
ಇಂದಿರಾ ಹೆಗ್ಡೆ
ಪಾಸ್ ಫೋರ್ಟ್ ನವೀಕರಣಕ್ಕಾಗಿ ನಾನು ಆನ್ ಲೈನ್ ಮೂಲಕ ಅರ್ಜಿ ತುಂಬಿಸಿದ್ದೆ.
ನನಗೆ ಮೇ 12ರಂದು ಲಾಲ್ ಬಾಗ್ ರಸ್ತೆಯಲ್ಲಿ ಇರುವ ಪಾಸ್ ಪೋರ್ಟ್ ಕಛೇರಿಗೆ 3.30 ಗಂಟೆಗೆ ಹಾಜರಾಗಲು ಮೆಸೇಜ್ ನನ್ನ ಮೊಬೈಲ್ ಗೆ ಬಂತು. ಅರ್ಧ ಗಂಟೆ ಮುಂಚಿತವಾಗಿ ಬರಲು ಅಲ್ಲಿ ಸೂಚಿಸಲಾಗಿತ್ತು. ಕಾರಣ ದಾಖಲೆ ಪರಿಶೀಲನೆಗಾಗಿ.
ನಾನು 3 ಗಂಟೆ 5 ನಿಮಿಷಕ್ಕೆ ಕಛೇರಿ ತಲುಪಿದೆ.
ಬಾಗಿಲ ಬಳಿ ಜನರು ನಿಂತಿದ್ದರು. ಕಛೇರಿಯ ಸಮವಸ್ತ್ರ ಧರಿಸಿರುವ ವ್ಯಕ್ತಿಯ ಬಳಿ ನನ್ನ ಪರಿಚಯ ಹೇಳಿದಾಗ ಆತ ಕೌಂಟರ್ ಸಂಖ್ಯೆ 1 ಹೇಳಿ ನನ್ನನ್ನು ಅಲ್ಲಿಗೆ ಹೋಗಲು ತಿಳಿಸಿದ. ಅಲ್ಲಿ ಸರದಿ ಸಾಲು ಇದ್ದರೂ ಅದು ಬೇಗನೇ ಕರಗುತ್ತಿತ್ತು. 2 ನಿಮಿಷದಲ್ಲಿ ನನಗೆ ಮುಂದಿನ ಕೌಂಟರ್ ತೋರಿಸಿಲಾಯಿತು. ಅಲ್ಲಿ ನನ್ನ ಹೆಸರು ಕರೆದಾಗ ನನಗೆ ಸ್ವಲ್ಪ ಗಲಿಬಿಲಿಯಾಗಿ ಕೌಂಟರ್ ಹುಡುಕಿ ಹೋದಾಗ 1 ಸೆಕೆಂಡ್ ತಡ ಆಯಿತು.
ಆಗ ಕೌಂಟರ್ ನಲ್ಲಿ ಇದ್ದ ಮಹಿಳೆ ಹೇಳಿದಳು ”ಮೇಡಮ್ ಏನೂ ಯೋಚನೆ ಮಾಡಬೇಡಿ ನಿಮ್ಮ ಕೌಂಟರ್ ನಂಬ್ರ ಈಗ ಕರೆಯುತ್ತಾರೆ.” ಎಂದಳು. “ಮತ್ತೆ ನಮಗೆ ಈ ಸಂಖ್ಯೆ ಹೇಳಿದರು.” ಎಂದೆ ನಾನು . “ಅವರು ಹೇಳಿದ್ದೂ ಸರಿ. ನೀವು ಬಂದುದೂ ಸರಿ. ಆದರೆ ನೀವು ಬರುವಾಗ ಸ್ವಲ್ಪ ತಡವಾಯಿತು, ನಾನು ಮುಂದಿನ ವ್ಯಕ್ತಿಗೆ ಕರೆಯಲು ಹೇಳಿದೆ” ಎಂದಳಾಕೆ. ಅಷ್ಟರಲ್ಲಿ ಆ ವ್ಯಕ್ತಿಯೂ ಬಂದ. ನಮಗೆ ಬೇರೆ ಕೌಂಟರೂ ದೊರಕಿತು. ಅಲ್ಲೂ ಎಲ್ಲಾ ಸರಿಯಾಗಿ ನಡೆಯಿತು. “
”ಪೋಲೀಸ್ ವೆರಿಫಿಕೇಷನ್ ಇದೆಯಾ ?” ಎಂದು ಕೇಳಿದೆ. “ಇಲ್ಲ ಮೇಡಮ್ ಹಳೆಯ ಪಾಸ್ ಪೋರ್ಟ್ನಲ್ಲಿ ಇರುವ ವಿಳಾಸ ಈಗ ಬದಲಾಗಿದ್ದರೆ ಮಾತ್ರ ವಿಳಾಸ ಖಚಿತ ಪಡಿಸಲು ಪೋಲೀಸ್ ವೆರಿಫಿಕೇಷನ್ ಇದೆ.” ಎಂದರು. ಮುಂದಿನ ಎರಡು ಕೌಂಟರ್ ನಲ್ಲಿ ಮೇಲಧಿಕಾರಿಗಳು ಹಾಗೆ ನೋಡಿ ಹೀಗೆ “ಆಯಿತು ಸ್ಪೀಡ್ ಪೋಸ್ಟಲ್ಲಿ ಬರುತ್ತದೆ. ಒಂದು ವಾರದ ಒಳಗೆ ನಿಮ್ಮ ಮನೆಗೆ ತಲುಪುತ್ತದೆ “ ಎಂದರು.
ಇದಿಷ್ಟು ಆಗಲು 30 ನಿಮಿಷ ಹಿಡಿಯಲಿಲ್ಲ.
ಮರುದಿನದಿಂದ ಎಸ್ ಎಮ್ ಎಸ್ ಬರತೊಡಗಿತು
1 ನಿನ್ನ ಪಾಸ್ ಪೋರ್ಟ್ ರೆಡಿಯಾಗುತ್ತಿದೆ.
2 Your application …….has been granted on Post Police Verification basis.
3 ಅಚ್ಚಾದ ಕೂಡಲೇ ನಿಮಗೆ ಮಾಹಿತಿ ಬರುತ್ತದೆ.
3 ಅಚ್ಚಾಗಿ ಲ್ಯಾಮಿನೇಷನ್ ಗೆ ಹೋಗಿದೆ.
4 ವಿಜಯನಗರ ಥಾನೆಯಿಂದ ಪೋಲೀಸ್ ವೆರಿಫಿಕೇಷನ್ ಬಾರದೆ ಇದ್ದರೆ ನೀನೇ ಸಂಪರ್ಕಿಸುವುದು
5 ನಿನ್ನ ಪಾಸ್ ಪೋರ್ಟ್ ಸ್ಪೀಡ್ ಪೋಸ್ಟ್ ನಲ್ಲಿ ನಿಮ್ಮ ರವಾನೆಯಾಗಿದೆ
ಮರುದಿನ ಪಾಸ್ ಪೋರ್ಟ್ ನ್ನು ಪೋಸ್ಟ್ ಮ್ಯಾನ್ ಮನೆಗೆ ತಲುಪಿಸಿದ.
ಇದಾದ 3ದಿನದ ಅನಂತರ ಪೋಲೀಸ್ ನಮ್ಮ ಮನೆಗೆ ಬಂದು “ನಿಮ್ಮ ಪಾಸ್ ಪೋರ್ಟ್ ಪೋಲೀಸ್ ವೆರಿಫಿಕೇಷನ್ ಗೆ ಬಂದಿದ್ದೀನಿ” ಎಂದರು.
“ಪಾಸ್ ಪೋರ್ಟ್ ಮನೆಗೆ ಬಂದು 3 ದಿನ ಆಯಿತು ಇನ್ನೆಂಥ ಪೋಲೀಸ್ ವೆರಿಫಿಕೇಷನ್ “ ಎಂದೆ.
“ ಬಂದಿದೆಯಾ ? ಬೇಡವಾ ಪೋಲೀಸ್ ವೆರಿಫಿಕೆಷನ್ ? ಹಾಗಾದರೆ ಕ್ಯಾನ್ಸಲ್ ಮಾಡಲು ಬರೆದು ಹಾಕ್ತೀನಿ “ ಎಂದರು.
ನನಗೋ ಇದು ಅನಿರೀಕ್ಷಿತ. ಕ್ಷಣ ತಡವರಿಸಿ ಹೇಳಿದೆ,
” ಪೋಲೀಸ್ ವೆರಿಫಿಕೇಷನ್ ಇಲ್ಲ ಎಂದು ನನ್ನ ಬಳಿ ಸ್ಪಷ್ಟವಾಗಿ ಹೇಳಿದ್ದಾರೆ. ವಿಳಾಸ ಬದಲಾದವರಿಗೆ ಮಾತ್ರ ಪೋಲೀಸ್ ವೆರಿಫಿಕೇಷನ್ ಅಂತೆ.”
“ ಹಾಗಾದರೆ ಇದು ನಿಮ್ಮದೇ ಪಾಸ್ ಪೋರ್ಟ್ ಕಾಪಿ ಅಲ್ಲವಾ”
“ ಹೌದು. ನನ್ನ ಪೋನಿನಲ್ಲಿ ಪಾಸ್ ಪೋರ್ಟ್ ಆಫೀಸಿನ ಮೇಸೇಜ್ ಓದಿ ಅದರಲ್ಲಿ ಏನು ಬರೆದಿದ್ದಾರೆ.” ಎಂದು.
“ ಮತ್ತೇಕೆ ನಮಗೆ ಕಳುಹಿಸಿದ್ದು ?” ಅದು ನೀವು ವಿಚಾರಿಸಿಕೊಳ್ಳಿ. ನೀವು ಯುನಿಫೋಮ್ ಧರಿಸಿ ಬಂದುದಕ್ಕೆ ನಾನು ಯುನಿಫಾರ್ಮ್ ಗೆ ಗೌರವ ಕೊಟ್ಟು ಸುಮ್ಮನಿದ್ದೀನಿ. ಇಲ್ಲವಾದಲ್ಲಿ ನನ್ನಮನೆಗೆ “ಕಳ್ಳ ಪೋಲೀಸ್ ಬಂದಿದ್ದಾರೆ” ಎಂದು ದೂರು ಕೊಡುತ್ತಿದ್ದೆ .” ಎಂದೆ
ಈಗ ತಗ್ಗಿದ ಧ್ವನಿಯಲ್ಲಿ “ನೀವು ಪಾಸ್ ಪೋರ್ಟ್ ಆಫೀಸಿಗೆ ಹೇಳಿ ಮೇಡಮ್. ಮನೆಗ ಪಾಸ್ ಪೋರ್ಟ್ ಕಳಿಸಿ ನಮ್ಮನ್ನು ವೆರಿಫಿಕೇಷನ್ ಮಾಡಲು ಯಾಕೆ ಹೇಳುವದು? ಎಂದು”
“ ಆ ಕೆಲಸ ನಾನು ಮಾಡುವುದಿಲ್ಲ.. ಬೇಕಾದರೆ ಪತ್ರಿಕೆಗೆ ಬರೆಯುತ್ತೀನಿ.”
“ಆಯಿತು ಹಾಗೇ ಮಾಡಿ”
ಎನ್ನುತ್ತಾ ಪೋಲಿಸರು ಮರಳಿದರು
ಈ ಗೊಂದಲ ಯಾರಿಂದ ? ಪಾಸ್ ಪೋರ್ಟ್ ಆಫೀಸಿನಿಂದವೋ? ಪೋಲೀಸ್ ಸ್ಟೇಷನ್ ನಿಂದವೋ? ಸಂಬಂಧಪಟ್ಟವರು ಉತ್ತರ ಕೊಡುವರೋ?
ನಮ್ಮ ದೇಶದಲ್ಲಿ ಇಷ್ಟೊಂದು ವ್ಯವಸ್ಥಿತವಾಗಿ ಲಂಚ ಇಲ್ಲದೆ ಪಾಸ್ ಪೋರ್ಟ್ ಆಗುತ್ತದೆ ಎಂದು ಬೀಗಿದ್ದ ನನಗೆ ಕೊನೆಯ ಗೊಂದಲ ನೋಡಿ ಬೇಸರ ತರಿಸಿತು.





0 Comments