– ಎನ್ ಸಂಧ್ಯಾರಾಣಿ
ಹದಿನೈದು ದಿನಕ್ಕೊಮ್ಮೆ ಸಾಹಿತ್ಯಾಸಕ್ತರು ಒಂದೆಡೆ ಸೇರಿ, ಒಂದು ಕೃತಿಯನ್ನೋ ಅಥವಾ ಒಂದು ಕಥೆಯನ್ನೋ ತಮ್ಮ ತಮ್ಮ ಅಳವಿಗೆ ದಕ್ಕಿದಂತೆ ಹಿಡಿದಿಡುವ, ಚರ್ಚಿಸುವ, ಸಂವಾದಿಸುವ ಕಾರ್ಯಕ್ರಮ ’ಈ ಹೊತ್ತಿಗೆ’. ಈ ಹೊತ್ತಿಗೆಯ ಎರಡನೆಯ ಕಾರ್ಯಕ್ರಮದಲ್ಲಿ ಸಂವಾದಗೊಂಡ ಕಥೆ ರಾಘವೇಂದ್ರ ಖಾಸನೀಸರ “ತಬ್ಬಲಿಗಳು”.

ಸಂವಾದದಲ್ಲಿ ಮಾತನಾಡುತ್ತಾ ಎಸ್ ದಿವಾಕರ್ ಅವರು ’ಈ ಕಥೆ ಕನ್ನಡದ ೧೦ ಅತ್ಯುತ್ತಮ ಕಥೆಗಳಲ್ಲಿ ಒಂದಾಗುವ ಮತ್ತು ಪ್ರಪಂಚದ ೧೦೦ ಅತ್ಯುತ್ತಮ ಕಥೆಗಳಲ್ಲಿ ಒಂದಾಗಬಲ್ಲ ಸತ್ವ ಇರುವ ಕೃತಿ’ ಎಂದು ಹೇಳಿದರು. ಪ್ರಪಂಚದ ಕಥೆಗಳ ಬಗ್ಗೆ ಮಾತಾಡುವಷ್ಟು ಆತ್ಮವಿಶ್ವಾಸ ನನ್ನಲ್ಲಿಲ್ಲ, ಹಾಗೆ ಈ ಕಥೆಯ ಎಲ್ಲಾ ಮಗ್ಗುಲುಗಳನ್ನು, ವೈಶಿಷ್ಟ್ಯಗಳನ್ನು, ಎಲ್ಲಾ ಪದರಗಳನ್ನೂ ತಿಳಿದುಕೊಂಡಿದ್ದೇನೆ ಎನ್ನುವ ಧಾರ್ಷ್ಟ್ಯ ಸಹ ನನ್ನಲ್ಲಿಲ್ಲ, ಆದರೆ ಎಂದೋ ಹೈಸ್ಕೂಲಿನಲ್ಲಿದ್ದಾಗ ಓದಿದ ಈ ಕಥೆ, ನನ್ನ ಮನಸ್ಸಿನಲ್ಲಿ ಅನಾವರಣಗೊಳಿಸಿದ ಲೋಕ, ತೆರೆದಿಟ್ಟ ಆಕಾಶ ಮರೆಯುವಂತಹುದಲ್ಲ.
ಅನಂತ ಮೂರ್ತಿಯವರ “ಮೌನಿ”, ಲಂಕೇಶರ “ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ”, ವೈದೇಹಿಯವರ “ಅಕ್ಕು”, ತೇಜಸ್ವಿಯವರ “ತ್ಯಕ್ತ” …. ಹೀಗೆ ಕೆಲವು ಕಥೆಗಳು ನಮ್ಮೊಂದಿಗೇ ಉಳಿದುಬಿಡುತ್ತವೆ. ಹಾಗೆ ಉಳಿದ ಕಥೆಗಳಲ್ಲಿ ಒಂದು ತಬ್ಬಲಿಗಳು.
ನವ್ಯ ಕಥೆಗಳ ಪ್ರಧಾನ ಗುಣವಾದ ನಂಬಿಕೆಗಳ ಬಗ್ಗೆ ಒಂದು ಪ್ರಶ್ನೆ, ಅಸ್ತಿತ್ವಕ್ಕಾಗಿ ಹುಡುಕಾಟ, ಮತ್ತು ದಟ್ಟ ವಾಸ್ತವ ಪ್ರಜ್ಞೆ ಈ ಕಥೆಯಲ್ಲೂ ಇದೆ. ಕಥೆಯಲ್ಲಿನ ನೇಯ್ಗೆ ಅಥವಾ ಕಸಬುದಾರಿಕೆ ಕಥೆಯ ವಿವರಗಳನ್ನು ಹರಳುಗಟ್ಟಿಸಿಬಿಡುತ್ತದೆ. ಈ ಕಥೆ ಎಲ್ಲರ ಪ್ರಜ್ಞೆಯ ನೆಲೆಯಲ್ಲಿ ಮತ್ತು ಭಾವನಾತ್ಮಕ ನೆಲೆಯಲ್ಲಿ ಅನಾವರಣಗೊಂಡ ರೀತಿ ತುಂಬಾ ಇಷ್ಟವಾಯ್ತು … ಎಲ್ಲರ ಮನಸ್ಸಿನಲ್ಲೂ ಕಥೆ ಬಿಚ್ಚಿಕೊಂಡ ಬಗೆ ಕಂಡ ಮೇಲೆ ಮತ್ತೊಮ್ಮೆ ಕಥೆಯನ್ನು ಓದಬೇಕು ಅನ್ನಿಸಿದ್ದು ಹೌದು!
ಮುಂದಿನ ಸಂವಾದದ ಕಥೆ ವೈದೇಹಿಯವರ “ಅಕ್ಕು”, ದಿನಾಂಕ ೧೦ ಮಾರ್ಚ್.
ಸಂವಾದದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರಗಳು : ವಿನಯ್ ಭಾರದ್ವಾಜ್ ಮತ್ತು ವಿನಯ್ ಎ ಡಿ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :







ಮೇಡಂ ನಿಮ್ಮ ಕಾರ್ಯಕ್ರಮದ ಬಗ್ಗೆ ಓದಿ ಖುಷಿಯಾಯಿತು. ಆಸಕ್ತಿ ಇದ್ದವರು ನಿಮ್ಮ ಈ ಕಾರ್ಯಕ್ರಮಕ್ಕೆ ಬರಬಹುದೇ? ವಿಳಾಸ ತಿಳಿಸುವಿರಾ?
ಮುಂದಿನ ಸಂವಾದ ಮಾರ್ಚ್ ೧೦ ಕ್ಕೆ, ಕಥೆ ವೈದೇಹಿಯವರ ’ಅಕ್ಕು’
ಸ್ಥಳ: ‘ಸಿರಿಸಂಪಿಗೆ’,
#40, 34ನೇ ಅಡ್ಡರಸ್ತೆ,
11ನೇ ಮುಖ್ಯರಸ್ತೆ,
ಜಯನಗರ,
ಬೆಂಗಳೂರು.
ಜಯನಗರದ 4th blockನ cool joint ಸಿಗ್ನಲ್ ನಂತರದ signal (towards JP Nagar) ದಾಟಿದ ಮೇಲೆ, ನಿಮ್ಮ ಎಡಕ್ಕೆ 34thಕ್ರಾಸಲ್ಲಿ ತಿರುಗಿಕೊಂಡರಾಯಿತು. ನಾಲ್ಕು ಹೆಜ್ಜೆ ಮುಂದೆ ಬಂದರೆ ಬಲಗಡೆಗೆ ಈ ಮನೆ ಇದೆ.
ಒದನ್ನ ಚರ್ಚೆಯಾಗಿಸುವ “ಈ ಹೊತ್ತಿಗೆ”…. ಖಂಡಿತಾ ಪಾಲ್ಗೊಳ್ಳುತ್ತೇನೆ…
Eshtu hottige endu tilisi pls.
4.30 pm
Namagu palgolluva icche ide.
Namagu pusthakalannu odo abhyasa ide 200 rinda 300 kavanagalannu barediddene hagu bareyuthale iddene neevu nannannu nimma gumpinallu nannannu obbanannagi madikondiddakke dhanyavadagalu, nimma charchegalige nammannu aahvanisi,Dhanyavadgalondige sumanth, 9902021011