ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಬೇಕಾದ ಪುಸ್ತಕ ‘ಬುದ್ದಿಜೀವಿ ಬಿಕ್ಕಟ್ಟುಗಳು’

ಪುರುಷೋತ್ತಮ ಬಿಳಿಮಲೆ

ಬುದ್ದಿಜೀವಿಗಳನ್ನು ಹೀಗಳೆಯುವವರು ಪರೋಕ್ಷವಾಗಿ ತಾವು ಬುದ್ದಿಹೀನರು ಎಂಬುದನ್ನು ತಮ್ಮ ಅನೇಕ ಕ್ರಿಯೆಗಳ ಮೂಲಕ ಸ್ಪಷ್ಟಪಡಿಸುತ್ತಲೇ ಇರುತ್ತಾರೆ. ಅದಿರಲಿ, ಆದರೆ ಬುದ್ದಿಜೀವಿಯೆಂದರೆ ಯಾರು? ಅವರು ಎಂದಾದರೂ ತಮ್ಮನ್ನು ಬುದ್ದಿಜೀವಿಗಳೆಂದು ಕರೆದುಕೊಂಡಿದ್ದಾರೆಯೇ? ಸಮಾಜವು ವೈದ್ಯರು, ಇಂಜಿನೀಯರ್, ವಾಸ್ತುಶಿಲ್ಪಿ, ಅಧ್ಯಾಪಕರು ಮೊದಲಾದವರನ್ನು ಸೃಷ್ಟಿಸುವಾಗ ಅವರಿಂದ ಕೆಲವು ಬಗೆಯ ಕೆಲಸಗಳನ್ನು ನಿರೀಕ್ಷಿಸುತ್ತದೆ.

ಆ ನಿರೀಕ್ಷೆಯೇ ಅವರಿಗೆ ಕೆಲವು ಅಧಿಕಾರಗಳನ್ನು ನೀಡುತ್ತದೆ. ಉದಾಹರಣೆಗೆ ‘ಡಾಕ್ಟರರು ಹೇಳಿದ್ದಾರೆ’ ಎಂದರೆ ಬಹುತೇಕ ಎಲ್ಲರೂ ಅದನ್ನು ಒಪ್ಪುತ್ತಾರೆ. ಆದರೆ ಸಮಾಜವು ಆ ರೀತಿಯಲ್ಲಿ ಬುದ್ದಿಜೀವಿಗಳನ್ನು ಉತ್ಪಾದಿಸುವುದಿಲ್ಲ.‌ ಬುದ್ದಿಜೀವಿಗಳಿಗೆ ಅಧಿಕಾರವೂ ಇಲ್ಲ.‌ ಕಾರಣ ಆಳುವ ವರ್ಗಕ್ಕೆ ಅವರು ಮುಖ್ಯವಾಗುವುದಿಲ್ಲ.

ಬುದ್ದಿಜೀವಿಗಳು ಸಾಮಾನ್ಯವಾಗಿ ಯಾರ ಬಗ್ಗೆ ಮಾತಾಡುತ್ತಾರೋ ಅವರೂ ಬುದ್ದಿಜೀವಿಗಳೊಡನೆ ಇರುವುದು ಕಡಿಮೆಯೇ. ಹೀಗಿರುವಾಗ ಬುದ್ದಿಜೀವಿಗಳು ಯಾಕೆ ಅನೇಕ ಜವಾಬ್ದಾರಿಗಳನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಾರೆ? ಅವರು ಇದಿರಿಸುವ ನಿಜವಾದ ಬಿಕ್ಕಟ್ಟುಗಳೇನು? ಎಂಬುದನ್ನು ಸಾರ್ತೃ ವಿಶ್ಲೇಷಿಸುತ್ತಾನೆ.

ಕೆವಿಎನ್ ಬಹಳ ಸೊಗಸಾಗಿ ಅನುವಾದ ಮಾಡಿದ್ದಾರೆ. ಋತುಮಾನ ಪ್ರಕಟಿಸಿದೆ. ಓದಬೇಕಾದ ಪುಸ್ತಕ, ಇದಕೆ ಸಂಶಯಬೇಡ.

‍ಲೇಖಕರು Admin

1 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading