ಒಂದು ಭಾಷೆಯ ಸಾವು ಆ ಜನ ಸಮುದಾಯದ ಸಂಸ್ಕೃತಿಯ ಸಾವು
ಡಾ ಎಸ್ ಬಿ ಜೋಗುರ
ಯಾವುದೇ ಒಂದು ಭಾಷೆಯ ಬೆಳವಣಿಗೆಯಲ್ಲಿ ತೊಡಕುಗಳಾಗಲಿ.. ಸಡಿಲಿಕೆಗಳಾಗಲೀ ಕೇವಲ ನೆಪ ಮಾತ್ರ. ಒಂದು ಭಾಷೆ ತನ್ನ ರಿಜಿಸ್ಟನ್ಸ್ ಮೂಲಕವೇ ಬದುಕಿ ಉಳಿಯುವ ಎಲ್ಲ ಸಾಮಥ್ರ್ಯಗಳನ್ನು ಅಂತರಂಗೀಕರಣಗೊಳಿಸಿಕೊಂಡಿರುತ್ತದೆ. ಆಯಾ ಕಾಲಮಾನದ ಅಗತ್ಯಗಳಿಗೆ ತಕ್ಕ ಹಾಗೆ ಮಾರ್ಪಾಡುಗಳನ್ನು ಹೊಂದುವ ಮೂಲಕ ತನ್ನ ಅಸ್ಥಿತ್ವವನ್ನು ಅದು ಉಳಿಸಿಕೊಳ್ಳುತ್ತದೆ. ಈ ಬಗೆಯ ನಿರಂತರ ಪ್ರಕ್ರಿಯೆಯಲ್ಲಿ ಸಲ್ಲದ ಭಾಷೆಗಳು ಅಪಾಯದ ಅಂಚಿಗೆ ನೂಕಲ್ಪಡುತ್ತವೆ. ಒಂದು ಭಾಷೆ ಕಳೆದುಹೋಗುತ್ತಿದೆ ಎನ್ನುವಾಗಲೇ ತನ್ನ ಸಹಕುಟುಂಬದ ಸಹವಾಸದಲ್ಲಿ ಅಮೂರ್ತವಾಗಿ ನೆಲೆಯನ್ನು ಕಂಡುಕೊಂಡಿರುತ್ತದೆ. ಅನೇಕ ಪ್ರಾದೇಶಿಕ ಭಾಷೆಗಳು ತನ್ನ ಅಸ್ಥಿತ್ವವನ್ನು ಇಲ್ಲವಾಗಿಸಿಕೊಳ್ಳುತ್ತಿವೆ ಎಂದು ಹೇಳುವ ಬದಲಾಗಿ ತನ್ನ ಕುಟುಂಬದ ಭಾಷೆಗಳೊಂದಿಗೆ ಸ್ವಾಂಗೀಕರಣಗೊಳ್ಳುತ್ತಿದೆ ಎನ್ನಬಹುದೇನೋ… ? ಜಾಗತೀಕರಣದ ಸಂದರ್ಭದಲ್ಲಿಯೂ ಕನ್ನಡ ಭಾಷೆ ಅದು ಹೇಗೆ ತನ್ನ ಧ್ವನಿ ಮತ್ತು ರಚನೆಯಲ್ಲಿ ಕಂಗ್ಲೀಷಿಕರಣಗೊಳ್ಳುವ ಮೂಲಕ ಈ ಕಾಲಕ್ಕೆ ತಕ್ಕಂತೆ ಗಟ್ಟಿಗೊಳ್ಳುತ್ತ ನಡೆದಿರುವದಿದೆ ಎನ್ನುವದನ್ನು ಗಮನಿಸಬಹುದಾಗಿದೆ.

ವಿಶ್ವದ ಅನೇಕ ಭಾಷೆಗಳ ನಡುವೆ ಸಂಸ್ಕೃತ ಭಾಷೆಯ ಅನನ್ಯತೆ ಮತ್ತು ಗಟ್ಟಿತನವನ್ನು ಅಲ್ಲಗಳೆಯಲಾದೀತೆ..? ಹಿಂದೆ 1786 ರ ಸಂದರ್ಭದಲ್ಲಿ ವಿಲಿಯಂ ಜೋನ್ಸ್ ಎನ್ನುವ ನ್ಯಾಯಾದೀಶರು ಸಂಸ್ಕೃತ ಭಾಷೆಯನ್ನು ಕುರಿತು ಹೀಗೆ ಹೇಳಿರುವದಿತ್ತು. ‘ಸಂಸ್ಕೃತ ಭಾಷೆಯ ಪ್ರಾಚೀನತೆ ಏನೇ ಇರಲಿ ಅದರ ರಚನೆ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಗಿಂತಲೂ ಉತ್ತಮವಾದುದು’ ಒಂದು ಭಾಷೆ ಜೀವ ವಿಕಾಸವಾದದ ಭಾಗವಾಗಿ ಬೆಳೆದು ಬರುವ ಕ್ರಮವನ್ನು ಅನೇಕ ಭಾಷಾಶಾಸ್ತ್ರಜ್ಞರು ಚರ್ಚಿಸಿದ್ದಾರೆ. ಯಾವುದೇ ಒಂದು ಭಾಷೆ ಬರೀ ಭಾಷೆಯಾಗಿರದೇ ಅಲ್ಲಿಯ ಜನರ ಜೀವನದ ವಿಧಾನದ ಭಾಗವಾಗಿರುತ್ತದೆ. ‘ಜಾಗತಿಕ ಭಾಷೆಗಳ ಮಾರ್ಗದರ್ಶಿ’ ಎನ್ನುವ ಕೃತಿಯಲ್ಲಿ ಎಮ್.ರುಲೆನ್ ಎನ್ನುವ ಚಿಂತಕರು ಒಟ್ಟು 17 ಭಾಷೆಗಳ ಕುಟುಂಬವನ್ನು ಗುರುತಿಸಿದ್ದಾರೆ. ಇಂದು ಜಗತ್ತಿನಲ್ಲಿ ಸುಮಾರು 6000 ಭಾಷೆಯನ್ನಾಡುವ ಜನಸಮೂಹಗಳಿವೆ ಎಂದಿರುವರು. ಇವುಗಳಲ್ಲಿ ಯುರೋಪಿನ 4 ಪ್ರತಿಶತ ಜನ, ಅಮೇರಿಕೆಯ 15 ಪ್ರತಿಶತ ಜನ, ಆಫ್ರಿಕಾದ 3 ಪ್ರತಿಶತ ಜನ, ನ್ಯು ಗಿನಿಯಾ ಮತ್ತು ಇಂಡೋನೆಷಿಯಾದ 25 ಪ್ರತಿಶತ ಜನ ಈ ಭಾಷೆಯನ್ನು ಮಾತನಾಡುವವರಿದ್ದಾರೆ. ಜಾಗತೀಕರಣದ ಭಾರಟೆಯಿಂದ ಕೆಲ ತೀರಾ ಸಣ್ಣ ಪುಟ್ಟ ಭಾಷೆಗಳು ಅಪಾಯದ ಅಂಚಿನಲ್ಲಿರುವದಂತೂ ಹೌದು. ಭಾಷಾ ಶಾಸ್ತ್ರಜ್ಞರ ಪ್ರಕಾರ ಈ ಶತಮಾನದ ಅಂತ್ಯದ ವೇಳೆಗೆ ಸುಮಾರು 50 ಪ್ರತಿಶತ ಸಣ್ಣ ಪುಟ್ಟ ಭಾಷೆಗಳು ಗತಿಸಿಹೋಗಲಿವೆ ಎಂದಿದ್ದಾರೆ.
ಯಾವುದೇ ಒಂದು ಭಾಷೆಯ ಉಳಿಯುವಿಕೆ ಮತ್ತು ಗತಿಸುವಿಕೆ ಅದರ ಜನ ಬಳಕೆಯ ಪ್ರಮಾಣವನ್ನು ಅವಲಂಬಿಸಿದೆ. ಕನ್ನಡ ಭಾಷೆಯನ್ನೇ ತೆಗೆದುಕೊಳ್ಳಿ ಬೆಂಗಳೂರಿನಂಥಾ ಮಹಾನಗರಗಳಲ್ಲಿ ಇಂದು ಕನ್ನಡ ಹಿಂದೆಂದಿಗಿಂತಲೂ ಹೆಚ್ಚು ಫ್ಯಾನ್ಸಿಯಾಗಿ ಬಳಕೆಯಲ್ಲಿದೆ. ಅದಕ್ಕೆ ಜಾಗತೀಕರಣದ ಪ್ರಭಾವದ ಹಿನ್ನೆಲೆಯಲ್ಲಿ ದಿನೇ ದಿನೇ ಬೆಳೆಯುತ್ತಿರುವ ಮಾಲ್ ಸಂಸ್ಕೃತಿಯೂ ಒಂದು ಪ್ರಮುಖ ಕಾರಣ. ಇಂದು ಸಮೂಹ ಮಾಧ್ಯಮಗಳಲ್ಲಿ ದಿನನಿತ್ಯ ಬಳಕೆಯಾಗುವ ಹೈಬ್ರಿಡ್ ಕನ್ನಡ ಇಂದಿನ ಯುವಜನತೆಯನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಬಹುಷ; ಆ ಕಾರಣದಿಂದಾಗಿಯೇ ಭಾರತದ ಜನಭಾಷೆ ಸಮೀಕ್ಷೆಯ [ಪಿ.ಎಲ್.ಎಸ್.ಆಯ್] ಚೇರಮನ್ ಆಗಿರುವ ಗಣೇಶ ಎನ್. ದೆವಿ ಅವರು ‘ಮುಂಬರುವ ಹತ್ತು ವರ್ಷಗಳಲ್ಲಿ ರಷ್ಯಾ, ಫ್ರೆಂಚ್ ಮತ್ತು ಜರ್ಮನ್ ಭಾಷೆಯನ್ನು ಮಾತನಾಡುವವರಿಗಿಂತಲೂ ಹೆಚ್ಚಾಗಿ ಕನ್ನಡ ಮಾತನಾಡುವವರಿರುತ್ತಾರೆ’ ಎಂದು ಹೇಳಿರುವುದಿದೆ. ಭಾರತದಲ್ಲಿ ಒಟ್ಟು 22 ಅನುಸೂಚಿತ ಭಾಷೆಗಳಿದ್ದು, ಕಳೆದ 50 ವರ್ಷಗಳಲ್ಲಿ ಸುಮಾರು 250 ಭಾಷೆಗಳು ಕಣ್ಮರೆಯಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೊಮ್ಮೆ ಲಖನೌ ವಿಶ್ವವಿದ್ಯಾಲಯದಲ್ಲಿ ಜರುಗಿದ ಭಾಷಾ ಸಮ್ಮೇಳನದಲ್ಲಿ ಭಾಷಾಶಾಸ್ತ್ರಜ್ಞರು ಸಣ್ಣ ಪುಟ್ಟ 96 ಪ್ರತಿಶತ ಭಾಷೆಗಳು ಅಳಿವಿನಂಚಿನಲ್ಲಿವೆ. ಈ 96 ಪ್ರತಿಶತ ಭಾಷೆಗಳನ್ನು ಕೇವಲ 4 ಪ್ರತಿಶತ ಜನ ಮಾತ್ರ ಮಾತನಾಡುವದಿದೆ. ಇವು ಅಪಾಯದ ಅಂಚಿನಲ್ಲಿರಲು ಇದೂ ಒಂದು ಮುಖ್ಯ ಕಾರಣ ಎಂದಿರುವರು. ಈ ಸಣ್ಣ ಪುಟ್ಟ ಭಾಷೆಗಳು ಆಯಾ ಜನಸಮುದಾಯದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಅವುಗಳ ಅಳಿವು-ಉಳಿವು ಕೂಡಾ ಸದ್ಯದ ಅಗತ್ಯತೆಯನ್ನೇ ಅವಲಂಬಿಸಿದೆ. ಜನಭಾಷೆ ಸಮೀಕ್ಷೆಯ ಪ್ರಕಾರ [ದ ಹಿಂದೂ ಅಗಸ್ಟ್ 2-2013] ಕನರ್ಾಟಕದ 50 ಭಾಷೆಗಳ ಪೈಕಿ 10 ಭಾಷೆಗಳು ಅಪಾಯದ ಅಂಚಿನಲ್ಲಿವೆ ಎಂದು ತಿಳಿದು ಬಂದಿದೆ. ಕೊರಗ, ಬಡಗ, ಯರವ, ಇರುಳ, ಸೋಲಿಗ, ಗೌಳಿ, ಜೇನುಕುರುಬ, ಬೆಟ್ಟಕುರುಬ, ಹಕ್ಕಿ ಪಿಕ್ಕಿ ಮತ್ತು ಸಿದ್ದಿ ಜನಸಮುದಾಯಗಳ ಭಾಷೆಗಳು ಅಳಿವಿನ ಅಂಚಿನಲ್ಲಿವೆ ಎಂದು ವರದಿಯಾಗಿದೆ. ಒಂದು ಸಣ್ಣ ಭಾಷೆಯ ಸಾಯುವಿಕೆ ಆ ಸಮುದಾಯದ ಜಾಗತಿಕ ನೋಟ ಮತ್ತು ಗ್ರಹಿಕೆ ಸತ್ತ ಹಾಗೆ, ಜೊತೆಗೆ ಸ್ಥಳೀಯ ಸಾಂಸ್ಕೃತಿಕ ಅನನ್ಯತೆ ಅನಾಮಧೇಯವಾಗಿ ಉಳಿದ ಹಾಗೆ. ಭಾಷಾ ಶಾಸ್ತ್ರಜ್ಞರು ಒಂದು ಭಾಷೆಯ ರಚನೆಯ ಬಗ್ಗೆ ಯೋಚಿಸುವ ಜೊತೆಗೆ ಅದನ್ನು ಆಯಾ ಕಾಲಘಟಕ್ಕೆ ತಕ್ಕಂತೆ ಉಳಿಸಿಕೊಳ್ಳುವ ಬಗ್ಗೆಯೂ ಯೋಚಿಸಬೇಕಿದೆ. ಯಾಕೆಂದರೆ ಅಳಿಯುವದು ಕೇವಲ ಒಂದು ಭಾಷೆಯಲ್ಲ, ಆಯಾ ಸಮುದಾಯಗಳ ಜೀವನ ವಿಧಾನ.






ಒಂದು ಭಾಷೆಯ ಸಾವು ಆ ಜನ ಸಮುದಾಯದ ಸಂಸ್ಕೃತಿಯ ಸಾವು
adu pakka nijavaada maatu.
aadare, 10 varuShavalla, immU 50 varShavAdaru, nimma aBilaashe nijavaaguvudilla.
KaraNa:
IgalE 90% kannaDigarige shuddha kannaDa baruvudilla.
Jotege, ellarU English medium beku ennuthaarw.
svathaha anEka sahithigaLu avara kannaDa dalli, AMgla maatugaLannu anumaanavillade baLasuttaare.
kannaDavu athyaMta suMdaravaada siriya bhAShe.
I sogasaada bhaaSheyannu uddara mADalu yaarigu manassu baMdilla.
iMtha taatvikateyalli, nimage hEge tiLiyito nanage arthavagadu – innu 10 varShadaali 80 Million jana kannaDa mAtanAduvaru!!!
bahushaha aShToMdu jana kannaDigaru KarnaTakadalli vAsittirabahudu. Adare ellarU kannaDa matanaaDuvaru eMba Abilashe kEvala nimma Ashe asTe.
iMdina dinada murida berake kannaDadaShTu bErodu bhAShe illa.
KannaDabhShegobba Atqturk athava sukarno athava Stalin bEku.
illadeiddare kannaDu hALAgihoguttade, KMDita.
shddha kannaDa prEmi.
Vijaya, Berlin, 220813.
P.S. I can only express my great regards to for your love to beatifu kannDa language. I appreciate you very much.