ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಕೀಕರಣ ಪೂರ್ವ ಕರ್ನಾಟಕ ಹೇಗಿತ್ತು..

 

-ಚನ್ನವೀರ ಕಣವಿ

(ಪುನರವಲೋಕನ ಗ್ರಂಥದಿಂದ)

ಏಕೀಕರಣ ಪೂರ್ವದಲ್ಲಿ ಕರ್ನಾಟಕ ಪರಿಸ್ಥಿತಿ ಇತರ ಪ್ರದೇಶಗಳಿಗಿಂತಒಂದು ಮಹತ್ವದ ವಿಷಯ ಭಿನ್ನವಾಗಿಯೇ ಇತ್ತು. ಇದು 19ಆಡಳಿತಗಳಲ್ಲಿ ಹಂಚಿ ಹೋಗಿತ್ತು. ಆಎಲ್ಲ ಭಾಗಗಳನ್ನು ಒಂದೇ ಪ್ರಾಂತದಲ್ಲಿತರದೇ ಹೋದರೆ ಕರ್ನಾಟಕಸ್ಥರ ಏಳಿಗೆ ಎಂದೆಂದೂ ಸಾಧ್ಯವಿಲ್ಲ ಎಂಬ ಭಾವನೆ ಆಗಿನ ಮುಖಂಡರು- ಜನರಲ್ಲಿ ಗಟ್ಟಿಯಾಗಿತ್ತು.

 

ಏಕೀಕರಣ ಪೂರ್ವ ಕರ್ನಾಟಕ ಹೇಗೆ ಭಿನ್ನವಾಗಿತ್ತು?

ಉತ್ತರ : “ಪ್ರಾಚೀನ ಭಾಷೆಗಳು ಬೆಳೆದು ಪರಿಪೂರ್ಣ ವ್ಯವಸ್ಥೆ ಹೊಂದಬೇಕಾದರೆ ಭಾಷೆ ತಳಹದಿ ಮೇಲೆ ಪ್ರಾಂತಗಳನ್ನು ಪುನರ್ವಿಂಗಿಡಿಸುವುದು ಅವಶ್ಯಕ” ಈ ರೀತಿ ಗಾಂಧೀಜಿಯವರು ಅವತ್ತು (25-1-1948)ತಮ್ಮ ಪ್ರಾರ್ಥನೋತ್ತರ ಭಾಷಣದಲ್ಲಿ ಹೇಳಿದ ಮಾತು ಸತ್ಯವಾದುದು. ಏಕೀಕರಣ ಪೂರ್ವದಲ್ಲಿ ಕರ್ನಾಟಕ ಪರಿಸ್ಥಿತಿ ಇತರಪ್ರದೇಶಗಳಿಗಿಂತ ಒಂದು ಮಹತ್ವದ ವಿಷಯದಲ್ಲಿ ಭಿನ್ನವಾಗಿಯೇ ಇತ್ತು. ಇದು 19 ಆಡಳಿತಗಳಲ್ಲಿ ಹಂಚಿ ಹೋಗಿತ್ತು. ಆ ಎಲ್ಲಭಾಗಗಳನ್ನು ಒಂದೇ ಪ್ರಾಂತದಲ್ಲಿ ತರದೇ ಹೋದರೆ ಕರ್ನಾಟಕಸ್ಥರ ಏಳಿಗೆ ಎಂದೆಂದೂ ಸಾಧ್ಯವಿಲ್ಲ ಎಂಬ ಭಾವನೆ ಆಗಿನ ಮುಖಂಡರು-ಜನರಲ್ಲಿ ಗಟ್ಟಿಯಾಗಿತ್ತು. ದಕ್ಷಿಣ ಭಾರತದ ಯಾವ ಭಾಷಾ ಪ್ರದೇಶವೂ ಕರ್ನಾಟಕದಷ್ಟು ಎಂದೂ ತುಂಡರಿಸಲ್ಪಟ್ಟಿರಲಿಲ್ಲ ಎಂಬುದನ್ನು ನಾವುತಿಳಿದಿರಬೇಕು. ಮುಂಬಯಿ, ಮದ್ರಾಸ್, ಕೊಡಗು, ಮೂರುಪ್ರಾಂತ್ಯಗಳಿದ್ದವು. 1.ಮೈಸೂರು 2. ಹೈದರಾಬಾದ್ 3.ಕೊಲ್ಲಾಪುರ,ಬೀಸು ನೋಟ84. ಸಾಂಗಲಿ 5. ಮಿರಜ್(ಹಿರಿ) 6. ಮೀರಜ್ (ಕಿರಿ) 7. ಕುರಂದವಾಡ (ಹಿರಿ)8. ಕುರಂದವಾಡ ( ಕಿರಿ) 9. ಜಮಖಂಡಿ 10. ಮುಧೋಳ 11. ರಾಮದುರ್ಗ12. ಜತ್ತ 13. ಅಕ್ಕಲಕೋಟೆ, 14. ಔಂಧ್ (ಗುಣದಾಳ) 15. ಸವಣೂರು 16.ಸೊಂಡೂರು ಸಂಸ್ಥಾನಗಳಾಗಿದ್ದವು.

? ಕರ್ನಾಟಕ ಅಥವಾ ಕನ್ನಡ ಭಂಷಇ ನಿಸ್ತೇಜವಾಗಿದ್ದು ಹೇಗೆ

ಉ : ಕರ್ನಾಟಕಸ್ಥರೆಲ್ಲರೂ ಒಂದೇ ಆಡಳಿತದಲ್ಲಿ ಒಂದುಗೂಡದೇ ಗತ್ಯಂತರವಿಲ್ಲ ಎಂಬ ಕಲ್ಪನೆಯು ಉತ್ತರ ಕರ್ನಾಟಕದಲ್ಲಿ ಮೊದಲಿತ್ತು. ಉಕ ನಾಲ್ಕು ಜಿಲ್ಲೆಗಳು ಮುಂಬಯಿಪ್ರಾಂತ್ಯದ ದಕ್ಷಿಣ ತುದಿಗಿದ್ದು ತೀರ ನಿರ್ಲಕ್ಷಿಸಲ್ಪಟ್ಟಿದ್ದವು. ಎಂಜಿನಿಯರಿಂಗ್, ಮೆಡಿಕಲ್,ಕೃಷಿ ಶಿಕ್ಷಣಕ್ಕಾಗಿ ಇಲ್ಲಿನ ವಿದ್ಯಾಥರ್ಿಗಳು ದೂರದ ಪುಣೆ, ಮುಂಬಯಿಗಳಿಗೆಹೋಗಬೇಕಾಗಿತ್ತು. 19ನೇ ಶತಮಾನದ ಆದಿ ಭಾಗದಲ್ಲಂತೂ ಉತ್ತರಕ್ಕೆ ಮರಾಠರಆಳ್ವಿಕೆ, ಈಶಾನ್ಯದಲ್ಲಿ ನಿಜಾಮರ ಆಡಳಿತ, ದಕ್ಷಣದಲ್ಲಿ ಬಿಚಿಟಿಷಂರಂ ಪ್ರಭಾವ. ಮದ್ರಾಸುಪ್ರಾಂತ್ಯದಲ್ಲಿ ತಮಿಳು, ತೆಲುಗು, ಹೈದರಾಬಾದ ಪ್ರಾಂತ್ಯದಲ್ಲಿ ಉದರ್ು, ಮುಂಬಯಿಪ್ರಾಂತ್ಯದ ಅಧಿನಕ್ಕೊಳಪಟ್ಟ ಸಂಸ್ಥಾನಗಳಲ್ಲಿ ಮರಾಠಿ-ಹೀಗೆ ಹಲವು ಭಂಷಇ, ಸಂಸ್ಕೃತಿಗಳಅಡಿಯಲ್ಲಿ ಸಿಕ್ಕು ಕನ್ನಡ ಭಂಷಇ ಸಂಸ್ಕೃತಿಗಳು ಕಣ್ಮರೆಯಾಗತೊಡಗಿದವು. ಉತ್ತರ ಕನರ್ಾಟಕಪಾಲಿಗಂತೂ ಇದೊಂದು ರಾಜಕೀಯ ಶಾಪವಾಗಿ ಪರಿಣಮಿಸಿತು. ರಾಜಕೀಯಒತ್ತಡದಿಂದಾಗಿ ದೇಶದ ಇನ್ನಾವುದೇ ಭಾಗದ ಜನ ತಮ್ಮ ತಾಯ್ನೆಲದಲ್ಲಿಯೇ ಇಷಇಂಔಂದಂಂಪರದೇಶಿಗಳಂತೆ ಬದುಕುವ ಸ್ಥಿತಿ ಉಂಟಾಗಿರಲಿಲ್ಲ. ಈ ರೀತಿ ಕನ್ನಡ ಭಂಷಇ ನಿಸ್ತೇಜವಾಗಿತುಎನ್ನಬಹುದು.

? ಕರ್ನಾಟಕದ ಜಾಗೃತಿ ಹೇಗಾಯಿತು ?

: ನಾನಾ ಕಾರಣಗಳಿಂದ ಕನ್ನಡ ನಿಸ್ಸಹಾಯಕವಾಗಿ ಆತ್ಮಪ್ರತ್ಯಯ ಕಳೆದುಕೊಂಡಸಂದರ್ಭದಲ್ಲಿ ಮೂಡಿ ಬಂದವರು ಡೆಪ್ಯೂಟಿ ಚೆನ್ನಬಸಪ್ಪನವರು (1833-1881)ಮಾತೃಭಂಷಂ ನಿಷಇ~ಂಇಂಂ ರೂಪುಗೊಂಡಂತೆ ಶಿಕ್ಷಣ ಕ್ಷೇತ್ರ ಮಾಮೂಲಿ ಅಧಿಕಾರಿಗಳಾಗದೇಕನ್ನಡ ಪುನರುತ್ಥಾನಕ್ಕಾಗಿಯೇ ತಮ್ಮನ್ನು ತೊಡಗಿಸಿಕೊಂಡದ್ದಲ್ಲದೆ ಮತ್ತು ಈ ದಿಶೆಯಲ್ಲಿದುಡಿಯುವ ಒಂದು ಬಳಗವನ್ನೇ ಸಜ್ಜುಗೊಳಿಸಿದರು. ಗಂಗಾಧರ ಮಡಿವಾಳೇಶ್ವರತುರಮರಿ, ಭುಜಂಗರಾವ್ ಹುಯಿಲ್ಗೋಳ, ಶಾಂತವೀರ ರಾಚದೇವ ಕಿತ್ತೂರ,ವೆಂಕಟ ರಂಗೋಕಟ್ಟಿ, ಚುರಮರಿ ಶಇಂಷಂಗಿರಿದಂರಂರಂಂ, ದೊಡ್ಡ ಶ್ರೀನಿವಾಸರಾಯ,ಚನ್ನಬಸಪ್ಪ ಮೊದಲಾದವರು ಸೌರಮಂಡಳದ ಗ್ರಹಗಳಾಗಿ ಬೆಳಗಿ ಶಿಕ್ಷಣ ಮೂಲಕಸಂಸ್ಕೃತಿ ಕಟ್ಟುವ ಕೆಲಸವನ್ನು ಮಾಡಿದರು. ಇನ್ನು ಕೆಲವರು ಅದನ್ನು ಮುಂದುವರೆಸಿದರು.ಕನರ್ಾಟಕವು ರೂಪುಗೊಳ್ಳುವ ಸಮೃದ್ಧವಾಗುವ ದಿಶೆಯಲ್ಲಿ ಕನ್ನಡಿಗರಲ್ಲಿ ವ್ಯಾಪಕವಾದಜಾಗೃತಿ ತಲೆದೋರುವಂತೆ ಕಾರ್ಯಪ್ರವೃತ್ತರಾದವರಲ್ಲಿ ಆಲೂರು ವೆಂಕಟರಾಯರುಅತ್ಯಂತ ಹಿರಿಯರು. (1881-1964) “ಇದು ನಮ್ಮ ಕನರ್ಾಟಕ, ಭೂಪಟದಲ್ಲಿಒಂದು ರೇಖಾಕೃತಿ. ಏಕ ಚಿತ್ತದಿಂದ ಗಮನಿಸಿರಿ ಅದರ ಚರಿತ್ರೆ, ಮಹತ್ವವನ್ನುಅರಿತವರಾಗಿದ್ದರೆ ಒಂದು ಭಾವ ಮನದಲ್ಲಿ ಮೂಡುತ್ತದೆ. ಕ್ಷಣ ಮಾತ್ರದಲ್ಲಿ ಚೈತನ್ಯರೂಪ ಪಡೆಯುತ್ತದೆ. ಕನರ್ಾಟಕ ದೇವಿಯ ಕನ್ನಡಿಗರ ಆರಾಧ್ಯ ದೈವವಾಗುತ್ತದೆ.”ಬೀಸು ನೋಟ9ಇಂತಹ ದರ್ಶನವನ್ನು ನೀಡಿದವರು ಆಲೂರು ವೆಂಕಟರಾಯರು.ಕರ್ನಾಟಕ ಗತವೈಭವ (1917), ಕನರ್ಾಟಕ ವೀರರತ್ನಗಳು (1930)ಎನ್ನುವ ಗ್ರಂಥಗಳು ಹಾಗು ಇತಿಹಾಸವನ್ನು ಬಸಿಕೊಂಡು ಜನರಲ್ಲಿರಾಜಕೀಯ ಹಾಗು ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರಚೋದಿಸುವಂತವರಾಗಿದ್ದಾರೆ. ಕರ್ನಾಟಕತ್ವದ ವಿಕಾಸ’ (1957) ಕನ್ನಡ ನಾಡುಹೇಗೆ ರೂಪುಗೊಂಡಿತು ಎಂಬುದನ್ನು -ರಾಜ್ಯೋದಯದ ಸಂದರ್ಭದಲ್ಲಿಇಂದಿನ ಪೀಳಿಗೆಗೆ ತಿಳಿಸಿದ ಮಹತ್ವದ ಆಧಾರ ಗ್ರಂಥವಾಗಿದೆ.ಕನರ್ಾಟಕತ್ವವೆಂದರೆ ಕೇವಲ ದೇಶಾಭಿಮಾನವಲ್ಲ. ಕೇವಲಭಂಷಂಭಿಮಾನವಲ್ಲ, ಇತಿಹಾಸಾಭಿಮಾನವಲ್ಲ, ಇವೆಲ್ಲವೂಗಳನ್ನುಮೀರಿದ ಇವೆಲ್ಲವುಗಳನ್ನೊಳಗೊಂಡ ಪರಿಶುದ್ಧ ಕೃತಿ ಎಂಬುದುಆಲೂರರ ವಸ್ತುನಿಷಂ~ವಾದ ಅನುಭವ ಕಥನ. ರಾ.ಹ.ದೇಶಪಾಂಡೆಯವರಿಂದ ಸ್ಥಾಪಿತವಾದ ಕನರ್ಾಟಕ ವಿದ್ಯಾವರ್ಧಕ ಸಂಘ (1890)ಏಕೀಕೃತ ಕನ್ನಡ ನಾಡು-ನುಡಿಗಳ ಅಭಿಮಾನಕ್ಕಾಗಿ ಸ್ಥಾಪಿತವಾದಹಾಗೂ ಏಕೀಕರಣಕ್ಕಾಗಿ ಹೋರಾಡಿದ ಪ್ರಥಮ ಸಂಸ್ಥೆಯಾಗಿದೆ. ಹಲವುಕಡೆ ಹಂಚಿಹೋದ ನಾಡು ಒಂದಾಗಬೇಕು. ಇದರಿಂದ ಕನ್ನಡಿಗರಐಕ್ಯಕ್ಕೂ ಹಿತಕ್ಕೂ ಬೆಳವಣಿಗೆಗೂ ಅನುಕೂವಾಗುವುದು’. ಎಂದು7.10.1907ರಲ್ಲಿ ಸಂಘ ಸ್ವೀಕರಿಸಿದ ಗೊತ್ತುವಳಿಯೂ ಕನರ್ಾಟಕಏಕೀಕರಣ ಇತಿಹಾಸದಲ್ಲಿಯೇ ಪ್ರಥಮ ಗೊತ್ತುವಳಿಯಾಗಿದೆ.ಶಾಂತಕವಿ ಎಂಬ ಹೆಸರಿನಿಂದಲೇ ಹೆಚ್ಚು ಪರಿಚಿತರಾದ ಬಾಳಾಚಾರ್ಯಸಕ್ಕರಿಯವರು ತಮ್ಮ ಕೀರ್ತನದ ಮೂಲಕ ರಾಷ್ಟ್ರೀಯ ಪ್ರಜ್ಞೆ ಮತ್ತುಕನರ್ಾಟಕತ್ವದ ಬಗೆಗ ಜಾಗೃತಿ ಮೂಡಿಸಿದ ಹಿರಿಯರು. ಆರ್.ಆರ್.ದಿವಾಕಾರ, ಅಂದಾನಪ್ಪ ದೊಡ್ಡಮೇಟಿ, ಗಂಗಾಧರರಾವ್ ದೇಶಪಾಂಡೆ,ಗುದ್ಲೆಪ್ಪ ಹಳ್ಳಿಕೇರಿ, ಚನ್ನಪ್ಪ ವಾಲಿ, ಜಿನರಾಜ ಹೆಗಡೆ, ಬಿ.ಎನ್.ರುತಾರ,ಎಸ್.ನಿಜಲಿಂಗಪ್ಪ ಹಾರ್ನಹಳ್ಳಿ ರಾಮಸ್ವಾಮಿ, ಶಿವಮೂತರ್ಿಸ್ವಾಮಿ ಅಳವಂಡಿ, ಕಾನರ್ಾಡ ಸದಾಶಿವರಾಯರು, ಕೆ.ಎಫ್.ಪಾಟಿಲ, ಸಿದ್ದಪ್ಪಕಂಬಳಿ, ಸಿದ್ಧಪ್ಪ ಹೊಸಮನಿ, ಕೆಂಗಲ್ ಹನುಮಂತರಾಯರುಮೊದಲಾದವರು ತಮ್ಮ ರಾಜಕೀಯ ಶಕ್ತಿಯನ್ನು ಕರ್ನಾಟಕ ಏಕೀಕರಣಕ್ಕಾಗಿ ನಿವೇದಿಸಿ ನಂತರವೂ ನಾಡಿನ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಮಹನೀಯರು ತಮ್ಮ ಬರವಣಿಗೆ ಹಾಗೂ ಭಂಷಂಣಗಂಳ ಮೂಲಕ ಕರ್ನಾಟಕ ಏಕೀಕರಣದ ಬಗ್ಗೆ ಜಾಗೃತಿಮೂಡಿಸಿದರು. ಕುವೆಂಪು, ಕಯ್ಯಾರ ಕಿಞ್ಞಣ್ಣ ರೈ, ಕಂಇಷಂಗಕಂಂಮಾರ, ಕಲ್ಲೂರ,ಮುದವೀಡು ಕಂಇಷಂಗರಂಂಂಂರಂಂ, ಕಂಇಷಂಗಕಂಂಮಾರ ಬೆಟಗೇರಿ, ಸಿದ್ಧನವಳ್ಳಿಕಂಇಷಂಗ}ರ್ಮ, ಪಾಟೀಲ ಪುಟ್ಟಪ್ಪ , ಕೋ. ಚನ್ನಬಸಪ್ಪ, ಜಯದೇವಿತಾಯಿ ಲಿಗಾಡೆ, ಶಂಬಾ ಜೋಶಿ, ಮಾಸ್ತಿ ವೆಂಕಟೇಶ ಅಯ್ಯಂಗಾರ,ಶ್ರೀರಂಗ, ತಿ.ತಾ.ಶರ್ಮ, ಬಿ.ಶಿವಮೂತರ್ಿ ಶಾಸ್ತ್ರಿ, ಶಿವರಾಮ ಕಾರಂತ,ಬಿ.ಎಂ.ಶ್ರೀಕಂಠಯ್ಯ, ಹಡರ್ೇಕರ ಮಂಜಪ್ಪ ಮೊದಲಾದ ಹಿರಿಯ ಸಾಹಿತಿಗಳು ಹಾಗೂ ಪತ್ರಕರ್ತರು ಕರ್ನಾಟಕವನ್ನು ಒಂದುಗೂಡಿಸಲು ಮತ್ತು ಏಕೀಕರಣನಂತರ ಪರಸ್ಪರ ಸಾಮರಸ್ಯ ಸಾಧಿಸಲು ಪ್ರಯತ್ನಿಸಿದ್ದನ್ನು ಮರೆಯುವಂತಿಲ್ಲ. ಡಿವಿಜಿಯಂತಹಧೀಮಂತರು ಎರಡು ಕರ್ನಾಟಕಗಳ ರಚನೆಗೆ ತೋರಿದರಾದರೂ ಏಕೀಕರಣದ ವಿರೋಧಿಗಳಾಗಿರಲಿಲ್ಲ ಎಂಬುದನ್ನು ಮರೆಯಬಾರದು.

? ಅವತ್ತಿನ ಪ್ರಮುಖ ಬದಲಾವಣೆಗಳೇನು ?

ಉ :ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಾರಂಭವಾದ 25 ವಂಷಂಜಗಂಳ ನಂತರಬೆಂಗಳೂರಿನಲ್ಲಿ ಕನರ್ಾಟಕ ಸಾಹಿತ್ಯ ಪಂರಿಷಂತ ಸ್ಥಾಪನೆಯಿಂದ ಮೈಸೂರು ಸಂಸ್ಥಾನದಕನ್ನಡಿಗರಿಗೂ ಉಳಿದ ಕನ್ನಡಿಗರಿಗೂ ಹೆಚ್ಚಿನ ಬಾಂಧವ್ಯ ಬೆಳೆಯು ವಂತಾಯಿತು. ಮೈಸೂರುಒಡೆಯರು ಈ ಸಂಸ್ಥೆಯ ಅಭಿವೃದ್ಧಿಯಲ್ಲಿ ಅಸಕ್ತಿ ವಹಿಸಿ ರಾಜಾಶ್ರಯ ನೀಡಿದರು.ಪ್ರತಿವಂಷಂಜವೂ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನರ್ಾಟಕ ವಿವಿಧ ಸ್ಥಾನಗಳಲ್ಲಿ ನೆರವೇರಿಸುವಸಾಹಿತ್ಯ ಪಂರಿಷಂತಿಗ’ ನಿರ್ಣಯವು ಕನರ್ಾಟಕ ರಾಜ್ಯ ನಿಮರ್ಾಣಕ್ಕೆ, ಕನ್ನಡಿಗರೆಲ್ಲರ ಐಕ್ಯಭಾವನೆಗೆ ನಾಂದಿಯಾಯಿತು. 1915 ರಿಂದ 1956ರವರೆಗೆ (ರಾಜ್ಯೋದಯದವರೆಗೆ) 38 ಕನ್ನಡ ಸಮ್ಮೇಳನಗಳು ನಡೆದಿದ್ದು ಅವುಗಳಲ್ಲಿ ಕೆಲವು ಮುಂಬಯಿ, ಹೈದರಾಬಾದ್,ಮದ್ರಾಸ, ಕಾಸರಗೋಡು ಬೇರೆ ಬೇರೆ ಪ್ರಾಂತಗಳ ನಗರಗಳಲ್ಲಿ ನೆರವೇರಿದ್ದರಿಂದ ಅಲ್ಲಿನಕನ್ನಡಿಗರು ಹಾಗು ಜನಸಮಾನ್ಯರಲ್ಲಿಯೂಕರ್ನಾಟಕತ್ವದ ಅಭಿಮಾನವನ್ನು ಕುದುರಿಸಿದೆ.ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷರೂ ಕನ್ನಡ ನಾಡು-ನುಡಿ ಬಗ್ಗೆಅಭಿಮಾನವನ್ನು ವ್ಯಕ್ತಪಡಿಸುತ್ತ ಏಕತೆ ಬಿಂಬಿಸಿದ್ದಾರೆ. 1949ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ 1950ರಲ್ಲಿ ಧಾರವಾಡ ಬಾನುಲಿ ಕೇಂದ್ರ ಸ್ಥಾಪನೆಯಾದಮೇಲೆ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಯ ಬಾಗಿಲುತೆರೆದಂತಾಯಿತು.ವರಕವಿ ಬೇಂದ್ರೆಯವರು ಗೆಳೆಯರನ್ನು ಕೂಡಿಸಿ ಧಾರವಾಡದಲ್ಲಿ 1926ರಂದು ನಾಡಹಬ್ಬದಆಚರಣೆ ಪ್ರಾರಂಭಿಸಿದರು. ಕನರ್ಾಟಕ ವಿದ್ಯಾವರ್ಧಕ ಸಂಘ ನಾಡಹಬ್ಬವನ್ನು ಪ್ರತಿವಂಷಂಜ ಆಚರಿಸತೊಡಗಿತು. ಏಕೀಕರಣ ಪೂರ್ವದಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿನ ಉತ್ಸಾಹ ಈನಾಡ ಹಬ್ಬಗಳಲ್ಲೂ ಕಂಡು ಬಂದಿತು. ಧಾರವಾಡ ಕರ್ನಾಟಕ ಇತಿಹಾಸ ಸಂಶೋಧನೆಮಾಡಲು 1936ರಲ್ಲಿ ಹಂಪಿಯಲ್ಲಿ ಏರ್ಪಡಿಸಿದ್ದ ವಿಜಯಯನಗರ ಸಾಮ್ರಾಜ್ಯ ಸ್ಥಾಪನೆಯ600 ವಂಷಂಜಗಂಳ ಸಮಾರಂಭ ನಿಜವಾಗಿಯೂ ಅವಿಸ್ಮರಣೀಯ. ಆಲೂರು ವೆಂಕಟರಾಯರುಹಂಪಿ ಪ್ರಥಮ ದರ್ಶನದಲ್ಲಿ ತಾವು ಪಡೆದ ಅದ್ಭುತ ಅನುಭವವನ್ನು ರಾಜ್ಯೋತ್ಸವದಸುದಿನ ದಿನದಂದು ಹಂಪೆಯ ತುಂಗಭದ್ರೆ ತಟದಲ್ಲಿ ವಿರುಪಾಕ್ಷನ ಸನ್ನಿಧಿಯಲ್ಲಿ ಮತ್ತೊಮ್ಮನೆನೆದರು. ಅವರಿಗೆ ಅದೊಂದು ಜೀವನದಲ್ಲಿನ ಮಹಾಕ್ಷಣವಾಗಿತ್ತು.

? ಸ್ವಾತಂತ್ರ್ಯದ ನಂತರ ಕರ್ನಾಟಕ ಹೇಗಿತ್ತು?

ಉ : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ, ಸ್ವಾರ್ಥ-ಸಂಕುಚಿತ ಭಾವನೆಗಳು ಸಿಡಿದೆದ್ದಂತೆ ಏಕತಂತ್ರ ಕರ್ನಾಟಕವಾದ ನಂತರ ಕನ್ನಡಿಗರಲ್ಲಿಯೂ ಈ ಅಲ್ಪ ವಿಚಾರಗಳು ತಲೆದೋರಿರಬಹುದು.ಅವು ಬರುಬರುತ್ತ ಕಡಿಮೆಯಾಗುತ್ತ ಬಂದವು. ಏಕೀಕರಣದ ನಂತರ ಎಲ್ಲಾ ಕ್ಷೇತ್ರಗಳಲ್ಲಿಯೂ ನಾಡು ಅನೇಕ ಬದಲಾವಣೆಗಳನ್ನು ಕಂಡಿತು. ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳುಬೀಸು ನೋಟ11ಬೆಳೆದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಭಂಷಇಸಾಹಿತ್ಯ ಹಾಗೂ ಕಲೆಗಳಿಗೆ ಸಂಬಂಧಿಸಿದಂತೆ ನಾನಾಕಡೆ ಇವುಗಳುಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಪುಸ್ತಕ ಪ್ರಾಧಿಕಾರ, ರಂಗಾಯಣ ಮೊದಲಾದವು ಹಲವಾರುಯೋಜನೆಗಳನು ಕೈಗೊಂಡು ಮುನ್ನಡೆದಿವೆ. ಬೆಳಗಾವಿಯಲ್ಲಿ ವಿಧಾನಸೌಧ ತೀವ್ರ ಗತಿಯಲ್ಲಿದ್ದು ವಿಧಾನಸಭೆ ಕಲಾಪ ನಡೆಸುವಸಿದ್ಧತೆಗೆ ಅನುವಾಗಿದೆ. ಧಾರವಾಡ-ಗುಲ್ಬಗರ್ಾಗಳಲ್ಲಿ ಸಂಚಾರಿ ಉಚ್ಚನ್ಯಾಯಾಲಯ ಪೀಠಗಳು ಸ್ಥಾಪಿತವಾದವು. ನೆರೆಯ ರಾಜ್ಯಗಳಲ್ಲಿ ಹಾಗೂವಿದೇಶಿಗಳಲ್ಲಿ ನಡೆಯುವ ಕನ್ನಡ ಸಮ್ಮೇಳನಗಳಲ್ಲಿ ಕನ್ನಡಿಗರುಪಾಲ್ಗೊಳ್ಳುವುದು ಹೆಮ್ಮೆಯ ವಿಷಯ.

? ಈ ಹೊತ್ತಿನಲ್ಲಿ ಕರ್ನಾಟಕದ ಕುರಿತು ನಿಮ್ಮ ಸಲಹೆ?

ಉ:ಆಗಬೇಕಾಗಿರುವ ಕೆಲಸ ಸಾಕಷ್ಟಿವೆ. ಸರಕಾರದ ಅಭಿವೃದ್ಧಿ ಯೋಜನೆಗಳುಎಲ್ಲ ಭಾಗಗಳಿಗೂ ಸಮರ್ಪಕವಾಗಿ ಹಂಚಿಕೆಯಾಗಬೇಕು. ಹಿಂದುಳಿದಪ್ರದೇಶಗಳನ್ನು ನಂಜುಂಡಪ್ಪ ವರದಿಯಲ್ಲಿ ಗುರುತಿಸಿದಂತೆ ಸರಕಾರಅವುಗಳ ಅಭಿವೃದ್ಧಿಗೆ ಲಕ್ಷ್ಯ ವಹಿಸಬೇಕು. ಆಡಳಿತ ಭಂಷಇ ಸಂಪೂರ್ಣವಾಗಿ ಕನ್ನಡವಾಗಿರಬೇಕು. ಪ್ರಾಥಮಿಕ ಮಟ್ಟದಲ್ಲಿ ಕನ್ನಡ ಮಾಧ್ಯಮವೇಇರಬೇಕು. ಸರೋಜಿನಿ ಮಹಿಷಿ ವರದಿ ಕೆಲವು ಸುಧಾರಣೆ ಅಂಶಗಳೊಂದಿಗೆ ಸಂಪೂರ್ಣ ಜಾರಿಯಾಗಬೇಕು. ಗಡಿಭಾಗದ ಶಾಲೆಗಳಿಗೆಹೆಚ್ಚಿನ ಅನುದಾನ ನೀಡಬೇಕು. ಪಾಲಕ -ಪಇಅಂಷಂಕಂರಂ ಮೌಢ್ಯ, ಶಿಕ್ಷಕರಕೀಳರಿಮೆ, ಸರಕಾರಗಳ ತಾತ್ಸಾರ ಇಂಗ್ಲಿಷಿನ ಪಟ್ಟಭದ್ರತೆ ಇವುಹೋದಾಗಲೇ ಕನ್ನಡ ಭದ್ರವಾಗಲು ಸಾಧ್ಯ ಎಂಬುದನ್ನು ತಿಳಿಯಬೇಕು.ಎಲ್ಲ ಕ್ಷೇತ್ರಗಳಲ್ಲಿ ಹರಡಿ ಭಂಚಿಷಂಔಚಂರಂ ಬೇರು ಕಿತ್ತೊಗೆಯಬೇಕು. ಗಡಿಭಾಗದ ಜನತೆಗೆ ನಾವು ಗಡಿಭಾಗದ ಹೊರಗಿದ್ದೇವೆ ಎಂಬ ಭಾವನೆಬರದಂತೆ ನೋಡಿಕೊಳ್ಳಬೇಕು. ಗಡಿಗಳು ಅವು ಹೊರಗಿನವರ ಆಕ್ರಮಣಕ್ಕೆ ತುತ್ತಾಗದಂತೆ ನೋಡಿಕೊಳ್ಳಬೇಕು. ಸಮೃದ್ಧ-ಸುಸಂಸ್ಕೃತ ಕರ್ನಾಟಕ ರೂಪಗೊಳ್ಳಲು ರಾಜ್ಯ ಸರಕಾರ ಹಾಗೂ ನಾಡಿನ ಜನತೆಪ್ರಾಮಾಣಿಕವಾಗಿ ಶ್ರಮಿಸಿದಾಗ ನಮ್ಮ ಗುರಿ ತಲುಪಲು ಸಾಧ್ಯ.ಬಹು ಮುಖ್ಯವಾಗಿ ಕನ್ನಡಿಗರು ಸಮರ್ಥರಾದಲ್ಲಿ ಕನ್ನಡ ಭಂಷಇ ಸಾಮಥ್ರ್ಯಪಡೆಯುತ್ತದೆ. ನಾವು ಪ್ರಗತಿಯತ್ತ ಸಾಗುತ್ತೇವೆ. ಪ್ರತಿಯೊಬ್ಬ ಕನ್ನಡಿಗಮೊದಲು ತನ್ನ ಯೋಗ್ಯತೆಯನ್ನು ಹೆಚ್ಚಿಸಿಕೊಂಡು ಅದನ್ನು ನಾಡು-ನುಡಿಗಳ ಮೇಲ್ಮೆಗಾಗಿ ಧಾರೆ ಎರೆಯಬೇಕು.

‍ಲೇಖಕರು G

11 March, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading