ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲರಿಗೂ ಮೊಹರಂ (ಅಲಾವಿ) ಹಬ್ಬದ ಶುಭಾಶಯಗಳು..

ಗುರು ರಾಜ್

ನನ್ನಮ್ಮ ಮೊಹರಂನ ದಿನಗಳನ್ನು ನೆನೆಪಿಸಿಕೊಳ್ಳುವುದರೊಂದಿಗೆ, ನನಗೆ ನನ್ನ ನೆನಪಿನಾಳದ ಯಾವ ಯಾವ ತುದಿಗೆ ಕರೆದುಕೊಂಡು ಸಾಗಿತು. ೧೫- ೧೬ ವರ್ಷದ ಹಿಂದೆ ಮೊಹರಂನ ಕತಲ್ ರಾತ್ರಿಯಂದು ಬೆಂಕಿ ತುಳಿಯೋದನ್ನು ನೋಡಲಿಕ್ಕೆ ಅಂತನೇ ಸಾಗಿದರು ಅದು ಸಾಕಾಗಿ ಮರಳಿ ಬಂದು ಮಲಗಿದ್ದು ಇದೆ. ಇಂದು ನೋಡಲೇ ಬೇಕು ಎಂದು ಸಾಗಿದ್ದ ದಿನವೇ ಒತ್ತಾಯ ಪೂರ್ವಕವಾಗಿ ಕಣ್ಣು ತೆರೆಯದಷ್ಟು ನಿದ್ದೆ, ಆಕಳಿಕೆ ತನ್ನ ಪ್ರಭಾವವನ್ನು ತೋರಿಸಿಯೇ ಬಿಡುತ್ತಿತ್ತು. ಗೆಳೆಯರೊಂದಿ ಸಾಗಿದ್ದರು ಅದು ಯಾವುದೋ ಕಾರಣಕ್ಕೆ ನೋಡಲು ಆಗದೇ ದೇವರು ಸಾವರಿ ಹೊರಟಾಗ ನಮ್ಮ ಕಣ್ಣಿಗೆ ಬೀಳುತ್ತಿದ್ದವು. ಅಮ್ಮ ನೀನು ಇಷ್ಟೇ ಯಾರ ಯಾರ ಜೊತೆ ಎಲ್ಲೇಲ್ಲಿ ತಿರುಗುತ್ತೀಯೋ ಎಂದು ಬಯ್ದಾಗ ಹಾಗೇ ಹಾಸಿಗೆ ಮೇಲೆ ಉರುಳಿ ನಿದ್ದೆಗೆ ಜಾರುತ್ತಿದ್ದೆ.
ಕಳೆದ ವರ್ಷ ನಾನು ನಮ್ಮ ಶಾಲೆಯಲ್ಲಿ ನಡೆಸಿದ ಯೋಜನೆಯಲ್ಲಿ ಮೊಹರಂ ಹಿನ್ನಲೆ ಹುಡುಕುವುದಕ್ಕೆ ಮಕ್ಕಳೊಂದಿಗೆ ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆ. ಮೊಹರಂನ ಇತಿಹಾಸದಿಂದ ಹಿಡಿದು ಪ್ರಸ್ತುತ ಸನ್ನಿವೇಷದವರೆಗೂ ಒಬ್ಬ ವಿದ್ಯಾರ್ಥಿಯಾಗಿ ಕೇಳಿ ಟಿಪ್ಪಣಿ ಮಾಡಿಕೊಂಡೆ. ಅದರ ಆಧಾರದ ಮೇಲೆ ನಮ್ಮೂರ ಹಬ್ಬ ಎಂಬ ನಾಟಕವನ್ನು ಇಂಪ್ರೋವೈಜೇಷನ್ ಮಾಡಿ ಆಡಿಸಿದ್ದು ಆಗಿದೆ. ಅಂದು ಜಾಹಗೀರ್ ಗುಡದೂರಿನ ಮೊಹರಂ ಹಬ್ಬದಲ್ಲಿ ಅದು ಕುಣಿಯ ಮುಂದೆ ಕುಣಿಯುವ ಆಟವನ್ನು ಕಾಣಲೇ ಬೇಕು ಎಂದು ಹಾಜರಾಗಿದ್ದೆ. ನಮ್ಮ ಹಳೇಯ ವಿದ್ಯಾರ್ಥಿ ಸಾರಾಯಿ ಮಾರುವವ ( ಈ ಸಾರಾಯಿ ಅಂಗಡಿ ಶಿಕ್ಷಕರು ಹಾಗೂ ಊರವರೆಲ್ಲರ ಹೇಳಿಕೆಯಿಂದಾಗಿ ಮುಚ್ಚಿಸಲಾಗಿದೆ.) ನಾನು ಬಂದಿರುವದನ್ನು ಕಂಡು ಅವನಿಗೆ ಕಸಿವಿಸಿ. ಹೇಗೆ….. ವ್ಯಾಪರ ಬಿಟ್ಟು, ಸಾರ್ ಹತ್ತಿರ ಹೋಗೋದು ಹೇಗೆ ? ಅವನು ಆಲೋಚನೆಯಲ್ಲಿ ಮುಳುಗಿ ಅತ್ತಿಂದಿತ್ತಾ ಓಡಾಡತೊಡಗಿದ. ನಾನು ಅವನನ್ನು ಗಮನಿಸುತ್ತಲೇ ಅವನ ಸಮಾಧಾನಕ್ಕಾಗಿ ದೇವಾಸ್ಥಾನದ ಕಡೇ ಇತರೇ ಜನರೊಂದಿಗೆ ಸಾಗಿದೆ.

ಈ ಬಾರಿ ಹಬ್ಬದ ತೀವ್ರತೆ ಸಾಧರಣವಾಗಿದ್ದರು ಜನರ ಪಾಲ್ಗೋಳ್ಳುವಿಕೆ ಸಂಭ್ರಮವೇ ಸಂಭ್ರಮ. ದುಲ್ಯಾ…. ದುಲ್ಯಾ ಎಂದು ಹೂ, ಸಕ್ಕರೆ. ಗಂಧ, ಬಟ್ಟೆ ಹಿಡಿದು ಮನೆ ಮಂದಿಯೆಲ್ಲ ದೇವರು ಕೂರಿಸಿದ್ದ ಜಾಗಕ್ಕೆ ಹೋಗಿ ಬೆಂಕಿಯ ಕುಣಿ ಸುತ್ತಾ ತಿರುಗಿ ದೇವರ ಮುಂದೆ ಹೋಗಿ ಮೌಲ್ವಿಗೆ ತಂದ ಸಾಮನುಗಳನ್ನೆಲ್ಲ ನೀಡಿ ಹೊದಿಕೆ ಮಾಡಿಸಿಕೊಂಡು ಮರಳಿ ಮನೆ ಕಡೇ ತಿರುಗುವುದು.
“ಸರಿಯಾಗಿ ನಡೆದು ಕೊಂಡವರಿಗೆ ಬೆಂಕಿ ತಣ್ಣಗೆ ಇರುತ್ತದೆ. ಅದೇ ನಮ್ಮಂಥವರು ಹೋದರೆ ಸುಟ್ಟು ಬೂದಿಯಾಗಿ ಹೋಗ್ತೀವಿ” ಎಂದು ಅಮ್ಮ ತನ್ನ ತಟ್ಟೆಯಲ್ಲಿದ್ದ ರೊಟ್ಟಿ ತಿನ್ನುತ್ತಾ ಹೇಳಿದಾಗ. ನನ್ನ ತಂಗಿ ಜೋರಾಗಿಯೇ ನಗತೊಡಗಿದಳು. ನಾನು ನೀನು ಹೇಳಿದ್ದು ಸರಿ ಅಮ್ಮ ಎಂದು ಉತ್ತರ ನೀಡಿ ನಗು ನಿಲ್ಲಿಸಿದ ತಂಗಿಗೆ ಹೇಳಿದೆ. ಯಾರ ಭಾವನೆಗಳಿಗೂ, ನಂಬಿಕೆಗಳಿಗೆ ಧಕ್ಕೆಯಾಗದೇ ನಾವು ಆಲೋಚಿಸಬೇಕು. ನಂಬಿಕೆ ಸರಿ ಆದರೆ ಮೂಢನಂಬಿಕೆಯಾಗಬಾರದು. ಇಲ್ಲಿ ಜನರ ಉತ್ಸಾಹ, ಭಾಗುವಹಿಸುವಿಕೆ ಧರ್ಮಾ ಧರ್ಮಗಳ ಒಂದುಗೂಡಿ ಆಚರಿಸುವ ಸ್ಥಿತಿ ಬಂದಿದೆ. ಭೂತದಲ್ಲಿ ಅದು ಏನಾಗಿದೆ ಎನ್ನುವುದಕ್ಕಿಂತ ದುಃಖದ ಹಬ್ಬ ಇಂದು ಸಂಭ್ರಮದಲ್ಲಿ ತೇಲುವುದನ್ನು ನಾವು ಕಾಣಬಹುದಾಗಿದೆ. ಎಂದು ತಂಗಿ ನಾನು ಚರ್ಚಿಸಿದೆವು. ನಾವು ಹಿರಿಯರ ಭಾವನೆಗಳನ್ನು ಗೌರವಿಸಿ ಆಚರಣೆಯನ್ನು ಕಾಣಬೇಕಾಗಿದ್ದು ಮುಖ್ಯ. ಸ್ವಲ್ಪ ಎನ್ನುವುದಕ್ಕಿಂತ ಹಲವರು ಮಧ್ಯಪಾನದಂಥ ಚಟಗಳಿಗೆ ದಾಸರಾಗಿ, ಅತಿರೇಕವಾಗುವುದು ಅದು ಗಲಭೆಗೆ ಕಾರಣವಾಗುತ್ತದೆ. ಅದರಿಂದ ಸಂಭ್ರಮವಾಗಬೇಕಾದ ಆಚರಣೆ ಮತ್ತೋಂದು ದಿಕ್ಕಿಗೆ ಸಾಗುದು ಸರಿಯಲ್ಲ.
ಎಲ್ಲರಿಗೂ ಮೊಹರಂ (ಅಲಾವಿ) ಹಬ್ಬದ ಶುಭಾಶಯಗಳು.

‍ಲೇಖಕರು G

4 November, 2014

1 Comment

  1. Guru

    ಪ್ರಕಟಿಸಿದ್ದಕ್ಕೆ ಅವಧಿಯ ಬಳಗಕ್ಕೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading