ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ ಸೂರಿ ಟಾಪ್ ೧೦ sorry..'ಟಾಪ್ ೯'

ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು.
ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ ಪ್ರಕಟವಾಗಿರಬಹುದು.
ಹಾಗೆ ನಮ್ಮ ಪ್ರಶ್ನೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಿ ನೀಡಿದ ಎಲ್ಲರೂ ಓದಿದ ಪುಸ್ತಕಗಳನ್ನು ನೋಡಿ ನಾವೂ ಬೆರಗಾಗಿದ್ದೇವೆ. ‘ಕುಮಾರವ್ಯಾಸ ಭಾರತ’ದಿಂದ ಆರಂಭಿಸಿ ದೇವನೂರರ ‘ಎದೆಗೆ ಬಿದ್ದ ಅಕ್ಷರ’ದವರೆಗೆ ಎಷ್ಟೋ ಕೃತಿಗಳು ಹರಡಿಕೊಂಡಿವೆ
ಈಗಾಗಲೇ ಓದಿದ್ದ ಕೃತಿಯನ್ನೇ ಮತ್ತೆ ಮತ್ತೆ ಓದುವಂತೆ ಮಾಡುವ ಶಕ್ತಿ ಯಾವುದು? ಅತ್ಯಂತ ಹಳೆಯ ಕೃತಿಗಳು ಇನ್ನೂ ನಮ್ಮನ್ನು ಕಾಡುತ್ತಿರುವುದೇಕೆ? ಎನ್ನುವ ಪ್ರಶ್ನೆಯನ್ನೂ ಈ ಪಟ್ಟಿ ಹುಟ್ಟು ಹಾಕುತ್ತದೆ. ನಮ್ಮ ಸಾಹಿತಿಗಳ ಓದಿನ ರೀತಿಯ ಬಗ್ಗೆಯೂ ಈ ಪಟ್ಟಿ ಒಂದು ಕಣ್ಣೋಟ ನೀಡುತ್ತದೆ.
ಕನ್ನಡ ಕೃತಿಗಳನ್ನು ಓದುತ್ತಿದ್ದವರು ಇದ್ದಕ್ಕಿದ್ದಂತೆ ವ್ರತ ಹಿಡಿದವರಂತೆ ಒಂದು ವರ್ಷ ಬರೀ ಇಂಗ್ಲಿಷ್ ಕೃತಿಗಳಿಗೆ ಹೊರಳಿಕೊಂಡುಬಿಡುತ್ತಾರೆ?. ಯಾಕೆ ಎಂದು ಕೇಳಿದರೆ ನಂಗೂ ಗೊತ್ತಿಲ್ಲ ಎನ್ನುವ ಉತ್ತರ. ಈಗ ಪುಸ್ತಕಗಳಂತೂ ಪುಂಖಾನುಪುಂಖವಾಗಿ ಹೊರಬರುತ್ತಿದೆ. ಹಾಗಿರುವಾಗ ಆ ರಾಶಿಯಲ್ಲಿ ಓದುಗರು ಹೆಕ್ಕಿಕೊಳ್ಳುವ ಕೃತಿಗಳು ಯಾವುದು ಎನ್ನುವುದೂ ಸಹಾ ಕುತೂಹಲಕರ ಸಂಗತಿ. ಅದಿರಲಿ ಇಂತಹ ಪುಸ್ತಕ ಮಾರುಕಟ್ಟೆಗೆ ಬಂದಿದೆ ಎಂದು ಗೊತ್ತಾಗುವ ಬಗೆ ಯಾವುದು?
ಓದಿದ ಎಷ್ಟೋ ಪುಸ್ತಕಗಳಲ್ಲಿ ಒಂದಿಷ್ಟು ಪುಸ್ತಕವೇ ಏಕೆ ಕಾಡುತ್ತದೆ ಎನ್ನುವ ಪ್ರಶ್ನೆಗಳನ್ನೂ ಈ ಪಟ್ಟಿ ಎತ್ತುತ್ತದೆ. ನೀವು ಓದಿದ ಟಾಪ್ ಟೆನ್ ಕೃತಿಯ ಪಟ್ಟಿ ಕೊಡಿ ಎಂದು ಕೇಳುವಾಗ ನಮ್ಮ ಗಮನವಿದ್ದದ್ದು ಓದಿನ ಹಸಿವಿರುವ ಅನೇಕಾನೇಕ ಮಂದಿಗೆ ಯಾವ ಪುಸ್ತಕ ಓದಬೇಕು ಎನ್ನುವ ಸೂಚನೆಯನ್ನು ಈ ಪಟ್ಟಿ ನೀಡಲಿ ಎಂದು. ಜೊತೆಗೆ ತಮ್ಮ ನೆಚ್ಚಿನ ಲೇಖಕರು ಏನು ಓದುತ್ತಿದ್ದಾರೆ ಎಂದು ತಿಳಿಯುವ ಕುತೂಹಲವನ್ನೂ ಇದು ತಣಿಸುತ್ತದೆ ಎಂದು.
ಅದರ ಜೊತೆಗೆ ಇದೂ.. ಎನ್ನುವಂತೆ ಈ ಪಟ್ಟಿ ಇನ್ನಷ್ಟು ಸಂಗತಿಗಳನ್ನು ಹೊರಗೆಡಹಿದೆ.
ಇಲ್ಲಿದೆ ಸೂರಿ ಟಾಪ್ ೧೦ ಅಲ್ಲ ಟಾಪ್ ೯

೨೦೧೨ರಲ್ಲಿ ನಾನು ಓದಿದ ಬಹು ಮುಖ್ಯ ಪುಸ್ತಕಗಳು.

ಇನ್ನೊಂದಿಷ್ಟು ಪುಸ್ತಕಗಳು ಉಳಿದಿವೆ. ಓದಬೇಕು.


೧ ವಿನೋದ್ ಮೆಹ್ತಾ ಅವರ ದಿ ಸಂಜಯ್ ಸ್ಟೋರಿ.
೨ ಶಂಕರ್ ಮೊಕಾಶಿ ಪುಣೇಕರ್ ಅವರ ಸಮಗ್ರ ಬರಹಗಳು.
೩ ಚಿತ್ತಾಲ ಅವರ ಶಿಕಾರಿ (ಮರು ಓದು)
೪ ವಿಜಯ್ ದಾನ್ ದೇತಾ ಅವರ ಚೌಬುಲಿ ಮತ್ತು ಇತರ ಕಥೆಗಳು. (ಜಾನಪದ ಕಥೆಗಳ ಅದ್ಭುತ ಸಂಕಲನ.)

೫ ಕುಲದೀಪ್ ನಯ್ಯರ್ ಅವರ ಬಿಯಾಂಡ್ ಲೈನ್ಸ್ (ಇತ್ತೀಚಿನ ದಿನಗಳಲ್ಲಿ ನಾನು ಓದಿದ ಒಂದು ಒಳ್ಳೆಯ ಆತ್ಮಕಥೆ.)
೬ ಕಾಪ್ರ ಅವರ ಅನ್ ಕಾಮನ್ ವಿಸ್ಡಮ್.
೭ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ.

೮ ಜಯಂತ್ ಕಾಯ್ಕಿಣಿ ಅವರ ಚಾರ್ಮಿನಾರ್.
೯ ದೇವದತ್ ಪಟ್ನಾಯಕ್ ಅವರ ದಿ ಪ್ರಗ್ನೆಂಟ್ ಕಿಂಗ್.
 
 

‍ಲೇಖಕರು G

12 January, 2013

2 Comments

  1. rekhaneelavara

    ನಾನು ಓದಿದರಲ್ಲಿ ಖುಶಿಕೊಟ್ಟಂತಹ ಮೊದಲ ಹತ್ತು ಪುಸ್ತಕಗಳು:
    1. ಬರ ಅಂದ್ರೆ ಎಲ್ಲರಿಗೂ ಇಷ್ಟ
    ಅನು : ಜಿ. ಏನ್. ಮೋಹನ್
    2. ಚಿಟ್ಟೆ ಹೆಜ್ಜೆ ಜಾಡು (ಕಾದಂಬರಿ)
    ಜೋಗಿ
    3. ಸಿಂಗಾರವ್ವ ಮತ್ತು ಅರಮನೆ (ಕಾದಂಬರಿ)
    ಚಂದ್ರ ಶೇಖರ ಕಂಬಾರ
    4. ಅಂತಃಕರಣ
    ಬಿ. ಎಸ್. ಕೇಶವ ರಾವ್
    5. ಜೋಗಿ ಮನೆ
    ಜೋಗಿ
    6. ಎದೆಗಾರಿಕೆ (ಕಾದಂಬರಿ)
    ಅಗ್ನಿ ಶ್ರೀಧರ್
    7. ಏರಿಳಿತದ ದಾರಿಯಲ್ಲಿ
    ಸುಧಾಮೂರ್ತಿ
    8. ಡೋರ್ ನಂ. 142
    ಜಿ. ಏನ್. ಮೋಹನ್
    9. ಇದು ಮುಂಗಾರು
    ಚಿದಂಬರ ಬೈಕಂಪಾಡಿ
    10. ಐತರೆಯ ಮಹಾ ಪುತ್ರ (ಕಾದಂಬರಿ)
    ಎಂ . ಎಸ್. ತಿಮ್ಮಪ್ಪ

  2. shashikala m

    The top 10 books i read, enjoyed got enriched and strongly suggest one to read are:
    1.”Gandhi class” by Kum. vee
    2. “Baanayaana ” or “simply fly” by captain Gopinath
    3. “Infidel” by Ayan Hirsi Ali
    4. Jayanth kaikini’s stories( a compilation of his 4 books”
    5. “padmapani” by Ganeshaiah
    6. “Tiger Hills” by Saritha mandanna
    7. ” Love and longing in Bombay” by Vikram chanda
    8. ” Life of pi” Yen Martel
    9. kite runner
    10 vaidehi kathegalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading