ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇ-ಬುಕ್ ಬಗ್ಗೆ ಇನ್ನೂ ಒಂದಿಷ್ಟು

’ಅವಧಿ’ಯಲ್ಲಿ ’ಇ-ಬುಕ್ ಬೇಕಾ ಇ-ಬುಕ್’ ಎಂಬ ಲೇಖನ ಪ್ರಕಟವಾಗಿತ್ತು

ಅದಕ್ಕೆ ಬಿ ಆರ್ ಸತ್ಯ ನಾರಾಯಣ್ ಅವರು ಪ್ರತಿಕ್ರಯಿಸಿದ್ದಾರೆ, ಇ-ಬುಕ್ ಓದುಗರಿಗೆ ಇದು ಆಸಕ್ತಿ ಹುಟ್ಟಿಸಬಹುದು ಎಂದು ಅದನ್ನು ಇಲ್ಲಿ ಪ್ರಕಟಿಸಿದ್ದೇವೆ

***

ಸತ್ಯನಾರಾಯಣ

ಕನ್ನಡ ಈ-ಪುಸ್ತಕಗಳದ್ದೇ ಆದ ಒಂದು ವೆಬ್ ಸೈಟ್ ಬಂದಿದ್ದು ಒಳ್ಳೆಯದು. ಅಭಿನಂದನೆಗಳು. ಅದರಲ್ಲಿನ ಕೆಲವು ಸೇವೆಗಳು ಇನ್ನೂ ಆಕ್ಟಿವೇಟ್ ಆಗಿಲ್ಲ. ಮುಂದೆ ಸರಿಹೋಗಬಹುದು ಎಂದುಕೊಳ್ಳುತ್ತೇನೆ.
bookrix.com ಎಂಬ ಅಂತರ್ಜಾಲ ತಾಣವು ಈ-ಬುಕ್ ಸಿದ್ಧಪಡಿಸುವ ಅವಕಾಶವನ್ನು ಬರಹಗಾರರಿಗೇ ನೀಡಿದೆ. ಪ್ರಕಟಗೊಂಡ ಈ-ಪುಸ್ತಕಗಳನ್ನು, ಅಮೆಜಾನ್ ಒಳಗೊಂಡಂತೆ ಹತ್ತಕ್ಕೂ ಹೆಚ್ಚು ಮಾರಾಟ ಜಾಲಗಳಲ್ಲಿ ಮಾರಟಕ್ಕೂ ಅವಕಾಶ ಕಲ್ಪಿಸುತ್ತದೆ. ಅಲ್ಲಿ ಕನ್ನಡ ಪುಸ್ತಕಗಳನ್ನು ಪ್ರಕಟಿಸಬಹುದು. ಆದರೆ, ಭಾಷೆಯನ್ನು ಆಯ್ದುಕೊಳ್ಳುವಲ್ಲಿ ಕನ್ನಡಕ್ಕಿನ್ನೂ ಸ್ಥಾನ ಸಿಕ್ಕಿಲ್ಲ. ಆ ಸಂಬಂಧವಾಗಿ ನಾನು ಆ ಸಂಸ್ಥೆಗೆ ಈ ಮೇಲ್ ಕೂಡಾ ಕಳುಹಿಸಿದ್ದೇನೆ. ಮತ್ತಷ್ಟು ಒತ್ತಡಗಳು ಬಂದರೆ ಅದರಲ್ಲಿ ಕನ್ನಡ ಭಾಷೆಯ ಆಯ್ಕೆ ದೊರೆಯಬಹುದು.
ಇಂಗ್ಲಿಷ್ ಭಾಷೆಯನ್ನು ಆಯ್ದುಕೊಂಡೇ ಕನ್ನಡ ಪುಸ್ತಕವನ್ನು ಪ್ರಕಟಣೆಗೆ ಸಿದ್ಧಪಡಿಸಿ ಸಲ್ಲಿಸಿದ್ದೇನೆ. ಅದರ ವಿವರಗಳು:
http://www.bookrix.com/_ebook-dr-b-r-satyanarayana-kuvempu-kaavyayaana/
http://www.bookrix.com/_ebook-dr-b-r-satyanarayana-nanna-highschool-dinagalu/
http://www.bookrix.com/_ebook-dr-b-r-satyanarayana-mudi/
ಪರಿಶೀಲಿಸುವುದಾಗಿ ಉತ್ತರ ಬಂದಿದೆ.
bookrix.com ಅವರಂತೆ quillpad ನವರೂ ಈ-ಪುಸ್ತಕಗಳನ್ನು ಸಿದ್ಧಪಡಿಸಿ ಪ್ರಕಟಿಸುವ ಸೌಲಭ್ಯವನ್ನು ಒದಗಿಸಿದರೆ ಅನುಕೂಲ.
 

‍ಲೇಖಕರು G

22 August, 2014

1 Comment

  1. ನರೇಂದ್ರ ಪೈ

    ಈ ಮಾಹಿತಿಗಾಗಿ ಧನ್ಯವಾದಗಳು ಸರ್. ತಕ್ಷಣಕ್ಕೆ ಅಲ್ಲದಿದ್ದರೂ ಮುಂದೊಂದು ದಿನ ಪುಸ್ತಕಗಳೆಲ್ಲಾ ಲಭ್ಯವಾಗುವ ಮಾರ್ಗ ಇದೇ ಆಗುವುದರಲ್ಲಿ ಅನುಮಾನವಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading