ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ನೆಪದಲ್ಲಿ ’ಅವಧಿ’ಯದ್ದೂ ಸಹ ಒಂದು ಹಣತೆ…

ಸಿಜಿಕೆ ತನ್ನ ಆತ್ಮಚರಿತ್ರೆ ’ಕತ್ತಾಲೆ ಬೆಳದಿಂಗಳೊಳಗ’ ಬರೆದಾಗ ಫೋನಾಯಿಸಿದ್ದರು. ನಾನು ಏನಂತೀನೋ ಎನ್ನುವ ಒಂದು ಕುತೂಹಲ ಇತ್ತು. ನಾನು ಆಗ ಮಂಗಳೂರಿನಲ್ಲಿದ್ದೆ. ’ಇಲ್ಲೇ ಬನ್ನಿ, ನನ್ನ ಅಭಿಪ್ರಾಯ ಹೇಳುತ್ತೇನೆ’ ಅಂದೆ. ಒಂದು ಮತ್ತೊಂದಾಯಿತು.
ಸಿಜಿಕೆ ಯ ಈ ಆತ್ಮಕಥನದ ಬಗ್ಗೆ ಇಡೀ ಒಂದು ದಿನದ ಸಂಕಿರಣವನ್ನೇ ನಾವು ನಡೆಸಿಬಿಟ್ಟೆವು. ಸಂಜೆ ಚೌಟರ ಆ ಕಾಡಿನ ನಡುವಿನ ತೋಟದಲ್ಲಿ ಊಟ.
ಸಿಜಿಕೆ ಹೋಗುವ ಮುನ್ನ ನನ್ನ ಕೈ ಹಿಡಿದುಕೊಂಡವರೆ, ’ನನ್ನ ಶತ್ರು ಬಂದಿದ್ದರೂ ಈ ಸಂಕಿರಣದಲ್ಲಿ ಕೂತಿದ್ದರೆ ನನ್ನ ಮಿತ್ರನಾಗಿ ಹೋಗಿರುತ್ತಿದ್ದ, ಹಾಗೆ ಮಾಡಿಬಿಟ್ಟಿರಿ’ ಎಂದರು. ದನಿ ತೇವಗೊಂಡಿತ್ತು.
ಹಾಗೆ ಅಂದದ್ದು ನಿಜವೂ ಆಯಿತು. ಅವರು ಶತ್ರುವನ್ನೂ ಗೆಲ್ಲುತ್ತಾ ಹೋದರು. ಅವರ ಮುಂದೆ ಆಡಿ ಬೆಳೆದ ಹುಡುಗರು ಸಿಜಿಕೆಯ ಒಡಲಾಳದ ಕಿಚ್ಚನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಪ್ರತಿ ವರ್ಷ ನಾಟಕ ಹಬ್ಬ ಮಾಡುತ್ತಿದ್ದಾರೆ.
ಆ ನೆಪದಲ್ಲಿ ’ಅವಧಿ’ಯದ್ದೂ ಸಹ ಒಂದು ಹಣತೆ.
 
ಜಿ ಎನ್ ಮೋಹನ್
ಪ್ರಧಾನ ಸಂಪಾದಕರು
ಅವಧಿ
 

‍ಲೇಖಕರು G

17 January, 2014

1 Comment

  1. D.Ravivarma

    idu nijakku tumbaa arthapurna hanate…ci,ji,je gondu hrudayadaalada ranga namana…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading