ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಊರಿಗೆ ‘ಸರಳ ವಿವಾಹ’ ನುಗ್ಗಿಬಿಟ್ಟಿತ್ತು..

ಅಕ್ಷತಾ ಪಾಂಡವಪುರ

ಆಗ ನಾನಿನ್ನು 8 ರ ಚಿಕ್ಕವಳು

ಊರಿಗೆ ‘ಸರಳ ವಿವಾಹ’ ನುಗ್ಗಿಬಿಟ್ಟಿತ್ತು..

ನನ್ನ ಇಬ್ಬರು ಚಿಕ್ಕಮಂದಿರು ಹಾಗು ಅವರಿವರ ಸರಳ ಮದುವೆಯಲ್ಲಿ ಮಜ ಓ ಮಜಾ

ಮಂತ್ರ ಮಾಂಗಲ್ಯದಲ್ಲಿ ತಾಳಿ ಕಟ್ಟಿಸಿ, ಹಿರಿಯರ ಹಿತನುಡಿಯೊಂದಿಗೆ ಬಾತು-ಮೊಸರನ್ನ-ಮೈಸೂರ್ ಪಾಕ್ ಜೊತೆಗೆ ಮದುವೆ ಮುಗಿದೇ ಬಿಡ್ತಿತ್ತು…

ಮನೇಲಿ ಸಾಲದ ಬಾಧೆ ಮತ್ತು ಒತ್ತಡವಿಲ್ಲದೆ ಎಲ್ಲರು ನೆಮ್ಮದಿಯಾಗಿರ್ತಿದ್ರು ಅದಕ್ಕೆ ಕಾರಣ ಪುಟ್ಟಣ್ಣಯ್ಯ .. ಆಗಲೇ ಸರಳ ಮದುವೆಯ ಕ್ರಾಂತಿ ಶುರುವಾಗಿದ್ದು.

ಆಗಲಿಂದ ನಾನು ಮಂತ್ರ ಮಾಂಗಲ್ಯನೇ ಆಗ್ತೀನಿ ಇವರೇ ಮಾಡಿಸಬೇಕು ಅಂತ ಯೋಚಿಸಿದ್ದೆ ಅಷ್ಟೇ ಅವತ್ತಿನ ನನ್ನ ಯೋಚನೆ ಬದಲಾಗಲೇ ಇಲ್ಲ. ಅದಕ್ಕೆ ಕಾರಣ ಪುಟ್ಟಣ್ಣಯ್ಯರ ಹೋರಾಟ ನಡೆ ನುಡಿ ಸಿದ್ಧಾಂತ ಮತ್ತು ಅವರ ಯೋಚನೆ ಯೋಜನೆಯಲ್ಲಿದ್ದ ಪ್ರಾಮಾಣಿಕತೆ… ಹೀಗೆ ಹೇಳ್ತಾ ಹೋದ್ರೆ ಒಂದಾ ಎರಡಾ..

We miss you sir

‍ಲೇಖಕರು avadhi

21 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading