ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್‌.ಎಲ್‌. ಪುಷ್ಪಾಗೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ

ಬೆಂಗಳೂರು: ಕವಿ ಡಾ| ದಿನಕರ ದೇಸಾಯಿ ಅವರ ಹೆಸರಿನಲ್ಲಿ ನೀಡಲಾಗುವ ಕಾವ್ಯ ಪ್ರಶಸ್ತಿಯನ್ನು ಈ ವರ್ಷ ಕನ್ನಡದ ಹೊಸ ತಲೆಮಾರಿನ ಮಹತ್ವದ ಕವಯತ್ರಿ ಡಾ| ಎಚ್‌.ಎಲ್‌. ಪುಷ್ಪಾ ಅವರ ‘ಲೋಹದ ಕಣ್ಣು’ ಸಂಕಲನಕ್ಕೆ ದೊರೆತಿದೆ. ಈ ಸಲದ ಕಾವ್ಯ ಪ್ರಶಸ್ತಿಗೆ 60 ಸಂಕಲನಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದು ಮೂರು ಹಂತದ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಅಂತಿಮ ಸುತ್ತಿನಲ್ಲಿ 8 ಸಂಕಲನಗಳು ಸ್ಪರ್ಧೆಯಲ್ಲಿದ್ದವು. ನಿರ್ಣಾಯಕರಿಂದ ಅತಿ ಹೆಚ್ಚು ಅಂಕ ಪಡೆದ ‘ಲೋಹದ ಕಣ್ಣು’ ಸಂಕಲನವನ್ನು ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಡಾ| ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ವಿಷ್ಣು ನಾಯ್ಕ ತಿಳಿಸಿದ್ದಾರೆ. ನ. 14ರಂದು ಪ್ರತಿಷ್ಠಾನದ ಕಾರಾಯಲಯವಿರುವ ಅಂಕೋಲ ತಾಲೂಕಿನ ಅಂಬಾರಕೊಡ್ಲದ ‘ಸದಾನಂದ ವೇದಿಕೆಯಲ್ಲಿ ನಡೆಯಲಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪದಕವನ್ನು ಒಳಗೊಂಡಿದೆ ಎಂದು ವಿಷ್ಣು ನಾಯ್ಕ ತಿಳಿಸಿದ್ದಾರೆ.

]]>

‍ಲೇಖಕರು avadhi

11 October, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading