ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರುಳೆಲ್ಲ ವಟಗುಟ್ಟಿದರೂ..

ಮಂಡೂಕ ಲಹರಿ..

sachin-jewargi

ರನ್ನ ಕಂದ (ಸಚಿನ್ ಕುಮಾರ ಬ.ಹಿರೇಮಠ)

ಇರುಳೆಲ್ಲ ವಟಗುಟ್ಟಿದರೂ
ನನ್ನ ಬವಣೆ ತೀರಲಿಲ್ಲ…
ಎಲ್ಲಿಯೋ ಹುದುಗಿ ಬಚ್ಚಿಟ್ಟು ಕೊಂಡರೂ
ಬದುಕ ದಾರಿ ತೋರಲಿಲ್ಲ…

frog2ನಿನ್ನೊಳಗೊಂದು ಮಿಂಚು ನಿನಗೆ ಕಂಡಿತ್ತು
ಜಗವ ತೊಳೆವ ಹುಚ್ಚು ಹಿಡಿದಿತ್ತು..
ಅದೆಂಥ ಧ್ಯಾನವದು ಬೋಧಿ ವೃಕ್ಷದ ಕೆಳಗೆ
ನಾನೆಂತೂ ಅರಿಯೇ ಈ ಕಲ್ಲು ಪೊಟರೆಯೊಳಗೆ

ನೀ ನಕ್ಕ ನಗೆಯೆಲ್ಲವುಗಳಲಿ ಅವಿತಿತ್ತು
ಆತ್ಮ ಸಾಕ್ಷಿಯ ಜ್ಯೋತಿ
ನೀ ಇಟ್ಟ ಹೆಜ್ಜೆಗಳಡಿಯಲ್ಲಿ ಜನಿಸಿತ್ತು
ಆತ್ಮ ಜ್ಞಾನದ ಪ್ರೀತಿ

ನಿನ್ನ ಹೆಗಲೇರಿ ದಿಟ್ಟಿಸುತಿಹೆ
ನೋಡಲಾಗುತ್ತಿಲ್ಲ ಆ ದಿವ್ಯ ಪ್ರಭೆ
ಬಂಧಗಳ ಕಡಿದು ಬದುಕ ಪ್ರೀತಿಸುವ ಬಗೆಯ
ಕಲಿಸಿದೆ ಗೆಲ್ಲುವ ಪರಿ ಸಾಧಿಸದೇ ಹಗೆಯ..

ನಿನ್ನಂತೆ ಎಲ್ಲವನೂ ಮೀರಿ ಬಾಳುವಾಸೆ..
ಬದುಕೆಂದರೆ ಆಸೆ-ನಿರಾಸೆ..
ಹೆಗಲ ಮೇಲೆ ಜಿಗಿದು ಕೂರುವ ಬದಲು..
ಸೇರಬಾರದಿತ್ತೇ ನಿನ್ನ ಪರಿಶುದ್ಧ ಎದೆಯ ಕಡಲು?

 

‍ಲೇಖಕರು Admin

29 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading