ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಬೀದಿಯ ತುಂಬೆಲ್ಲ ಬರೀ ಕಲ್ಲುಮುಳ್ಳುಗಳೇ..

rukmini nagannavar

ರುಕ್ಮಿಣಿ ನಾಗಣ್ಣವರ

ಈ ಬೀದಿಯ ತುಂಬೆಲ್ಲ
ಬರೀ ಕಲ್ಲುಮುಳ್ಳುಗಳೇ.
ಈ ದಾರಿಗುಂಟ ನಡೆಯುವ
ಅವರೆಲ್ಲರದೂ ಒಂದೇ ಸ್ಥಿತಿ;
ಕುಂಟುತ್ತ, ಎಡವುತ್ತ,
ತೆವಳುತ್ತ ನಡೆಯುವುದು…

heಅದೆಷ್ಟೋ ಯುಗಗಳು
ಉರುಳಿ ಹೋದವು
ಹೀಗೆಯೇ
ಈಗಿದ್ದ ಹಾಗೆಯೇ…

ಒಂದಷ್ಟು ಬದಲಾವಣೆಗಳೂ
ಆದವು.
ಮಹಾ ಏನಿಲ್ಲ
ಕೆಂಪು ಮುಸುಡಿಗಳಿಲ್ಲ
ಅಷ್ಟೇ…

ಬರಿಗಾಲ ಬಡಪಾಯಿಗಳ
ನೆತ್ತರು ಹೀರಿ ಹೀರಿ ನಾಕಾಳಿಗೂ ತಲಾ
ನಾಲ್ಕರ ನಾಕೆಂಬ ತಾರಸಿ ಮನೆಯೊಳಗೆ
ಬೆಚ್ಚಗೆ ಕುಳಿತಿವೆ ರಕ್ತ ಪಿಪಾಸುಗಳು
ಊರೂರಿನ ಗಲ್ಲಿಗಲ್ಲಿಗಳಲ್ಲಿ.

ಬಡತನದ ರೇಖೆಗಿಂತ
ಕೆಳಗಿರುವವರಲ್ಲಿ;
ಬಡತನವೇ ಹಾಸು ಹೊಕ್ಕ ವರದಿ…

ನೂರಾರು ಸರ್ವೆಗಳು,
ಸಾವಿರಾರು ಪ್ರಾಜೆಕ್ಟುಗಳು, ಲಕ್ಷಾಂತರ
ಪ್ರೊಪೋಸಲ್ಗಳಿಗೆ ಪ್ರವಾಹೋಪಾದಿಯಲ್ಲಿ
ಹರಿದು ಬರುವ ಡೋನರ್ಗಳ
ಬಿಲಿಯನ್ ಲೆಕ್ಕದ ಗಂಟಿನ ಮೂಟೆಗಳು…

ಆದರೂ, ಈ ಬೀದಿಯ ತುಂಬೆಲ್ಲ
ಬರೀ ಕಲ್ಲುಮುಳ್ಳುಗಳೇ.
ಈ ದಾರಿಗುಂಟ ನಡೆಯುವ
ಅವರೆಲ್ಲರದೂ ಇನ್ನೂ ಅದೇ ಸ್ಥಿತಿ;
ಕುಂಟುತ್ತ, ಎಡವುತ್ತ,
ತೆವಳುತ್ತ ನಡೆಯುವುದು…

‍ಲೇಖಕರು Admin

27 August, 2016

* | Avadhi

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading