ಶಿವು ಮೊರಿಗೇರಿ
ನಿಜಕ್ಕೂ ಇಲ್ಲಿನ ಹತ್ತಾರು ಕಥೆಗಳು ಪರಿ ಪರಿಯಾಗಿ ಕಾಡುವ ಪರಿಗೆ ನಮಗೇ ಸೋಜಿಗ ಎನ್ನಿಸಿಬಿಡುತ್ತೆ. ಹಂಗೆ ಬಿಟ್ಟೂ ಬಿಡದೆ ಕಾಡುವ ಕಥೆಗಳ ಗುಚ್ಛ ‘ಈ ಪರಿಯ ಸೊಬಗು’. ಏನಿದು ಪರಿ ? ಇದ್ಯಾವ ಪರಿಯ ಸೊಬಗು ಅಂತ ನೀವು ‘ಈ ಪರಿಯ ಸೊಬಗು’ ಪುಟಗಳನ್ನ ತಿರುಗಿಸುತ್ತಾ ಹೋದರೆ ನಿಮ್ಗೇ ಗೊತ್ತಾಗಿಬಿಡುತ್ತೆ ಇದು ಅಸಲಿ ಭಾರತವನ್ನು ಕಟ್ಟಿಕೊಡಲು ಟೊಂಕ ಕಟ್ಟಿ ನಿಂತವರ ಕೆಚ್ಚು ನೆಚ್ಚುಗಳು ಎಂದು.
ಇಲ್ಲಿ ಕಪೋಲಕಲ್ಪಿತ ವರ್ಣನೆಗಳ ಪದಗುಚ್ಛಗಳಿಲ್ಲ. ಅಅಜೆಂಡಾ, ಐಡಿಯಾಗಳ ಮಸಲತ್ತುಗಳಿಲ್ಲ. ಗೋಸುಂಬೆತನಗಳ ಘೋಷಣೆಗಳಿಲ್ಲ. ರಮ್ಯತೆಯ ಪರಮಾವಧಿಯನ್ನು ಹುಡುಕಲೇ ಬೇಡಿ. ಇಲ್ಲಿ
ಅನಾವರಣಗೊಳ್ಳುತ್ತಾ ಸಾಗೋದು ಅಸಲಿ ಇಂಡಿಯಾ.
ಓದುತ್ತಾ
ಹೋದಂತೆಲ್ಲಾ ಮುಗಿಯದ ಅಚ್ಚರಿಗಳ ಲೋಕವಿದು. ಗ್ರಾಮೀಣ ಭಾರತದ ಕಲೆ, ಸಾಹಿತ್ಯ, ವೃತ್ತಿ, ಸಂಸ್ಕೃತಿ, ಇತಿಹಾಸ ಮತ್ತು ಜೀವನ ಶೈಲಿಯ ವೈವಿದ್ಯತೆಗಳ ವೈಭವವನ್ನು ನೀವಿಲ್ಲಿ ಕಾಣಬಹುದು.
ಪಿ ಸಾಯಿನಾಥ್ ಹಾಗೂ ಜಿ ಎನ್ ಮೋಹನ್ ಅವರ ಗೆಳೆತನದ ಕಾರಣದಿಂದಾಗಿ ಈಗಾಗಲೇ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎಂಬ ನಿಟ್ಟುಸಿರುಗಳ ಸಂಕಲನ ಓದುಗರಿಗೆ ದಕ್ಕಿದ್ದಾಗಿದೆ. ಈಗ ಪಿ ಸಾಯಿನಾಥ್ ‘ಪರಿ’ಯನ್ನು ಹುಟ್ಟುಹಾಕಿದರೆ, ಜಿ ಎನ್ ಮೋಹನ್ ಅದನ್ನು ಮತ್ತೆ ಕನ್ನಡಕ್ಕೆ ಧಕ್ಕಿಸಿಕೊಡುವ ಕೆಲಸ ಮಾಡುತ್ತಿದ್ದಾರೆ.
ಇಬ್ಬರಿಗೂ ಬೀದಿ ಬದಿಯಲ್ಲಿ ಕುಳಿತು ಮೀನು ತಿನ್ನುವುದು, ಹಳ್ಳಿ ಹಳ್ಳಿ ತಿರುಗುವುದು, ಮಾತು ಸತ್ತು ಹೋಯಿತು ಎನ್ನುವ ಕಥೆಗಳನ್ನು ಲೋಕದ ಮುಂದಿಡುವುದು ಕೇವಲ ಹವ್ಯಾಸವಲ್ಲ, ಜವಾಬ್ದಾರಿ ಎನಿಸಿಯಾಗಿದೆ. ಇಬ್ಬರೂ ತಮ್ಮ ತಮ್ಮ ಮಾಧ್ಯಮಗಳಲ್ಲಿ ಇಂಥಹ ಕಥೆಗಳನ್ನು ಮುಂದಿಟ್ಟಿದ್ದಾರೆ.
ವಿಶೇಷವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇಂಥಹ ಕೃತಿಗಳ ಅಗತ್ಯವಿದೆ ಅಂತ ನಂಗನ್ನಿಸುತ್ತೆ….
any How, ನಿಮಗೂ ಇದ್ಯಾವ ಪರಿಯ ಸೊಬಗು ಇರಬಹುದು ? ಅನ್ನೋ ಡೌಟ್ ಬಂದ್ರೆ ಈ ಕೃತಿಯನ್ನೊಮ್ಮೆ ಓದಿನೋಡಿ..
ಎಲ್ಲಾ ಮಳಿಗೆಗಳಲ್ಲೂ ಪುಸ್ತಕ ಲಭ್ಯ.
ಆದರೂ ಪ್ರತಿಗಳಿಗಾಗಿ- ಪಲ್ಲವ ವೆಂಕಟೇಶ್ : 94803 53507

ಪಿ ಸಾಯಿನಾಥ್ ರೊಂದಿಗೆ ಪರಿ ತಂಡ




ಪರಿ ಎಂದರೆ
ಅರೇಬಿಕ್ನಲ್ಲಿ ಅಪ್ಸರೆ
ಸಂಸ್ಕ್ರತದಲ್ಲಿ ಸುತ್ತು
ಪ್ರಂಚ್ನಲ್ಲಿ ಪ್ಯಾರಿಸ್
ಕನ್ನಡದಲ್ಲಿ ರೀತಿ
ಮಲಯಾಳಂನಲ್ಲಿ ತರಡು
ದೇವರೇ ನೀನಿದೆಲ್ಲವ
ಮೊದಲೇ ಯೋಚಿಸಿಲ್ವೆ!