ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಮಾಧ್ಯಮಗಳಿಗೆ ಹೊಸ ನಾಮಕರಣವಾಗಬೇಕೆ ??

ಇಂಟರ್ ನೆಟ್ ಆಧಾರಿತ ಹೊಸ ಮಾಧ್ಯಮವನ್ನು ಏನೆಂದು ಕರೆಯುವುದು?
-ನಿರಂಜನ ವಾನಳ್ಳಿ
ಕೆಲವು ವಾರಗಳಿಂದ ಈ ವಿಷಯ ತಲೆಕೊರೆಯುತ್ತಿದೆ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಈಚಿನ ಬೆಳವಣಿಗೆಯೊಂದು ಕನ್ನಡದಲ್ಲಿ ಹೊಸ ಪದಗುಚ್ಛದ ಸೃಷ್ಟಿಯನ್ನು ಬಯಸುತ್ತಿದೆ. ಕನ್ನಡದ ಸಂದರ್ಭಕ್ಕೆ ಇದು  ಬಹು ಮುಖ್ಯವಾದ ಬೆಳವಣಿಗೆಯಾಗಿದ್ದು,  ನಮ್ಮ ಸಂವಹನ ಹಾಗೂ ಭಾಷಾ ತಜ್ಷರ ಗಮನ ಸೆಳೆಯಬೇಕಿದೆ.
ಇಂಗ್ಲಿಷಿನ ‘ಮಾಸ್ ಮೀಡಿಯಾ’ ಎಂಬ ಪದಕ್ಕೆ ಸಮಾನಾರ್ಥಕವಾಗಿ ಕನ್ನಡದಲ್ಲಿ ‘ಸಮೂಹ ಮಾಧ್ಯಮಗಳು’ ಎಂಬುದಾಗಿ ಈವರೆಗೂ ನಾವು ಕರೆಯುತ್ತಾ ಬಂದೆವು. ಇಂಗ್ಲಿಷಿನ ‘ಮಾಸ್’ ಗೆ ಜೀವವಿಲ್ಲ. ಭೌತಶಾಸ್ತ್ರದಲ್ಲಿ ‘ಮಾಸ್’ ಎಂದರೆ ತೂಕವಿರುವ ವಸ್ತು ಎಂದು ಮಾತ್ರ ಅರ್ಥ. ಅದಕ್ಕೇ ಈ ಮಾಸ್ ಮೀಡಿಯಾ ಎಂಬ ಪದಗುಚ್ಛ ಜೀವಂತಿಕೆಗೆ ಮಾಡುವ ಅವಮಾನ ಎಂಬ ಆರೋಪಗಳಿವೆ. ಇಂಗ್ಲಿಷಿನ ‘ಮಾಸ್’ ಎಂಬುದಕ್ಕೆ ನಾವು  ಬಳಸುತ್ತಿರುವ ಕನ್ನಡ ಪದ- ಸಮೂಹ. ಇದು ಮನುಷ್ಯರ ಸಮೂಹವೇ ಆಗಬೇಕಂತಿಲ್ಲ. ಕುರಿಗಳ ಸಮೂಹವೂ ಆಗಬಹುದಲ್ಲ? ಆದ್ದರಿಂದಲೇ ಮಾಸ್ ಮೀಡಿಯಾ ಎಂಬ ಪದದಲ್ಲಿ ಮಾಸ್ ಎಂಬುದು ಆಕ್ಷೇಪಕಾರಿಯಾಗಿ ಕಾಣುವುದರಿಂದ  ಬೇರೆ ಹೆಸರಿನಿಂದ ಕರೆಯಬೇಕೆಂಬ ವಾದ ಬಹಳ ಹಿಂದಿನಿಂದ ಇದೆ.
ಅದೇನೆ ಇದ್ದರೂ ಸಮೂಹ ಮಾಧ್ಯಮವೆಂಬ ಹೆಸರು ಏಕಕಾಲಕ್ಕೆ ಬೃಹತ್ ಸಂಖ್ಯೆಯ ಜನರನ್ನು ತಲುಪಬಲ್ಲ ಮಾಧ್ಯಮಗಳಿಗೆ ಕರೆಯುವ ಹೆಸರಾಗಿ ಉಳಿಯಿತು. ಇಲ್ಲಿ ಸಮೂಹದ ಜನರ ವ್ಯಾಖ್ಯಾನವಿಲ್ಲ. ಅಂದರೆ ಸಮೂಹದಲ್ಲಿ ಎಷ್ಟು ಜನರಿದ್ದಾರೆ, ಅವರ ಲಿಂಗ, ವಯಸ್ಸು, ಭಾಷೆ, ಆಸಕ್ತಿಗಳು ಯಾವುದರ ಕಲ್ಪನೆಯೂ, ಲೆಕ್ಕವೂ ಇಲ್ಲ. ಅಲ್ಲದೇ ಮಾಧ್ಯಮಗಳ ಶೋತೃ ಸಮೂಹ ಒಂದೇ ಜಾಗದಲ್ಲಿರಬೇಕಿಲ್ಲ. ಭೂಮಂಡಲದಲ್ಲೆಲ್ಲ ವ್ಯಾಪಿಸಿರಬಹುದು. ಇಂದಿನ ಸಮೂಹ ಮಾಧ್ಯಮಗಳಿಗೆ ಅತುಳ. ಸುತಳ ಪಾತಾಳದಲ್ಲಿದ್ದವರನ್ನೂ ತಲುಪುವ ಶಕ್ತಿಯಿದೆ! ನಮ್ಮ ಪತ್ರಿಕೆಗಳು, ರೇಡಿಯೋ, ಟಿವಿ. ಇಂಟರ್ ನೆಟ್, ಸಿನಿಮಾ, ಇವೆಲ್ಲ ಸಮೂಹ ಮಾಧ್ಯಮಗಳ ಅವತಾರಗಳು ಎಂಬುದು ಜನಸಾಮಾನ್ಯರಿಗೂ ತಿಳಿದಿರುವ ಅಂಶ.

ಮಾಧ್ಯಮ ತರಗತಿಗಳಲ್ಲಿ ನಾವು ಸಮೂಹ ಮಾಧ್ಯಮಗಳನ್ನು ಜನಪದ ಮಾಧ್ಯಮ, ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಎಂಬುದಾಗಿ ವಿಂಗಡಿಸುತ್ತೇವೆ. ನಮ್ಮ ಜನಪದರ ಎಲ್ಲ ಕಲೆಗಳೂ ಜನಪದ ಮಾಧ್ಯಮಗಳೇ. ದಿನಪತ್ರಿಕೆ, ನಿಯತಕಾಲಿಕೆ, ಪೋಸ್ಟರು, ಕರಪತ್ರಗಳು ಇವೆಲ್ಲ ಮುದ್ರಣ ಮಾಧ್ಯಮ ಪ್ರಕಾರಗಳು. ರೇಡಿಯೋ ಟಿವಿ, ಸಿನಿಮಾ, ವಿಡಿಯೋ ಇವೆಲ್ಲ ಎಲೆಕ್ಟ್ರಾನಿಕ್ ಮಾದ್ಯಮಗಳು ಎಂಬುದಾಗಿ ವಿಂಗಡಿಸುವ ಸಂಪ್ರದಾಯವಿದೆ. ತಮಾಷೆಯೆಂದರೆ ನಾನು ಪತ್ರಿಕೋದ್ಯಮ ಓದುವ ಕಾಲಕ್ಕೆ ಜನಪದ ಮಾಧ್ಯಮಗಳನ್ನು ಹಳೆಯ ಮಾಧ್ಯಗಳೆಂದು ಅಂದರೆ ಸಾಂಪ್ರದಾಯಿಕ ಮಾಧ್ಯಮಗಳೆಂದು ಕರೆಯುತ್ತಿದ್ದರು ಹಾಗು ರೇಡಿಯೋ ಹಾಗೂ ಟಿವಿ ಹೊಸ ಮಾಧ್ಯಮಗಳೆನಿಸಿಕೊಂಡಿದ್ದವು. ಎಷ್ಟು ಬೇಗ ಕಾಲ ಬದಲಾಗಿದೆಯೆಂದರೆ…ಮೊನ್ನೆ ಪತ್ರಿಕೋದ್ಯಮ ಪುಸ್ತಕವೊಂದರಲ್ಲಿ ರೇಡಿಯೋ- ಟಿವಿಗಳನ್ನೇ ಸಾಂಪ್ರದಾಯಿಕ ಮಾಧ್ಯಮಗಳು ಎಂದು  ಕರೆಯುವುದನ್ನು ಗಮನಿಸಿದೆ. ರೇಡಿಯೋ -ಟಿವಿ ನಮ್ಮ ಸಾಂಪ್ರದಾಯಿಕ ಬದುಕಿನ ಭಾಗವೇ ಅಗಿರುವುದರಿಂದ ಇದರಲ್ಲಿ ವಿಶೇಷವೇನಿಲ್ಲ ಎನ್ನೊಣವೇ? ಆದರೆ ರೇಡಿಯೋ -ಟಿವಿಗಳೇ ಸಾಂಪ್ರದಾಯಿಕ ಮಾಧ್ಯಮಗಳಾದರೆ ನಮ್ಮ ಮೂಲ ಸಾಂಪ್ರದಾಯಿಕ ಮಾಧ್ಯಮಗಳನ್ನು ಏನೆಂದು ಕರೆಯುವುದು? ಜೊತೆಗೆ ಬದಲಾದ ಪರಿಸ್ಥಿತಿಯಲ್ಲಿ ಟಿವಿಗೂ ನಂತರದ ಮಾಧ್ಯಮವನ್ನು ಏನೆಂದು ಕರೆಯುವುದು?
ಅಲ್ಲಿರುವುದೇ ವಿಶೇಷ. ಈಚಿನ ದಿನಗಳಲ್ಲಿ ಇಂಟರ್ ನೆಟ್ ನಮ್ಮ ಬದುಕಿನಲ್ಲಿ ದೊಡ್ಡಪ್ರಮಾಣದಲ್ಲಿ ಪ್ರವೇಶಿಸಿದೆ. ನಮ್ಮ ಈವರೆಗಿನ ಎಲ್ಲ ಮಾಧ್ಯಮಗಳನ್ನು ಒಳಗೊಳ್ಳುವ ಹಾಗೂ ಅವುಗಳ ಸಾಧ್ಯತೆಗಳನ್ನು ವಿಸ್ತರಿಸುವ ಮಾಧ್ಯಮವಾಗಿ ಬೆಳೆದಿದೆ. ಇದು  ಬಹುಮಾಧ್ಯಮ ಸಂಯೋಗ. ಇಂಟರ್ನೆಟ್ ನಲ್ಲಿ ಪತ್ರಿಕೆಯಿದೆ,ರೇಡಿಯೊ,ಟಿವಿ,ವಿಡಿಯೊ ಸಿನಿಮಾ,ಪೋನು…… ಎಲ್ಲ ಇವೆ. ನನ್ನನ್ನು ದಿಗಿಲು ಗೊಳಿಸಿದ ಸಂಗತಿ ಅದಲ್ಲ. ಇಂಟರ್ ನೆಟ್ ಮೂಲವಾಗಿ ಹೊಸ ಮಾಧ್ಯಮವೊಂದು ಅವತರಿಸಿದೆ ಹಾಗೂ ಅದನ್ನು ‘ಸೋಷಿಯಲ್ ಮೀಡಿಯಾ’ ಎಂಬುದಾಗಿ ಕರೆಯಲಾಗುತ್ತದೆ. ‘ಸೋಷಿಯಲ್ ಮೀಡಿಯಾ’ ಎಂದು ಕರೆಸಿಕೊಳ್ಳುವ ಈ ಮಾಧ್ಯಮಗಳ ಪರಿಧಿಯಲ್ಲಿ ನಮ್ಮ ಈ ಮೇಲ್ ಗಳು,  ವೆಬ್ ಸೈಟುಗಳು, ಬ್ಲಾಗುಗಳು, ವ್ಲಾಗುಗಳು(!) ವೆಬ್ ಪೋರ್ಟಲುಗಳು ಚಾಟಿಂಗ್ ರೂಂಗಳು,ಇ-ಚಚರ್ಾವೇದಿಕೆಗಳು, ಸಚರ್್ ಎಂಜಿನ್ಗಳು, ಆನ್ ಲೈನ್ ಆಟಗಳು, ಐಪಾಡುಗಳು, ಫೇಸ್ ಬುಕ್ ಆದಿಯಾಗಿ ಸೊಷಿಯಲ್ ಮೀಡಿಯಾ ನೆಟ್ ವಕರ್್ಗಳು ಸೇರಿವೆ. ಮೂಲತಃ ವೆಬ್ ಭಿತ್ತಿಯ ಮೇಲೆ ಜನರನ್ನು ಒಂದುಗೂಡಿಸುವ, ಪರಸ್ಪರ ಸಂಪರ್ಕದಲ್ಲಿರಲು ಅವಕಾಶನೀಡುವ, ಡಿಜಿಟಲ್ ಜಗತ್ತಿನ ನಿಮರ್ಾಣ, ಸೊಷಿಯಲ್ ಮೀಡಿಯಾದ ಕೊಡುಗೆ ಎನ್ನಬಹುದು.
ಅಂತಾರಾಷ್ಟ್ರೀಯವಾಗಿ ‘ಸೋಷಿಯಲ್ ಮೀಡಿಯಾ’ ಎಂಬುದು ಇತ್ತೀಚಿನ ಬೆಳವಣಿಗೆ. ವೆಬ್ ಜಗತ್ತಿನ ಅವತಾರವಾಗಿ ಹತ್ತಾರು ವರ್ಷಗಳು ಸಂದಿದ್ದರೂ 2007ರ ಹೊತ್ತಿಗಷ್ಟೇ ಇಂಟರ್ ನೆಟ್ ಆಧಾರಿತ ಈ ಮಾಧ್ಯಮವನ್ನು ಸಾಮಾಜಿಕ ಮಾಧ್ಯಮ ಅಥವಾ ಸೋಷಿಯಲ್ ಮೀಡಿಯಾ ಎಂದು ಕರೆಯಲಾಗಿದ್ದು ಪೂರ್ಣಪ್ರಮಾಣದ ವ್ಯಾಖ್ಯಾನವಿನ್ನೂ ಹೊರಬರಬೇಕಿದೆ.
ಸೋಷಿಯಲ್ ಮೀಡಿಯಾ ಎಂದು ಕರೆಯಲಾಗುವ ಈ ಹೊಸ ಮಾಧ್ಯಮ ಕೇವಲ ಹತ್ತು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಎಷ್ಟು ಬೃಹತ್ತಾಗಿ ಬೆಳೆದಿದೆ ಎಂಬುದನ್ನು ಊಹಿಸಲಾಗದು. ಹಿಂದೆ ಒಂದು ಮನೆಗೆ ಎರಡು ಮೂರು ಪತ್ರಿಕೆಗಳು, ಮೂರು ರೂಮಿಗೆ ಮೂರು ಟಿವಿಗಳೂ ಇರುವುದು ವಿಶೇಷವೆನಿಸುತ್ತಿತ್ತು. ಈಗ ಗಮನಿಸಿದರೆ ಒಂದೇ ಮನೆಯಲ್ಲಿ ಅಪ್ಪನದೊಂದು ಬ್ಲಾಗು, ಅಮ್ಮನದೊಂದು ಬ್ಲಾಗು, ಮಕ್ಕಳದೊಂದು ಬ್ಲಾಗು ಪ್ರಕಟಗೊಳ್ಳುವ ದಿನಗಳಲ್ಲಿ ನಾವಿದ್ದೇವೆ. ಸಾಕಷ್ಟು ಸಂಖ್ಯೆಯಲ್ಲಿ ಗೃಹಿಣಿಯರೂ ತಂತಮ್ಮ ಬ್ಲಾಗುಗಳನ್ನು ಹೊಂದಿ ತಮಗೆ ಅನಿಸಿದ್ದನ್ನೆಲ್ಲ ಅಲ್ಲಿ ಬರೆದುಕೊಳ್ಳುವ ಪರಿಪಾಠ ಆರಂಭಿಸಿದ್ದಾರೆ. ತಮ್ಮ ಆಪ್ತರುಗಳ ಮಧ್ಯೆ  ಓದಲ್ಪಡುವ ಈ ಬ್ಲಾಗುಗಳು  ಭಾರೀ ಚಚರ್ೆಗೆ ಗ್ರಾಸ ಒದಗಿಸುತ್ತವೆ. ಆಕರ್ುಟ್ – ಅಂತರ ಜಾಲದಲ್ಲಿ ಜನರನ್ನು ಬೆಸೆಯುವ ವೇದಿಕೆಯಾಗಿದೆ. ಕನ್ನಡದಲ್ಲೂ ಈಗ ಸಾವಿರಾರು ಮಂದಿ ಬ್ಲಾಗ್ ಬರಹಗಾರರಿದ್ದಾರೆ. ನೆಟಿಜನ್ ಗಳು ಎಂದು ಕರೆಯಲಾಗುವ ನೆಟ್ ಗ್ರಾಹಕರ ನಡುವೆ  ಭಾರೀ ಚಚರ್ೆಗಳು, ಸುದ್ದಿಗಳು ವಿನಿಮಯವಾಗುತ್ತವೆ.ಕೇಂದ್ರ ಮಂತ್ರಿ ಶಶಿ ತರೂರ್ ಟ್ವಿಟರ್ ನಲ್ಲಿ ಬರೆದುದು ಈಚೆಗೆ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಅಂದರೆ ಸಾಹಿತಿಗಳು, ರಾಜಕಾರಣಿಗಳು, ವಿದ್ಯಾಥರ್ಿಗಳು, ಸಮಾಜದ ಎಲ್ಲ ವರ್ಗಗಳ ಜನರನ್ನೂ ತಲುಪುವ ಹೊಸ ಮಾಧ್ಯಮವಾಗಿ ಸೋಷಿಯಲ್ ಮೀಡಿಯಾ ಪ್ರವೇಶವಾಗಿರುವುದನ್ನು ಗಮನಿಸಬೇಕು.
ಹಿಂದಿನ ಮಾಧ್ಯಮಗಳಿಗೂ ಈ ಹೊಸ ಮಾಧ್ಯಮಕ್ಕೂ ಅನೇಕ ವ್ಯತ್ಯಾಸಗಳಿವೆ. ಹಿಂದೆ ಪತ್ರಿಕೆಗಳು ಸಂಪಾದಕ ಕೇಂದ್ರಿತವಾಗುತ್ತಿದ್ದವು. ಸೊಷಿಯಲ್ ಮೀಡಿಯಾ, ಪ್ರೇಕ್ಷಕ ಅಥವಾ ಶೋತೃ ಕೇಂದ್ರಿತ ಎನ್ನುತ್ತಾರೆ. ನಾವು ಸಮೂಹ ಮಾಧ್ಯಮವೆಂದು ಕರೆದ ಮಾಧ್ಯಮಗಳು ಸಂವಹನಕಾರ ಕೇಂದ್ರಿತವಾಗಿರುತ್ತಿದ್ದವು. ಇದರಲ್ಲಿ ಪ್ರತಿಕ್ರಿಯಗಳು ನಿಧಾನ ಅಥವಾ ಇರುತ್ತಿರಲಿಲ್ಲ. ಒಮ್ಮೆ ಪ್ರಕಟಗೊಂಡಿದ್ದನ್ನು ವಾಪಸ್ಸುಪಡೆಯುವಂತಿರಲಿಲ್ಲ. ಮಾಡಿದ ತಪ್ಪಿಗೆ ಪರಿಹಾರವಿರಲಿಲ್ಲ. ಆದರೆ ಇಂದಿನ ಸೋಷಿಯಲ್ ಮೀಡಿಯಾ  ಬಲಕೆದಾರ ಅಥವಾ ವಾಚಕ ಪ್ರಣೀತ. ಅವನ ಪ್ರತಿಕ್ರಿಯೆಗೆ ಅವಕಾಶ. ಪ್ರಕಟಿತ ಬರಹವನ್ನೋ ಕಾರ್ಯಕ್ರಮವನ್ನೋ ತಪ್ಪೆಂದು ಕಂಡರೆ ವಾಪಸ್ಸು ಪಡೆಯಬಹುದು. ತಿದ್ದಬಹುದು. ಜನ ಸಂಪಾದಕರ ಹಂಗಿಗೆ ಒಳಪಡದೆ ಪ್ರತಿಕ್ರಯಿಸಬಹುದು. ಪತ್ರಿಕೆಗಳಲ್ಲಿ ಈ ಅವಕಾಶವಿಲ್ಲ ಎಂಬುದನ್ನು ಗಮನಿಸಿ. ಈ ಮಾಧ್ಯಮದ ವಿಶೇಷವೆಂದರೆ  ಯಾರೂ ಬೇಕಾದರೂ ಬ್ಲಾಗು ಹೊಂದಬಹುದು. ಬರೆಯಬಹುದು, ತಮ್ಮ ಚಿತ್ರಗಳನ್ನೋ, ನೋವು ನಲಿವುಗಳನ್ನೋ ಪೋಸ್ಟ್ ಮಾಡಬಹುದು( ಇದು ಹೊಸ ಮಾಧ್ಯಮದ ಪರಿಭಾಷೆ!) ಅದಕ್ಕೇ ಇದನ್ನು ಅತ್ಯಂತ ಪ್ರಜಾಸತ್ತಾತ್ಮಕ, ಹಾಗೂ ವಿಕೇಂದ್ರಿತ ಎಂದೆಲ್ಲಾ ಹೊಗಳಲಾಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಆಗಲೇ ಸಾಕಷ್ಟು ಜನಪ್ರಿಯವಾಗಿ, ಹಿಂದಿನ ಮಾಧ್ಯಗಳು ಮಾಡುತ್ತಿದ್ದ ಕೆಲಸಗಳೆಲ್ಲವನ್ನೂ ಇನ್ನೂ ಪ್ರಬಲವಾಗಿ ಮಾಡುತ್ತಿರುವ ಈ ಹೊಸ ಮಾಧ್ಯಮ, ಬಾರತದಲ್ಲೂ ತೀವ್ರ ವೇಗದಲ್ಲಿ ಬೆಳೆಯುತ್ತಿದೆ. ಇದು ಇಂಟರ್ ನೆಟ್ ಮೇಲೆ ಅವಲಂಬಿತವಾದ ಮಾಧ್ಯಮವಾದ್ದರಿಂದ ಹಳ್ಳಿಗಳಲ್ಲಿ ತಮ್ಮ ಇರುವನ್ನು ಸಾಬೀತುಗೊಳಿಸಲು ಇನ್ನೂ ಕೆಲಕಾಲ ಬೇಕಾಗಬಹುದು. ಆದರೆ ಪಟ್ಟಣಿಗರು ಈಗ ವೇಗವಾಗಿ ನೆಟ್ ಮಾಧ್ಯಮದ ಬಳಕೆದಾರರಾಗಿದ್ದಾರೆ.
ನನ್ನ ಪ್ರಶ್ನೆ ಅದಲ್ಲ. ಪತ್ರಿಕೆ, ರೇಡಿಯೋ ಟಿವಿ ಮುಂತಾದ ಜನಪ್ರಿಯ ಮಾಧ್ಯಮಗಳನ್ನು ಇಂಗ್ಲಿಷಿನ ‘ಮಾಸ್ ಮೀಡಿಯಾ’ ಎಂಬ ಪದಕ್ಕೆ ಸಾಟಿಯಾಗಿ ಸಮೂಹ ಮಾಧ್ಯಮಗಳು ಎಂದು ಕನ್ನಡದಲ್ಲಿ ಕರೆದೆವು. ಆಗ ಈ ಸೋಷಿಯಲ್ ಮೀಡಿಯಾದ ಪ್ರಶ್ನೆ ಇರಲಿಲ್ಲ. ಆದರೆ ಈಗ ಸೋಷಿಯಲ್ ಮೀಡಿಯಾ ಪ್ರಬಲವಾಗಿ ಬೆಳೆಯುತ್ತಿದೆ. ಕನ್ನಡದಲ್ಲಿ ಅದನ್ನು ಏನೆಂದು ಕರೆಯುವುದು? ಸಮಾಜ ಮಾಧ್ಯಮವೆಂದೋ ಸಾಮಾಜಿಕ ಮಾಧ್ಯಮವೆಂದೋ  ಭಾಷಾಂತರಿಸಿದರೆ ಈಗಾಗಲೇ ಇರುವ ಸಮೂಹ ಮಾಧ್ಯಗಳೊಟ್ಟಿಗೆ ಗೊಂದಲವಾಗದೇ? ಆಗ ಸಮೂಹ ಮಾಧ್ಯಮಕ್ಕೂ ಸಾಮಾಜಿಕ ಮಾಧ್ಯಮಕ್ಕೂ ಇರುವ ವ್ಯತ್ಯಾಸವನ್ನು ಎಲ್ಲರೂ ಗುರುತಿಸಬಹುದೆ? ಈ ಹೊಸ ಮಾಧ್ಯಮ ಸಮೂಹ ಮಾಧ್ಯಮದ ಒಳಗೋ- ಹೊರಗೋ? ಅಲ್ಲದೇ ಕನ್ನಡದ ಸಂದರ್ಭದಲ್ಲಿ ಈ ಮಾಧ್ಯಗಳಿಗೆ ಹೊಸ ನಾಮಕರಣವಾಗಬೇಕೆ ಅಥವಾ ಮಡಿವಂತಿಕೆ ಬಿಟ್ಟು ‘ಸೋಷಿಯಲ್ ಮೀಡಿಯಾ’ ಎಂದರೆ  ಸಾಕೆ ಎಂಬುದು ಚಚರ್ೆಯಾಗಲಿ.

‍ಲೇಖಕರು avadhi

10 February, 2010

2 Comments

  1. Tharakeshwar V.B.

    social media ende kareyalu yaava hedarikeyu beda, haagoo kannadikarisale beku endare Apta saamajika maadyamagalu ennabahudu.

  2. Vasanth

    Social media is used in different term such as “Media studies”, computer mediated communications, mediated communications, ” New media” etc. Simply “Media studies” can be used in Kannada (madayamagalla Adhayana) Which encompasses all forms of media.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading