ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಕಾಲ…ಈ ಕಾಲ..

ಲೀಲಾ ಅಪ್ಪಾಜಿ 

ಚೀರನಹಳ್ಳಿಯಲ್ಲಿ ಹಕ್ಕಿ ತಡಕಾಟದಲ್ಲಿದ್ದೆ.

ಅಲ್ಲೊಂದು ಆಲದ ಮರ, ಅದರ ಹಣ್ಣಿಗೆ coppersmith barbet,
ಎದುರಿಗಿದ್ದ ಸಣ್ಣಾತಿಸಣ್ಣ -ಎಂದೋ ಕಟ್ಟೆಯಾಗಿದ್ದ ಈಗ ಬಹುತೇಕ ಮುಚ್ಚಿಹೋದ ನೀರ್ದಾಣಕ್ಕೆ ಕಣ್ಷು ಹಾಕಿದ ಮಿಂಚುಳ್ಳಿಗಾಗಿ ಠಳಾಯಿಸುತ್ತಿದ್ದೆ.

ಎಮ್ಮೆಗಳನ್ನು ಅಟ್ಟಿಕೊಂಡು ಬರುತ್ತಿದ್ದಾಕೆ ಹರಿದ ಲುಂಗಿಯ ತುಂಡನ್ನು ಸ್ಕಾರ್ಫ್ ತರಹ ಬಿಸಿಲು, ಧೂಳಿಗೆ ರಕ್ಷಣೆಯಾಗಿ ಕಟ್ಟಿಕೊಂಡಿದ್ದರು.
(ಕೈಯಲ್ಲಿ as usual ಅಂಗಿಯೂ ಇತ್ತು.)

ಸೀರೆಯ ಸೆರಗನ್ನೆ ಹೊದ್ದು ಹೋಗುತ್ತಿದ್ದ ಕಾಲ ಬದಲಾಗಿ ಲುಂಗಿ ತುಂಡು, ಟವಲ್… ಇನ್ನೂ ಏನೆಲ್ಲವೂ ಶಿರಸ್ತ್ರಾಣವಾಗುತ್ತಿವೆ.
ಉಟ್ಟರೆ ಲುಂಗಿಯಾದೆ, ಹರಿದರೆ ತಲೆವಸ್ತ್ರವಾದೆ..

ಲುಂಗಿ ಕಿ ಜೈ…
ಒಂದು ಪಟ ಹಿಡಿಯಬಹುದೆ ಅಂದೆ.

ತಾಳಿ ಇದನ್ನು ಬಿಚ್ಚಾಕ್ತಿನಿ ಎಂದು ಬಿಚ್ಚಹೊರಟರು.
ಅದೂ ಇರಲಿ ಬಿಡಿ ಎಂದದ್ದಕ್ಕೆ ಮತ್ತೆ ಕಟ್ಟಿಕೊಂಡು ಸಿದ್ಧರಾದರು.

ಅಲ್ಲಿಯವರೆಗೂ ಸೈಡಲ್ಲಿದ್ದ ಎರಡು ಎಮ್ಮೆಗಳಲ್ಲಿ ಒಂದು owner ಹಿಂದೆ ಸರಿದು ಸೊಗಸಾಗಿ ಪೋಸ್ ಕೊಡೋದೆ…

‍ಲೇಖಕರು Admin

28 December, 2016

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading