ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಐತಲಕಡಿ ಮಾರ್ನಿಂಗ್ ಸಾರ್ : ಸಕತ್ ಕಿಕ್ಕಿಂಗ್ ಕಾಲಂ

ಜಿ ವಿ ಜಯಶ್ರೀ ಪತ್ರಕರ್ತೆ. ಸಾಕಷ್ಟು ಕಾಲದಿಂದ ಮೀಡಿಯಾ ಮಥಿಸುತ್ತಾ ಬಂದಿದ್ದಾರೆ. ಮೀಡಿಯಾ ರಿವ್ಯೂ, ಅದರಲ್ಲೂ ತಮ್ಮದೇ ಕಿಕ್ಕಿಂಗ್ ಶೈಲಿಯಲ್ಲಿ ಜಯಶ್ರೀ ಬರೆಯುವ ರಿವ್ಯೂ ನೀವು ಓದಿ ಎಂಜಾಯ್ ಮಾಡಬೇಕು. ಟಿ ವಿ ಹಾಗೂ ರೇಡಿಯೋ ಷೋ ಇವರ ಫೆವರಿಟ್ ಕ್ಷೇತ್ರ. ಈ ಕ್ಷೇತ್ರದ ರಿವ್ಯೂ ಇಲ್ಲವೇ ಇಲ್ಲ ಎನ್ನುವಂತಿರುವಾಗ ಇನ್ನು ಮುಂದೆ ಜಯಶ್ರೀ ಕಾಲಂ ನಿಮಗಾಗಿ ‘ಮೀಡಿಯಾ ಮೈಂಡ್ ‘ನಲ್ಲಿ ಸಿಗುತ್ತದೆ. ಇಲ್ಲಿ ಒಂದು ಪುಟ್ಟ ಸ್ಯಾಂಪಲ್ ಇದೆ. ಓದಿ- ರೇಡಿಯೋ ಸದ್ದು … ಈ ಆರ್ಜೆಗಳು ಕೆಲವು ಪದಗಳ ಬಳಕೆ ಮಾಡಿ ಹಾಗೆ ತಮಗೊಂದು ಐಡೆ0ಟಿಟಿ ಬೆಳೆಸಿ ಕೊಂಡಿರ್ತಾರೆ. ಅದು ಕೆಲವು ಸರ್ತಿ ಹೇಗೆ ಮಜ ಕೊಡುತ್ತೆ ಅಂದ್ರೆ.. 98 .3 ನಲ್ಲಿ ಸಖತ್ ಹಾಟ್ ಮಗ ಒಂದು.ಕೆಲವು ಬಾರಿ ರಚನ ತುಂಬಾ ಸೀರಿಯಸ್ಸಾಗಿ ಇರುವ ವಿಷಯ ಮಾಡ್ತಾ ಇರ್ತಾರೆ ಮಧ್ಯೆ ಮಧ್ಯೆ ಸಖತ್ ಹಾಟ್ ಮಗ ಅಂದ್ರೆ ಹೇಗಿರುತ್ತೆ ಕೇಳುವವರಿಗೆ.;-) 93 .5 ನ ಆರ್ಜೆ ಪಲ್ಲವಿ ಕಿವಿ ಕಚ್ಕೊಂಡ್ ಕೇಳ್ತಾ ಇರಿ ಅನ್ನುವ ಪದ ಬಳಕೆ ಮಾಡ್ತಾರೆ ಯಾರ್ ಕಿವಿ ಪಲ್ಲವಿ 🙂 ಅದೇ ರೀತಿ 91 . 1 ನಲ್ಲಿ ಆರ್ಜೆ ಪ್ರದೀಪಾ ಐತಲಕಡಿ ಮಾರ್ನಿಂಗ್ ಅಂತ ನಿನ್ನೆ ಯಡಿಯೂರಪ್ಪನವರಿಗೆ ಐತಲಕಡಿ ಮಾರ್ನಿಂಗ್ ಸರ್ ಅಂತ ರಿಸೀವ್ ಮಾಡಿಕೊಂಡ್ರು. ಕನಿಷ್ಠ ಕೆಲವರ ಜೊತೆ ಮಾತಾಡುವಾಗಾದ್ರು ಈ ರೀತಿ ಬ್ಯಾಡ 🙂 ವಿನಾಯಕ್ ಜೋಶಿಯದು ತೊಂದ್ರೆನೆ ಇಲ್ಲ ಬಿಡಿ ಮಾತು ಮಾತಿಗೂ ಅಂಡು…. ಅಂಡು… ! ಜೋ ತಮಾಷೆ ಮಾಡಿದೆ ಅಷ್ಟೆ.. ನಿನ್ನೆ ನಿಮ್ಮ ಕಾರ್ಯಕ್ರಮದಲ್ಲಿ ದೇಹವನ್ನು ಸುರುಪ ಗೊಳಿಸುವ ಬಗ್ಗೆ ಹೇಳ್ತಾ ಇದ್ರಿ, ಆದ್ರೆ ಲೈಪೋ ಸಕ್ಷನ್, ಮತ್ಯಾವುದೇ ಬಗೆಯ ಸರ್ಜರಿಯನ್ನು ಈಗ ಕಾಸ್ಮೆಟಿಕ್ ಸರ್ಜರಿ ಅಂತ ಕರೆಯೋದು.. ಹೆಚ್ಚು ಅಂತ ಪದಗಳ ಬಳಕೆ ಮಾಡಿ ಕೇಳುಗರಿಗೆ ಒಂದಷ್ಟು ಹೊಸ ಪದ ಸಿಗುತ್ತೆ. ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್ ]]>

‍ಲೇಖಕರು avadhi

7 July, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading