ಗೋವರ್ಧನ ಗಿರಿಶ್ಯಾಮ್ ಅವರ ಫೇಸ್ ಬುಕ್ ಪೇಜ್ ನಲ್ಲಿ ಇದ್ದ ಬ್ರೆಕ್ಟ್ ನ ಪದ್ಯಗಳು
ಯಾಕೋ ಇಂದಿಗೆ ಹೆಚ್ಚು ಸೂಕ್ತ ಅನಿಸಿಹೋಯ್ತು

ಬ್ರೆಕ್ಟ್
ಕನ್ನಡಕ್ಕೆ: ಶಾ. ಬಾಲುರಾವ್
ತಾಯಿಯನ್ನು ಕುರಿತು ಹಾಡಿದ್ದು
…………………………..
ಮರಣ ಯಾತನೆ ಶುರುವಾಗುವ ಮೊದಲು ಅವಳ ಮುಖ ಹೇಗೆ ಕಾಣಿಸು-
ತ್ತಿತ್ತೆಂದು ನನಗೀಗ ನೆನಪಿಗೆ ಬರಲೊಲ್ಲದು. ಅವಳು ಆಯಾಸದಿಂದ ತನ್ನ ಬಡಕಲ ಹಣೆಯ ಮೇಲಿನ ಕಪ್ಪುಗೂದಲನ್ನು ಸರಿಪಡಿಸಿಕೊಳ್ಳುತ್ತಿದ್ದಾಗಿನ ಕೈಚಲನೆಯೊಂದು ಮಾತ್ರ ಈಗಲೂ ಕಣ್ಣಿಗೆ ಕಟ್ಟಿದೆ.
ಈಗ ಕಗ್ಗತ್ತಲ ಕಾಲ
—————————-
ಆ ಬೇರೊಂದು ನಗರದಲ್ಲಿ
ಈಗ ಕಗ್ಗತ್ತಲಕಾಲ
ಆದರೂ ನನ್ನ ಹೆಜ್ಜೆ ಹಗುರವಾಗಿದೆ
ಹಣೆ ಸುಕ್ಕುಗಟ್ಟಿಲ್ಲ.
ದೀರ್ಘಕಾಲ ಕೊರೆತಕ್ಕೊಗ್ಗಿದ ಮೀನಗಾರರಂತೆ
ಮನುಷ್ಯಜಾತಿ ಬಲು ಗಡುಸು,ದೃಢ
ಅದರೂ ಎದೆ ಮಿಡಿಯುವುದು ಬೇಗ
ಮತ್ತು ಸ್ನೇಹದ ನಗೆ ಮೃದು.
– ಮೂಲ:ಬ್ರೆಕ್ಟ್
-ಕನ್ನಡಕ್ಕೆ: ಶಾ. ಬಾಲುರಾವ್





0 Comments