ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಡಿಯಟ್, ನಿನ್ನ ಕಣ್ಣ ಈಜುವ ಮೀನು ನಾನು..

shivakumar mavali

ಶಿವಕುಮಾರ್ ಮಾವಲಿ 

ಆತ ಪರ್ವತದಷ್ಟು ಪ್ರೀತಿಸುತ್ತಾನೆ, ಆದರೆ ..

ಮದ್ದೂರು ಕಾಫಿ ಡೇ ಯಿಂದ ಕಾರ್ ನಲ್ಲಿ ಹೊರಬಿದ್ದ ‘ಮೋನಿಕಾ’ ಳನ್ನು ಅವಳ ಗೆಳತಿ ಕೇಳಿದಳು ” ಯಾಕೆ ಮನೋಜ್ ನಿಂದ ದೂರವಾಗಿಬಿಟ್ಟೆ.? ಆತ ತುಂಬಾ ಒಳ್ಳೆಯವನಂತೆಯೇ ಕಾಣಿಸ್ತಿದ್ನಲ್ಲ? ”

coffee4ಮೋನಿಕ ಹೇಳಿದಳು : ‘ ಆತ ಪರ್ವತದಷ್ಟು ಪ್ರೀತಿಸುತ್ತಾನೆ ಆದರೆ ಪುಡಿಗಾಸು ಸಂಪಾದಿಸುತ್ತಾನೆ’ ..

ಇತ್ತ ಮಂಡ್ಯದ ಕಡೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಕಿಟಕಿಯ ಪಕ್ಕ ಕೂತಿದ್ದ ಮನೋಜ್ ಅದೊಂದು ಪತ್ರ ಮಾತ್ರ ಅವಳಿಗೆ ಹಿಂತಿರುಗಿಸದೆ ತಂದಿದ್ದ.

ಅದರಲ್ಲಿನ ಈ ಎರಡು ಸಾಲುಗಳು ಅವನನ್ನು ಮತ್ತಷ್ಟು ಹಿಂಡಲಾರಂಭಿಸಿದವು : ‘ಪ್ರೀತಿಯಿಂದ ಪ್ರಾಣ ತಿನ್ನುವ ಈಡಿಯಟ್, ನಿನ್ನ ಕಣ್ಣ ಈಜುವ ಮೀನು ನಾನು ‘…

ಇನ್ನು ಈ ಪತ್ರಗಳು ಅವಶ್ಯವಿಲ್ಲ ಎಂದುಕೊಂಡವನೇ ಮೆಲ್ಲಗೆ ಆ ಪ್ರೇಮ ಪತ್ರವನ್ನು ಕಿಟಕಿಯಿಂದ ಹೊರಗೆಸೆದ. ಹಾಗೆಯೇ ತನ್ನ ಮನಸ್ಸಿನಿಂದ ಆ ಮೋನಿಕಾಳನ್ನೂ…

ಅತ್ತ ಕಾಫಿ ಡೇ ಯಲ್ಲಿ ” A lot can happen over a coffee ” ಎಂಬ ಟ್ಯಾಗ್ ಲೈನ್ ಹೊತ್ತ ಬೋರ್ಡ್ ಕಳಚಿಬಿತ್ತು…!
——————

‘ಕೊನೆಯ ಭೇಟಿ’ ಯಿಂದ

‍ಲೇಖಕರು Admin

3 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading