ಅನ್ವೇಷಕ ಜಂಗಮಗಿತ್ತಿ ‘ಉಮಾಶ್ರೀ’
ಬೇಲೂರು ರಘುನಂದನ್
ಸೃಜನಶೀಲತೆ ಮತ್ತು ಅಭದ್ರತೆ ಒಂದರ ಜೀವ ಇನ್ನೊಂದರಲ್ಲಿ ಇರುವಂತೆ ಪರಸ್ಪರ ಪೂರಕವಾದವು. ಯಾರ ಬದುಕಲ್ಲಿ ಅಭದ್ರತೆ ಇರುವುದೋ ಅವರ ಮನಸ್ಸು ಸೃಜನವಾಗಿದ್ದರೆ ಬದುಕಿನ ಕ್ರಿಯಾಶೀಲ ಅನಾವರಣ ಸಾಧ್ಯ ಎಂಬುದಂತೂ ಸತ್ಯ. ಅಂದರೆ ನಾನು ಹೇಳ ಬಯಸುತ್ತಿರುವ ಮುಖ್ಯ ವಸ್ತು ವಿಷಯಗಳೆರಡು ಉಮಾಶ್ರೀ ಅವರನ್ನೇ ಎದುರು ನೋಡುತ್ತಿದೆ. ಉಮಾದೇವಿಯಿಂದ ಉಮಾಶ್ರೀ ಯಾಗುವ ತನಕ ಮತ್ತದು ಮುಂದುವರೆದು ಸದಾ ಭೂತ ಭವಿಷ್ಯತ್ತುಗಳ ನಡುವೆ ವರ್ತಮಾನವಾಗುವ ಪ್ರಕ್ರಿಯೆ ಬೆಸೆದುಕೊಂಡಿರುವುದು ಈ ಅಭದ್ರತೆ ಮತ್ತು ಸೃಜನಶೀಲತೆಗಳ ನಡುವೆಯೇ. ಅಭದ್ರತೆಯಿಂದ ಸೃಜನಗೊಂಡ ಮೇರು ನಟಿ ಅಂತಲೇ ಹೇಳಬಹುದಾದ ಉಮಾಶ್ರೀ ಒಬ್ಬ ಕಲಾವಿದೆ ಮಾತ್ರವಲ್ಲ. ಅವರು ಬದುಕಿನ ಅನ್ವೇಷಕಿಯೂ ಹೌದು.
ಸುಮಾರು ಏಳೆಂಟು ವರ್ಷಗಳಿಂದ ತುಂಬಾ ಹತ್ತಿರದಿಂದ ಅವರನ್ನು ನೋಡುತ್ತಿರುವ ನನಗೆ ಅವರ ಜೀವನದ ತೆರೆದ ಪುಸ್ತಕದಂತೆ ಗೊತ್ತಿರುವ ಕಥೆಗಳನ್ನು ಮಾತ್ರ ಹೇಳುವುದು ಇಲ್ಲಿನ ಉದ್ದೇಶವಲ್ಲ. ಕಲಾವಿಧೆಯ ಕಷ್ಟದ ಕಥೆಗಳನ್ನು ಅಥವಾ ರೋಚಕ ಎನ್ನುವ ಕಥಾನಕಗಳನ್ನು ತಿಳಿದುಕೊಳ್ಳಲು ಎಲ್ಲರೂ ಹಾತೊರೆಯುತ್ತಾರೆ, ಹಂಬಲಿಸುತ್ತಾರೆ. ಆದರೆ ಅದಕ್ಕೂ ಮೀರಿದ ಉಮಾಶ್ರೀಯವರ ಅನಾವರಣಗೊಂಡ ವ್ಯಕ್ತಿತ್ವವನ್ನು, ಬದುಕನ್ನು, ಜೀವನ ಪ್ರೀತಿಯನ್ನು ಅದಕ್ಕೆ ಹೊಸೆದುಕೊಂಡಂತೆ ಇತರ ವಿವರಗಳನ್ನು ಕೊಡುವುದು ನಮ್ಮ ಬಹುಮುಖ್ಯ ಜವಾಬ್ದಾರಿ. ಅರಿಯುವುದೂ ಕೂಡ ಸಾಮಾಜಿಕ ಜವಾಬ್ದಾರಿಯೇ.

ಕಲಾವಿದೆಯಾಗಿ ಮಾತ್ರ ಈಕೆ ನಿಲ್ಲದೇ ಸಾಹಿತ್ಯ, ಸಮಾಜ, ರಂಗಭೂಮಿ, ಸಿನೆಮಾ, ಕುಟುಂಬ, ರಾಜಕೀಯ….. ಹೀಗೆ ಹತ್ತು ಹಲವಾರು ಅಂತರಶಿಸ್ತುಗಳಲ್ಲಿ ನಡೆಸುವ ಹುಡುಕಾಟ ಮತ್ತು ಅದರ ಜೊತೆ ಅನುಸಂದಾನ ಮಾಡಿಕೊಳ್ಳುವ ಪರಿ, ಅದಕ್ಕೆ ಬೇಕಾದ ತಯಾರಿ, ಕೊನೆಗೆ ಅಸ್ಥಿತ್ವಕ್ಕೆ ತರುವುದು, ನಂತರ ಕಂಡುಕೊಂಡ ದಾರಿಯನ್ನು ಪಾಲಿಸುವುದು, ಪಾಲಿಸುವಂತೆ ನೋಡಿಕೊಳ್ಳುವುದು ಉಮಾಶ್ರೀಯವರನ್ನು ಅರ್ಥೈಸಿಕೊಳ್ಳಲು ಬೇಕಾದ ಒಳ್ಳೆಯ ಸರಕು. ಇವು ಕಾಡುವುದು, ಕೆದಕುವುದು ವ್ಯಕ್ತಿ ಸಮಷ್ಟಿಯಾಗುವಲ್ಲಿ ನಿರ್ವಹಿಸುವ ಭಾವ ಪಾತ್ರಗಳು ಯಾವುದೇ ರಾಜಿ ಮಾಡಿಕೊಳ್ಳದೇ ಗುರಿಯನ್ನು ದುಡಿಸಿಕೊಳ್ಳುವುದು. ಈ ಕ್ರಿಯೆ ಮತ್ತು ಪ್ರಕ್ರಿಯೆ ಕಲಾವಿದೆಯಾಗಿ ಉಮಾಶ್ರೀಯವರನ್ನು ನೋಡಿದಾಗ ಆಶ್ಚರ್ಯದ ಜೊತೆಗೆ ಅನುಸರಣೀಯ ಎನ್ನುವಷ್ಟರ ಮಟ್ಟಿಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಯಾವುದೇ ಕಾರ್ಯಕ್ಷೇತ್ರವನ್ನು ತೆಗೆದುಕೊಂಡರೂ ಅದಕ್ಕೆ ಸಂಪೂರ್ಣ ನ್ಯಾಯವನ್ನು ಒದಗಿಸುವುದು ಉಮಾಶ್ರೀಯವರ ಬಹುಮುಖ್ಯ ಗುಣ. ಬುದ್ದಿ, ದೇಹ, ಮನಸ್ಸು ಈ ಮೂರನ್ನೂ ಆರೋಗ್ಯಪೂರ್ಣವಾಗಿ ದುಡಿಸಿಕೊಂಡು ಹಿಡಿದ ಕಾರ್ಯಕ್ಕೆ ಅರ್ಥವನ್ನು ತರುವುದು ಇವರ ನಿಷ್ಟತೆಯನ್ನು ತೋರುತ್ತದೆ. ಬಹುಶಃ ಈ ಒಂದು ಉದಾಹರಣೆ ಅವರ ಕಾರ್ಯದಕ್ಷತೆಯನ್ನು ಅರ್ಥವಿಸಿಕೊಳ್ಳಲು ಸಹಕಾರಿಯಾಗಬಹುದು. ಉತ್ತರ ಕನರ್ಾಟಕ ತೇರದಾಳ ಮತಕ್ಷೇತ್ರ ಈಗ ಅವರ ರಾಜಕೀಯ ರಂಗದ ಕರ್ಮಭೂಮಿ. ವಾಸ ಇರುವುದು ಬೆಂಗಳೂರಿನಲ್ಲಿ. ಹಿಂದಿನ ಚುನಾವಣೆಯಲ್ಲಿ ಕೆಲ ಕಾರಣಗಳಿಂದ ಸೋತ ನಂತರ ಕೆಲಸಕ್ಕೆ ಬೆನ್ನು ಮಾಡಿ ಬರಲಿಲ್ಲ. ಅದಕ್ಕೆ ಬದಲಾಗಿ ಅಲ್ಲೇ ಮನೆ ಮಾಡಿಕೊಂಡು ಇದ್ದು, ಈಗ ಆ ಊರಿನವರೇ ಆಗಿದ್ದಾರೆ. ಬೆಂಗಳೂರಿಗೆ ಆಗಾಗ ಬಂದು ಹೋಗುವ ಅತಿಥಿಯಾಗಿದ್ದಾರೆ. ಚಿತ್ರೀಕರಣವೋ, ನಾಟಕವೋ, ದಾರವಾಹಿಯೋ ಏನಾದರೂ ಇದ್ದಲ್ಲಿ ಅಲ್ಲಿಂದ ರೈಲಿನಲ್ಲಿ ರಾತ್ರಿ ಹೊರಟು ಬೆಳಿಗ್ಗೆ ಇಲ್ಲಿ ತಲುಪಿ, ಕೆಲಸ ಅಚ್ಚುಕಟ್ಟಾಗಿ ಮುಗಿಸಿ ಮತ್ತೆ ರಾತ್ರಿ ರೈಲಿನ ಪ್ರಯಾಣ ಮಾಡಿ ತೇರದಾಳದಲ್ಲಿ ಹಾಜರಾಗಿರುತ್ತಾರೆ. ಇದನ್ನು ಗಮನಿಸಿದಾಗ ಉಸಿರು ಬಿಡುವಂತೆ ಅನಿಸಿದರೂ ಇದು ಸತ್ಯ. ಇದನ್ನು ನೋಡುತ್ತಿದ್ದರೆ ನನಗೆ ಆಯ್ದಕ್ಕಿ ಲಕ್ಕಮ್ಮ ಕಾರ್ಯನಿಷ್ಟತೆಯ ಪರಿ ನೆನಪಿಗೆ ಬರುತ್ತದೆ. ಉಮಾಶ್ರೀಯವರೂ ಕೂಡ ಈ ಶತಮಾನದ ‘ಜಂಗಮಗಿತ್ತಿ’ ಎಂದರೆ ಯಾವ ತಪ್ಪೂ ಇಲ್ಲ. ಅತಿಶಯೋಕ್ತಿಯೂ ಅಲ್ಲ! ಬೆಂಗಳೂರಿನಲ್ಲಿ ಮನೆ, ಮಗ, ಸೊಸೆ, ಮುದ್ದಿನ ಮೊಮ್ಮಗಳು, ಸ್ನೇಹಿತರು, ಹಿತೈಷಿಗಳು ಎಲ್ಲರೂ ಇದ್ದರೂ ಇವರಿಗೆ ಅವರ ಮೇಲೆ ಅಪಾರವಾದ ಪ್ರೀತಿ ಇದ್ದರೂ ತನ್ನ ಕೆಲಸವನ್ನು ಸಮಾಜಮುಖಿಯಾಗಿಸುವುದರತ್ತ ಗಮನ ಹರಿಸುತ್ತಾರೆಯೇ ಹೊರತು ಮನೆ ಕುಟುಂಬ ಇತ್ಯಾದಿಗಳ ಮೇಲಲ್ಲ. ಇದೊಂದು ರೀತಿ ಬಂಧನಗಳನ್ನು ಕಳಚಿ ಮತ್ತೆ ಬಂಧನಗಳಿಗೆ ಸಿಲುಕುವ ಪರಿ. ಸಮಾಜವನ್ನು ಬದುಕನ್ನು ಕಟ್ಟುವ ಕ್ರಿಯೆಗೆ ಜಗತ್ತಿನ ಎಲ್ಲಾ ಪ್ರತಿಭಾಚೇತನಗಳು ಕಂಡುಕೊಂಡದ್ದು ಇದನ್ನೇ.

ಅನುಭವ ಜನ್ಯ ಸಾಹಿತ್ಯ ಹೇಗೆ ಯಾವ ಕಾಲಕ್ಕೋ ಅಸ್ತಿತ್ವದಲ್ಲಿರುತ್ತದೆಯೋ ಅನುಭವ ತುಂಬಿದ ಬದುಕು ಕೂಡ ಅರ್ಥಪೂರ್ಣವೇ ಮತ್ತು ಯಾವ ಕಾಲಕ್ಕೂ ಪ್ರಭಾವ ಭೀರುವಂತದ್ದೇ. ವಿವಿದ ಅನುಭವಗಳ ಜೊತೆಗೆ ದುಡಿಯುವ ಉತ್ಸಾಹ, ಜೀವನ ಪ್ರೀತಿ, ಸಮಾಜದ ಬಗೆಗಿನ ಕಾಳಜಿ, ಓದು, ಇವೆಲ್ಲವೂ ಇಂದು ನಮ್ಮ ಮುಂದೆ ಉಮಾಶ್ರೀಯವರ ಯಶಸ್ಸಿನ ಪುಟಗಳನ್ನು ಓದುವಂತೆ ಮಾಡಿದೆ. ತಾದಾತ್ಮ್ಯ, ತಲ್ಲೀನವಾಗುವುದರಿಂದಲೇ ಇದು ಸಾದ್ಯ. ಹಿಂದೊಮ್ಮೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ದೆಹಲಿ ಎಡಿಷನ್ನಲ್ಲಿ, ಉಮಾಶ್ರೀಯವರ ಒಡಲಾಳದ ಸಾಕವ್ವನ ಪಾತ್ರವನ್ನು ನೋಡಿ ರಂಗಭೂಮಿಗೆ ಅಂತಲೇ ಎನಾದರೂ ಆಸ್ಕರ್ ಬಹುಮಾನ ಇದ್ದಿದ್ದರೆ ಅದು ಉಮಾಶ್ರೀಯವರಿಗೆ ಖಂಡಿತವಾಗಿ ದಕ್ಕುತ್ತಿತ್ತು ಎಂದು ಬರೆದಿತ್ತು. ಈ ಗ್ರಹಿಕೆ ಉಮಾಶ್ರೀ ಕಲಾವಿದೆಯಾಗಿ ಕಲಾಕೃತಿಯನ್ನು ಆಗಿಸುವಿಕೆಯ ದಟ್ಟ ನೆಲೆಗಳನ್ನು ನಾವು ಗಮನಿಸಬಹುದು. ಅಷ್ಟೇ ಅಲ್ಲ ಈ ಉದಾಹರಣೆ ಅವರ ಸಾಂಸ್ಕೃತಿಕ ಬದುಕಿನಲ್ಲಿ ಅತಿಮುಖ್ಯವಾದುದು ಎನ್ನಬಹುದು.
ಮೊದಲು ಅವರ ಮನೆಗೆ ಬೇಟಿ ನೀಡಿದಾಗ ನನಗೆ ಅವರ ಮನೆಯ ಸೌಂದರ್ಯವಾಗಲೀ, ಅಚ್ಚುಕಟ್ಟಾಗಲೀ ಗಮನ ಸೆಳೆಯಲಿಲ್ಲ. ಅವರ ಕೋಣೆಯಲ್ಲಿ ಸಾಲಾಗಿ ಜೋಡಿಸಿಟ್ಟ ಕನ್ನಡದ ತ್ರಿಪದಿ, ವಚನ ಸಾಹಿತ್ಯ, ದಾಸ ಸಾಹಿತ್ಯ, ಕುವೆಂಪು, ಬೇಂದ್ರೆ, ವೈದೇಹಿ ಅಷ್ಟೇ ಅಲ್ಲ ರಾಜಕೀಯ ಪ್ರಕಾರದ ಕೆಲ ಮೌಲಿಕ ಕೃತಿಗಳನ್ನು ನೋಡಿ ಚಕಿತನಾದೆ. ಕಲಾವಿದೆಯಾಗಿ ಮಾತ್ರವಲ್ಲದೇ ಒಬ್ಬ ಸಹೃದಯಿ ಓದುಗಳಾಗಿ ಆಕೆ ಕಂಡು ಬಂದರು. ಅವರೋಂದಿಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಒಬ್ಬ ವಿಮರ್ಷಕಿಯಾಗಿ ಆಕೆಯನ್ನು ನೋಡಬಹುದು. ಒಮ್ಮೆ ಸಾಹಿತ್ಯದ ವೇದಿಕೆಯಲ್ಲಿ ಜಾನಪದ ಸಾಹಿತ್ಯವನ್ನು ಕುರಿತಾದ ಅವರ ವಿಚಾರಮಂಡಿಸಿದ ರೀತಿಯನ್ನು ನೋಡಿ ಅವರ ಚರ್ಚೆಯ ವಸ್ತು ವಿಷಯವನ್ನು ಗಮನಸಿದಾಗ ಯಾವ ವಿಶ್ವವಿದ್ಯಾಲಯದ ಉಪನ್ಯಾಸಕರಿಗೂ ಅವರು ಕಡಿಮೆಯಿಲ್ಲ ಎನಿಸಿತು. ಇದೆಲ್ಲಾ ಸಾದ್ಯವಾಗಿದ್ದು ಅವರ ಅನುಭವ, ಓದಿನ ಪ್ರೀತಿ, ಮೌಲ್ಯಗಳ ಬಗೆಗಿನ ಧೋರಣೆ, ಬದುಕಿನ ಬಗೆಗಿನ ಆಸಕ್ತಿಯಿಂದಲೇ. ಅವರ ಓದಿನ ಛಲ ಕೂಡ ಮೆಚ್ಚುವಂತದ್ದೇ. ಒಬ್ಬ ನೇರ ವಿದ್ಯಾರ್ಥಿನಿಯಂತೆ ಒಂದು ತಿಂಗಳು ತನ್ನೆಲ್ಲಾ ಕೆಲಸ ಕಾರ್ಯಗಳಿಗೆ ರಜೆ ಘೋಷಿಸಿ ಒಂದೆಡೆ ಕುಳಿತು ಓದಿ, ಬರೆದು, ಪುನರಾವರ್ತಿಸಿ, ಪರಾಮರ್ಶಿಸಿ, ಚರ್ಚಿಸಿ ರಾಜ್ಯಶಾಸ್ತ್ರದಲ್ಲಿ ಪರೀಕ್ಷೆ ಬರೆದು ಯಶಸ್ವಿಯಾದರು. ಈಗ ಅವರು ಎಂ.ಎ. ಪದವೀಧರೆ. ನನ್ನ ಮೊದಲ ಕೃತಿ ಶ್ವೇತಪ್ರಿಯ ಕವನ ಸಂಕಲನಕ್ಕೆ ಅವರು ಬರೆದ ಬೆನ್ನುಡಿಯಿಂದ ಆವರು ಒಬ್ಬ ಕಲಾವಿದೆ, ರಾಜಕಾರಣಿ ಮಾತ್ರವಲ್ಲ ಒಬ್ಬ ಒಳ್ಳೆಯ ಚಿಂತಕಿ ಎಂದು ಕನ್ನಡ ಸಾಹಿತ್ಯದ ಬುದ್ಧಿ, ಭಾವಲೋಕ ಅರಿಯಲು ಸಾದ್ಯವಾಯಿತು.
ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ವಿವಿಧ ಮಗ್ಗಲುಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಉಮಾಶ್ರೀ ಒಂದು ಐಕಾನ್ ಎಂಬುದಂತೂ ಸರಿಸತ್ಯ. ಬದುಕನ್ನು ಸಂಶೋಧನಾತ್ಮಕವಾಗಿ ಮತ್ತು ಅನ್ವೇಷಕ ದಾರಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಅನುಭವವನ್ನು ಅವರು ದುಡಿಸಿಕೊಂಡಿದ್ದಾರೆ. ಅವರ ಭಾವ ಅನುಭಾವದ ನೆಲೆಗಳು ಕನ್ನಡ ಕಲಾ ಲೋಕಕ್ಕೆ, ಮನುಷ್ಯ ಪ್ರೀತಿಯ ಕಾಳಜಿಗಳು ಸಾಮಾಜಿಕ ನೆಲಯಲ್ಲಿ ರಾಜಕೀಯ ಪ್ರಪಂಚಕ್ಕೆ, ಅದಕ್ಕೆಲ್ಲಾ ಮಿಗಿಲಾಗಿ ಯಶಸ್ವೀ ಬದುಕಿಗೆ ಒಬ್ಬ ಅಲ್ಪಸಂಖ್ಯಾತ ಮಹಿಳೆ ಮುನ್ನುಗ್ಗುವ ಜಲಪಾತೀಯ ಧೋರಣೆ ಬದುಕನ್ನು, ಸಮಾಜವನ್ನು ಗಟ್ಟಿಗೊಳಿಸುವ ಕ್ರಿಯೆಗೆ ಗಟ್ಟಿ ಅಡಿಪಾಯವಂತೂ ಆಗಿದೆ ಎಂದು ಹೇಳಬಹುದು.






ಒಳ್ಳೆಯ ಲೇಖನ. ಮೊದ ಮೊದಲು ‘ಅವಧಿ ತಂಡ’ ಸಿನಿಮಾ ವಿಚಾರದ ಬಗ್ಗೆ ಒಂದು ಕಾಲಂ ಮಾಡುವ ಯೋಜನೆ ಇರಬಹುದು(ಸ್ವಾಗತಾರ್ಹ) ಎಂದುಕೊಂಡೆ. ನಂತರ ಸಿನಿಮಾ, ನಟನೆಗೂ ಮೀರಿದ ಉಮಾಶ್ರೀಯ ಬದುಕಿನ ಬಗ್ಗೆ ಸ್ಫುಟವಾಗಿ ತಿಳಿಸಿಕೊಟ್ಟಿದ್ದಾರೆ ಲೇಖಕರು. ಆಕೆ ಒಳ್ಳೆಯ ವಿಮರ್ಶಕಿ ಎಂಬುದು ಇಂದು ತಿಳಿದುಕೊಂಡ ಹೊಸ ವಿಚಾರ. ಲೇಖನಕ್ಕೆ ಧನ್ಯವಾದಗಳು… 🙂
Kanndada yela hennmaklligu umasree amma spurthi agli
Danyavadagallu
ಕನ್ನಡದ ಈಗಿರುವ ಅತ್ಯುನ್ನತ ಪೋಷಕ ನಟಿಯರಲ್ಲಿ ಉಮಾಶ್ರೀ ಅವರು ಒಬ್ಬರು. ಇತ್ತೀಚೆಗಿನ “ರಾಯಣ್ಣ” ಚಿತ್ರದಲ್ಲಿ ಅವರ ಅಭಿನಯ ನೋಡಿ ಮೂಕವಿಸ್ಮಿತನಾದೆ.
ಅವರ ಕಾರ್ಯತತ್ಪರತೆಯ ಬಗ್ಗೆ ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು!!
Umashree avara baduku, saadhane, vrutti, natane yaavattigoo sojiga mattu adbhuta.
Olleya baraha
Umashree is a germ in the industry..
Tumba olle lekhana
dhanyavadagalu !!!!!!!!
Alpasankhyata mahile anta lekhanada koneya bhagadalli balasiddene adannu hindulida vargada mahile emudaagi odikolli ,,,,, idu vagrga mattu jaatiya claimgaagi alla. Tappu maahiti koda baaradu annuvudashte nanna kalaji….Umashree avara abhinaya ivellavannu meeriddu annuvudu kaanuva satya…….
Tumba Olleya Lekhana Raghuaandan Sir… Umashree avara jeevanada olleya lekhana.. Best wisshes for your future…
thumba chennagide nimma article (great article),namma aunty bagge neevu ishtu deepaagi article bardidira neevu thumba great
Raghunandan sir, Article tumba chanagide. Hats off to umashree mam and thanks to you for the article. all the best 🙂
ಸೋಜಿಗ ಪಡಿಸುವಂತೆ ಪಾತ್ರಗಳಲ್ಲಿ ಮುಳುಗಿ ನೋಡುಗನನ್ನು ಸಹ ತಲ್ಲಿನನಾಗಿಸಬಲ್ಲ ಶಕ್ತಿವಂತ ನಟಿ ಉಮಾಶ್ರಿ ಅವ್ರು, ಅವರ ಜೀವನದ ಕಿರು ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು, ಪರಿಚಯ ಲೇಖನ ಕೂಡ ತುಂಬ ಸೊಗಸಾಗಿದೆ.
ವಿವಿಧ ಕ್ಷೇತ್ರದಲ್ಲಿ ಹಾಗೂ ಸಮಾಜದಲ್ಲಿ ಪ್ರಖ್ಯಾತಿಯನ್ನು ಪಡೆದವರ ಖಾಸಗಿ ಜೀವನ, ಬದಕು ಮತ್ತು ವ್ಯಕ್ತಿತ್ವವನ್ನು ತಿಳಿದು ಬರೆಯುವುದು ನಿಜಕ್ಕು ಅನ್ವೇಷಣೆಯೇ ಹೌದು. ಉಮಾಶ್ರೀ ಅಮ್ಮ ಒಬ್ಬ ನಿರಂತರ ಚೈತನ್ಯ ತುಂಬಿದ ಹೆಣ್ಣು ಮತ್ತು ಸಮಾಜಕ್ಕೆ ಒಬ್ಬ ಒಳ್ಳೆಯ ರೋಲ್ ಮಾಡೆಲ್ ಎಂಬುವ ಸತ್ಯವನ್ನು ತಿಳಿಸಿದ ಬೇಲೂರು ರಘುನಂದನ್ ಅವರಿಗೆ ಧನ್ಯವಾದಗಳು. ಬೇಲೂರು ರಘುನಂದನ್ ಇನ್ನು ಅನೇಕ ಲೇಖನಗಳು ಬರೆಯಲ್ಲಿಯಂದು ಆಷಿಸುತ್ತೇನೆ. ಕೊನೆಯದಾಗಿ ಅವಧಿ ಜಾಲತಾಣವು ಒಬ್ಬ ಅದ್ಭುತ ಯುವ ಬರಹಗಾರರನ್ನು ಬಳಸಿರುವುದಕ್ಕೆ ಅಭಿನಂದನೆಗಳು.
good article raghu. what ever u have mentioned is so true.
Raghunandan sir,article thumba chanagidhe……heege vibinnavaada lekhana baritha iri…all the best…
ಬೇಲೂರು ರಘುನಂದನ್ ಅವರು ಉಮಾಶ್ರೀ ಅವರ ಬಗ್ಗೆ ಬರೆದಿರುವ ಲೇಖನ ತುಂಬ ಚನ್ನಾಗಿದೆ.
ಉಮಾಶ್ರೀ ಅವರ ಕಾರ್ಯತತ್ಪರತೆಯ ಬಗ್ಗೆ ತಿಳಿಸಿಕೊಟ್ಟದ್ದಕ್ಕೆ ಬೇಲೂರು ರಘುನಂದನ್ ಅವರಿಗೆ ಧನ್ಯವಾದಗಳು.
Belur Raghunandan baraha Ondu chethohari baraha. kalavidara vibinnavaada vyakthithvavannu abivyakthisiruvudu thumba santhoshadayaka. Umashriravara badukina olanota abaleyarige margadarshanavagide. E tarahada barahagalu innu barali.
Avara badukina chitranaban… nimma barahadali tumba channagi mudibandi de sir,
Umashree avara jeevan , sadane.. suprti taruvanthadu…