ಪ್ರಿಯರೆ,
ನನ್ನ ಹೊಸ ಪುಸ್ತಕ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಇದೇ ಏಪ್ರಿಲ್ ೨೬ರಂದು ಬಿಡುಗಡೆಯಾಗಲಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಬೆಳಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಹೆಸರಾಂತ ಚಿತ್ರನಟ ಪ್ರಕಾಶ್ ರೈ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಅಂದು ನಮ್ಮೊಂದಿಗೆ ಹೆಸರಾಂತ ಕವಿ-ಸಾಹಿತಿಗಳು, ಸಾಂಸ್ಕೃತಿಕ ಲೋಕದ ಗಣ್ಯರು ಹಾಜರಿರುತ್ತಾರೆ. ರಮೇಶ್ಚಂದ್ರ ,ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ಅರ್ಚನಾ ಉಡುಪ ಮುಂತಾದವರಿಂದ ಮಧುರ ಭಾವಗೀತೆ ಗಾಯನವಿರುತ್ತದೆ.
ಪುಸ್ತಕ ಬಿಡುಗಡೆಯ ನೆಪದಲ್ಲಿ ಚೆಂದದ ಹಾಡು ಕೇಳೋಣ. ಚತುರ್ಭಾಷಾ ಕಲಾವಿದ ಪ್ರಕಾಶ್ ರೈ ಅವರ ಅದ್ಭುತದ್ಭುತ ಎಂಬಂಥ ಮಾತುಗಳಿಗೆ ಕಿವಿಯಾಗೋಣ.
ನೆಪ ಹೇಳಬೇಡಿ : ದಯವಿಟ್ಟು ಬನ್ನಿ.
ಸ್ಥಳ: ರವೀಂದ್ರ ಕಲಾಕ್ಷೇತ್ರ.
ಸಮಯ: ಬೆಳಗ್ಗೆ ೧೦.೩೦.
ದಿನಾಂಕ: ಏಪ್ರಿಲ್ ೨೬, ಭಾನುವಾರ
ಪ್ರೀತಿಯಿಂದ
-ಎ ಆರ್ ಮಣಿಕಾಂತ್
ಎ ಆರ್ ಮಣಿಕಾಂತ್ ಪತ್ರ
ನಿಮಗೆ ಇವೂ ಇಷ್ಟವಾಗಬಹುದು…





Please clarify me the date it is not clear in web page.
Regrds,
Manjunath
ಮಣಿಕಾಂತ್ ರವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇರುವುದು 26-04-2009 ರಂದು ಬೆಳಗ್ಗೆ 10:30 ಕ್ಕೆ. ರವೀಂದ್ರ ಕಲಾಕ್ಷೇತ್ರದಲ್ಲಿ..
hope its clarified mr.manjunath
count me i am there
ok sir
kanditha bharuve