ನಲ್ಲಿ ಅಮೃತಾ ಪ್ರೀತಂ ಇದ್ದಾರೆ. ಓ ಹೆನ್ರಿ ಇದ್ದಾರೆ. ಒಳ್ಳೆಯ ಸಾಹಿತ್ಯದ ಹೂರಣವಿದೆ.

ಕಟಕಟೆ
ಕೋಣೆಯಾದರೆ
ಸಬೂಬುಗಳು
ಸಾಬೀತಾಗುವುದಿಲ್ಲ
ಆಡಿಸಿದ ಗೋಣು
ಗೇಣಿ ಕೇಳುತ್ತದೆ
ಒಂಟಿ ದಸಕತ್ತಿಗೆ
ಬೆಲೆಯಿಲ್ಲ
ಕಾಂಕ್ರೀಟು
ತೋಳುಗಳಲ್ಲಿ ದಿವ್ಯಸನ್ನಿಧಿ
ನಲುಗಿದರೆ
ಉಸಿರು ಹುಟ್ಟುವುದಿಲ್ಲ

‍ಲೇಖಕರು avadhi

31 July, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading