ಇವರು ಗಣೇಶ್ ದಾವಣಗೆರೆ.
ಹುಬ್ಬಳ್ಳಿಯ ಬಿ ವಿ ಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು. ಮೊನ್ನೆ ಬೆಂಗಳೂರಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಬಂದರು. ಅಷ್ಟೊಂದು ವೈವಿಧ್ಯಮಯ ಪುಸ್ತಕಗಳನ್ನು ನೋಡಿದಾಗ ಅವರಿಗೆ ಮೊದಲು ನೆನಪಿಗೆ ಬಂದದ್ದು ತಮ್ಮ ಕಾಲೇಜು. ನಾನು ಓದಿದ ಕಾಲೇಜಿಗೆ ನಾನೇನು ಕೊಟ್ಟಿದ್ದೇನೆ ಎಂದು ಪ್ರಶ್ನಿಸಿಕೊಂಡರು. ತಕ್ಷಣ ಪುಸ್ತಕದ ಅಂಗಳವಿಡೀ ಓಡಾಡಿ ೧೦ ಸಾವಿರ ರೂ ಬೆಲೆಯ ಪುಸ್ತಕ ಖರೀದಿಸಿಯೇಬಿಟ್ಟರು. ಹುಬ್ಬಳ್ಳಿಗೆ ತೆರಳಿ ತಮ್ಮ ಕಾಲೇಜಿನ ಲೈಬ್ರರಿಗಿತ್ತು ಬಂದಾಗಲೇ ಅವರಿಗೆ ತೃಪ್ತಿ.
ಈಗ ಹೇಳಿ ನಿಮ್ಮಲ್ಲಿ ಎಷ್ಟು ಜನ ನಿಮ್ಮ ಶಾಲಾ ಕಾಲೇಜುಗಳನ್ನು ನೆನಪಿಸಿಕೊಂದಿದ್ದೀರಿ??







A novel idea! Let it inspire the others.
ಗಣೇಶ್ ಅವರ ಕೆಲಸ ಮಾದರಿಯಾಗಿದೆ, ಆದರೆ ಭೂಮರೆಡ್ಡಿಯಂಥ ಕಾಲೇಜಿಗೆ ಕೊಡುವದರಲ್ಲಿ ಅರ್ಥವಿದೆಯಾ? ಇದರ ಬದಿಗೆ ಇರುವ ಜ್ಯಾಬಿನ್ ಕಾಲೇಜಿನಲ್ಲಿ ಒಳ್ಳೆಯ ಕನ್ನಡ ಗ್ರಂಥಗಳಿವೆ, ಆ ಕಪಾಟುಗಳಿಗೆ ಇರುವ ಕೀಲಿಗಳಿಗೆ ಕೈಗಳಿವೆಯೋ ಗೊತ್ತಿಲ್ಲ, ಒಮ್ಮೆಯೂ ಒದಲು ಅವು ನಮಗೆ ಸಿಗಲಿಲ್ಲ.. ಭೂಮರೆಡ್ಡಿಯಲ್ಲಿ ನಾವಿದ್ದಾಗ ಈ ಹೊಸ ಗ್ರಂಥಾಲಯ ಇರಲಿಲ್ಲ, ವಿದ್ಯಾರ್ಥಿಗಳು ಒದುವ ಹಂಬಲ ತೋರಿದಾಗ ಗ್ರಂಥಪಾಲಕರು ಕೊಡುವ ಕೃಪೆ ತೋರಿದರೆ ಗಣೇಶರ ಶ್ರಮ ಮತ್ತು ಉದಾರತೆಗೊಂದು ಬೆಲೆ.