ಟಿ. ಜಿ. ಶ್ರೀನಿಧಿ
ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗಾಗಿ ಮೀಸಲಾಗಿರುವ ಕನ್ನಡ ಜಾಲತಾಣ ‘ಇಜ್ಞಾನ ಡಾಟ್ ಕಾಮ್’ ಇದೀಗ ಏಳು ವರ್ಷಗಳನ್ನು ಪೂರೈಸಿದೆ.
ವಿಜ್ಞಾನದ ವಿಷಯಗಳನ್ನು ಸುಲಭ ಭಾಷೆಯಲ್ಲಿ ಎಲ್ಲರಿಗೂ ತಲುಪಿಸುವ ಮಹತ್ವಾಕಾಂಕ್ಷೆಯ ಈ ತಾಣ ಈವರೆಗೆ ೩೫೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದು, ಅನೇಕ ವಿಭಿನ್ನ ಪ್ರಯತ್ನಗಳ ಮೂಲಕ ಗಮನಸೆಳೆದಿದೆ.
ಈ ಹಿಂದೆ ಪ್ರಾಯೋಗಿಕವಾಗಿ ವಿದ್ಯುನ್ಮಾನ ಪತ್ರಿಕೆಯೊಂದನ್ನು ಪ್ರಕಟಿಸಿದ್ದ ಇಜ್ಞಾನ ಡಾಟ್ ಕಾಮ್, ತನ್ನ ಏಳನೆಯ ಹುಟ್ಟುಹಬ್ಬದಂದು ‘ಸಪ್ತವರ್ಣ’ ಎಂಬ ಇ-ಪುಸ್ತಕವನ್ನು ಪ್ರಕಟಿಸಿದೆ. ಏಳು ಲೇಖನಗಳ ಈ ಸಂಕಲನವನ್ನು ಆಸಕ್ತರು ಇಜ್ಞಾನ ತಾಣದಲ್ಲಿ ಉಚಿತವಾಗಿ ಓದಬಹುದು.
ಡಿಜಿಟಲ್ ಛಾಯಾಗ್ರಹಣ – ಪ್ರೋಗ್ರಾಮಿಂಗ್ ಮುಂತಾದ ವಿಷಯಗಳನ್ನು ಕುರಿತ ಲೇಖನಸರಣಿಗಳು, ಹೊಸ ಪುಸ್ತಕಗಳ ಪರಿಚಯ, ಕಿರಿಯರಿಗಾಗಿ ವಿಶೇಷ ಬರಹಗಳು – ಹೀಗೆ ವೈವಿಧ್ಯಮಯ ಮಾಹಿತಿಯನ್ನು ಓದುಗರಿಗೆ ತಲುಪಿಸುತ್ತಿರುವ ಈ ತಾಣ ಈಗಾಗಲೇ ೮೫೦೦೦ಕ್ಕೂ ಹೆಚ್ಚು ಪೇಜ್ ವ್ಯೂಗಳನ್ನು ದಾಖಲಿಸಿದೆ. ತಾಣದ ಫೇಸ್‌ಬುಕ್ ಪುಟವನ್ನು ೫೦೦ಕ್ಕೂ ಹೆಚ್ಚು ಸದಸ್ಯರು ಈಗಾಗಲೇ ಮೆಚ್ಚಿದ್ದಾರೆ.


ಇಜ್ಞಾನ ತಾಣದ ವಿಳಾಸ www.ejnana.com ಹಾಗೂ ಫೇಸ್‌ಬುಕ್ ಪುಟ www.facebook.com/ejnana
ಧನ್ಯವಾದಗಳೊಡನೆ,
ಟಿ. ಜಿ. ಶ್ರೀನಿಧಿ






0 Comments