
ಧನಂಜಯ ಕುಲಕರ್ಣಿ
ಸಾಗರದಿಂದ ಬರೋವಾಗ, ಜೋಗಕ್ಕಿಂತಲೂ ಹದಿಮೂರು ಕಿಲೋಮೀಟರ್ ಮೊದಲು ಒಂದು ಸಣ್ಣ ಜಂಕ್ಷನ್ ಸಿಗುತ್ತದೆ.
ಚೂರಿಕಟ್ಟೆ ಅಂತ ಅದರ ಹೆಸರು.
ಅಲ್ಲಿ ಎಡಕ್ಕೆ ತಿರುಗಿ ಮುಂದೆ ಹೋಗಿ ಹೊನ್ನೆಮರಡು ಹಾದಿ ಹಿಡಿದು ಹೋದರೆ ಒಂದು ಅದ್ಭುತವಾದ ನಿಸರ್ಗ ನಿರ್ಮಿತ ದ್ವೀಪ ನಿಮಗೆ ಸಿಗುತ್ತದೆ. ನನ್ನ ಜೊತೆಗೆ ಇರುವವರು ಅಲ್ಲಿನ ಉಸ್ತುವಾರಿ ನೋಡಿಕೋಳ್ಳುತ್ತಿರುವವರು.
ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಾಣಗೊಂಡ ಈ ದ್ವೀಪ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬಹುಶಃ ಯಾವುದೇ ನದಿಯ ತೀರ ಇಷ್ಟೊಂದು ಸ್ವಚ್ಛವಾಗಿದ್ದುದನ್ನು ನಾನು ಇದುವರೆಗೂ ಕಂಡಿಲ್ಲ! ಅದ್ಭುತವಾಗಿ ಇಂಗ್ಲೀಷ್ ಮಾತನಾಡುತ್ತ ನಮ್ಮನ್ನು ಹಸನ್ಮುಖದೊಂದಿಗೆ ಸ್ವಾಗತಿಸಿ, ನಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇವನ್ನೆಲ್ಲ ತಮ್ಮ ದಾಖಲಾತಿ ಪುಸ್ತಕದಲ್ಲಿ ಬರೆಯಿಸಿಕೊಂಡು, ನಮ್ಮನ್ನೆಲ್ಲ ತೆಪ್ಪದಲ್ಲಿ ಒಂದು ಪುಟ್ಟ ರೌಂಡಿಗೆ ಅಣಿಯಾಗಿಸಿದರು ಇವರು.
ತೆಪ್ಪದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಮಾತಿನ ಲಹರಿ ಮತ್ತೆ ಗರಿಗೆದರಿತು. ಪರಸ್ಪರ ಪರಿಚಯ ಮಾಡಿಕೊಳ್ಳುತ್ತಿಂದಂತೆಯೇ ನನಗೆ ಆಶ್ಚರ್ಯ ಕಾದಿತ್ತು. ಇವರ ಹೆಸರು ಡಾ. ಎಸ್.ಎಲ್.ಎನ್. ಸ್ವಾಮಿ.
ಕಲಿತದ್ದು ಇಂಜಿನಿಯರಿಂಗ್, ಪರಿಸರದ ಬಗ್ಗೆ ಅಪಾರ ಕಾಳಜಿ. ಉನ್ನತ ವ್ಯಾಸಂಗಕ್ಕಾಗಿ ಕೆನಡಾ ದೇಶಕ್ಕೆ ಹೋಗಿ ಬಂದವರು. ನಂತರ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪಿ.ಎಚ್.ಡಿ ಮಾಡಿದರು!! ಈಗ ಹೊನ್ನೆಮರಡುನಲ್ಲಿ ಅಡ್ವೆಂಚರಸ್ ಸ್ಪೋರ್ಟ್ಸ್ ತರಬೇತಿಯ ಮುಖ್ಯಸ್ಥರು!!! ಅವರಲ್ಲಿರುವ ವಿಷಯ ಭಂಡಾರಕ್ಕೆ ಮೈಮರೆತೆ ನಾನು.
ಹಾಗೇ ಮಾತನಾಡುತ್ತ ಅವರು ನನಗೆ ಎಷ್ಟು ಹತ್ತಿರದವರಾದರೆಂದರೆ , ಇವರು ಬೇರೆ ಯಾರೂ ಅಲ್ಲ ನಮ್ಮ Gn Mohan ಅವರ ಹಿರಿಯ ಸಹೋದರ!!
ನಿಜಕ್ಕೂ ಈ ಸಲದ ನನ್ನ ಪ್ರಯಾಣ ಅಗಾಧವಾದದ್ದನ್ನು ಕಲಿಸಿದೆ. ಅನುಭವದ ಮೂಟೆಯೇ ಜೊತೆಯಲ್ಲಿದೆ ಒಂದು ಪುಸ್ತಕಕ್ಕಾಗುವಷ್ಟು!!






ಎಂದುರೋಮಹಾನುಭಾವಲೈ
!WOW! Astonishing…Amazing… Nooraru Salaamu Swaamiyavarige…
Atyanta abhinandanegalu nimage-parichayisaddakke…