’ಇದು ಅಸ್ಪೃಶ್ಯತೆ ಅಲ್ಲದೆ ಮತ್ತೇನು ?’ – ಸಿ ಎಸ್ ದ್ವಾರಕಾನಾಥ್

552530_110494595749634_1145834000_n
– ಸಿ ಎಸ್ ದ್ವಾರಕಾನಾಥ್
ಈ ಹುಡುಗ ಪ್ರೈಮರಿ ಯಿಂದಲೂ ನೂರಕ್ಕೆ ತೊಂಬತ್ತು ಪರ್ಸೆಂಟ್ ಮೇಲೆ ಮಾರ್ಕ್ಸ್ ಪಡೆಯುತ್ತಲೇ ಬಂದವನು… ಈಚೆಗೆ ಇವನಿಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಸಿಕ್ಕಿತು.. ಯಾವುದಾದರೂ ಸಮಾರಂಭದಲ್ಲಿ ಗಾಂಧಿ,ಬಸವಣ್ಣ, ಅಂಬೇಡ್ಕರ್ ಫೋಟೋ ಮಾರುವ ಬಡ ಅಪ್ಪನ ಮಗ ಇವನು ಅದರಲ್ಲೂ ಅಸ್ಪೃಶ್ಯ ಬೇರೆ . ಈ ಪ್ರತಿಷ್ಟಿತ ಕಾಲೇಜಿನಲ್ಲೂ ಇವನು ೯೮% ತೆಗೆದ..! ಬ್ರಾಹ್ಮಣರ ಮ್ಯಾನೇಜ್ಮೆಂಟ್ ಇರುವ ಈ ಕಾಲೇಜಿನಲ್ಲಿ ಅಸ್ಪೃಶ್ಯ ಹುಡುಗ ೯೮% ಮಾರ್ಕ್ಸ್ ತೆಗೆದದ್ದು ದೊಡ್ಡ ಚರ್ಚೆಗೆ ಕಾರಣವಾಯಿತು !! ಕಡೆಗೆ ಮ್ಯಾನೇಜ್ಮೆಂಟ್ ಮೀಟಿಂಗ್ ಕರೆದು “ನಮ್ಮ ಹುಡುಗರೇ ಇಷ್ಟು ಪರ್ಸೆಂಟ್ ತೆಗೆದುಕೊಂಡಿಲ್ಲ ಈ ದಲಿತ ಹೇಗೆ ತೆಗೆಯಲು ಸಾದ್ಯ.? ಇವನು ಕಾಪಿ ಹೊಡೆದಿರಲೇಬೇಕು ..” ಎಂದು ತೀರ್ಮಾನಿಸಿದರು .
images
ಈ ಹುಡುಗನ ಬಗ್ಗೆ ತಿಳಿದಿದ್ದ ಪ್ರಿನ್ಸಿಪಾಲರು “ಈ ಹುಡುಗ ಹಿಂದಿನಿಂದಲೂ ಅತ್ಯುತ್ತಮ ಮಾರ್ಕ್ಸ್ ಪಡೆಯುತ್ತಲೇ ಬಂದಿದ್ದಾನೆ.. ಕಾಪಿ ಹೊಡೆಯುವ ಅವಶ್ಯಕತೆ ಈ ಹುಡುಗನಿಗೆ ಇಲ್ಲ..” ಎಂದರೂ ಮ್ಯಾನೇಜ್ಮೆಂಟ್ ಕೇಳಲಿಲ್ಲ , ಕಡೆಗೆ ಈ ಹುಡುಗನಿಗೆ ಮತ್ತೆ ಪರೀಕ್ಷೆ ಕೊಟ್ಟು ಸುತ್ತಲು ನಾಲ್ಕು ಜನರನ್ನು ಕಾವಲಿಟ್ಟು ಪರೀಕ್ಷೆ ಬರೆಸಿದರು .. ಮತ್ತೆ ಈ ಹುಡುಗ ೯೮% ತೆಗೆದ..!!
ನನ್ನ ಬಳಿ ಈ ಹುಡುಗನ ಅಪ್ಪ ಅಮ್ಮ ಬಂದು ಎಲ್ಲವನ್ನು ಹಂಚಿಕೊಂಡರು.. ನಾನು ಅಸಹಾಯಕನಾಗಿದ್ದೆ!? ಈ ಹುಡುಗ ಅಲ್ಲೇ ಓದು ಮುಂದುವರಿಸಬೇಕು ನ್ಯಾಯಾಲಯದಲ್ಲೂ ಇದನ್ನು ಪ್ರಶ್ನಿಸುವಂತಿಲ್ಲ ಯಾವ ಮಾಧ್ಯಮದಲ್ಲೂ ಹೇಳುವಂತಿಲ್ಲ.. ಹೇಳಿದರು ಅದು ಬರುವುದಿಲ್ಲ .
ಅಸ್ಪೃಷ್ಯತೆಯನ್ನು ತೊಡೆದುಹಾಕಿದೆವೆಂದು ಸರ್ಕಾರ ಹೇಳುತ್ತದೆ.. ಇದು ಅಸ್ಪೃಶ್ಯತೆ ಅಲ್ಲದೆ ಮತ್ತೇನು ?
ಈ ಅಸಹಾಯಕತೆಯನ್ನು ಯಾರಿಗೆ ಹೇಳಿಕೊಳ್ಳಬೇಕು…

 

‍ಲೇಖಕರು G

August 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. lakshmikanth itnal

    idu tappu . idu nillabeku. Aa maguvige sambandhisidavaru kshame kelabeku.

    ಪ್ರತಿಕ್ರಿಯೆ
  2. M A Sriranga

    ಈ ಲೇಖನದಲ್ಲಿ ಇನ್ನೂ ಸ್ವಲ್ಪ ವಿವರಣೆ ಬಯಸುವ ಸಂಗತಿಗಳು ಇವೆ. ೧. ಕಾಲೇಜು ಎಂದರೆ ಪಿ ಯು ಸಿ ಯೋ, ಬಿ ಇ , ಎಂ ಬಿ ಬಿ ಎಸ್ , ಅಥವಾ ಬಿ ಎ ,ಬಿ ಎಸ್ಸಿ ,ಬಿ ಕಾಂ ಇತರೆ ಪದವಿ ಕಾಲೆಜೋ ಇತ್ಯಾದಿ ತಿಳಿಸಬೇಕಿತ್ತು. ಏಕೆಂದರೆ ಮ್ಯಾನೆಜ್ಮೆಂಟ್ ಯಾವ ಜಾತಿಯವರದ್ದೇ ಆಗಿರಲಿ ಪಿ ಯು ಸಿ ಗೆ ಪಿ ಯು ಪರೀಕ್ಷಾಮಂಡಲಿ ಇದೆ. ೨. ಬಿ ಇ ಆಟಾನಮಾಸ್ ಕಾಲೇಜ್ ಆದರೂ external examiner ಮತ್ತು external valuation ಇರುತ್ತದೆ. ಜತೆಗೆ ವಿ ಟಿ ಯು ನ hold ಇರುತ್ತದೆ. ಇದನ್ನೆಲ್ಲಾ ತಪ್ಪಿಸಿ ಹಳ್ಳಿ ಸ್ಕೂಲಿನ ತರಹ ಆ ವಿಧ್ಯಾರ್ಥಿ ಅಸ್ಪೃಶ್ಯ ಎಂದು ಮರುಪರೀಕ್ಷೆ ನಡೆಸಲು ಸಾಧ್ಯವೇ? ೩. ಎಂ ಬಿ ಬಿ ಎಸ್ ಗೆ ಸಹ ಮೆಡಿಕಲ್ ಗೆ ಸಂಬಂಧಿಸಿದ ಸರ್ಕಾರದ ವಿ ವಿ ಯೊಂದರ ಮೇಲ್ವಿಚಾರಣೆ ಇರುತ್ತದಲ್ಲವೆ? ಅದೇ ರೀತಿ ಇತರ ಪದವಿ ತರಗತಿಗಳಾದ ಬಿ ಎ/ಬಿ ಎಸ್ಸಿ/ಬಿ ಕಾಂ ಇತ್ಯಾದಿಗಳಿಗೆ ಮ್ಯಾನೆಜ್ ಮೆಂಟ್ ಖಾಸಗಿ ಆದರೂ ಸಹ ಕರ್ನಾಟಕದ ಯಾವುದಾದರೊಂದು ವಿ ವಿ ಯ ಉಸ್ತುವಾರಿ ಇರಬೇಕಲ್ಲವೇ?

    ಪ್ರತಿಕ್ರಿಯೆ
  3. venkatakrishna.kk

    ಅಸ್ಪೃಶ್ಯತೆ,ಲಿಂಗತಾರತಮ್ಯ,ಮೂಢನಂಬಿಕೆ,ಜಾತಿಯತೆ..ಇವುಗಳಿಗೂ ಆಧುನಿಕ ವಿದ್ಯಾಭ್ಯಾಸಕ್ಕೂ ಸಂಬಂದವಿಲ್ಲ. ಆಧುನಿಕ ಜೀವನ ನಡೆಸುವ ನಗರಗಳಲ್ಲೇ ಇವೆಲ್ಲವನ್ನೂ ಬೇಕಾದಸ್ಟು ನೋಡಬಹುದು,ಕಾಣುವ ಕಣ್ನು ಮತ್ತು ಮನಸ್ಸಿದ್ದರೆ..!!
    ಎಂದಿಗೆ ಮನುಜರು ಮಾನವೀಯತೆಯನ್ನು ಮೈಗೂಡಿಸಿಕೊಂಡು ಮನುಷ್ಯರಾಗುವರೋ..

    ಪ್ರತಿಕ್ರಿಯೆ
  4. ಶ್ಯಾಮರವ್

    ಸರ್ ಅಸ್ಪ್ಯರತೆ ಭವ್ಯಭಾರತದಲ್ಲಿ ಇದೆ. ಅದರ ನಿವಾರಣೆ ಮಾತ್ರ ಅಸಾಧ್ಯ…….

    ಪ್ರತಿಕ್ರಿಯೆ
  5. umavallish

    ನಿಜವಾಗಿಯೂ ಜನಗಳು ”ಅಸ್ಪೃಶ್ಯ”ರಲ್ಲ ಜನರ ಸಂಕುಚಿತ ಬುದ್ದಿ, ಮನಸ್ಸು”ಅಸ್ಪೃಶ್ಯ”. ಒಳ್ಳೆಯ ಮನಸ್ಸು, ಬುದ್ದಿ ಹೃದಯ ವೈಶಾಲ್ಯತೆ ,ಮಾನವೀಯತೆಯ ”ಮೌಲ್ಯ” ಇಲ್ಲದಿರುವವರನ್ನು ಯಾರೂ ಮನುಷ್ಯರೂ ಅಲ್ಲ,”ಸ್ಪೃಶ್ಯ” ರೂ ಅಲ್ಲ. ಇಂತಹ ಜನರಿಗೆ ದಿಕ್ಕಾರ ವಿರಲಿ

    ಪ್ರತಿಕ್ರಿಯೆ
  6. Gn Nagaraj

    ದಲಿತರು ಈ ರೀತಿಯ ಸಂಕಟ, ಅವಮಾನಗಳನ್ನು ಹೆಜ್ಜೆ ಹೆಜ್ಜೆಗೂ ಅನುಭವಿಸುತ್ತಿದ್ದಾರೆ ಎನ್ನುವುದಕ್ಕೆ ಲಕ್ಷಾಂತರ ಉದಾಹರಣೆಗಳಿವೆ. ಪ್ರತಿಷ್ಠಿತ ಐಐಎಂ, ಐಐಟಿಗಳಲ್ಲಿ , ದೇಹಲಿಯ ಏಐಐಎಮ.ೆಸ್ ನಲ್ಲಿ ಕೆಲ ಮೆಡಿಕಲ್ ಕಾಲೇಜುಗಳಲ್ಲಿ ಬೇರೆಲ್ಲ ವಿಷಯಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದರೂ ಕೂಡ ೊಂದು ಎರಡು ವಿಷಯಗಲಲ್ಲಿ ಅತಿ ಕಡಿಮೆ ಅಂಕಗಳು ಕೊಡಲ್ಪಟ್ಟಾಗ ಹೈಕೋರ್ಟ್ , ಸುಪ್ರೀಂ ಕೋರ್ಟ್ ವರೆಗೂ ಹೋಗಿ ಮತ್ತೆ ಪರೀಕ್ಷೆ ಬರೆದು ಪಾಸಾಗಿದ್ದಿದೆ. ಇಂತಹ ಕಷ್ಟ ಸಂಕಟಗಲನ್ನು ಅವರು ಅನುಬವಿಸಬೇಕಾಗಿದೆ

    ಪ್ರತಿಕ್ರಿಯೆ
  7. ಮಲ್ಲಿಕಾರ್ಜುನಯ್ಯ ಕೆ. ಜೆ .

    ಖಂಡಿತವಾಗಿಯೂ ವಿವರಗಳ ಅಗತ್ಯವಿದೆ.

    ಪ್ರತಿಕ್ರಿಯೆ
  8. savitharavishankar

    ಅಕ್ಷರ ಬರೆಯುವವನ, ಓದುವವನ ಸ್ವತ್ತು. ಯಾವ ಜಾತಿಯವರು ಸ್ವತ್ತಲ್ಲ. ವಿದ್ಯಾರ್ಥಿಗಳು ಅಂತಃ ಕಾಲೇಜುಗಳನ್ನ ಬಹಿಷ್ಕರಿಸಿ, ಮಾಧ್ಯಮಗಳಿಗೆ ತಿಳಿಸಿ ಬೇರೆ ಕಾಲೇಜುಗಳಿಗೆ ಸೇರುವ ಧೈರ್ಯ ತೋರಬೇಕು

    ಪ್ರತಿಕ್ರಿಯೆ
  9. Anonymous

    ನ್ಯಾಯಾಲಯದಲ್ಲೂ ಇದನ್ನು ಪ್ರಶ್ನಿಸುವಂತಿಲ್ಲ ಯಾವ ಮಾಧ್ಯಮದಲ್ಲೂ ಹೇಳುವಂತಿಲ್ಲ…. ಇರಬಹುದು. ಆದರೆ ಆ ಪ್ರತಿಷ್ಟಿತ ಸಂಸ್ಥೆಯ, ಕಾಲೇಜಿನ ಹೆಸರು ಹೇಳಲೇನಡ್ಡಿ…. ಲೋಕಕ್ಕೆಲ್ಲ ತಿಳಿಯಲಿ….

    ಪ್ರತಿಕ್ರಿಯೆ
  10. ಹೊಸಮನೆ ವೆಂಕಟೇಶ (@hsvenkatesha80)

    ನ್ಯಾಯಾಲಯದಲ್ಲೂ ಇದನ್ನು ಪ್ರಶ್ನಿಸುವಂತಿಲ್ಲ ಯಾವ ಮಾಧ್ಯಮದಲ್ಲೂ ಹೇಳುವಂತಿಲ್ಲ…. ಇರಬಹುದು. ಆದರೆ ಆ ಪ್ರತಿಷ್ಟಿತ ಸಂಸ್ಥೆಯ, ಕಾಲೇಜಿನ ಹೆಸರು ಹೇಳಲೇನಡ್ಡಿ…. ಲೋಕಕ್ಕೆಲ್ಲ ತಿಳಿಯಲಿ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: