ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿರುವ ಅದಷ್ಟೂ ಜನ ಅಪರಿಚಿತರು ಎಂದರೆ ನೀವು ನಂಬುತ್ತೀರಾ?

ಕಾವ್ಯ ಪುನೀತ್

——

ನಿಜ ಹೇಳಿ.. ಒಮ್ಮೆ ರೋಮಾಂಚನಗೊಂಡಿರಿ ತಾನೇ?

ಈ ಬಣ್ಣದ ಗುಂಪು ನಿಮ್ಮನ್ನ ಸೆಳೆಯುತ್ತಿಲ್ಲವಾ..

ಇಲ್ಲಿರುವ ಅದಷ್ಟೂ ಜನ ಅಪರಿಚಿತರು ಎಂದರೆ ನೀವು ನಂಬುತ್ತೀರಾ?

“ಅಪರಿಚಿತ ಓದುಗರು..” ಈ ಪರಿಕಲ್ಪನೆಯೇ ಸೊಗಸು.

ಕನ್ನಡ ಪುಸ್ತಕ ಓದುವವರು ಹಾಗೂ ಈಗಷ್ಟೇ ಓದಿನ ಹವ್ಯಾಸಕ್ಕೆ ತೆರೆದುಕೊಂಡವರು ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಕಬ್ಬನ್ ಪಾರ್ಕಿನಲ್ಲಿ ಒಂದೆಡೆ ಸೇರಿಕೊಂಡು ಓದುತ್ತಾ ಚರ್ಚಿಸುತ್ತಾ ಅನಿಸಿಕೆ ಅನುಭವಗಳನ್ನು ಹರವುತ್ತಾ, ಸಲಹೆಗಳನ್ನು ಪಡೆದುಕೊಳ್ಳುತ್ತಾ ಸಾಗುವ ದಾರಿ.

ಗುಂಪಿದ್ದಲ್ಲಿ ಹರಟೆ ಸಾಮಾನ್ಯ. ಆದರಿಲ್ಲಿನ ಹರಟೆ ಸಾಹಿತ್ಯದ್ದು. ಇಲ್ಲಿ ಯಾವುದೇ ಶುಲ್ಕವಿಲ್ಲ, ವಯಸ್ಸಿನ ಮಿತಿಯೂ ಇಲ್ಲ. “ನಿಮ್ಮಿಷ್ಟದ ಕನ್ನಡ ಪುಸ್ತಕ ತನ್ನಿ, ಜೊತೆಯಾಗಿ ಕೂತು ಓದಿಕೊಂಡು ಹೋಗಿ” ಇದಿಷ್ಟೇ ತಂಡದ ಸ್ಲೋಗನ್.

ತಂಡದ ಅಡ್ಮಿನ್ ಎಳೆಹುಡುಗ. ಹಾಗೇನಾದರು ಭಾವಿಸಿದ್ದರೆ ಕ್ಷಮಿಸಿ, ಅದು ತಪ್ಪು. ಕನ್ನಡ ಪುಸ್ತಕಗಳ ಬಗೆಗೆ ಆಸಕ್ತಿ ಹುಟ್ಟಿಸುವ ಹೊಸ ಹೊಸ ಪ್ರಯೋಗಗಳನ್ನು ಯೋಜನೆಗಳನ್ನು ರೂಪಿಸುವುದರಲ್ಲಿ ಆತ ಬಹಳ ಹಿರಿಯ.

ಈ ಡಿಜಿಟಲ್ ದಿನಗಳಲ್ಲಿ ಕೈಲಿ ಪುಸ್ತಕ ಹಿಡಿದು ಓದಿಗೆ ತೆರೆದುಕೊಳ್ಳುತ್ತಿರುವವರು ಬೆರಳೆಣಿಕೆಯಷ್ಟು. ಅದರಲ್ಲೂ ಕನ್ನಡ ಪುಸ್ತಕ ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಹಾಹಾಕಾರವನ್ನ ಸುಳ್ಳಾಗಿಸಲು ಹೊರಟ ತಂಡಕ್ಕೆ ಇದೀಗ ಇನ್ಸ್ಟ ಗ್ರಾಂ ಮೂಲಕ 21k ಹಿಂಬಾಲಕರ ಮೂಲಕ ಭರ್ಜರಿ ಯಶಸ್ಸು ದಕ್ಕಿ ಮುಂದೋಡುತ್ತಿದೆ.

ನಿಜವಾದ ಓದುಗರಿದ್ದಾರೆ, ತೆರೆದುಕೊಳ್ಳುವುದಕ್ಕೆ ವೇದಿಕೆ ಬೇಕಷ್ಟೇ ಎನ್ನುವುದನ್ನ ಈ ನೀಲಿ ಬಣ್ಣದ ಗುಂಪು ಪ್ರಭಾವಕಾರಿಯಾಗಿ ಸಾರುತ್ತಿದೆ.

ಈ ಯೋಜನೆ ಈಗಾಗಲೇ ಒಂದಷ್ಟು ಬೇರೆ ಜಿಲ್ಲೆ, ರಾಜ್ಯ, ಬೇರೆ ದೇಶಕ್ಕೂ ಮಾದರಿಯಾಗುವತ್ತ ಹೆಜ್ಜೆಯಿಟ್ಟು ವಿಶ್ವವ್ಯಾಪಿಯಾಗುವ ಎಲ್ಲಾ ಲಕ್ಷಣಗಳಿವೆ.

ತಂಡದ ಅಡ್ಮಿನ್ Anantha Kunigal ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಈ ಗುಂಪಿನಲ್ಲಿ ನಾನು ಕೂಡ ಇದ್ದೇನೆ ಅನ್ನುವುದು ಹೆಮ್ಮೆ.❤️

ನೀವೂ ಕೂಡ ನಮ್ಮನ್ನ ಸೇರಿಕೊಳ್ಳುವ ಮನಸಿದ್ದರೆ.. ಈ ಪೇಜ್ಗಳನ್ನು ಫಾಲೋ ಮಾಡಿ.

Instagram: ದಯವಿಟ್ಟು ಗಮನಿಸಿ

https://instagram.com/dayavittu.gamanisi?igshid=MmU2YjMzNjRlOQ==

WhatsApp: ಅಪರಿಚಿತ ಓದುಗರು

https://chat.whatsapp.com/H3E6ArB7yekHMPbYeUd89P

Facebook: ಅಪರಿಚಿತ ಓದುಗರು

https://www.facebook.com/groups/859399305807670/?ref=share_group_link

‍ಲೇಖಕರು avadhi

21 October, 2023

1 Comment

  1. Vijayakumari

    ಒಳ್ಳೆಯ ಕಾರ್ಯಕ್ರಮವಾಗಿದೆ ಪುಸ್ತಕ ಕೊಂಡು ಓದುವ ಅಭ್ಯಾಸ ಬೆಳೆಯುತ್ತದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading