
ಬಿ.ಆರ್. ಲಕ್ಷ್ಮಣ ರಾವ್
ನನಗಾಗ ಹತ್ತೊ ಹನ್ನೊಂದೋ ವರ್ಷ ವಯಸ್ಸು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮದು ಬಾಡಿಗೆ ಮನೆ. ಅದರ ಯಜಮಾನರಾದ ಶೆಟ್ಟರು ಪಕ್ಕದ ದೊಡ್ಡ ಮನೆಯಲ್ಲಿದ್ದರು. ಅವರ ಮನೆಗೆ ಚಂದಾಮಾಮ, ಬಾಲಮಂಗಳ ಇತ್ಯಾದಿ ಪ್ರತೀ ತೊಂಗಳೂ ಬರುತ್ತಿದ್ದವು. ನಾನು ಅವರ ಮನೆಯಲ್ಲೇ ಕುಳಿತು ಅವುಗಳಾನ್ನು ಓದುತ್ತಿದ್ದೆ. ಅವುಗಳಾಲ್ಲಿ ಬರುತ್ತಿದ್ದ ಅದ್ಭುತ ರಮ್ಯ ಕಥೆಗಳಿಗೆ ನಾನು ಮಾರುಹೋಗಿದ್ದೆ. ನನ್ನದೇ ಕಲ್ಪನಾಲೋಕವೊಂದರಲ್ಲಿ ವಿಹರಿಸುತ್ತಿದ್ದೆ. ಜೊತೆಗೆ ನನ್ನ ತಾಯಿ ಸರ್ಕ್ಯುಲೇಟಿಂಗ್ ಲೈಬ್ರರಿಯಿಂದ ಅನಕೃ, ತರಾಸು, ತ್ರಿವೇಣಿ ಮುಂತಾದವರ ಕಾದಂಬರಿಗಳನ್ನು ತರುತ್ತಿದ್ದರು. ಅವುಅಳನ್ನು ನಾನೂ ಸಹ ಓದಿ ನನ್ನ ಆಗಿನ ವಯಸ್ಸಿಗೆ ತಕ್ಕಷ್ಟು ಅರ್ಥ ಮಾಡಿಕೊಳ್ಳುತ್ತಿದ್ದೆ. ಹೀಗೆ ಓದುವ ಹುಚ್ಚು ನನ್ನನ್ನು ಆಗಲಿಂದಲೇ ಆವರಿಸಿತ್ತು.
ನನ್ನ ತಂದೆ ಫೋಟೊಗ್ರಫರ್. ಬೆಳಗಿನಿಂದ ರಾತ್ರಿಯವ್ರೆಗೂ ಬಿಡುವಿಲ್ಲದ ಕೆಲಸ. ಓದಲು ಅವರಿಗೆ ಪುರುಸೊತ್ತೆಲ್ಲಿ? ಆದರೂ ಅವರು ಕೆಲವು ಪುಸ್ತಕಗಳನ್ನು ಸಂಗ್ರಹಿಸಿ, ಒಂದು ಗಾದ್ರೆಜ್ ಬೀರುವಿನಲ್ಲಿ ಸಂಗ್ರಹಿಸಿಟ್ಟಿದ್ದರು. ಅದಕ್ಕೆ ಬೀಗ ಕೂಡ ಬಿದ್ದಿತ್ತು. ಆಗಾಗ ಅವುಗಳನ್ನು ತೆರೆದು ಗುಟ್ಟಾಗಿ ಕಣ್ಣಾಡಿಸುತ್ತಿದ್ದರು. ಯಾರ ಕೈಗೂ ಅವು ಸಿಗದ ಹಾಗೆ ಜಾಗರೂಕತೆ ವಹಿಸಿದ್ದರು. ಹೀಗಾಗಿ ನನ್ನಲ್ಲಿ ಕೆಟ್ಟ ಕುತೂಹಲ-ಹೇಗಾದರೂ ಮಾಡಿ, ಆ ಪುಸ್ತಕಗಳನ್ನು ನೋಡಬೇಕು, ಓದಬೇಕು.
ಒಂದು ಅವಕಾಶ ಒದಗಿಬಂತು. ಅಪರೂಪಕ್ಕೆ ನನ್ನ ತಂದೆ ಮತ್ತು ತಾಯಿ ಕೆಲವುದಿನಗಳಾ ಮಟ್ಟಿಗೆ ಬೇರೆ ಊರಿಗೆ ಹೋದರು. ಮನೆಯಲ್ಲಿ ಮಕ್ಕಳಾಅದ ನಮ್ಮದೇ ಸರ್ವತಂತ್ರ ಸ್ವತಂತ್ರ ರಾಜ್ಯಭಾರ. ನಾನು ನನ್ನ ಸೋದರ, ಸೋದರಿಗೆ ಗೊತ್ತಾಗದ ಹಾಗೆ ಅಪ್ಪನ ಗಾದ್ರೆಜ್ ಬೀರುವಿನ ಬೀಗದ ಕೈ ಪತ್ತೆ ಮಾಡಿ ಬೀರುವನ್ನು ತೆರೆದೆ. ಅಲ್ಲಿದ್ದ ಕೇವಲ ನಾಲ್ಕೈದು ಪುಸ್ತಕಗಳಾನ್ನು ಒಂದೊಂದಾಗಿ ಕೈಗೆ ತೆಗೆದುಕೊಂಡು, ಪುಟ ತಿರುವಿ ಕಣ್ಣಾಡಿಸಿದೆ. ಅದೆಲ್ಲಾ ಸೆಕ್ಸ್ಗೆ ಸಂಬಂಧಿಸಿದ ಪುಸ್ತಕಗಳು- ವಾತ್ಸಾಯನ, ಕೊಕ್ಕೋಕ ಇತ್ಯಾದಿ. ಆ ವಯಸ್ಸಿಗೆ ನನಗೆ ಅವುಗಳಲ್ಲಿ ಅಂಥಾ ಸ್ವಾರಸ್ಯವೇನೂ ಕಾಣಲಿಲ್ಲ. ಆದರೆ ಒಂದು ಪುಸ್ತಕ ನನ್ನನ್ನು ತೀವ್ರವಾಗಿ ಸೆಳೆಯಿತು. ಅದು ಮಾಟ, ಮಂತ್ರ, ಇಂದ್ರಜಾಲಕ್ಕೆ ಸಂಬಂಧಿಸಿದ್ದಾಗಿತ್ತು. ಅದನ್ನು ಮಾತ್ರ ತೆಗೆದುಕೊಂಡು, ಬೀರು ಮುಚ್ಚಿ, ನನ್ನ ಕೋಣೆಯಲ್ಲಿ ಕೂತು ಕೂಲಂಕುಶವಾಗಿ ಓದತೊಡಗಿದೆ.
ಪೂರ್ಣ ಓದಿಗೆ ಭೇಟಿ ಕೊಡಿ-ನುಡಿನಮನ
ಆ ಹೂ ದಳ ಬಿಚ್ಚಿ, ನಳನಳಿಸಿ ನಕ್ಕರೆ…
ನಿಮಗೆ ಇವೂ ಇಷ್ಟವಾಗಬಹುದು…




0 Comments