ಅಹಿಂಸೆಯೇ ಪರಮ ಧರ್ಮ ಎಂದು
ನೀ ಬೋಧಿಸಿದೆ ಅಂದು
ಆದರೂ ನಿಲ್ಲಿಸರು ಹಿಂಸೆಯ.
ಅದಕ್ಕೆ ಕಾರಣವಿಹುದು ಕೇಳು ಓ ವಿಭುವೆ
ನಾ ಕರೆದ ಕರೆಯ ಕೇಳದೆಯೆ ಆ ವರುಣ
ತೋರಲಿಲ್ಲ ಚೂರು ಕರುಣ
ಬಾರದಿಹುದು ಮಳೆಯಿಂದು
ಇರುವ ನೀರಿಗಾಗಿ
ಕಿತ್ತಾಡುತಿಹರು ಜನರಿಂದು
ಇನ್ನೆಲ್ಲಿಯ ಅಹಿಂಸೆ ಹೇಳು ಪ್ರಭುವೆ.
ಕೊನೆಗೂ ಕರುಣೆ ತೋರಿದ ವರುಣ
ಉಕ್ಕಿ ಹರಿಯಿತು ಜಲವು
ನಿಲ್ಲಲು ನೆಲೆಯಿಲ್ಲದಂತೆ.
ಇಲ್ಲಿ ನೀರಿಲ್ಲದೆ ಬರ
ಅಲ್ಲಿಯೋ ಪ್ರವಾಹ
ಪ್ರಕೃತಿಗೆ ನೀಡಿದ ಹಿಂಸೆಗೆ
ಪಡೆಯುತಿಹನು ಪ್ರತಿಹಿಂಸೆಯ ಮನುಜ.
ಎಂದಿಗೆ ನೀಗೀತೋ ಈ ಬೇಗೆ
ಅರ್ಥವಾಗುವುದೆಂತೋ ಅವಗೆ.





0 Comments