ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಪುಸ್ತಕ ಓದಿದರೆ ಗಟ್ಟಿಗಿತ್ತಿಯರಾಗ್ತೀವಿ..

 

ಗಟ್ಟಿಗಿತ್ತಿಯರಾಗ್ತೀವಿ..

ನನ್ನ ತುದಿ ಬೆರಳು ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’ 24 ಪುಟ ತಿರುಗಿಸಿ, ಲಂಕೇಶರ ‘’ಪಾಪದ ಹೂಗಳು’’ ಎತ್ತಿಕೊಂಡಿದೆ.

ಆಧುನಿಕೋತ್ತರ ಬರಹಗಾರರಲ್ಲಿ ಸಾಕಷ್ಟು ಜನ ಪದ್ಯಗಳನ್ನು ಬರಿಯುತ್ತಿದ್ದರೂ ಐದು ವರ್ಷ ಬಿಟ್ಟು ಓದಿದರೆ ಯಾವುದೋ ದಿನದ ಡೈರಿ ಎನಿಸಿ, ಪದ್ಯದ ಸೂಕ್ಷ್ಮತೆ, ಗಂಭೀರತೆ, ಅಗಾದ ಅರ್ಥ ಮತ್ತು ನಿಗೂಢತೆ ಇಲ್ಲವಾಗುತ್ತವೆ.

ನಮ್ಮ ಬರಹವನ್ನ ನಾವೇ ಅನುಮಾನಿಸುವುದನ್ನ, ಮೇಸ್ಟ್ರು ಮತ್ತು ಪ್ರೊಫೆಸರ್ ಕಲಿಸುತ್ತಾರೆ. ಒಂದಷ್ಟು ಗಟ್ಟಿ ಅಕ್ಷರಗಳು ಉಳಿದು, ಶಾಶ್ವತ ಎನಿಸಿಕೊಳ್ಳುವ ಪ್ರಯತ್ನ ಮಾಡಬಹುದು.

-ಹರವು ಸ್ಫೂರ್ತಿ

children of the days cover

ನಿಮ್ಮ ಪ್ರಶ್ನೆ ಇನ್ಬಾಕ್ಸ್ ಗೆ ಬಂದು ಬೀಳುವ ಹೊತ್ತಿಗೆ ನಾನು ಮತ್ತೆ ಎಡ್ವರ್ಡೊ ಗೆಲಿಯಾನೋ ಬರೆದ ‘ಚಿಲ್ಡ್ರನ್ ಆಫ್ ದಿ ಡೇಸ್’ ಪುಸ್ತಕ ಕೈಗೆತ್ತಿಕೊಂಡಿದ್ದೇನೆ.

ವಾಸ್ತವವನ್ನು ಇಷ್ಟೊಂದು ಕಾವ್ಯಾತ್ಮಕವಾಗಿ ಗ್ರಹಿಸಿ ಇಲ್ಲಿನ ದೈನಂದಿನತೆ ಐಹಿಕದಲ್ಲಿ ಕಾಲಸತ್ಯವನ್ನು ಕಾಲಾತೀತ ಸತ್ಯವನ್ನು ಗುರುತಿಸಿ ಇತಿಹಾಸವನ್ನು ಕಾವ್ಯದಂತೆ ಬರೆಯುವ ಇಂಥಾ ಇನ್ನೊಬ್ಬ ಲೇಖಕನನ್ನು ನಾನು ನನ್ನ ಓದಿನ ಮಿತಿಯಲ್ಲಿ ಓದಿಲ್ಲ. ಮತ್ತೆ ಮತ್ತೆ ನಾನು ಓದುವ ಪುಸ್ತಕ ಇದಾಗಿದೆ.

-ಸಂವರ್ಥ ಸಾಹಿಲ್ 

alchemy of desireಮನಸೆಂಬ ಮಾಯದ ಕುದುರೆ…
ಮತ್ತೆ ಮತ್ತೆ ಸೆಳೆಯುವ ಪುಸ್ತಕ ‘ಅಲ್‍ಕೆಮಿ ಆಫ್‍ ಡಿಸೈರ್‍’ ಅನ್ನು ಮತ್ತೊಮ್ಮೆ ಓದಲು ಎತ್ತಿಕೊಂಡಿದ್ದೇನೆ. ಪತ್ರಕರ್ತ ತರುಣ್‍ ತೇಜ್‍ಪಾಲ್‍ (ತೆಹೆಲ್ಕಾ) ಬರೆದಿರುವ ಈ ಪುಸ್ತಕ ಅತ್ಯಂತ ಸೊಗಸಾಗಿ ಮೂಡಿಬಂದಿದೆ.
ವಿವಿಧ ಕಾಲಘಟ್ಟಗಳಲ್ಲಿ, ದೇಶಗಳಲ್ಲಿ, ಪ್ರೇಮ-ಕಾಮಗಳ ನಡುವೆ ಏರಿಳಿಯುತ್ತ ಮನಸ್ಸಿನ ಹಲವು ಮಗ್ಗಲುಗಳನ್ನು ತೆರೆದಿಡುತ್ತದೆ. ಕೊನೆಗೆ ಗೆಲ್ಲುವುದು ಕಾಮದಲ್ಲರಳಿದ ಪ್ರೀತಿಯೇ ಎಂಬುದನ್ನು ಅತ್ಯಂತ ಸೊಗಸಾಗಿ ನಿರೂಪಿಸಿದ್ದಾರೆ ತೇಜ್‍ಪಾಲ್.
ಅವರವರ ಭಾವಕ್ಕೆ ತಕ್ಕಂತೆ ವಿವಿಧ ಭಾವನೆಗಳನ್ನು ಮೂಡಿಸುವ ‘ಅಲ್‍ಕೆಮಿ ಆಫ್‍ ಡಿಸೈರ್’ ಬಹುಶಃ ಭಾರತೀಯ ಇಂಗ್ಲಿಷ್‍ನ ಸಾರ್ವಕಾಲಿಕ ಹತ್ತು ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ.
-ಚಾಮರಾಜ ಸವಡಿ 

 

‍ಲೇಖಕರು Admin

8 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading