ಬೆಳದಿಂಗಳ್ ರಾತ್ರೀಲಿ ಈಚೋರಿ ಬತ್ತಂದ್ರೆ
ಈಚ್ಲೆಂಡ ಚೆಲ್ದಂಗೆ ನೆಪ್ಪಾಯ್ತದೆ
ಆಕಾಸದ್ ಚಂದ್ರನ್ನ ಪಡಕಾನೆ ದೀಪಕ್ಕೆ
ವೋಲಿಸ್ದೆವೋಯ್ತಂದ್ರೆ ತೆಪ್ಪಾಯ್ತದೆ.
ಅಳ್ ಗಿಳೋದ್ ಎಲ್ಲಾನ ಯೆಂಗಿಸ್ಗೆ ವೊಪ್ತಾದೆ
ನೆಗ್ತಿರ್ ಬೇಕು ಗಂಡಸ್ರು ಪ್ರಾಣ್ ಓದ್ರೂನೆ!
ಬದಕಿದ್ರೆ ಯೆವ್ತಾರ ಪಡಕಾನೇಗ್ ಓಗ್ಬೈದು
ಸತ್ಮೇಲ್ ಏನೈತಣ್ಣ? ದೊಡ್ ಸೊನ್ನೇನೆ!
ಜಿ ಪಿ ರಾಜರತ್ನಂ ಸಾಲುಗಳು ಕೊಡುವ ಈ ಕಿಕ್ ಮುಂದೆ ಯಾವುದಿದೆ? ನೆನಪಿಡಬೇಕು. ರಾಜರತ್ನಂ ಯಾವತ್ತೂ ಕುಡಿದವರಲ್ಲವಂತೆ. ಅಂಥ ರಾಜರತ್ನಂ ಯೆಂಡ್ಕುಡ್ಕ ರತ್ನನನ್ನು ಸೃಷ್ಟಿಸಿದರು.
*
ಈ ಪೀಠಿಕೆ ಮತ್ತೇನಕ್ಕೂ ಅಲ್ಲ; ಹೊಸ ಯೆಂಡುಡ್ಕನೊಬ್ಬನನ್ನು ಪರಿಚಯಿಸಬೇಕಿದೆ. ಈತ ಕುಡಿಯದೆ ಹಾಡಿದೊಂದಗ್ಗಳಿಕೆಯವನಾ? ಗೊತ್ತಿಲ್ಲ. ಅಷ್ಟಕ್ಕೂ ಯಾರೀತ ಎಂಬುದನ್ನು ನೀವೇ ಭೇಟಿಯಾಗಿ ಪರಿಚಯಿಸಿಕೊಳ್ಳಬಹುದು. ಸದ್ಯಕ್ಕೆ ಈ “ಕುಡುಕ” ಮಿತ್ರನ ಪದ್ಯ ದ್ರವವನ್ನಷ್ಟೆ ಹಿತವಾಗಿ ಸಿಪ್ ಮಾಡಬಹುದು.
* * *
ಇದೇ ಕೊನೆ ಭೇಟಿ ಅಂತ ಅವಳ ಒದ್ದಾಟ
ತಡವಾದರೆ ಬಾರು ಮುಚ್ಚುತ್ತೆ ಅಂತ ನನ್ನದು
ಶಾಲೆಯಾಗಲಿ ಮಧುಶಾಲೆಯಾಗಲಿ
ಮೊದಲ ದಿನವೇ ತಡ ಸರಿಯೆ ಹೇಳಿ?
*
ಹೆಂಡ ಕುಡೀಬಾರದು, ಕುಡಿದರೆ
ಲೆಕ್ಕ ಇಡಬಾರದು
ಎತ್ತಿದ ಗ್ಲಾಸನು ಏನೇ ಆದರೂ
ಪಕ್ಕ ಇಡಬಾರದು
*
ಅಪಘಾತ ಆಗುವುದೇ ಹಣೆಯಲ್ಲಿದ್ದರೆ
ಆಸ್ಪತ್ರೆ ಮುಂದೆಯೇ ಆಗಲಿ
ಪ್ರೇಮ ಭಗ್ನವಾಗುವುದೇ ಬರೆದಿದ್ದರೆ
ಬಾರಿನ ಬಳಿಯೇ ಆಗಲಿ
*
ಮೋರೆ ನೋಡದೆ ಅಪ್ಪಿ
ಚಿಂತೆ ಕಳೆವಳು ಮದಿರೆ
ಮೋರಿಯಾದರೆ ಏನು
ಬಾರದಿರುವುದೆ ನಿದಿರೆ
*
ಖಾಲಿಯಾಗಿದೆ ಬದುಕು
ಖಾಲಿಯಾಗಿದೆ ಬಾಟಲಿ
ಉನ್ಮತ್ತ ಹೃದಯವನು ಹೊತ್ತು
ರಸ್ತೆಯನೀಗ ಹೇಗೆ ದಾಟಲಿ?
*
ಕುಡಿದು ಮೈಮರೆತಾಗ ಎಲ್ಲರೂ ಒಂದೆನಾ
ಅದಕೇ ಅನ್ನೋದು ಬಾರೊಂದು ನಂದನ
ಸೆರೆ ಮಾಡಿದಾತನಿಗೆ ಇದೋ ನನ್ನ ವಂದನಾ
ಎದಕೆ ಬೇಕಿನ್ನು ಬೇರೊಂದು ಬಂಧನ?
*
ಮದ್ಯ ಕರುಳನ್ನು ಸುಡುತ್ತದೆ
ಎಂಬುದು ಬೇರೆ ಮಾತು
ಮನದ ನೋವಿಗಂತೂ ಅದು ದಿವ್ಯೌಷಧಿ
ಸೈಡ್ ಎಫೆಕ್ಟಿಲ್ಲದ ಔಷಧಿಯುಂಟೆ ಹೇಳಿ?
*
ತಂತಿ ಹರಿದ ವೀಣೆ ನಾನು
ನುಡಿಸಲಾಗದು
ಕುಡಿತ ನನ್ನ ಎದೆಯ ಬಡಿತ
ಬಿಡಿಸಲಾಗದು
*
ಯುಗಗಳ ಬಳಿಕ ಸಿಕ್ಕಿರುವೆ ಗೆಳೆಯ ಹೀಗೆ
ಮೆಚ್ಚನಾ ಪರಮಾತ್ಮ ಕುಡಿಸದೆ ಕಳಿಸಿದರೆ ಹಾಗೇ
ಮುಗಿಯುವುದೆ ತಬ್ಬಿದರೆ, ಮಾತಾಡಿದರೆ ನಕ್ಕು
ಹೇಳಲಾಗದ್ದನ್ನೂ ಹೇಳಲು ಏರಲೇಬೇಕು ಕಿಕ್ಕು





🙂
vavvvv!
nijavagiyu chennagiro padya. nanu ee yella kavithegalannu ‘apara’ avara blognalli odidde. adre neevu adakkondu angle kotri, thanks!
-vikas negiloni
really beautiful.
odutta idda haagene hodiyutte kikku…
bareyuvudaare apara
innu mundhe idanne bareyali
emma manadangalakkoo
ondu bar tarali…