
ಎಡಗೈನ ಅಲ್ಪಸಂಖ್ಯಾತರು
ಜಗತ್ತಿನಲ್ಲೆ ಅತಿ ಹೆಚ್ಚು ತುಳಿತಕ್ಕೊಳಗಾದ ಅಲ್ಪಸಂಖ್ಯಾತರು,
ನೀಗ್ರೋಗಳಿಗಿಂತ ಹೆಚ್ಚು, ಬಡ ಜನರಿಗಿಂತಲೂ ಹೆಚ್ಚು ತುಳಿತಕ್ಕೊಳಗಾದವರು.
ಈ ವಿಂಗಡನೆಯನ್ನು ನೀನೂ ಅರ್ಥಮಾಡಿಕೊಳ್ಳುವೆಯಾದರೆ
ಹಲವು ವಿಷಯಗಳನ್ನು ನೀನು ಅರ್ಥಮಾಡಿಕೊಳ್ಳಬಲ್ಲೆ.
ಬೂರ್ಜ್ವಾ ಮತ್ತು ಶ್ರಮಿಕ ವರ್ಗ
ಶ್ರಮಿಕವರ್ಗ ಯಾವಾಗಲೂ ಕೆಲಸ ಮಾಡುವುದು
ಮಿದುಳಿನ ಬಲ ಗೋಳಾರ್ಧದ ಮುಖಾಂತರವೇ:
ಬಡಜನತೆ ಹೆಚ್ಚು ಒಳ-ಅರಿವುಳ್ಳವರು, ಅಂತರ್ಬೋಧೆಯುಳ್ಳವರು.
ಹಳೆಯ ಕಾಲದ ಮನುಷ್ಯನನ್ನು ನೋಡು, ಒಳ-ಅರಿವು ಇದ್ದವನು ಅವನು
ಏಕೆಂದರೆ ಅವನು ಬುದ್ಧಿಜೀವಿಯಲ್ಲ, ಬೌದ್ಧಿಕ ಮಟ್ಟ ಹೆಚ್ಚಿಲ್ಲ ಅವನಲ್ಲಿ
ಅವನು ತರ್ಕದ ಜಗತ್ತಿನಲ್ಲಿ ಗೆಲ್ಲಲಾರ.
ಭಾಷೆಯ ಮಿತಿಯಿದೆ ಅವನಿಗೆ, ಚರ್ಚಿಸಿ ಮನವರಿಕೆ ಮಾಡಿಕೊಡಲಾರ, ಒಪ್ಪಿಸಲಾರ.
ತರ್ಕಕ್ಕೆ ಸಂಬಂಧಿಸಿದಂತೆ, ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ-
ಅವನೊಬ್ಬ ದಡ್ಡ.
ಅದೇ ಕಾರಣವಿರಬೇಕು ಅವನು ಬಡವನಾಗಿಯೇ ಇರುವುದಕ್ಕೆ.
ಸಿರಿವಂತ ವ್ಯಕ್ತಿಯೊಬ್ಬ ಕೆಲಸ ಮಾಡುವುದು ಮಿದುಳಿನ ಎಡಗೋಳಾರ್ಧದ ಮುಖಾಂತರ;
ಅವನು ಲೆಕ್ಕಾಚಾರದ ಮನುಷ್ಯ, ಎಲ್ಲದರಲ್ಲೂ ಗಣಿತ,
ಮೋಸಗಾರ, ಜಾಣ, ತರ್ಕಬದ್ಧ ಮಾತು- ಎಲ್ಲಕ್ಕಿಂತ ಹೆಚ್ಚಾಗಿ ಯೋಜನೆ ಹಾಕುತ್ತಾನೆ.
ಅದು ಕಾರಣವಿರಬಹುದು ಅವನು ಸಿರಿವಂತನಾಗಿರುವುದಕ್ಕೆ.
ಬೂರ್ಜ್ವಾಗಳು ಮತ್ತು ಶ್ರಮಿಕವರ್ಗಗಳು
ಸಮತಾವಾದದ ಕ್ರಾಂತಿಗಳಿಂದಾಗಿ ಕಣ್ಮರೆಯಾಗುವುದಿಲ್ಲ, ಇಲ್ಲ,
ಏಕೆಂದರೆ ಕಮ್ಯುನಿಸ್ಟರ ಕ್ರಾಂತಿಯಾಗುವುದು ಕೂಡ ಅದೇ ಜನರಿಂದ.
ಜೂಲಿಯಸ್ ಸೀಜರ್ ರಷ್ಯಾವನ್ನು ಆಳಿದ:
ಅವನು ಆಳಿದ್ದು ತನ್ನ ಮಿದುಳಿನ ಎಡಗೋಳಾರ್ಧದ ಮುಖಾಂತರ
ಅವನ ಜಾಗಕ್ಕೆ ಲೆನಿನ್ ಬಂದ ಆಳುವುದಕ್ಕೆ, ಅವನೂ ಅದೇ ಬಗೆಯವನು.
ನಂತರ ಅವನ ಜಾಗಕ್ಕೆ ಬಂದವನು ಸ್ಟಾಲಿನ್
ಅವನೂ ಅವರ ಹಾಗೆಯೇ, ಒಂದು ಚೂರೂ ವ್ಯತ್ಯಾಸವಿಲ್ಲ.
ಕ್ರಾಂತಿಯೆಲ್ಲ ಬರೀ ಸುಳ್ಳು
ಏಕೆಂದರೆ ಆಳದಲ್ಲಿ ಅದೇ ಬಗೆಯ ಜನರೇ ಆಳ್ವಿಕೆ ನಡೆಸುತ್ತಿರುವುದು-
ಆಳುವವರು ಮತ್ತು ಆಳಿಸಿಕೊಳ್ಳುವವರು- ಇವೆರಡರ ಅರ್ಥ ಕೂಡ ಒಂದೇ
ಆಳ್ವಿಕೆಗೊಳಪಟ್ಟವರೆಲ್ಲ ಬಲಗಡೆಯ ಗೋಳಾರ್ಧದವರು
ಆದ್ದರಿಂದ, ಹೊರಜಗತ್ತಿನಲ್ಲಿ ನೀನು ಏನೇ ಮಾಡಿದರೂ
ನಿಜದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ, ಅದು ಮೇಲ್ನೋಟಕ್ಕಷ್ಟೆ.
ಇದು ಗಂಡಸರಿಗೂ ಹೆಂಗಸರಿಗೂ ಅನ್ವಯಿಸುತ್ತದೆ.
ಹೆಂಗಸರು ಬಲಗೋಳಾರ್ಧದವರು, ಗಂಡಸರು ಎಡಗೋಳಾರ್ಧದವರು.
ಗಂಡಸರು ಹೆಂಗಸರನ್ನು ಶತಮಾನಗಳಿಂದ ಆಳುತ್ತಿದ್ದಾರೆ.
ಈಗ ಕೆಲವು ಹೆಂಗಸರು ಅದರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ ಆದರೆ ಅಚ್ಚರಿಯ ಸಂಗತಿ
ಏನೆಂದರೆ, ಇವರು ಕೂಡ ಅದೇ ಬಗೆಯ ಹೆಂಗಸರಾಗಿದ್ದಾರೆ.
ವಾಸ್ತವದಲ್ಲಿ, ಅವರು ಗಂಡಸರ ರೀತಿಯೇ-
ವೈಚಾರಿಕರು, ವಾದಮಾಡಬಲ್ಲವರು, ಆರಿಸ್ಟಾಟಲಿಯನ್ ಗುಣವುಳ್ಳವರು.
ರಷ್ಯಾದಲ್ಲಿ, ಚೈನಾದಲ್ಲಿ, ಮತ್ತೆಲ್ಲೋ ಕಮ್ಯುನಿಸ್ಟ್ ಕ್ರಾಂತಿ ಜಯಶಾಲಿಯಾದ ಹಾಗೆ,
ಒಂದು ದಿನ ಅದು ಸಾಧ್ಯವಾಗಬಹುದು, ಬಹುಶಃ ಅಮೆರಿಕಾದಲ್ಲಿ.
ಹೆಂಗಸರು ವಿಜಯಿಗಳಾಗಿ, ಗಂಡಸರನ್ನು ಕಿತ್ತೆಸೆಯಬಹುದು.
ಆದರೆ ಹೆಂಗಸರು ಜಯಶಾಲಿಗಳಾಗುವ ವೇಳೆಗೆ,
ಹೆಂಗಸರು ಹೆಂಗಸರಾಗಿ ಉಳಿದಿರುವುದಿಲ್ಲ
ಅವರು ಎಡಗೋಳಾರ್ಧದವರಾಗಿರುತ್ತಾರೆ.
ಏಕೆಂದರೆ, ಹೋರಾಡುವುದಕ್ಕೆ, ಲೆಕ್ಕಾಚಾರ ಬೇಕಾಗುತ್ತದೆ,
ಮತ್ತು ಗಂಡಸರ ಜೊತೆ ಹೋರಾಡುವುದಕ್ಕೆ, ಅವರು ಗಂಡಸರಂತೆ ಇರಬೇಕಾಗುತ್ತದೆ: ಆಕ್ರಮಣಕಾರಿಗಳಂತೆ. ಆ ಆಕ್ರಮಣಕಾರಿ ನಡವಳಿಕೆ
ಜಗತ್ತಿನೆಲ್ಲೆಡೆಯ ಮಹಿಳಾ ವಿಮೋಚನಾ ಆಂದೋಲನಗಳಲ್ಲಿ ಕಂಡುಬರುತ್ತಿದೆ.
ಆ ಆಂದೋಲನಗಳಲ್ಲಿ ಭಾಗವಾಗಿಸುವ ಹೆಣ್ಣುಮಕ್ಕಳು
ಬಹಳ ಆಕ್ರಮಣಕಾರಿಗಳು,
ಅವರು ತಮ್ಮೆಲ್ಲ ಚೆಲುವನ್ನು, ಕಾರುಣ್ಯವನ್ನು ಕಳೆದುಕೊಳ್ಳುತ್ತಿದ್ದಾರೆ, ಸ್ವಯಂಸ್ಫೂರ್ತಿಯಿಂದ ಬರುವುದೆಲ್ಲವನ್ನೂ ಅವರು ಕಳೆದುಕೊಳ್ಳುತ್ತಿದ್ದಾರೆ.
ಏಕೆಂದರೆ, ಹೆಂಗಸರು ಗಂಡಸರ ಜೊತೆ ಹೋರಾಡುವುದಾದರೆ,
ಅವರು ಅದೇ ತಂತ್ರಗಳನ್ನು ಕಲಿತುಕೊಳ್ಳಬೇಕಾಗುತ್ತದೆ.
ಒಂದು ವೇಳೆ ಗಂಡಸರ ಜೊತೆ ಹೋರಾಟ ಮಾಡಬೇಕಾದರೆ,
ಅವರು ಅದೇ ತಂತ್ರಗಾರಿಕೆ ಬಳಸಬೆಕಾಗುತ್ತದೆ.
ಯಾರ ಜೊತೆಗೂ ಹೋರಾಟ ಮಾಡುವುದು ಅಪಾಯಕಾರಿಯೇ,
ಏಕೆಂದರೆ, ನೀನು ನಿನ್ನದೇ ಶತ್ರುವಾಗುವೆ.
ಅದು ಮನುಕುಲದ ದೊಡ್ಡ ಸಮಸ್ಯೆಗಳಲ್ಲೊಂದಾಗಿದೆ.
ಒಮ್ಮೆ ನೀನು ಯಾರ ಜೊತೆಯಾದರೂ ಹೋರಾಟಕ್ಕಿಳಿದರೆ,
ಅದೇ ತಂತ್ರಗಾರಿಕೆ, ಅದೇ ಹಾದಿ ಬಳಸದೆ, ಬೇರೆ ದಾರಿಯಿಲ್ಲ ನಿನಗೆ.
ಆಗ ಶತ್ರುವನ್ನು ಸೋಲಿಸಬಹುದು
ಆದರೆ ಶತ್ರು ನಿನ್ನ ಕೈಯಲ್ಲಿ ಸೋಲುವಷ್ಟರಲ್ಲಿ, ನೀನು ನಿನಗೇ ಶತ್ರುವಾಗುವೆ.
ಸ್ಟಾಲಿನ್ ಸೀಜರ್ನ ಹಾಗೆ, ಬೇರೆ ಸೀಜರ್ ಗಿಂತ, ಬೇರೆ ಇನ್ನಾವುದೇ ಸೀಜರ್ ಗಿಂತಲೂ ಹೆಚ್ಚು ಕ್ರೂರಿ, ಹಾಗೆ ಇರಬೇಕಾದದ್ದೇ;
ಸೀಜರ್ ಗಳನ್ನು ಎತ್ತಿ ಬಿಸಾಡುವುದಕ್ಕೆ, ಹೆಚ್ಚು ಕ್ರೂರಿಗಳೇ ಬೇಕಾಗುತ್ತದೆ.
ಸೀಜರ್ ಗಿಂಲೂ ಹೆಚ್ಚು ಕ್ರೂರಿಗಳು
ಕ್ರಾಂತಿಕಾರಿಗಳಾಗುವುದಕ್ಕೆ ಸಾಧ್ಯವಾಗುತ್ತದೆ, ಅವರು ಮಾತ್ರ ಮೇಲೆ ಬರಲಾಗುತ್ತದೆ.
ಅವರು ಅಲ್ಲಿಗೆ ತಲಪುವ ವೇಳೆಗೆ, ಅವರು ಸೀಜರ್ ಗಳೇ ಆಗಿರುತ್ತಾರೆ,
ಸಮಾಜ ಕೂಡ ಅದೇ ಹಾದಿಯಲ್ಲಿ ಮುಂದುವರಿಯುತ್ತದೆ
ಸುಮ್ಮನೆ ಮೇಲ್ನೋಟಕ್ಕೆ ಬದಲಾವಣೆ, ಕ್ರಾಂತಿ ಇತ್ಯಾದಿ.
ಆಳದಲ್ಲಿ ಇರುತ್ತವೆ ಅವೇ ಸಂಘರ್ಷಗಳು.
ಸಂಘರ್ಷಗಳಿವೆ ಮನುಷ್ಯನಲ್ಲಿ.
ಅವುಗಳನ್ನು ಅಲ್ಲಿಯೇ ಬಗೆಹರಿಸದಿದ್ದರೆ, ಬೇರೆಲ್ಲೂ ಬಗೆಹರಿಸಲಾಗುವುದಿಲ್ಲ
ರಾಜಕೀಯ ಇರುವುದು ನಿನ್ನಲ್ಲಿ; ಅದಿರುವುದು ಮಿದುಳಿನ ಎರಡು ಭಾಗಗಳಲ್ಲಿ.
ಒಂದು ಪುಟ್ಟ ಸೇತುವೆ ಇದೆ.
ಯಾವುದಾದರು ಅಪಘಾತದಲ್ಲಿ ಆ ಸೇತುವೆಯೇನಾದರು ಮುರಿದು ಬಿದ್ದರೆ,
ಅಥವ ಕಟ್ಟುವಿಕೆಯ ದೋಷದಿಂದಾಗಿಯೋ
ಅಥವ ಬೇರಿನ್ನಾವುದೇ ಕಾರಣಕ್ಕೋ,
ವ್ಯಕ್ತಿ ಸೀಳಿಹೋಗುತ್ತಾನೆ, ಒಬ್ಬನೇ ವ್ಯಕ್ತಿ ಇಬ್ಬರಾಗುತ್ತಾನೆ-
ಸ್ಕ್ರೀಜೋಫ್ರೆನಿಯಾ ಪರಿಣಾಮಕ್ಕೆ ತುತ್ತಾಗುತ್ತಾನೆ ಅಥವ ಎರಡು ವ್ಯಕ್ತಿತ್ವ ಹೊಂದುತ್ತಾನೆ.
ಒಂದು ವೇಳೆ ಸೇತುವೆ ಮುರಿದು ಬಿದ್ದರೆ- ಸೇತುವೆಯೋ ತೀರಾ ದುರ್ಬಲವಾಗಿದೆ-
ಆಗ ನೀನು ಎರಡು ಆಗುವೆ, ಇಬ್ಬರು ವ್ಯಕ್ತಿಗಳ ಹಾಗೆ ನಡೆದುಕೊಳ್ಳುವೆ.
ಬೆಳಿಗ್ಗೆ ತುಂಬಾ ಪ್ರೀತಿಸುವವನೂ, ತುಂಬಾ ಚೆಲುವ ಆಗಿದ್ದವನು;
ಸಂಜೆಹೊತ್ತಿಗೆ ವಿಪರೀತ ಸಿಟ್ಟಿವನಾಗಿರುತ್ತಾನೆ, ವಿಪರೀತ ಬದಲಾವಣೆ.
ನಿನಗೆ ನಿನ್ನ ಬೆಳಗಿನ ಹೊತ್ತು ಈಗ ನೆನಪಿಲ್ಲ- ಅದು ನೆನಪಿರುವುದಾದರೂ ಹೇಗೇ?
ಬೇರೊಂದು ಮಿದಿಳು ಕಾರ್ಯನಿರ್ವಹಿಸುವಾಗ-
ಒಬ್ಬನೇ ವ್ಯಕ್ತಿ ಇಬ್ಬರು ವ್ಯಕ್ತಿಗಳಾಗುತ್ತಾನೆ.
ಒಂದು ವೇಳೆ ಈ ಸೇತುವೆಯನ್ನು ಮುರಿದುಬೀಳದಂತೆ ಬಲಪಡಿಸಿದರೆ
ಆ ಎರಡು ಮಿದಿಳುಗಳು ಕಾಣೆಯಾಗಿ ಎರಡು ಇಲ್ಲವಾಗಿ ಒಂದೇ ಆಗುತ್ತದೆ,
ಆಗ ಐಕ್ಯತೆ, ಸಮರಸ, ಹರಳುಗಟ್ಟುವಿಕೆ.
ಅದನ್ನೇ ಜಾರ್ಜ್ ಹರಳುಗಟ್ಟುವುದು ಎಂದರೆ
ಬೇರೇನೂ ಅಲ್ಲ, ಅದು ಈ ಎರಡು ಮಿದುಳುಗಳು ಒಂದೇ ಆಗುವುದು ಎನ್ನುತ್ತಾನೆ.
ಗಂಡು ಮತ್ತು ಹೆಣ್ಣು ಒಳಗೇ ಕೂಡುವುದು.
ಯಿನ್ ಮತ್ತು ಯಂಗ್ ಕೂಡುವುದು.
ಎಡ ಮತ್ತು ಬಲ ಕೂಡುವುದು.
ತಾರ್ಕಿಕತೆ ಮತ್ತು ಅತಾರ್ಕಿಕತೆ ಕೂಡುವುದು.
ಪ್ಲೇಟೋ ಮತ್ತು ಅರಿಸ್ಟಾಟಲ್ ಸಂಧಿಸುವುದು.
ಒಂದು ವೇಳೆ ಈ ಮೂಲಭೂತ ದ್ವಂದ್ವವನ್ನು,
ಎರಡಾಗುವಿಕೆಯನ್ನು
ನಿನ್ನ ಬದುಕಿನ ವೃಕ್ಷದಲ್ಲಿ ಅರ್ಥೈಸಿಕೊಂಡೆಯಾದರೆ,
ಆಗ ನಿನ್ನ ಸುತ್ತ ತಿರುಗುವ
ಎಲ್ಲ ಸಂಘರ್ಷಗಳನ್ನು ತಿಳಿದುಕೊಳ್ಳಬಲ್ಲೆ.
ನಿನಗಾಗಿ ಒಂದು ನಿಜ ಘಟನೆಯನ್ನು ಹೇಳುತ್ತೇನೆ:
ಜರ್ಮನಿಯಲ್ಲಿ, ಬರ್ಲಿನ್ ಅತ್ಯಂತ ದಕ್ಷ ಮತ್ತು ನಯನಾಜೂಕಿಲ್ಲದ ನಗರವೆಂದೂ,
ವಿಯನ್ನಾ ಆಸ್ಟ್ರಿಯನ್ ದೇಶದ ಆಕರ್ಷಣೆ ಮತ್ತು ಅವ್ಯವಸ್ಥೆಯ ಆಗರವೆಂದೂ
ಪರಿಗಣಿಸಲಾಗಿದೆ.
ಒಮ್ಮೆ, ಬರ್ಲಿನ್ ವ್ಯಕ್ತಿಯೊಬ್ಬ ವಿಯನ್ನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಹಾದಿತಪ್ಪಿ ಕಳೆದುಹೋಗುತ್ತಾನೆ. ಮಾರ್ಗದರ್ಶನದ ಅಗತ್ಯವಿದ್ದ ಅವನ ಬಗ್ಗೆ ಕಥೆಯೊಂದಿದೆ.
ಅಂತಹ ಸಂದರ್ಭದಲ್ಲಿ ಆ ಬರ್ಲಿನ್ ವ್ಯಕ್ತಿ ಏನು ಮಾಡಬಹುದು? ಅವನು ಅಲ್ಲಿಯೇ ಹಾದುಹೋಗುತ್ತಿದ್ದ ಒಬ್ಬ ವಿಯನ್ನಾದವನ ಕೋಟಿನ ಎದೆಯ ಭಾಗವನ್ನು ಹಿಡಿದೆಳೆದು
ನಿಲ್ಲಿಸಿ, ಜೋರಾಗಿ ಬೊಗಳಿದ,
`ಅಂಚೆ ಕಛೇರಿ. ಎಲ್ಲಿದೆ ಅದು?’
ಕಕ್ಕಾವಿಕ್ಕಿಯಾದ ಆ ವಿಯಾನ್ನಾದ ಪ್ರಜೆ, ಎಚ್ಚರಿಕೆಯಿಂದ ವ್ಯಕ್ತಿಯ ಕೈಹಿಡಿತದಿಂದ
ಬಿಡಿಸಿಕೊಂಡು, ತನ್ನ ಕೋಟನ್ನು ನೀವಿ ಸರಿಮಾಡಿಕೊಂಡಾದ ನಂತರ,
ತುಂಬಾ ನಯವಾಗಿ,
`ಸ್ವಾಮಿ, ತಾವು ಸ್ವಲ್ಪ ನಯವಾಗಿ ನನ್ನನ್ನು ಕೇಳಬಹುದಿತ್ತು, ಸ್ವಾಮಿ, ನಿಮಗೆ ಒಂದು
ಕ್ಷಣ ಪುರುಸೊತ್ತಿದ್ದು, ಅಂಚೆ ಕಛೇರಿ ಎಲ್ಲಿದೆಯೆಂದು ಗೊತ್ತಿದ್ದರೆ, ದಯಮಾಡಿ ನನಗೆ
ಆ ಬಗ್ಗೆ ತಿಳಿಸುವಿರಾ? ಎಂದು.
ಬರ್ಲಿನ್ ವ್ಯಕ್ತಿ ಅಚ್ಚರಿಯಿಂದ ಒಂದು ಕ್ಷಣ ಅವನತ್ತ ದಿಟ್ಟಿಸಿ ನೋಡಿ, ಆನಂತರ
`ನಾನು ಕಳೆದು ಹೋಗುವುದೇ ಮೇಲು’ ಎಂದು ಸೂಚಿಸಿ, ಅಲ್ಲಿಂದ ಜೋರಾಗಿ
ಮುಂದೆ ನಡೆದ.
ಅದೇ ವಿಯನ್ನಾದ ಪ್ರಜೆ ಅದೇ ವರ್ಷ ಬರ್ಲಿನ್ಗೆ ಭೇಟಿ ನೀಡುವ ಸಂದರ್ಭ
ಬಂತು, ಅವನಿಗೂ ಅಂಚೆ ಕಛೇರಿಯ ಬಗ್ಗೆ ವಿಚಾರಿಸುವ ಪ್ರಮೇಯ ಬಂತು. ಅವನು
ಬರ್ಲಿನ್ ನಾಗರಿಕನೊಬ್ಬನನ್ನು ಕಂಡು, ವಿನಯದಿಂದ, ಸ್ವಾಮಿ, ನಿಮಗೆ ಒಂದು ಕ್ಷಣ
ಪುರುಸೊತ್ತಿದ್ದು, ಅಂಚೆ ಕಛೇರಿ ಎಲ್ಲಿದೆಯೆಂದು ಗೊತ್ತಿದ್ದರೆ, ದಯಮಾಡಿ ನನಗೆ ಆ
ಬಗ್ಗೆ ತಿಳಿಸುವಿರಾ?
ಯಂತ್ರದ ವೇಗದಲ್ಲಿ, ಬರ್ಲಿನ್ನವ ಉತ್ತರಿಸಿದ,
‘ನೇರವಾಗಿ ನಿಮ್ಮೆದುರು, ಎರಡು ಹಂತಗಳಾಚೆ, ನಿಖರವಾಗಿ ಬಲಕ್ಕೆ, ಅಲ್ಲಿಂದ ಒಂದು
ಹಂತ ಮುಂದಕ್ಕೆ, ಅಡ್ಡ ರಸ್ತೆ ದಾಟಿ, ಬಲಕ್ಕೆ ಅರ್ಧ ತಿರುಗಿ, ರೇಲು ರಸ್ತೆಯ ಬಲಕ್ಕೆ ನಡೆದು, ನ್ಯೂಸ್ ಸ್ಟಾಂಡ್ ದಾಟಿದರೆ, ಅಂಚೆ ಕಛೇರಿಯಲ್ಲಿ ಕಾಲಿಡುವಿರಿ.’
ಆ ವಿಯನ್ನಾದವನಿಗೆ ಅದೆಲ್ಲ ಗೊತ್ತಾಗುವ ಬದಲು ಹೆಚ್ಚಿನ ಗೊಂದಲ ಮೂಡಿ,
ಮೆಲ್ಲಗುಸುರಿದ, `ಸಾವಿರ ವಂದನೆಗಳು ನಿಮಗೆ, ದಯಾಳುಗಳು ತಾವು.’ ಇದರಿಂದಾಗಿ,
ಆ ಬರ್ಲಿನ್ ನಾಗರಿಕ ಸಿಟ್ಟಿಗೆದ್ದು, ವಿಯನ್ನಾದವನ ಕೋಟಿನ ಪಟ್ಟಿ ಹಿಡಿದು, ಕೂಗಿದ,
`ನಿನ್ನ ವಂದನೆಗಳನ್ನು ನಿನ್ನ ಬಳಿಯಲ್ಲಿಯೇ ಇಟ್ಟುಕೋ, ನಾನು ಹೇಳಿದ ತಿಳುವಳಿಕೆಗಳ
ಬಗ್ಗೆ ಮಾತ್ರ ಗಮನವಿರಲಿ!
ಗಂಡು ಮಿದುಳು, ಆ ಬರ್ಲಿನ್ನವನದು; ಹೆಣ್ಣಿನ ಮಿದುಳು, ವಿಯನ್ನಾದವನದು.
ಹೆಣ್ಣಿನ ಮಿದುಳಿಗೆ ಒಂದು ಅನುಗ್ರಹವಿದೆ, ಅಂತಃಕರಣವಿದೆ. ಗಂಡಿನ ಮಿದುಳಿಗೆ
ದಕ್ಷತೆಯಿದೆ,
ಆದಾಗ್ಯೂ ಬಹಳ ಕಾಲ ಸಂಘರ್ಷವಿದ್ದರೆ
ಅಂತಃಕರಣಕ್ಕೆ ಸೋಲಾಗುವುದು ನಿಶ್ಚಿತ-ದಕ್ಷತೆಯುಳ್ಳ ಮಿದುಳು ಗೆಲ್ಲಬಹುದು,
ಏಕೆಂದರೆ, ಜಗತ್ತು ಅರ್ಥಮಾಡಿಕೊಳ್ಳುವುದು ಕೇವಲ ಗಣಿತದ ಭಾಷೆಯನ್ನೆ
ಹೊರತು, ಪ್ರೀತಿಯದ್ದನ್ನಲ್ಲ.
ಆದರೆ ದಕ್ಷತೆ ನಿನ್ನ ಅನುಗ್ರಹದ ಮೇಲೆ ವಿಜಯ ಸಾಧಿಸಿದ ಘಳಿಗೆಯಲ್ಲೆ
ಅತ್ಯಮೂಲ್ಯವಾದ ಏನನ್ನೊ ಕಳೆದುಕೊಳ್ಳುವೆ ನೀನು
ನೀನು ನಿನ್ನ ಇರುವಿಕೆಯೊಂದಿಗಿನ ಸಂಪರ್ಕವನ್ನೇ ಕಳೆದುಕೊಳ್ಳುವೆ.
ನೀನು ಅತ್ಯಂತ ದಕ್ಷನಾಗಬಹುದು,
ಆದರೆ ನೀನೊಬ್ಬ ನಿಜವಾದ ವ್ಯಕ್ತಿಯಾಗಿ ಉಳಿದಿರುವುದಿಲ್ಲ
ನೀನೊಂದು ಯಂತ್ರವಾಗುವೆ, ಒಂದು ರೋಬಟ್ ಇದ್ದ ಹಾಗೆ.
ಇದೆಲ್ಲದರಿಂದಾಗಿ
ಇಲ್ಲಿ ನಿರಂತರ ಸಂಘರ್ಷವಿದೆ ಗಂಡು ಮತ್ತು ಹೆಣ್ಣಿನ ನಡುವೆ.
ಅವರು ಬೇರೆಯಾಗಿಯೂ ಇರುವುದಕ್ಕಾಗುವುದಿಲ್ಲ
ಅವರು ಮತ್ತೆ ಮತ್ತೆ ಸಂಬಂಧ ಮಾಡಬೇಕಾಗುತ್ತದೆ-
ಆದರೆ ಹಾಗೆಂದು ಅವರು ಜೊತೆಗೂ ಇರುವಂತೆಯೂ ಇಲ್ಲ
ಹೋರಾಟ ಹೊರಗಿಲ್ಲ, ಅದಿರುವುದು ನಿನ್ನೊಳಗೆ.
ನಾನು ಅರ್ಥಮಾಡಿಕೊಂಡಿರುವುದು ಹೀಗೆ:
ನಿನ್ನೊಳಗಿನ ಬಲಗೋಳಾರ್ಧ ಮತ್ತು ಎಡಗೋಳಾರ್ಧದ ನಡುವಿನ
ಹೋರಾಟವನ್ನು ಬಗೆಹರಿಸಿಕೊಳ್ಳದಿದ್ದರೆ
ನೀನೆಂದೂ ಪ್ರೀತಿಯಲ್ಲಿ ನೆಮ್ಮದಿಯಿಂದ ಇರಲಾರೆ- ಎಂದೆಂದಿಗೂ
ಏಕೆಂದರೆ ಒಳಗಿನ ಸಂಘರ್ಷ ಹೊರಗೆ ಪ್ರತಿಫಲಿಸುತ್ತದೆ.
ಒಳಗೇ ನೀನು ಹೋರಾಡುತ್ತಿದ್ದರೆ, ಮತ್ತು ನೀನು
ಎಡಗೋಳಾರ್ಧದ ಜೊತೆ ಗುರುತಿಸಿಕೊಂಡರೆ, ವೈಚಾರಿಕ ಅರ್ಧಗೋಳ-
ಮತ್ತು ಬಲ ಗೋಳಾರ್ಧದ ಮೇಲೆ ಹಿಡಿತ ಸಾಧಿಸುವ ನಿನ್ನ ಪ್ರಯತ್ನಗಳು
ನಿರಂತರ ಮುಂದುವರಿದರೆ, ನೀನು ಪ್ರೀತಿಸುವ ಹೆಣ್ಣಿಗೂ ಕೂಡ ಅದನ್ನೇ ಮಾಡುವೆ.
ಒಂದು ವೇಳೆ ಹೆಣ್ಣೊಬ್ಬಳು ನಿರಂತರವಾಗಿ ತನ್ನೊಳಗೆ
ತನ್ನದೇ ವೈಚಾರಿಕತೆಯೊಂದಿಗೆ ಹೋರಾಡುತ್ತಿದ್ದರೆ,
ಅವಳು ನಿರಂತರವಾಗಿ ತಾನು ಪ್ರೀತಿಸುವ ಗಂಡಿನೊಂದಿಗೂ ಸಂಘರ್ಷಕ್ಕಿಳಿಯುತ್ತಾಳೆ.
ಎಲ್ಲ ಸಂಬಂಧಗಳು-
ಹೆಚ್ಚು-ಕಡಿಮೆ ಎಲ್ಲ ಸಂಬಂಧಗಳನ್ನ, ಇದರಲ್ಲಿ ನಿರೀಕ್ಷೆಗಳು ಅತ್ಯಲ್ಪ,
ಲೆಕ್ಕದಿಂದ ಬಿಟ್ಟುಬಿಡಬಹುದು-
ಕುರೂಪಿಗಳೆ.
ಆರಂಭದಲ್ಲಿ ಅವು ಸುಂದರವಾಗಿರುತ್ತವೆ;
ಆರಂಭದಲ್ಲಿ ನೀನು ನಿಜ ಸ್ವರೂಪವನ್ನು ತೋರಿಸುವುದಿಲ್ಲ;
ಆರಂಭದಲ್ಲಿ ನೀನು ನಟಿಸುವೆ.
ಒಮ್ಮೆ ಸಂಬಂಧ ಗಟ್ಟಿಯಾಗುತ್ತಿದ್ದಂತೆ, ನೀನು ವಿಶ್ರಮಿಸುವೆ.
ನಿನ್ನೊಳಗಿನ ಸಂಘರ್ಷಗಳು ಉಕ್ಕಿ ಬಂದು
ನಿನ್ನ ಸಂಬಂಧದಲ್ಲಿ ತೋರಿಸಿಕೊಳ್ಳುತ್ತವೆ, ಪ್ರತಿಫಲಿಸುತ್ತವೆ ಕನ್ನಡಿಯ ಹಾಗೆ.
ಆಗ ಕಾಣಿಸಿಕೊಳ್ಳುತ್ತವೆ ಈ ಹೋರಾಟ, ಈ ಜಗಳ,
ಆಗ ಶುರುವಾಗುತ್ತದೆ -ಪ್ರತಿಕ್ಷಣವೂ ಸಾವಿರದೊಂದು ರೀತಿಯಲ್ಲಿ
ಒಬ್ಬರಿಗೊಬ್ಬರು ಅನ್ನುವುದು ಆಡುವುದು ಚುಚ್ಚುವುದು.
ಒಬ್ಬರನ್ನೊಬ್ಬರು ನಾಶಮಾಡುವುದು.
ಆದ್ದರಿಂದಲೇ ಸಲಿಂಗಕಾಮದತ್ತ ಆಕರ್ಷಣೆ.
ಯಾವಾಗ ಒಂದು ಸಮಾಜ ಗಂಡು ಹೆಣ್ಣಿನ ನಡುವೆ ಅತಿ ಎನ್ನುವಷ್ಟು
ವಿಭಾಗವಾಗುತ್ತದೋ ಆಗ ತತ್ಕ್ಷಣವೇ ಸಲಿಂಗಕಾಮ ಸ್ಫೋಟಗೊಳ್ಳುತ್ತದೆ.
ಏಕೆಂದರೆ, ಇನ್ನೊಬ್ಬ ಗಂಡಸಿನ ಜೊತೆ ಪ್ರೀತಿಯಲ್ಲಿರುವ ಒಬ್ಬ ಗಂಡಸು
ಅಷ್ಟೊಂದು ಸಂಘರ್ಷದಲ್ಲಿರುವುದಿಲ್ಲ.
ಪ್ರೀತಿಯ ಸಂಬಂಧ ಅತ್ಯಂತ ತೃಪ್ತಿದಾಯಕವಾಗಿಲ್ಲದೆ ಇರಬಹುದು,
ಅತ್ಯಂತ ಆನಂದ ಮತ್ತು ಭಾವ ಸಂತೃಪ್ತಿಯ ಕ್ಷಣಗಳತ್ತ ಕೊಂಡೊಯ್ಯದಿರಬಹುದು,
ಆದರೆ, ಕೊನೇಪಕ್ಷ ಅದು ಗಂಡು-ಹೆಣ್ಣಿನ ಸಂಬಂಧದ ಹಾಗೆ ಕುರೂಪವಾಗಿರುವುದಿಲ್ಲ.
ಸಂಘರ್ಷ ಅತಿ ಹೆಚ್ಚಾದಾಗ, ಹೆಣ್ಣು ಸಲಿಂಗಿಕಾಮಿಯಾಗುತ್ತಾಳೆ,
ಏಕೆಂದರೆ ಇಬ್ಬರು ಹೆಣ್ಣುಗಳ ನಡುವಿನ ಪ್ರೀತಿ ಸಂಬಂಧ, ಕೊನೇಪಕ್ಷ,
ಸಂಘರ್ಷದಲ್ಲಿ ಹೆಚ್ಚು ಆಳದ್ದಾಗಿರುವುದಿಲ್ಲ
ಅದೇ ಅದನ್ನು ಮುಟ್ಟುತ್ತದೆ; ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತಾರೆ.
ಹೌದು, ಅರ್ಥವಾಗುವಿಕೆಯ ಸಾಧ್ಯತೆ ಇದೆ,
ಆದರೆ ಆಕರ್ಷಣೆ ಕಳೆದುಹೋಗಿದೆ, ವೈರುಧ್ಯ ಕಳೆದುಹೋಗಿದೆ-
ಅದೂ ಕೂಡ ಅತ್ಯಂತ ಹೆಚ್ಚು ಬೆಲೆತೆತ್ತು.
ಅರ್ಥವಾಗುವಿಕೆಯ ಸಾಧ್ಯತೆ ಇದೆ,
ಆದರೆ ಇಡೀ ಬಿಕ್ಕಟ್ಟು, ಸವಾಲಿನಲ್ಲಿ ಕಳೆದುಹೋಗಿದೆ.
ಒಂದು ವೇಳೆ ಸವಾಲನ್ನು ನೀನು ಆಯ್ಕೆ ಮಾಡಿಕೊಂಡರೆ, ಆಗ ಸಂಘರ್ಷ ಬರುತ್ತದೆ,
ಏಕೆಂದರೆ, ನಿಜವಾದ ಸಮಸ್ಯೆ ನಿನ್ನಲ್ಲೇ, ನಿನ್ನೊಳಗೆ ಎಲ್ಲೋ ಇರುತ್ತದೆ.
ನೀನು ನೆಲೆನಿಲ್ಲದೆ,
ನಿನ್ನ ಹೆಣ್ಣಿನ ಮತ್ತು ಗಂಡಿನ ಮನಸ್ಸಿನ ನಡುವೆ ಆಳದ ಸಾಮರಸ್ಯ ಮೂಡದೆ,
ನಿನಗೆ ಪ್ರೀತಿಸಲು ಸಾಧ್ಯವಾಗುವುದಿಲ್ಲ.
ಜನ ನನ್ನಲ್ಲಿಗೆ ಬರುತ್ತಾರೆ, ಅವರು ನನ್ನನ್ನು ಕೇಳುತ್ತಾರೆ: ಒಂದು ಸಂಬಂಧದ
ಆಳಕ್ಕಿಳಿಯುವುದು ಹೇಗೆ, ಎಂದು. ನಾನು ಅವರಿಗೆ ಹೇಳುತ್ತೇನೆ,
`ಮೊದಲು ನೀವು ಧ್ಯಾನದ ಆಳಕ್ಕಿಳಿಯಿರಿ.
ನೀವು ನಿಮ್ಮಲ್ಲೆ ಕರಗಿಹೋಗದೆ ಇದ್ದರೆ,
ನಿಮ್ಮಲ್ಲಿ ಈಗ ಇರುವ ಸಮಸ್ಯೆಗಳ ಜೊತೆ, ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಹುಟ್ಟುಹಾಕುತ್ತೀರಿ.
ನೀವು ಸಂಬಂಧದ ಜೊತೆ ನಡೆದರೆ, ನಿಮ್ಮೆಲ್ಲ ಸಮಸ್ಯೆಗಳು ಹೆಚ್ಚಾಗುತ್ತವೆ.
ಸುಮ್ಮನೆ ಗಮನಿಸಿ.
ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದದ್ದು ಮತ್ತು ಚೆಲುವಾದದ್ದು – ಪ್ರೀತಿ ಎನ್ನುವುದು,
ಆದರೆ ಅದಕ್ಕಿಂತ ಅತ್ಯಂತ ಹೆಚ್ಚು ಕುರೂಪವಾದ ಇನ್ನೊಂದನ್ನು, ಇನ್ನೂ ಹೆಚ್ಚಿನ ನರಕವನ್ನು- ನೀವು ಕಾಣುವುದಕ್ಕೆ ಸಾಧ್ಯವೆ?’




Worst Translation I ever read. Google translator would have done better job.