ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ ಜಿ ಪಿ ಬಸವರಾಜ್ ಟಾಪ್ ಟೆನ್!

ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು.
ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ ಪ್ರಕಟವಾಗಿರಬಹುದು.
ಹಾಗೆ ನಮ್ಮ ಪ್ರಶ್ನೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಿ ನೀಡಿದ ಎಲ್ಲರೂ ಓದಿದ ಪುಸ್ತಕಗಳನ್ನು ನೋಡಿ ನಾವೂ ಬೆರಗಾಗಿದ್ದೇವೆ. ‘ಕುಮಾರವ್ಯಾಸ ಭಾರತ’ದಿಂದ ಆರಂಭಿಸಿ ದೇವನೂರರ ‘ಎದೆಗೆ ಬಿದ್ದ ಅಕ್ಷರ’ದವರೆಗೆ ಎಷ್ಟೋ ಕೃತಿಗಳು ಹರಡಿಕೊಂಡಿವೆ
ಈಗಾಗಲೇ ಓದಿದ್ದ ಕೃತಿಯನ್ನೇ ಮತ್ತೆ ಮತ್ತೆ ಓದುವಂತೆ ಮಾಡುವ ಶಕ್ತಿ ಯಾವುದು? ಅತ್ಯಂತ ಹಳೆಯ ಕೃತಿಗಳು ಇನ್ನೂ ನಮ್ಮನ್ನು ಕಾಡುತ್ತಿರುವುದೇಕೆ? ಎನ್ನುವ ಪ್ರಶ್ನೆಯನ್ನೂ ಈ ಪಟ್ಟಿ ಹುಟ್ಟು ಹಾಕುತ್ತದೆ. ನಮ್ಮ ಸಾಹಿತಿಗಳ ಓದಿನ ರೀತಿಯ ಬಗ್ಗೆಯೂ ಈ ಪಟ್ಟಿ ಒಂದು ಕಣ್ಣೋಟ ನೀಡುತ್ತದೆ.
ಕನ್ನಡ ಕೃತಿಗಳನ್ನು ಓದುತ್ತಿದ್ದವರು ಇದ್ದಕ್ಕಿದ್ದಂತೆ ವ್ರತ ಹಿಡಿದವರಂತೆ ಒಂದು ವರ್ಷ ಬರೀ ಇಂಗ್ಲಿಷ್ ಕೃತಿಗಳಿಗೆ ಹೊರಳಿಕೊಂಡುಬಿಡುತ್ತಾರೆ?. ಯಾಕೆ ಎಂದು ಕೇಳಿದರೆ ನಂಗೂ ಗೊತ್ತಿಲ್ಲ ಎನ್ನುವ ಉತ್ತರ. ಈಗ ಪುಸ್ತಕಗಳಂತೂ ಪುಂಖಾನುಪುಂಖವಾಗಿ ಹೊರಬರುತ್ತಿದೆ. ಹಾಗಿರುವಾಗ ಆ ರಾಶಿಯಲ್ಲಿ ಓದುಗರು ಹೆಕ್ಕಿಕೊಳ್ಳುವ ಕೃತಿಗಳು ಯಾವುದು ಎನ್ನುವುದೂ ಸಹಾ ಕುತೂಹಲಕರ ಸಂಗತಿ. ಅದಿರಲಿ ಇಂತಹ ಪುಸ್ತಕ ಮಾರುಕಟ್ಟೆಗೆ ಬಂದಿದೆ ಎಂದು ಗೊತ್ತಾಗುವ ಬಗೆ ಯಾವುದು?
ಓದಿದ ಎಷ್ಟೋ ಪುಸ್ತಕಗಳಲ್ಲಿ ಒಂದಿಷ್ಟು ಪುಸ್ತಕವೇ ಏಕೆ ಕಾಡುತ್ತದೆ ಎನ್ನುವ ಪ್ರಶ್ನೆಗಳನ್ನೂ ಈ ಪಟ್ಟಿ ಎತ್ತುತ್ತದೆ. ನೀವು ಓದಿದ ಟಾಪ್ ಟೆನ್ ಕೃತಿಯ ಪಟ್ಟಿ ಕೊಡಿ ಎಂದು ಕೇಳುವಾಗ ನಮ್ಮ ಗಮನವಿದ್ದದ್ದು ಓದಿನ ಹಸಿವಿರುವ ಅನೇಕಾನೇಕ ಮಂದಿಗೆ ಯಾವ ಪುಸ್ತಕ ಓದಬೇಕು ಎನ್ನುವ ಸೂಚನೆಯನ್ನು ಈ ಪಟ್ಟಿ ನೀಡಲಿ ಎಂದು. ಜೊತೆಗೆ ತಮ್ಮ ನೆಚ್ಚಿನ ಲೇಖಕರು ಏನು ಓದುತ್ತಿದ್ದಾರೆ ಎಂದು ತಿಳಿಯುವ ಕುತೂಹಲವನ್ನೂ ಇದು ತಣಿಸುತ್ತದೆ ಎಂದು.
ಅದರ ಜೊತೆಗೆ ಇದೂ.. ಎನ್ನುವಂತೆ ಈ ಪಟ್ಟಿ ಇನ್ನಷ್ಟು ಸಂಗತಿಗಳನ್ನು ಹೊರಗೆಡಹಿದೆ.

ಇಲ್ಲಿದೆ ಜಿ ಪಿ ಬಸವರಾಜ್ ಟಾಪ್ ೧೦!


1) ಜಿ.ಎ.ಕುಲಕರ್ಣಿ ಕಥೆಗಳು-ಅನುವಾದ: ಚಂದ್ರಕಾಂತ ಪೋಕಳೆ
2) ತೇಲ್ ಮಾಲಿಶ್ (ಕಥಾ ಸಂಕಲನ)-ಎಂ.ಎಸ್.ಶ್ರೀರಾಮ್

3) ಕನ್ನೆಮಳೆ (ಕಥಾ ಸಂಕಲನ)- ಮೊಗಳ್ಳಿ ಗಣೇಶ್
4) ಪಾಚಿಗಟ್ಟಿದ ಪಾಗಾರ (ಕಾದಂಬರಿ)-ಮಿತ್ರಾ ವೆಂಕಟರಾಜ್

5) ಅನುದಿನದ ಅಂತರಗಂಗೆ(ಆತ್ಮಕಥೆ)-ಪ್ರತಿಭಾ ನಂದಕುಮಾರ್
6) ಸ್ವಪ್ನ ಸಾರಸ್ವತ (ಕಾದಂಬರಿ)-ಗೋಪಾಲಕೃಷ್ಣ ಪೈ

7) ಆಡಾಡತ ಆಯುಷ್ಯ (ಆತ್ಮ ಕಥಾನಕ) – ಗಿರೀಶ್ ಕಾರ್ನಾಡ್
8.) ಹಳ್ಳ ಬಂತು ಹಳ್ಳ (ಕಾದಂಬರಿ)- ಶ್ರೀನಿವಾಸ ವೈದ್ಯ
9) ಸ್ವಾತಂತ್ರ್ಯದ ಓಟ- ಬೋಳುವಾರು
10) ನಾನು ಮೆಚ್ಚಿದ ಪುಸ್ತಕಗಳು-ಓಶೋ (ಅನುವಾದ: ಎಂ.ಎಸ್.ರುದ್ರೇಶ್ವರ ಸ್ವಾಮಿ)
 

‍ಲೇಖಕರು G

16 January, 2013

3 Comments

  1. chalam

    ಓಶೋರವರ ನಾನು ಮೆಚ್ಚಿದ ಪುಸ್ತಕಗಳು ಯಾವ ಪ್ರಕಾಶನದ್ದು ಅಂತ ತಿಳಿಸುತ್ತೀರಾ..ಪ್ಲೀಸ್

    • G.P.BASAVARAJU

      ಸಪ್ನ ಬುಕ್ ಹೌಸ್, ಬೆಂಗಳೂರು.

  2. Prakash

    these are very gud buk one can red and fil gud

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading