ಇಂಗ್ಲಿಷ್ ಮೂಲ: ಪೀಟರ್ ಟಿಂಟುರಿನ್
ಕನ್ನಡ ರೂಪಾಂತರ: ಉದಯ ಇಟಗಿ

ಏನ ಹೇಳಲಿ ನಾನು
ಪಕ್ಕದ ಮನೆಯವರು
ನಮ್ಮನ್ನು ಚಹಾಕ್ಕೆ ಕರೆಯಲು ಬಂದರೆ?
ಅವರಿಗೆ ಗೊತ್ತಿಲ್ಲ ನನ್ನೊಂದಿಗೆ ನೀನಿಲ್ಲವೆಂದು
ಏನ ಹೇಳಲಿ ನಾನು?
ಏನ ಹೇಳಲಿ ನಾನು
ಫೋನು ರಿಂಗಣಿಸಿ ಯಾರಾದರೂ
ನಿನ್ನ ಕೇಳಿದರೆ?
ಅವರಿಗೆ ಗೊತ್ತಿಲ್ಲ ನಾನೂ ಸಹ ನಿನ್ನ ಕೇಳುತ್ತಿದ್ದೇನೆಂದು.
ಏನ ಹೇಳಲಿ ನಾನು?
ಏನ ಹೇಳಲಿ ನಾನು
ಯಾರಾದರು ನನ್ನ
ಸುರಿಯುವ ಕಣ್ಣೀರನ್ನು ನೋಡಿದರೆ?
ಹೇಗೆ ಹೇಳಲಿ ಅವರಿಗೆ ನೀನಿಲ್ಲದೆ
ನನ್ನ ಹೃದಯ ನಿಡುಸುಯ್ಯುತ್ತಿದೆ ಎಂದು?
ಏನ ಹೇಳಲಿ ನಾನು
ಯಾರಾದರು ನಿನ್ನ ಕೇಳಿದರೆ?
ಹೇಳಬಲ್ಲೆ ವಾರದ ಮಟ್ಟಿಗೆ ಹೊರಗೆ ಹೋಗಿದ್ದೀಯ ಎಂದು.
ಆದರೆ ವಾರ ಕಳೆದ ಮೇಲೆ
ಏನ ಹೇಳಲಿ ನಾನು?
ಏನ ಹೇಳಲಿ ನಾನು?
ನಿಮಗೆ ಇವೂ ಇಷ್ಟವಾಗಬಹುದು…





ವಾವ್…!…
ಏನು ಹೇಳಲಿ ನಾನು …?
ಇಷ್ಟು ಚಂದದ ಕವನಕ್ಕೆ…!
ಅನುವಾದಕ್ಕೆ…!
ಅಭಿನಂದನೆಗಳು…
ನಮಸ್ತೆ,
ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/
Sir, really a simple and beautiful. It’s
somewhat related to my own life. Anyhow I
request you to send a copy of the poem to my
e-mail: kgudadur@gmail.com
Lovely one!
ಪ್ರತಿಯೊಂದಕ್ಕೂ ಅವಳಿಲ್ಲವೆಂದೂ ಅಲುಭವ ಕವನ ಚೆನ್ನಾಗಿದೆ….