ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಉಪ್ಪುಚ್ಚಿಮುಳ್ಳು’ ಸಂವಾದ ಫೋಟೋ ಆಲ್ಬಂ..

ದಯಾ ಗಂಗನಗಟ್ಟ ಕಂಡಂತೆ

ಉಪ್ಪುಚ್ಚಿಮುಳ್ಳು ಕತೆಗಳು ಯಾಕೆ ತಮಗೆ ಇಷ್ಟವಾದವು, ಇತರರಿಗೆ ಏನನ್ನು ದಾಟಿಸುತ್ತವೆ, ಹಳ್ಳಿಯ ಬದುಕು ಭಾಷೆಗಳ ಕಡೆಗಿನ ಪಯಣ ಹಿಮ್ಮುಕ ಚಲನೆ ಅನಿಸತ್ತಾ? ಹೀಗೆ ಹತ್ತು ಹಲವು ಆಶಯಗಳೊಂದಿಗೆ ಸಂವಾದವೊಂದನ್ನು ನಡೆಸಿ, ಬರಪೂರ ಪ್ರೀತಿಯನ್ನು ಹಾಸನದ ನನ್ನವರು ತೋರಿದಾಗ ಮನಸು ಆರ್ದ್ರ ಆಗಿದ್ದು ಸುಳ್ಳಂತೂ ಅಲ್ಲ.

ಚಲಂ ಹಾಡ್ಲಹಳ್ಳಿ ತಮ್ಮ ಇಚ್ಛಾಶಕ್ತಿಯಿಂದ ಅತ್ಯಲ್ಪ ಸಮಯದಲ್ಲಿ ಆರ್ ಪಿ ವೆಂಕಟೇಶಮೂರ್ತಿ ಸರ್, ಅಹಮದ್ ಹಗರೆ, ವನಜಾ ಸುರೇಶ್, ಉಲಿವಾಲ ಮೋಹನ್ ಕುಮಾರ್, ರತಿ ಹೆಚ್ ಜಿ ಎಲ್ಲರನ್ನೂ ಒಳಗೊಂಡಂತೆ ಅದೆಷ್ಟು ಸೊಗಸಾದ ಕಾರ್ಯಕ್ರಮ ಮಾಡಿದರಂದ್ರೆ ನನ್ನ ಜವಾಬ್ದಾರಿ ದುಪ್ಪಟ್ಟಾಯ್ತು. ಒಲವು ನೂರ್ಪಟ್ಟಾಯ್ತು. ಖುಷಿಯಿಂದ ತಮ್ಮ ಕಾಲೇಜಿನಲ್ಲೇ ಜಾಗ ಮಾಡಿಕೊಟ್ಟ ಝುಲ್ಫಿ ಹಾಸನ್ ಅವರ ಪ್ರೀತಿಗೆ ಪ್ರತ್ಯೇಕ ತ್ಯಾಂಕ್ಯು. ಖುಷಿಯಿಂದ ನನಗಾಗಿ ಬಂದಿದ್ದ ಎಲ್ಲರಿಗೂ ವಿಶೇಷ ತ್ಯಾಂಕ್ಯು.

‍ಲೇಖಕರು avadhi

20 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading