ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಇವನು ಕುಂಟನಲ್ಲ…. ಅವಳು ನಡೆಯಲಾರಳು’

ಅವಳು ನಕ್ಕರೆ ದೂದ್ ಸಾಗರ್

ಹುಸೇನ್ ಪಾಷಾ

ಅವಳು ಪೊಲೀಯೊ ಪೀಡಿತ ಕಾಲುಗಳೊಂದಿಗೆ ಮಗುವಿನಂತೆ ತೆವಳುತ್ತ ನಡೆಯುವವಳು. ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಸ್ವಾಭಿಮಾನಿ. ಅವನು ರಿಯಾಲಿಟಿ ಷೋ ನಂತಹ ಹುಡುಗಾಟಿಕೆಗೆ ಹೋಗಿ ಚಾಲೆಂಜ್ ಗೆಲ್ಲಲು ರೈಲಿನಲ್ಲಿ ಕಾಲಿಲ್ಲದವನಂತೆ ನಟಿಸುತ್ತ ಭಿಕ್ಷೆ ಬೇಡಲು ಹೋಗಿ ಅವಳಿಗೆ ಮರುಳಾದವನು. ಅವಳಿಗಾಗಿ ಅದೇ ನಟನೆ ಮುಂದುವರೆಸಿದವನು.

ಅವಳು ನಕ್ಕರೆ ದೂದ್ ಸಾಗರ್. ಅಂತಹ ಸುಂದರಿ ಅವಳು. ಆದರೆ…

ಅವಳ ಸೌಂದರ್ಯಕ್ಕಿಂತ ಅವಳ ಒಳ್ಳೆಯ ಮನಸ್ಸಿಗೆ ಬೋಲ್ಡ್ ಆಗಿ ಪ್ರೀತಿಸುತ್ತಾನೆ. ಒಂದಿನ ಇಬ್ಬರಿಗೂ ಗೊತ್ತಾಗುತ್ತದೆ.ಇವನು ಕುಂಟನಲ್ಲ. ಅವಳು ನಡೆಯಲಾರಳು. ಇಬ್ಬರಿಗೂ ಶಾಕ್.

ಕೂಡಿ ಬದುಕುವ ಆಸೆಯಿಂದ ಇಬ್ಬರು ಬೆಂಗಳೂರಿಗೆ ಬರುತ್ತಾರೆ. ಅವನು ಅವಳಿಗೊಂದು ಕೆಲಸ ಹುಡುಕಿ ಕೆಲಸದ ಕಚೇರಿಗೆ ಅಕ್ಷರಶ ತಂದೆಯಂತೆ ಅವಳನ್ನು ಎತ್ತಿಕೊಂಡು ಹೋಗುವುದು,ಕರೆದುಕೊಂಡು ಬರುವುದು ಮಾಡುತ್ತಾನೆ ಅವನು.ಮನೆಯಲ್ಲಿಯೂ ಹಾಗೇನೆ. ಅವಳು ಬಸುರಿಯಾದರೆ ಎಷ್ಟೋಂದು ಕಷ್ಟ ಪಡುತ್ತಾಳೊ ಅಂತ ಅವಳೊಂದಿಗೆ ದೈಹಿಕ ಸಂಪರ್ಕ ಕೂಡ ಇಟ್ಟುಕೊಳ್ಳದವನು .ಅವಳ ಕಾಲುಗಳಿಗೆ ಶಕ್ತಿ ಬರಬೇಕು ಅವಳು ಕಾಲುಗಳಿಂದ ಓಡಾಡುತ್ತ ನಲಿಯಬೇಕು ಅಂತ ಆಸೆ ಪಡುವ ಅವನು ವೈದ್ಯರಲ್ಲಿಗೆ ಕರೆದೊಯ್ಯುತ್ತಾನೆ.ಅದೇ ಅವರ ಬಾಳಿಗೆ ದೊಡ್ಡ ಕಂಟಕವಾಗುತ್ತದೆ.ಕೊಲೆಯೊಂದು ಮಾಡುತ್ತಾನೆ ಅವನು.ಯಾರಿಗಾಗಿ ಯಾಕಾಗಿ ಅದನ್ನು ನೀವು ಸಿನಿಮಾದಲ್ಲಿಯೆ ನೋಡಬೇಕು.

ಸಿನಿಮಾದ ಕೊನೆಗೆ ಕೆಂಗೆರಿ ರೈಲು ಸ್ಟೇಶನ್ ನಲ್ಲಿ ಅವನಿಗಾಗಿ ಕಾಯುತ್ತಾರೆ ಪೊಲೀಸರು.ಅಲ್ಲಿಗೆ ಬರುವ ಅವನನ್ನು ಕಂಡು ಅವಳು ತಂದೆಯನ್ನು ಕಂಡ ಮಗುವಿನಂತೆ ಖುಷಿಯಿಂದ ಅಂಬೆಗಾಲಿನಲ್ಲಿ ತೆವಳುತ್ತ ಬರುವ ದೃಶ್ಯ ಎಷ್ಟೊಂದು ಸೊಗಸಾಗಿದೆಯೆಂದರೆ ಅದನ್ನು ನೀವು ಸಿನಿಮಾ ನೋಡಿಯೇ ಅನುಭವಿಸಬೇಕು. ಇದು ಮೈನಾ ಸಿನಿಮಾ ನಾನು ನೋಡಿದಾಗ ನನಗನ್ನಿಸಿದ್ದು.

ನಾಯಕನಾಗಿ ಆ ದಿನಗಳು ಖ್ಯಾತಿಯ ಚೇತನ್, ನಾಯಕಿಯಾಗಿ ನಿತ್ಯಾ ಮೆನನ್ ನಟಿಸಿದ್ದಾರೆ.ಸಿನಿಮಾದಲ್ಲಿ ಬರುವ ದೂದ್ ಸಾಗರ್, ಅದರ ಸುತ್ತಲಿನ ಹಸಿರು,ರೈಲು ಎಲ್ಲವೂ ಪಾತ್ರವಾಗಿಬಿಟ್ಟಿವೆ. ಒಮ್ಮೆ ಈ ಸಿನಿಮಾ ನೋಡಿದರೆ ನಿಮ್ಮ ಹಣ, ನಿಮ್ಮ ಸಮಯ ವ್ಯರ್ಥವಲ್ಲ ಅಂತ ನನ್ನ ಅನಿಸಿಕೆ

 

‍ಲೇಖಕರು avadhi

10 April, 2013

2 Comments

  1. ಕೆ.ಎಂ.ವಿಶ್ವನಾಥ

    ತುಂಬಾ ಉತ್ತಮವಾದ ಲೇಖನ ಅವಶ್ಯಕವಾಗಿ ಓದಲೇಬೇಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading