ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ಪಕ್ಕದಲ್ಲಿರುವ ನೀರಿನ ಹೂಜಿಯೂ ನೂರು ಮೈಲಿ…

–  ಬಶೀರ್ ಬಿ ಎಂ

ನಿನ್ನೆ ರಮ್ಜಾನ್ ಉಪವಾಸದ ಅತ್ತಾಳದ ರಾತ್ರಿ, ಎದ್ದು ಊಟ ಮುಗಿಸಿ ಮಲಗ ಬೇಕೆನ್ನುವಾಗ ಕಣ್ಣಿಗೆ ಬಿದ್ದುದು ಶೇಕ್ ಫರೀದ್ ಕುರಿತ ಪುಸ್ತಕ. ಈ ಹಿಂದೆ ಓದಿ ಇಟ್ಟ ಪುಸ್ತಕ ಇದು. ಪಂಜಾಬಿ ಸೂಫಿ ಕವಿ ಶೇಕ್ ಫರೀದ್ ಬರೆ ಮುಸ್ಲಿಮರಿಗೆ ಮಾತ್ರವಲ್ಲ ಸಿಕ್ಖರಿಗೂ ಪ್ರೀತಿ ಪಾತ್ರ. ಸಿಖ್ಖರ ಪವಿತ್ರ ಗ್ರಂಥ “ಗ್ರಂಥ ಸಾಹೀಬ್”ನ ಒಂದು ಭಾಗ ಶೇಕ್ ಫರೀದ್ ಅವರ ವಚನಗಳಾಗಿವೆ. ನಿನ್ನೆ ರಾತ್ರಿ ನಾನು ಓದಿದ ಕೆಲವು ಸಾಲುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

೧ ಫರೀದ್, ಈ ಚಿಕ್ಕ ಕಾಲುಗಳಿಂದ ಒಮ್ಮೆ ಮರುಭೂಮಿ, ಪರ್ವತಗಳಲ್ಲಿ ಅಲೆದಿದ್ದೆ, ಫರೀದ್ ಈಗ ಪಕ್ಕದಲ್ಲಿರುವ ನೀರಿನ ಹೂಜಿಯೂ ನೂರು ಮೈಲಿ ದೂರದಲ್ಲಿದೆ ೨ ಈ ಜಾಟ್ ರೈತ, ಫರೀದ್, ಬೇವು ಬಿತ್ತಿದ್ದಾನೆ, ಮಾವಿಗಾಗಿ ಕಾಯುತ್ತಾನೆ ಸುತ್ತ ಉಣ್ಣೆ ಹೊತ್ತು, ರೇಶಿಮೆ ಹೊದೆಯಲು ನಿರೀಕ್ಷಿಸುತ್ತಾನೆ. ೩ ಫರೀದ್, ನನ್ನ ಬಾಳಿನುದ್ದಕ್ಕೂ ತಲೆಯ ರುಮಾಲು ಮಣ್ಣಾಗದಿರಲಿ ಎಂದು ಒದ್ದಾಡಿದೆ ನನ್ನ ತಲೆಯೇ ಮಣ್ಣಲ್ಲಿ ಹೊರಳುತ್ತದೆ ಎಂದು ನನ್ನ ತಿಳಿಗೇಡಿ ಆತ್ಮಕ್ಕೆ ತಿಳಿದಿರಲಿಲ್ಲ ೪ ಸೀಕಲು ರೊಟ್ಟಿ ತಿಂದು ತಣ್ಣನೆ ನೀರು ಕುಡಿ, ಫರೀದ್ ಉಳಿದವರ ತುಪ್ಪದ ರೊಟ್ಟಿ ಕಡೆಗೆ ಹಂಬಲಿಸಿ ನೋಡಬೇಡ ೫ ನನ್ನ ದುಃಖದ ಹಾಸಿಗೆಗೆ ಶೋಕದ ತಂತಿಗಳಿವೆ, ಫರೀದ್ ವಿರಹವೇ ಹೊದ್ದು ಹಾಸುಗಳಾಗಿವೇ ಓ ದೊರೆ, ಈ ನನ್ನ ಬಾಳು ನೋಡು ೬ ಛತ್ರ ಚಾಮರದ ಕೆಳಗೆ ನಗಾರಿ ನೌಬತ್ತು ಹೊಡೆಸಿ ಕೊಂಡವರು ಬಾಗಿಲ ಮುಂದೆ ಕೊಂಬು ಕಹಳೆ ಕೂಗಿಸಿದವರು ವನ್ದಿಮಾಗಧರಿಂದ ಸ್ತುತಿ ಹಾಡಿಸಿದವರು ಈ ಎಲ್ಲರು ಅನಾಥರಂತೆ ನಿದ್ರಿಸಲು ಗೋಳಿಡುವ ಗೋರಿಗೆ ಹೋಗಿಬಿಟ್ಟರು, ಫರೀದ್ ೭ ಓ ಫರೀದ್, ಪ್ರಭುವಿನ ಸೇವೆ ಮಾಡು ಅನುಮಾನ ದೂರವಿಡು ದೇವರ ಮನುಷ್ಯರಿಗೆ ಮರಗಳಷ್ಟು ತಾಳ್ಮೆ ಬೇಕು ೮ ಲೋಕವೊಂದು ಸುಂದರ ತೋಟ, ಫರೀದ್ ಹಕ್ಕಿಗಳು ಹಾರಿಬಂದ ಅತಿಥಿಗಳು ವಿದಾಯಕ್ಕೆ ನೀನು ಸಿದ್ಧನಾಗು ಮುಜಾವಿನ ಕಹಳೆ ಮೊಳಗುತ್ತಿವೆ]]>

‍ಲೇಖಕರು G

31 July, 2012

2 Comments

  1. D.RAVI VARMA

    ಛತ್ರ ಚಾಮರದ ಕೆಳಗೆ
    ನಗಾರಿ ನೌಬತ್ತು ಹೊಡೆಸಿ ಕೊಂಡವರು
    ಬಾಗಿಲ ಮುಂದೆ ಕೊಂಬು ಕಹಳೆ ಕೂಗಿಸಿದವರು
    ವನ್ದಿಮಾಗಧರಿಂದ ಸ್ತುತಿ ಹಾಡಿಸಿದವರು
    ಈ ಎಲ್ಲರು
    ಅನಾಥರಂತೆ ನಿದ್ರಿಸಲು
    ಗೋಳಿಡುವ ಗೋರಿಗೆ ಹೋಗಿಬಿಟ್ಟರು, ಫರೀದ್……
    ತುಂಬಾ ಕಾವ್ಯಾತ್ಮಕ ಹಾಗು ಬದುಕಿನ ನಗ್ನ ಸತ್ಯವನ್ನು ಸಾರುವ ಈ ಸಾಲುಗಳು ಮನಮ್ಮುಟ್ಟಿ manatattuvantive … ಸೂಫಿ ಕಾವ್ಯವನ್ನು ಓದುವುದೇ ಒಂದು ವಿಸಿಸ್ಟ ಅನುಭವ , ಅವರ ಕಾವ್ಯದ ಬೇರುಗಳು ಬದುಕಿನ ಆಳದಲ್ಲಿ ಇಳಿದು, ಅವು ಓದುಗನನ್ನು ಕ್ಷಣಕಾಲ ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತವಲ್ಲವೇ …….ಸೂಫಿ ಕಾವ್ಯವನ್ನು ಓದಬೇಕಾಗಿದೆ .. ಮತ್ತೆ ,ಮತ್ತೆ. ಅನಿಸುತ್ತಿದೆ.
    ರವಿವರ್ಮ ಹೊಸಪೇಟೆ

  2. veda

    ನನ್ನ ಬಾಳಿನುದ್ದಕ್ಕೂ ತಲೆಯ ರುಮಾಲು
    ಮಣ್ಣಾಗದಿರಲಿ ಎಂದು ಒದ್ದಾಡಿದೆ
    ನನ್ನ ತಲೆಯೇ ಮಣ್ಣಲ್ಲಿ ಹೊರಳುತ್ತದೆ ಎಂದು
    ನನ್ನ ತಿಳಿಗೇಡಿ ಆತ್ಮಕ್ಕೆ ತಿಳಿದಿರಲಿಲ್ಲ
    Entha sundara salugalu.Bahala chennagi barediddiri Basheeravre

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading