ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಟಿಎಂ ಕಥೆಗಳು: ’ನನ್ನ ತಲೆ ಕೆಟ್ಟು ಕರಡಾಗಿದೆ!’

usha katteman

ಉಷಾ ಕಟ್ಟೇಮನೆ 

ಮಂಗಳೂರಿನಲ್ಲಿರುವ ನನ್ನ ಮಗ ಎಟಿಎಂನಿಂದ ದುಡ್ಡು ತೆಗೆದಾಗ ಎರಡು ಸಾವಿರ ನೋಟು ಸಿಕ್ಕಿತ್ತು.

ಅದಕ್ಕೆ ಎಲ್ಲೂ ಚಿಲ್ಲರೆ ಸಿಗದೆ ಕಂಗಾಲಾಗಿ ಕೊನೆಗೆ ಸೂಪರ್ ಬಜಾರಿಗೆ ಹೋಗಿ ೫೮೦ ರೂಪಾಯಿಯಷ್ಟು ಏನೇನೋ ಖರೀದಿ ಮಾಡಿ ಚಿಲ್ಲರೆ ಸಿಗುತ್ತೆ ಅಂತ ಆಸೆಯಿಂದರೆ ಕಾದರೆ ಅಲ್ಲೂ ಚಿಲ್ಲರೆ ಸಿಗದೆ ಕಾರ‍್ದ್ ಉಪಯೋಗಿಸಿ. ’ನಿಜವಾಗಿಯೂ ನನ್ನತ್ರ ಒಂದು ರೂಪ್ಯನೂ ಇಲ್ಲಮ್ಮ’ ಅಂದ.

corruptionಕೊನೆಗೆ ನನಗೆ ಪರಿಚಯವಿದ್ದ ಪತ್ರಕರ್ತರೊಬ್ಬರನ್ನು ಸಂಪರ್ಕಿಸಿ ಅವನಿಗೆ ನೂರಿನ್ನೂರು ರೂಪಾಯಿಗಳನ್ನು ತಲುಪಿಸಲು ಸಾಧ್ಯವೇ ಅಂದಾಗ. ಆತ ದೊಡ್ಡದಾಗಿ ನಗುತ್ತಾ. ಅದೇ ಈಗ ಸಮಸ್ಯೆ ಮೇಡಂ ನನ್ನತ್ರನೂ ದುಡ್ಡಿಲ್ಲ ಅಂದ.

ಕೊನೆಗೆ ಆತ ಹೇಳಿದ್ದು; ಅವನು ಅವನ ಹಾಸ್ಟೇಲಿನಿಂದ ಹೊರಟು ಮುಂದಕ್ಕೆ ಬಂದರೆ ನವಭಾರತ ಸರ್ಕಲ್ ಸಿಗುತ್ತೆ. ಅಲ್ಲೇ ಬಲಕ್ಕೆ ತಿರುಗಿ ಮುಂದಕ್ಕೆ ಹೋದರೆ ಅಲ್ಲೊಂದು ವೆಂಕಟ್ರಮಣ ದೇವಸ್ಥಾನ ಸಿಗುತ್ತೆ. ಅದರ ಎದುರುಗಡೆ ಒಬ್ಬ ಎಳನೀರು ಮಾರುವವನಿದ್ದಾನೆ. ಅವನತ್ರ ಚೇಂಜ್ ಸಿಗಬಹುದು. ಸಿಗದಿದ್ದರೆ ನನ್ನ ಹೆಸರೇಳಲಿ. ನೂರಿನ್ನೂರು ರೂಪ್ಯಾ ಕೊಡ್ಬಹುದು. ನಾಳೆ ಚಿಲ್ಲರೆ ಹೊಂದಿಸುವ ಪ್ರಯತ್ನ ಮಾಡುತ್ತೇನೆ ಅಂದ.

ಎಲ್ಲಿಗೆ ಬಂದು ನಿಂತಿದೆ ನಮ್ಮ ಅವಸ್ಥೆ!

ನಾಳೆ ನನ್ನ ಜಮೀನಿಗೆ ಹೊರಟಿದ್ದೇನೆ. ಜಮೀನು ನೋಡಿಕೊಳ್ಳುತ್ತಿರುವ ಕುಟುಂಬಕ್ಕೆ ಹೇಗೆ ಸಂಬಳ ಕೊಡುವುದೋ ಗೊತ್ತಿಲ್ಲ.

ಮೊನ್ನೆ ನನ್ನ ಬ್ಯಾಂಕಿನಲ್ಲಿ ಕ್ಯೂ ನಿಂತಿದ್ದೆ. ನಾಲ್ಕು ಸಾವಿರ ಸಿಕ್ಕಿತ್ತು. ನಿನ್ನೆ ಹೋದಾಗ ಕ್ಯಾಶ್ ಮುಗಿದಿತ್ತು. ಇಂದು ನಾಲ್ಕು ಸಾವಿರ ಸಿಕ್ಕಿತು. ಈ ಎಂಟುಸಾವಿರ ನನ್ನ ಮನೆಗೆ ಅದಕ್ಕೆ ಇದಕ್ಕೆ ಅಂತ ಖರ್ಚಾಗಿ ಹೋಯ್ತು. ಇಂದು ಊರಿನ ನನ್ನ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್ ಗೆ ಪೋನ್ ಮಾಡಿದ್ರೆ. ನೀವು ಬನ್ನಿ ನಾಲ್ಕು ಸಾವಿರ ಕೊಡುವಾ ಅಂದಿದ್ದಾರೆ.

ನಮ್ಮಮ್ಮ ಆಗಾಗ ಹೇಳುವ ಮಾತು ನೆನಪಾಗುತ್ತಿದೆ, ’ನನ್ನ ತಲೆ ಕೆಟ್ಟು ಕರಡಾಗಿದೆ!’

‍ಲೇಖಕರು Admin

13 December, 2016

1 Comment

  1. Sangeeta Kalmane

    ಪಟಕ್ಕಂತ ನನಗೆ ಸಿಕ್ಕಿತು ನಾಲ್ಕು ಸಾವಿರಕ್ಕೆ ನೂರರ ಚಿಲ್ಲರೆ. ಹೇಗಂತ ನೋಡಿ.
    ದಿನಾ ಬೇಕೇ ಬೇಕು ಹಾಲು. ಒಂದು ತಿಂಗಳಿನ ಕೂಪನ್ ಒಂದು ಲೀಟರಿಗೆ ತಗೊಂಡೆ. ₹1025/- ಕಳೆದು ಕೊಟ್ಟ ಚೇಂಜ. ಮತ್ತೆ ಇನ್ನೊಂದು ನೋಟು ಮೇಡಂ ಬೆಳಿಗ್ಗೆ ತಂದುಕೊಡಿ ಚೇಂಜ ಬೇಕಾದರೆ ಆಮೇಲೆ ಒಂಬತ್ತು ಗಂಟೆಗೆ
    ಬನ್ನಿ ತೆಗೆದಿಡುತ್ತೇನೆ.
    ಇದಪ್ಪಾ ಚೇಂಜಿಗೂ ವ್ಯಾಪಾರಕ್ಕೂ ಲಿಂಕು. ಒಂದು ತಿಂಗಳ ಅಡ್ವಾನ್ಸ ಹಾಲಿನ ದುಡ್ಡು ಸಿಗ್ತಲ್ಲ ವ್ಯಾಪಾರಕ್ಕೆ. ಹಳೆ ನೋಟು ಬದಲಾವಣೆಗೆ ಯಾವ ಬ್ಯಾಂಕಿಗೂ ಹೋಗದೆ ಆದಷ್ಟು ಹೀಗೆ ಅದೂ ಇದೂ ರಿಪೇರಿ ಕೆಲಸಕ್ಕೆ ಖಾಲಿ ಮಾಡಿದ್ದಾಯಿತು. ಆದರೂ ಇನ್ನೂ ಮೂರು 500ರ ನೋಟು ಹಾಗೆ ಉಳೀತಲ್ಲ ಶಿವನೆ!☺
    ನನ್ನದೊಂದು ಚಾಲೆಂಜ್ ನನ್ನ ಮಗಳೊಂದಿಗೆ. ಹಳೆ ನೋಟು ಬದಲಾವಣೆಗೆ ಬ್ಯಾಂಕಲ್ಲಿ ಕ್ಯೂ ನಿಲ್ಲಲ್ಲ. ಗಡಿಬಿಡಿ ಮಾಡಲ್ಲ. ಅಕೌಂಟಿಗೂ ಹಾಕಲ್ಲ. ಹೇಗಿದ್ರೂ ಡಿಸೆಂಬರ್ 30ರವರೆಗೂ ಸಮಯ ಇದೆ. ಎಲ್ಲೆಲ್ಲಿ ಹಳೆ ನೋಟು ಚಲಾವಣೆ ಸಾಧ್ಯವೊ ಅಲ್ಲೆಲ್ಲ ಉಪಯೋಗಿಸಿ ಖಾಲಿ ಮಾಡ್ತೀನಿ. ನನ್ನದೇನು ಬ್ಲಾಕ್ ಮನಿ ಅಲ್ಲ. ಬ್ಯಾಂಕಿಂದ ನೀನೆ ಡ್ರಾ ಮಾಡಿ ತಂದುಕೊಟ್ಟಿರೋದು. ಹೀಗೆ ವಾದ ಮಾಡಿ ಖಾಲಿನೂ ಮಾಡಿದೆ. ಈ ಮೂರು ನೋಟಿಗೆ ಸಂಚಕಾರ ತಂದ್ಬಿಟ್ರಲ್ಲಾ. ಛೆ! ಡಿಸೆಂಬರ್ 30ರವರೆಗೂ ಮೊದಲು ಹೇಳಿದಂತೆ ಅವಧಿ ಕೊಟ್ಟಿದ್ದರೆ ನನ್ನ ಚಾಲೆಂಜನಲ್ಲಿ ಗೆದ್ದಾಂಗಾಗ್ತಿತ್ತಲ್ಲ. ಆದರೂ ಗೆಲ್ಲುವ ಆಸೆ ಇನ್ನೂ ಹೋಗಿಲ್ಲ. ಏನೇನೊ ಐಡಿಯಾಗಳು ಬರ್ತಿವೆ. ಅಂತೂ ಬ್ಯಾಂಕಿನ ಮೆಟ್ಟಿಲು ಹತ್ತಬಾರದು ಹಳೆ ನೋಟು ಹಿಡಿದು. ನಾನು ಸೋಲಬಾರದು. Let’s see☺

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading