ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲವೂ ಅಂತ್ಯವಾಗಲಿದೆ..

-ಧೀರೇಂದ್ರ ನಾಗರಹಳ್ಳಿ
ಗ್ರಹಣವೂ ಕರಗಲಿದೆ

ಹೀಗೆ ಹೇಳಿದರೆ ಅದೊಂದು
ಜ್ಯೋತಿಷ್ಯದ ಭವಿಷ್ಯವಲ್ಲ
ಹೃದಯಾಳದಲ್ಲಿ ಮೊಳೆತಿರುವ ಕನಸಿನ ಧ್ವನಿ-
ಇನ್ನೆಲ್ಲವೂ ಕೊನೆಯಾಗಲಿದೆ: ಗ್ರಹಣವೂ ಕರಗಲಿದೆ!

ನಮ್ಮ ಹೆಜ್ಜೆಗಳಲ್ಲಿನ ನಂಜು-
ಉಸರಿನಲ್ಲಿರುವ ಬೆಂಕಿ
ನೋಟದೊಳಗಿನ ಧಗೆ
ಎಲ್ಲವೂ ಒಟ್ಟಾಗಿ ಉಸಿರಾಗದ
ಧಗೆಯಾಗಿ : ಪ್ರಯಳವಾಗಿ ಮನುಕುಲವು
ಆಳಿದಮೇಲೆ, ಇನ್ನೇನು ಉಳಿಯಲಿದೆ?
ಎಲ್ಲವೂ ಅಂತ್ಯವಾಗಲಿದೆ.
ಆ ಅಂತ್ಯವೂ ಒಂದು ಆರಂಭವಾಗಲಿದೆ
ಮನುಷ್ಯತ್ವವೆ ಇರದ ಆ ಲೋಕದಲ್ಲಿ
ದೈವತ್ವವೆ ಎಲ್ಲೆಲ್ಲೂ ಕಾಣಲಿದೆ
ಹೊಸ ಬೆಳಕೊಂದು ಹರಿಯಲಿದೆ.
ಹೊಸದಾರಿ ಕಾಣಲಿದೆ.

ಹೀಗೆಯೆ ನಾವೆಲ್ಲಾ –
ಅಳಿದೆ ಮೇಲೆ ಉಳಿಯುವುದೇನಿದೆ.
ಮತ್ತೆ ಜಗದಾದಿಯಾಗಿ
ಹೊಸ ಉಗಮವಾಗಿ
ದೇವರು ಮನುಷ್ಯರನ್ನು ಸೃಷ್ಟಿಸಲಿದ್ದಾನೆ.
ಮನುಷ್ಯರೆಲ್ಲರ ಮನಸ್ಸಲ್ಲಿ
ದೇವರು ಕೂರಲಿದ್ದಾನೆ.
ಮನುಷ್ಯರೆಲ್ಲರೂ ದೇವರಂತಾಗಲಿದ್ದಾರೆ.
ಒಂದು ಹೊಸ ಹಾಡು ,ಹೊಸ ನಾಡು
ಹೊಸ ಜಾಡು ಕಾಣಲಿದೆ.
ಇನ್ನೆಲ್ಲವೂ ಕೊನೆಯಾಗಲಿದೆ..
ಗ್ರಹಣವೂ ಕರಗಲಿದೆ.

‍ಲೇಖಕರು Admin

14 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading