ಈ ದೇಶದ ಮೊದಲ ಪದವೀಧರ ಹುಡುಗಿ, ಈ ದೇಶದ ಮೊದಲ ಲೇಡಿ ಡಾಕ್ಟರ್, 7 ಕಡಲು ದಾಟಿದ ಈ ದೇಶದ ಮೊದಲ ಹೆಣ್ಣು, ಶಾಲೆಗೆ ಹೋಗುವಾಗ ದಾರಿಹೋಕರಿಂದ ಮೈಮೇಲೆ ಸೆಗಣಿ ನೀರು ಎರಚಿಕೊಂಡವಳು… ಸ್ವಾಮಿ ವಿವೇಕಾನಂದರಿಗಿಂತಲೂ 15 ವರ್ಷ ಮುನ್ನ ಅಮೆರಿಕದಲ್ಲಿ ಭಾರತೀಯ ಸಂಸ್ಕೃತಿ ಪಸರಿಸಿದವಳು…
ಆನಂದಿಬಾಯಿ ಜೋಶಿ ಎಂಬ 150 ವರ್ಷ ಹಿಂದೆ ಬದುಕಿದ ದಿಟ್ಟೆಯ ಬಗ್ಗೆ ಕನ್ನಡದಲ್ಲಿ ಮೊದಲ ಜೀವನಕಥನ…
6 ವರ್ಷಗಳ ನನ್ನ ತಪಸ್ಸು…
ಶೀಘ್ರದಲ್ಲಿ ಬಿಡುಗಡೆಯಾಗುತ್ತದೆ..
ಮುಖಪುಟ- ಸೌಮ್ಯಾ ಪ್ರಭು ಕಲ್ಯಾಣ್ಕರ್
ಪಲ್ಲವ ಪ್ರಕಾಶನದ ಪ್ರಕಟಣೆ
-ಚಂದ್ರಶೇಖರ ಮಂಡೆಕೋಲು






ಆನಂದಿಬಾಯಿ….
ಅಬ್ಬಾ… ವೈಜ್ಞಾನಿಕ ಶಿಕ್ಷಣಕ್ಷೇತ್ರದಲ್ಲಿ ಮಾದರ್ರಿಯಾಗಬಲ್ಲ ಮಹಿಳೆ ಇವರು.
ಅಲ್ಲಲ್ಲಿ ಒಂದಿಷ್ಟು ಮಾಹಿತಿಯನ್ನು ಹಿಂದೊಮ್ಮೆ ಯಾವುದೋ ಸೆಮಿನಾರಿಗೆ ಸಂಗ್ರಹಿಸಿದ್ದ ನೆನಪಾಯಿತು..
ಆಕೆಯ ಕುರಿತು ಕನ್ನಡದಲ್ಲಿ ಜೀವನಕಥನ…ಗ್ರೇಟ್..
ಅಗತ್ಯವಾಗಿ ಬೇಕಿದ್ದ ಪುಸ್ತಕ.
ಅಭಿನಂದನೆಗಳು ಲೇಖಕರಿಗೆ ಮತ್ತು ಪ್ರಕಾಶಕರಿಗೆ.
abhinandanegalu pallava venkatesh..pustike odabeku…
ಭಾರತದ ಮೊದಲ ಮಹಿಳಾ ವೈದ್ಯೆ ಆನಂದಿ ಗೋಪಾಲ ಕುರಿತು ನಾನು ಸಂಯುಕ್ತ ಕರ್ನಾಟಕ 9-2-2003ನೇ ಸಂಚಿಕೆಯ ಸಾಪ್ತಾಹಿಕ ಪುರವಣಿಯ “ಸಬಲೆ” ಮಹಿಳಾ ಅಂಕಣದಲ್ಲಿ ಲೇಖನ ಬರೆದಿದ್ದೆ. 2002ರಲ್ಲಿ ಹೊಸಪೇಟೆ ಆಕಾಶವಾಣಿ ಎಫ್.ಎಮ್.ಕೇಂದ್ರದಲ್ಲಿ 16ನಿಮಿಷಗಳ ಭಾಷಣ ಪ್ರಸಾರವಾಗಿತ್ತು. ಇದೇ ಕೇಂದ್ರದಿಂದ 31-3-2017 ಆಕೆಯ ಜನ್ಮದಿನದಂದು ಬೆಳಗ್ಗೆ 5ನಿಮಿಷಗಳ ಚಿಂತನವೂ ಪ್ರಸಾರವಾಗಿದೆ. 2013ರಲ್ಲಿ ಬಳ್ಳಾರಿ-ಸುಭಾಸ್ ಭರಣಿ ವೇದಿಕೆಯ ಸಂಸ್ಕೃತಿ ಪ್ರಕಾಶನವು ಪ್ರಕಟಿಸಿದ ನಾನು ಬರೆದ “ವೈದ್ಯ ಸೇವಾ ಜ್ಯೋತಿಗಳು” ವ್ಯಕ್ತಿಚಿತ್ರಣಗಳ ಪುಸ್ತಕದಲ್ಲಿಯೂ ಆನಂದಿ ಬಾಯಿಯ ಲೇಖನ ಸೇರಿಸಿದ್ದೇನೆ. ಈಗ ಚಂದ್ರಶೇಖರ ಮಂಡೇಕೋಲು ಆಕೆಯ ಸಮಗ್ರ ಜೀವನ ಚರಿತ್ರೆ ಬೆಳಕಿಗೆ ಬರುತ್ತಿರುವುದು ಸಂತೋಷದ ವಿಷಯ. ಅದೂ ನನ್ನ ಆತ್ಮೀಯ ಮಿತ್ರ ಹೊಸಪೇಟೆ-ಕೆ.ವೆಂಕಟೇಶ ತಮ್ಮ ಪಲ್ಲವ ಪ್ರಕಾಶನದಲ್ಲಿ ಹೊರತರುತ್ತಿರುವುದು ಇನ್ನೂ ಹೆಮ್ಮೆಯ ಸಂಗತಿ. ಲೇಖಕ -ಪ್ರಕಾಶಕ ಇಬ್ಬರೂ ಅಭಿನಂದನಾರ್ಹರು.
-ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ