ರವಿ ಅಜ್ಜೀಪುರ ಯಾವಾಗಲೂ ಹಾಗೇ . ನೂರೆಂಟು ಹೊಸ ಯೋಚನೆ ಮಾಡುವವರು.
ಇದ್ದಕ್ಕಿದ್ದಂತೆ ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡು ಹೀಗೆ ಮಾಡಿದರೆ ಹೇಗೆ? ಎನ್ನುವ ಆಲೋಚನೆ ಮುಂದಿಟ್ಟರು.
ನಾಲ್ಕು ಪದ ಕೊಟ್ಟು ಇದು ಅರಳಿಸುವ ಕವಿತೆ ಹೇಗಿರಬಹುದು ಟ್ರೈ ಮಾಡಿ ಅಂದರು. ಆ ಪ್ರಯೋಗದ ಝಲಕ್ ಇಲ್ಲಿದೆ.
ಓಕೆ , ನೀವೂ ಟ್ರೈ ಮಾಡಿ.. ಒಂದು ಸಣ್ಣ ಮುನಿಸು ಅವಳೆಡೆಗೆ!
ಈ ಸಾಲನ್ನೇ ಮೊದಲ ಸಾಲನ್ನಾಗಿಟ್ಟುಕೊಂಡು ಒಂದು ಪುಟ್ಟ ಕವಿತೆ ರಚಿಸಿದ್ರೆ ಹೇಗಿರುತ್ತೆ.
ಜಸ್ಟ್ ಟ್ರೈ. ಸುಮ್ನೆ ಕುತೂಹಲಕ್ಕೆ.
-ರವಿ ಅಜ್ಜೀಪುರ
ನನ್ನೆಲ್ಲ ಕನಸುಗಳ ನಡುರಸ್ತೆಯಲಿ ಬಿಕರಿಗಿಟ್ಟು ಹೋಗಿದ್ದಕ್ಕೆˌ
ಪೂರ್ಣ ಚಂದಿರನ ತೋರಿಸಿˌ ರಮಿಸಿ ಕೈ ತುತ್ತು ತಿನ್ನಿಸುವ ಮುನ್ನ ಮರೆಯಾಗಿದ್ದಕ್ಕೆˌ
ಬಾನಾಡಿ ಬಯಕೆಗಳ ರೆಕ್ಕೆ ಮುರಿದು. by #avinashholemarur
ಒಂದು ಸಣ್ಣಮುನಿಸು ಅವಳೆಡೆಗೆ
ನಾನಿನ್ನೂ ಕೊಡುವುದಿತ್ತು ತುತ್ತು ಬೇಡುವುದಿತ್ತು ಅವಳ ಮುತ್ತು
ಬಣ್ಣದ ನೆರಿಗೆಯ ಫ್ರಾಕಿನ ನೆರಳ ಕಾಂತಿಯಲಿ ಜೀನ್ಸ್ ಕಾಯುತ್ತಿತ್ತು
ಕಾಲ ಹಾಲಕೆನೆಯಂತೆ ಉಕ್ಕಿಯೇ ಹೋಯ್ತು
ವಯಸ ಮಾಯಕದ ತೆರೆಗೆ ಅಡ್ಡಹಾಕಲೇ
ನನ್ನ ಹರೆಯದ ಕನಸುಗಳ ಗುಡ್ಡೆ ಹಾಕಲೇ
ಹರಸಬೇಕಿದೆ ಹೆಗಲಾಗಬೇಕಿದೆ ಕನಸುಗಳಿಗೆ
ಮಗಳಿಗೆ ಮಗಳಾಗಿ ಕಂಬನಿಯ ಮಿನುಗಿಸಬೇಕಿದೆ
ಜೊತೆಗೆ ಕಾಲನೆದುರು ನನ್ನ ಕಾಲೂರಿಸಿದ
ಅವಳೆಡೆಗೊಂದಿಷ್ಟು ಮುನಿಸಿದೆ..
ಒಂದು ಸಣ್ಣ ಮುನಿಸು ಅವಳೆಡೆಗೆ
ಮೋಡ ಕಟ್ಟಿಯೂ ಮಳೆ ಸುರಿಸದ ಜಿಡ್ದುತನಕ್ಕೆ,
ಮಳೆ ಸುರಿಸಿಯೂ ಕೊಚ್ಚಿ ನೊಣೆದ ಕೋಪಕ್ಕೆ
ನೊಣೆದರೂ, ಕೊಡಲಿ ಬೀಸಿದ ಪಾಪಿಗಳ
ನೊಣೆಯದೆ , ಅಮಾಯಕರ ನುಂಗಿದ್ದಕ್ಕೆ,
ಅವಳನ್ನೇ ನುಂಗುವ ರಕ್ಕಸ ಮಕ್ಕಳ
ಮೇಲೆ ಇನಿತೂಕರುಣೆ ತೋರದಿದ್ದಕ್ಕೆ ,
ಸಹನೆ ಮಂತ್ರದಲಿ ತನ್ನನ್ನೇ ಬಲಿಯಾಗಿಸಿಕೊಳ್ಳುತ್ತಿರುವುದಕ್ಕೆ
ಒಂದು ಸಣ್ಣ ಮುನಿಸು ಅವಳೆಡೆಗೆ
ಒಂದು ಸಣ್ಣ ಮುನಿಸು ಅವಳೆಡೆಗೆ,,,
ಎದೆಯ ಮೋಹದ ಮನೆಯ ಒಳಗೆ
ಕಾಲಿಡಲು ಭಯಪಟ್ಟು,
ಸಣ್ಣಗೆ ಕನಲಿ, ನಕ್ಕು, ಮುತ್ತಿಕ್ಕಿದವಳಿಗೆ,
ಮುನಿಸೊಂದಿದೆ ಅವಳೆಡೆಗೆ
ಕೈ ಬಿಡವುದಿಲ್ಲವೆಂದು ಹೇಳಿ ಬಿಟ್ಟಿಿದ್ದಕ್ಕೆೆ
ಮರೆಯುವುದಿಲ್ಲವೆಂದು ಹೇಳಿ ನೆನಪಿಸಿಕೊಳ್ಳದಿದ್ದಕ್ಕೆೆ
ಕಣ್ಣಲಿ ಕವಿತೆಯ ಕಟ್ಟಿಿ ಮಾಯವಾಗಿದ್ದಕ್ಕೆೆ
ಹೃದಯದ ಬಿಸಿ ಉಸಿರನ್ನು ಸಣ್ಣಗೆ ತಣಿಸಿ
ಏದುಸಿರು ಬಿಡುವಂತೆ ಮಾಡಿದ್ದಕ್ಕೆೆ
ಎನೆಂದು ಹೇಳಲಿ ನಾ
ನನಗೆ ಸುಳಿವು ನೀಡದೆ ದೂರವಾಗಿದ್ದಕ್ಕೆೆ
ಮುನಿಸೊಂದಿದೆ ಅವಳೆಡೆಗೆ