ಕರಾವಳಿಯಲ್ಲಿ ಮಹಿಷಾಸುರ, ರಾವಣ, ಕೌರವ, ವಾಲಿ… ಎಲ್ಲರೂ ನಮ್ಮವರೇ!

ರಾಜಾರಾಂ ತಲ್ಲೂರ್
ಬ್ಲಾಕ್ ಅಂಡ್ ವೈಟ್ ರಾಜಕಾರಣದ ದೊಡ್ಡ ಅಪಾಯವೇ ಇದು.
ಮೊನ್ನೆ ಸಂಸತ್ತಿನಲ್ಲಿ ಸಚಿವೆ ಸ್ಮ್ರತಿ ಇರಾನಿಯವರು “ತಾಕತ್ತಿದ್ದರೆ ಬಂಗಾಳದ ಬೀದಿಗಳಲ್ಲಿ ಮಹಿಷಾಸುರನ ದಿನಾಚರಣೆ ಮಾಡಿ” ಎಂದು ಬೆಂಗಾಲದ ಇಬ್ಬರು ಸಂಸದರನ್ನುದ್ದೇಶಿಸಿ ಚಾಲೆಂಜ್ ಮಾಡಿದರು.
ಅವರಿಗೆ ಗೊತ್ತಿಲ್ಲದ ಸಂಗತಿಯೊಂದಿದೆ.
ಕರಾವಳಿಯಲ್ಲಿ ಯಕ್ಷಗಾನ-ತಾಳಮದ್ದಲೆಗಳ ಸೀಸನ್ನಿನಲ್ಲಿ ಪ್ರತಿನಿತ್ಯವೂ ಬರಿಯ ಮಹಿಷಾಸುರನೇ ಏಕೆ ರಾವಣ, ವಾಲಿ, ಕೌರವ… ಹೀಗೆ “ನಿಮ್ಮ” ಪ್ರತಿಯೊಬ್ಬ “ವಿಲನ್” ಕೂಡ ಇಲ್ಲಿ ಜೀವಂತಗೊಳ್ಳುತ್ತಾರೆ ಮತ್ತು ನಮ್ಮೆಲ್ಲರ ಸಂಭ್ರಮದ ಭಾಗವಾಗುತ್ತಾರೆ.
ಅವರೆಲ್ಲ ಯಾಕೆ ಒಳ್ಳೆಯವರು ಕೂಡ ಹೌದು ಎಂಬ ಬಗ್ಗೆ ಇಲ್ಲಿನ ಹಳ್ಳಿ ಹಳ್ಳಿಗಳಲ್ಲಿ ನಿಮಗೆ ನೂರಾರು ಕಥೆಗಳು, ದ್ರಷ್ಟಾಂತ ಸಮೇತ ಸಿಗುತ್ತವೆ.
ಮನುಷ್ಯರನ್ನು ಮನುಷ್ಯರಂತೆ ನೋಡುವ ಬದಲು “ಒಂದೋ ನಮ್ಮವರು; ಇಲ್ಲವೇ ನಮ್ಮ ಶತ್ರುಗಳು” ಎಂಬ ಸರಳ ರೇಖೆಯ ನಿಲುವಿನ ತಳಹದಿಯೇ ಅತ್ಯಂತ ಅಪಾಯಕಾರಿ.
ಈ ದೇಶದ ಬದುಕು ನಿಮ್ಮ ಸೀರಿಯಲ್ಲುಗಳ “ಅತ್ತೆ-ಸೊಸೆಯರ” ಬದುಕಿನಷ್ಟು ಸರಳ ಸ್ಕ್ರಿಪ್ಟ್ ಅಲ್ಲ ಮದಾಮ್!





estu coorect example kottu barediddeeri sir. very good