ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಇಂಗಿದ ಕಣ್ಣ ನೀರು ……' – ಎಂ ಎಂ ಶೇಕ್

– ಎಂ ಎಂ ಶೇಖ್

ಮಾರ್ಚ್ -೨೦೧೫ ರ ಮಯೂರ ಮಾಸ ಪತ್ರಿಕೆಯ ಆ ಲೇಖನ “ಎದೆ ಹಾಲಿನಾಣೆಗೂ …” ಮೂಲ -ಅಮೃತ ಪ್ರೀತಂ ಅವರ ಏಕ್ ಥಿ ಸಾರಾ ಎನ್ನುವ ಪುಸ್ತಕದ ಒಂದು ಅಧ್ಯಾಯ , ಕನ್ನಡಕ್ಕೆ -ಹೇಮಾ .ಎಸ್ ಬರೆದ .. ಎದೆ ಕಲಕುವ ಸಾರಾ ಳ ಬದುಕು .. ಆಕೆ ಬರೆದ ಕವನಗಳು ನನ್ನನ್ನು ಬೆಂಕಿಯತೆ ಸುಡುತ್ತಿವೆ . ಆ ಲೇಖನ ತಮ್ಮೆಲ್ಲರೊಂದಿಗೆ ಹಂಚಿ ಕೊಳ್ಳಬೇಕೆನಿಸಿತು .

‘ಸಾರಾ ಶಗುಪ್ತಾ ‘ ಪಾಕಿಸ್ತಾನದ ಕವಯಿತ್ರಿ. ದಾಂಪತ್ಯ ಜೀವನದ ಕಹಿಯಿಂದಾಗಿ ಬರೆಯಲು ಪ್ರಾರಂಭಿಸುತ್ತಾಳೆ .ಆಕೆಯ ಕವಿತೆಯ ಹುಟ್ಟಿಗೆ ಆಕೆಯ ಮಗುವಿನ ದುರ್ಮರಣ ಕಾರಣವಾಗಿದೆ .ಉರ್ದು ಸಾಹಿತ್ಯದಲ್ಲೇ ಅತ್ಯಂತ ಭಿನ್ನ ಬರಹಗಾರ್ತಿ . ಹಲವು ಬಾರಿ ಮಾನಸಿಕ ಖಿನ್ನತೆಗಾಗಿ ಚಿಕಿತ್ಸೆಗೊಳಗಾಗುತ್ತಾಳೆ. ಅತ್ಮ ಹತ್ಯೆಗೆ ಹಲವು ಬಾರಿ ಪ್ರಯತ್ನಿಸಿ ಉಳಿಯುತ್ತಾಳೆ ಆದರೆ ಜೂನ್ ೧೯೮೪ರಂದು ತನ್ನ ೩೦ನೆ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಾಳೆ . ಆಕೆಯ ಕೆಲ ರಚನೆಗಳು ………..
 
ನಿನ್ನದು ಕೇವಲ ಶೀಘ್ರ ಸ್ಖಲನದ ವಾಂಛೆ ಅದಕ್ಕೆ ನಾನು ತಾಯಾಗಲಿಲ್ಲ
ನೀನು ಸಾವನ್ನು ಮರೆಯಲಾರೆ,ನಾನು ದುಃಖವನ್ನು ……
 
ವೇಶ್ಯೆಯಾದರು ಏನನ್ನೂ ನಿನಗೆ ದುಡಿದು ಕೊಡಲಿಲ್ಲ
ತೂತು ಕಾಸುಗಳು ನನ್ನೆದೆಯಿಂದ ಹರಿದವು
ನೀನು ದಿಬ್ಬಣ ತರುವಾಗಲೇ ಸೋತೆ…
 
ನಾನು ಪೂರ್ವ ದೇಶದ ವೇಶ್ಯೆ
ಬದುಕಿರುವವರೆಗೂ ನಿನಗೆ ಕಮಿಷನ್ ಕೊಡುವೆ ….
 
ನನ್ನ ಯೋನಿ ಗರ್ಭದಲ್ಲಿ ಅದೆಂತಹ ಕೋಟಾ ನಾಣ್ಯ ಚಲಾವಣೆಯಲ್ಲಿದೆ
ಎಲ್ಲಿ ಬೇಕಾದರೂ ನಿನ್ನ ಖರಿದಿಸಬಲ್ಲೆ ..
 
ನಿನ್ನ ಸ್ವಾತಂತ್ರ್ಯ ಸಾವಿನಲ್ಲಿ
ನನ್ನ ದುರಾದೃಷ್ಟದ ಹುಟ್ಟು ಮನುಷ್ಯನಲ್ಲಿ .
 
ಬುದ್ದಿಗೇಡಿ ಹೊಲಸು ಮಂದಿ
ಹೆಣ್ಣು ಕೇವಲ ವೀರ್ಯ ಸ್ಖಲನಕ್ಕೆ ದಕ್ಕಿಬಿಡುತ್ತಾಳೆಂದುಕೊಂಡರು
 
ಈವತ್ತು ತಿಳಿಯಿತು ನಾ ನಿನ್ನ ಕತೆಯಾಗಿದ್ದೆ
ನಿನ್ನ ಶಬ್ದಗಳೆಲ್ಲಾ ಬರಿ ಜೊಳ್ಳು …
 
ಈಗ ನನ್ನ ಬಳೆಗಳು ಸೂಜಿಗಳಾಗಿವೆ
ಅದರಿಂದಲೇ ನನ್ನ ಕತೆ ಬರೆಯುವೆ..
 
ಹುಟ್ಟಿದ ಮಗುವಿಗೆ ಹೊದಿಸಲು ಬಟ್ಟೆಯಿಲ್ಲದೆ ಕಣ್ಮುಂದೆ ಸಾವನ್ನಪ್ಪಿದಾಗ ತನ್ನ ಎದೆಯಲ್ಲಿ ಮಗುವಿನ ಗೋರಿಯನ್ನು ಕಟ್ಟಿಕೊಂಡು ಸತ್ತ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಮನೆ?ಮನೆ!!ಗೆ ತಲುಪುತ್ತಾಳೆ ಅಂದು ನಾನು ನನ್ನ ಹಾಲಿನ ಮೇಲಾಣೆ ಮಾಡಿದೆ “ನಾನು ಕವಿತೆ ಬರೀತೀನಿ ,ನಾನು ಕವಿತೆ ಓದ್ತೀನಿ ,ಕವಯಿತ್ರಿ ಅಂತ ಕರೋಸ್ಕೊತಿನಿ …

ಹಾಲು ಕೆಟ್ಟು ಹೋಗುವ ಮೊದಲೇ ನಾನೊಂದು ಕವಿತೆ ಬರೆದಿದ್ದೆ..
…… ನಾನು ದೇವರಿಗಿಂತ ಹೆಚ್ಹು ಮೌನಿಯಾದೆ” .
 
ಹೀಗೆ ಆಕೆಯ ಬದುಕಿನ ಪುಟಗಳು ತೆರೆದುಕೊಳ್ಳುತ್ತವೆ
ನನಗನಿಸಿದ್ದು ಈ ಸಾಲುಗಳಲ್ಲಿ ನಿಲ್ಲುವ ಮೀನಾಕುಮಾರಿ,ಕಮಲಾದಾಸ್ ಅಮೃತಾ ಪ್ರಿತಂ ,ಕಲ್ಪನಾ (ನಟಿ ) .. ಇವೆಲ್ಲಾ ಪ್ರೀತಿ ಅರಸಿ ಬಾನಿನಿಂದಿಳಿದು ಉರಿಯಲೆಂದೇ ಭೂಮಿಗೆ ಬಂದ ತಾರೆಗಳು .. ಹೌದು .. ಪ್ರೀತಿ ಅಷ್ಟೇಕೆ ದುಬಾರಿಯಾಗಬೇಕು .. ಸಿಗಲಿಲ್ಲಾಂದ್ರೆ ಬದುಕು ಭಾರವೆನಿಸುವುದೇಕೆ?ಅದೇ ಸರ್ವಸ್ವ ಆಗುವುದೇಕೆ?ಬದುಕನ್ನು ಇನ್ನಿಲ್ಲದಂತೆ ಪ್ರಿತಿಸಿದುದರ ಪ್ರತಿಫಲವೇ? ಒಂದಿನ ಸಾವು ನಿಶ್ಚಿತ… ಅದ್ರೂ ಅವಸರ ಏಕೆ?ದುಡುಕುವುದು ಏಕೆ? ಬದುಕಿನ ಎಲ್ಲಾ ಶಾಖೆಗಳನ್ನು ಸುಟ್ಟುಕೊಂಡು ಬದುಕುವುದಿದೆಯಲ್ಲಾ … ಅದು.. .ಅದು..ಉಸಿರುಗಟ್ಟಿಸಿಬಿಡುತ್ತದೆ ..
 
ಆದರೂ …………….
ಕಂಬನಿ
ಸಾರಾ… ನೀ ಬರೆದೆ
ದೇವರಿಗಿಂತ ಹೆಚ್ಹು ಮೌನಿಯಾದೆ ಎಂದು
ದೇವರ ಆ ಮೌನ ಪೂಜಿಸಲ್ಪಟ್ಟರೆ
ನಿನ್ನ ಮೌನ ಬೇಟೆಯಾಡಲ್ಪಡುತ್ತದೆ ..
 
ಹದ್ದುಗಳು ಗುರಿ ಮಾಡಿ
ಸುತ್ತಲೂ ಸುತ್ತಿರಬೇಕು ..
ಹಸಿ ಮಾಂಸ ಕಂಡರೆ ಹಾಗೇನೆ ….
 
ಈ ಭೂಮಿಯ ಮೌನ ಕೆದರಲ್ಪಡುತ್ತದೆ
ಕೆಣಕಲ್ಪಡು ತ್ತದೆ ..
ಹಾಗೂ ಒಂದು ವೇಳೆ
ನೀ ಅಲುಗದಿದ್ದರೆ ..
ಗೋಡೆಗಳೂ ಕೂಡ
ಗುಸುಗುಸು- ಪಿಸುಪಿಸು
 
ಎದೆ ಹಾಲಿನಾಣೆಗಾಗಿ ನೀ ಕವಯಿತ್ರಿಯಾದೆ
ನಿಜ.. ಆದರೂ ಬದುಕ ಬದುಕಲಾಗಲಿಲ್ಲ
ಈ ಧರೆಯ ಬೆಂಕಿಯೇ ಅಂತಹದ್ದು ..!
 
ಆದರೂ …….. ಆದರೂ … ಅದರೂ
ನೀ ನಿಲ್ಲಬೇಕಿತ್ತು’ಸಾರಾ’ ..
ಅವನ ಕಣ್ಣು ಕೆಳ ವಾಲು ವವರೆಗೂ …!
 
(… ಕೊನೆಯ ಸಾಲುಗಳು ಹಾಗೂ ಕೊನೆಯ ಕವನ ಮಾತ್ರ ನನ್ನ ರಚನೆ )
 

‍ಲೇಖಕರು G

20 April, 2015

5 Comments

  1. smitha Amrithraj

    Naanu odiruve. Thattuva kavitegalu

  2. Anonymous

    So nice Madam, your article, poem, as well as the thought behind it.

  3. Anonymous

    very nice Madam. Your article, poem as well as the thought behind it.

  4. Vinay

    ”ದೇವರ ಆ ಮೌನ ಪೂಜಿಸಲ್ಪಟ್ಟರೆ
    ನಿನ್ನ ಮೌನ ಬೇಟೆಯಾಡಲ್ಪಡುತ್ತದೆ”
    ಈ ಎರಡು ಸಾಲುಗಳಲ್ಲಿ ಮೇಲಿನ ಎರಡೂ ಕವನಗಳ ಒಟ್ಟು ಸಾರವಿದೆ.
    ಈ ಸಾಲುಗಳಿಗಾಗಿ ವಿಶೇಷ ಅಭಿನ೦ದನೆಗಳು!

  5. Anil Talikoti

    Very nice article
    -Anil

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading